ಅಭಿಜಿತ್‌ ಮಡಿವಾಳ ಸಣ್ಣ ಕಳ್ಳನಲ್ಲ…… ಗೀತಾ ಕೊಲೆ ಪ್ರಕರಣ ಭಾಗ-೦೩

ಕಳೆದ ವರ್ಷದ ಕೊನೆಯ ವಾರ ಪಿಗ್ಮಿ ಏಜೆಂಟ್‌ ಗೀತಾ ಎಂಬ ವೃದ್ಧೆ ಕೊಂದ ಕಳ್ಳ ಅಭಿಜಿತ್‌ ಈ ಕೊಲೆ, ದರೋಡೆ ಮೊದಲು ಹಲವು ಪ್ರಕರಣಗಳನ್ನು ಮಾಡಿದ್ದ ವ್ಯಕ್ತಿ. ಸಿದ್ದಾಪುರ ನಗರ ವ್ಯಾಪ್ತಿಯ ಕೊಂಡ್ಲಿಯ ಗಣಪತಿ ಮಡಿವಾಳರ ಎರಡನೇ ಪತ್ನಿಯ ಏಕೈಕ ಮಗನಾದ ಅಭಿ ಈ ಕೊಲೆ ಮಾಡುವ ಮೊದಲು ಹಲವು ಕೊಲೆ, ದರೋಡೆಗಳಂಥ ಪ್ರಕರಣಗಳಲ್ಲಿ ಭಾಗಿಯಾಗಿ ಒಂದೆರಡು ಪ್ರಕರಣಗಳಲ್ಲಿ ಮಾತ್ರ ಜೈಲು ಪಾಲಾಗಿದ್ದ ಎನ್ನಲಾಗಿದೆ.

ಕೊಂಡ್ಲಿಯ ಗಣಪತಿ ಮಡಿವಾಳರ ಐದನೇ ಪುತ್ರನಾದ ಈತನ ತಂದೆ ಗಣಪತಿ ಮಡಿವಾಳ ಮೂರ್ತಿ ತಯಾರಿಸುವ ಕಲಾವಿದ. ಈ ಹವ್ಯಾಸದ ಜೊತೆಗೆ ರಾಜಕೀಯ ನಂಟು ಬಿಟ್ಟರೆ ಪೂರ್ಣಾವಧಿ ಕೆಲಸವಿರುವ ಮನುಷ್ಯನಲ್ಲ ಈತ, ಇವರ ಕುಟುಂಬದ ಒಬ್ಬ ಸಹೋದರ ಬೆಂಗಳೂರಿನಲ್ಲಿ ನೆಲೆಸಿರುವುದು ಬಿಟ್ಟರೆ ನಿಶ್ಚಿತ ಉದ್ಯೋಗ, ವೃತ್ತಿ ಈ ಕುಟುಂಬಕ್ಕಿಲ್ಲ ಕೆಲವು ಕಾಲ ಬೆಂಗಳೂರಿನಲ್ಲಿದ್ದು ಅಲ್ಲಿ ಗಲಾಟೆ ಮಾಡಿ ಊರು ಸೇರಿಕೊಳ್ಳುವುದು ಇಲ್ಲಿ ದಾಂಧಲೆ ಮಾಡಿ ಬೆಂಗಳೂರು ಸೇರಿಕೊಳ್ಳುತಿದ್ದ ಅಭಿಜಿತ್‌ ಒಂದೆರಡು ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ!.

ಸಿದ್ಧಾಪುರದಲ್ಲಿ ಗೀತಾಳ ಮನೆಗೆ ಕಳ್ಳತನಕ್ಕೆ ಹೋಗಿ ಕೊಲೆ ಮಾಡಿ ಸಿ.ಸಿ. ಕೆಮರಾಗಳ ಕಣ್ಣು ತಪ್ಪಿಸಿದ್ದ ಈತ ಪೊಲೀಸರ ದಿಕ್ಕು ತಪ್ಪಿಸುವ ಕೆಲಸವನ್ನೂ ಮಾಡಿದ್ದ. ಸಿದ್ಧಾಪುರ ಕನಕದಾಸ ಗಲ್ಲಿಯ ಅಡ್ಡೆಯೊಂದರಲ್ಲಿ ಸೇರುತಿದ್ದ ಪುಡಾರಿ ಗ್ಯಾಂಗಿಗೆ ಕೂಡಾ ಗುಟ್ಟುಕೊಡದ ಈತ ಒಂದೆರಡು ದಿವಸ ಮಾಡಿದ ನಾಟಕ ಇತನ ಪುಡಂಗು ಗ್ಯಾಂಗಿಗೇ ಅನುಮಾನ ಹುಟ್ಟಿಸಿತ್ತು. ಯಾರೆಂದರೆ ಯಾರಿಗೂ ಗುಟ್ಟುಕೊಡದೆ ಹೊಂಚುಹಾಕಿದ್ದ ಅಭಿಜಿತ್‌ ಈ ಬಾರಿ ಹಿಂದಿನಂತೆ ಘಟನೆ ನಡೆದ ನಂತರ ಪರಾರಿಯಾಗಿರಲಿಲ್ಲ. ಊರು ಬಿಟ್ಟರೆ ಪೊಲೀಸರಿಗೆ ಅನುಮಾನ ಬರಬಹುದೆಂದು ಯೋಚಿಸಿದ್ದ. ಪೊಲೀಸರು ಈತನ ಮೇಲೆ ಕಣ್ಣಿಟ್ಟು ಈತನ ಚಲನವಲನ ನೋಡುತಿದ್ದರೆ ಈತ ಪೊಲೀಸರ ಚಲನವಲನ ಗಮನಿಸುತ್ತ ಈ ಪ್ರಕರಣದಲ್ಲೂ ತಾನು ಪಾರಾದೆ ಎಂದು ಭ್ರಮಿಸಿದ್ದ!

ತನ್ನ ಪುಡಿರೌಡಿತನಕ್ಕೆ ಅಡ್ಡಬಾರದ ಕುಟುಂಬ, ಗ್ರಾಮದಲ್ಲಿ ಅನ್ಯಮನಸ್ಕನಂತಿರುತಿದ್ದ ಅಭಿ ಪರಿಚಿತರ ಲೆಕ್ಕದಲ್ಲೂ ಪ್ರಶ್ನಾರ್ಥಕನಾಗಿದ್ದ!

ಎಳೆ ಹುಡುಗನಾಗಿದ್ದಾಗ ಊರಲ್ಲಿ ಕಳ್ಳತನ ಮಾಡುತಿದ್ದುದು ಬಿಟ್ಟರೆ ನೆರೆಹೊರೆಯವರಿಗೆ ಅನುಮಾನ ಬಾರದಂತೆ ವರ್ತಿಸುತಿದ್ದ ಈತ ಇದೇ ಆರೋಗ್ಯಕರ ಅಂತರವನ್ನು ಸಂಬಂಧಿಗಳು, ಪಡಿ ಪಟಾಲಂ ಸ್ನೇಹಿತರೊಂದಿಗೂ ಕಾಪಾಡಿಕೊಂಡಿದ್ದ ತೀರಾ ಆತ್ಮೀಯರೊಂದಿಗೆ ನಶೆಯಲ್ಲಿ ತನ್ನ ಸಾಹಸ ವಿವರಿಸುತಿದ್ದು ಬಿಟ್ಟರೆ ಸೋಜಿನಲ್ಲಿ ಈತ ಮಿತಭಾಶಿಯಾಗಿದ್ದ.

ಪೊಲೀಸರನ್ನು ದಿಕ್ಕುತಪ್ಪಿಸುವ ಕಲೆ ರೂಢಿಸಿಕೊಂಡಿದ್ದ ಅಭಿಜಿತ್‌ ಜೈಲು ಸಾವಾಸದಲ್ಲಿ ಕೆಲವು ವಿದ್ಯೆಗಳನ್ನು ಕರಗತಮಾಡಿಕೊಂಡು ಉದ್ಯೋಗವಿಲ್ಲದೆ, ಜವಾಬ್ಧಾರಿಯಿಲ್ಲದೆ ಬದುಕು ಸಾಗಿಸಿಕೊಂಡಿದ್ದ ಎನ್ನಲಾಗಿದೆ.

ಈ ಕೊಲೆಯ ನಂತರ ಪೊಲೀಸರಿಂದ ಬಿಸಿ ಬಿಸಿ ಕಜ್ಜಾಯ ತಿಂದ ಈತನ ಪುಂಡ ಪಟಾಲಂ ಕೂಡಾ ಈ ಕೊಲೆಯಲ್ಲಿ ಈತನ ಕೈ ಚಳಕ ಇರುವುದನ್ನು ಗುಮಾನಿಸಿರಲಿಲ್ಲ ಎಂದರೆ ಈತ ಎಂಥ ಭಯಂಕರ ಸೋಗುಗಾರ ಎನ್ನುವುದನ್ನು ತಿಳಿಯಬಹುದು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *