ಸಂತೋಷ್‌ ಆತ್ಮಹತ್ಯೆ ಪ್ರಕರಣ….. ತಮಿಳುನಾಡಿನಲ್ಲಿ ಆರೋಪಿಗಳ ಸೆರೆ!

ಒಂದು ಲವ್‌ ಪ್ರಕರಣ, ಪತ್ತೆದಾರಿ ರಕ್ಷಕನನ್ನಾಗಿ ಮಾಡಿ ನಂತರ ಆ ಪತ್ತೆಧಾರಿಯೇ ಹಣದ ಹಿಂದೆ ಬಿದ್ದು ತನಗೆ ಮೋಸ ಮಾಡಿದ ಪ್ರೇಯಸಿಗಾಗಿ ಪ್ರಾಣ ಕೊಡುವ ಮಟ್ಟಿಗೆ ರೂಪಾಂತರ ಹೊಂದಿದ ಪ್ರೇಮ ಪ್ರಕರಣತ್ರಿಕೋನ ಸ್ವರೂಪ ಪಡೆದು ಅಂತಿಮವಾಗಿ ದುರಂತದೆಡೆಗೆ ಸಾಗಿದ ಸಿನೆಮಾ ಕಥೆಯಂತಿದೆ!

ಸೊರಬಾ ಚಿಕ್ಕ ತೌಡತ್ತಿಯ ಸಂತೋಷ್‌ ನಾಯ್ಕ ಆತ್ಮಹತ್ಯೆ ಪ್ರಕರಣದ ಸೆಕ್ಸ್‌ ಜಾಲದ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ.

ಇತ್ತ ಸಿದ್ದಾಪುರ ಠಾಣೆಯಲ್ಲಿ ಯಲ್ಲಾಪುರ, ಶಿರಸಿ ಪೊಲೀಸರು ಶೋಧದ ರೂಪ ರೇಷೆ ಕಾರ್ಯಾಚರಣೆ ಮುಂದುವರಿಸಿರುವಂತೆ ಶಂಕಿತರ ವಿಚಾರಣೆ ಪ್ರಹಸನ ಮುಂದುವರಿದಿದೆ. ಈ ಬೆಳವಣಿಗೆಗಳ ಮಧ್ಯೆ ಪ್ರೇಮಕಾಮದಾಟದ ಆರೋಪಿಗಳಾದ ಚನಮಾಂವ್‌ ನ ಹುಡುಗರು ದೂರದ ತಮಿಳುನಾಡಿನಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿರುವ ಗಾಳಿಸುದ್ದಿ ಹರಿದಾಡುತ್ತಿದೆ.

ಶತಾಗತಾಯ ಆರೋಪಿಗಳ ಹೆಡೆಮುರಿ ಕಟ್ಟಿ ಸೆಕ್ಸ್‌ ಜಾಲ ಬೇಧಿಸುವ ಪಣ ತೊಟ್ಟಿರುವ ಪೊಲೀಸರಿಗೆ ಗುಡ್ಡ ಅಗೆದು ಇಲಿ ಹಿಡಿದ ಫಲಿತಾಂಶವೋ? ನಿಜಕ್ಕೂ ಸೆಕ್ಸ್‌ ರಾಕೆಟ್‌ ಪತ್ತೆ ಮಾಡಿದ ಶ್ರೇಯಸ್ಸೋ ಈಗಿನ್ನೂ ಸಸ್ಪೆನ್ಸ್!‌

ಈ ನಡುವೆ ಡೆತ್‌ ನೋಟಿನ ಪ್ರಸ್ಥಾಪ ವಕೀಲ ಎಮ್.‌ ಎನ್.‌ ನಾಯ್ಕ ಬದಲು ಸಿದ್ಧಾಪುರದ ಎನ್.‌ಎಂ. ನಾಯ್ಕ ಎನ್ನುವ ಸತ್ಯ ಹೊರಬಿದ್ದಿದೆ ಎನ್ನಲಾಗುತ್ತಿದೆ.

ಸಾಕ್ಷಿನಾಶ- —

ಈ ಪ್ರಕರಣದ ಆರೋಪಿಗಳು ಮತ್ತಷ್ಟು ಜನರನ್ನು ಸೇರಿಸಿಕೊಂಡು ಸಾಕ್ಷಿ ನಾಶಕ್ಕೆ ಪ್ರಯತ್ನಿಸಿರುವ ಸಾಧ್ಯತೆ ಬಗ್ಗೆ ಪೊಲೀಸರ ತನಿಖೆ ಮುಂದುವರಿದಿದೆ.

ಶಿವಮೊಗ್ಗ ಸೊರಬಾ ವ್ಯಾಪ್ತಿಯ ಈ ಪ್ರಕರಣ ತಮ್ಮನ್ನು ಇಷ್ಟು ಕಾಡಲಿಕ್ಕಿಲ್ಲಎಂದು ಯೋಚಿಸಿದ್ದ ಪೊಲೀಸರ ಊಹೆ ಕೈ ಕೊಟ್ಟಿದೆ. ಮೃತ ಸಂತೋಷ್‌ ಸಿದ್ಧಾಪುರ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಶರನಾಗಿರುವುದು ನಂತರ ಕಾಂಗ್ರೆಸ್‌ ಮತ್ತು ಬಿ.ಜೆ.ಪಿ. ನಾಯಕರ ವೈಯಕ್ತಿಕ ಪ್ರತಿಷ್ಠೆಗಳು ಇದರ ನಡುವೆ ಕೆಲವು ಪೆದ್ದುಗುಂಡಾ ಮುಖಂಡರ ಐಲಾಟಗಳು ಇವೆಲ್ಲಾ ಸೇರಿ ಈ ಪ್ರಕರಣದ ಬಿಸಿ ರಾಜ್ಯಕ್ಕೇ ಗೊತ್ತಾಗುವಂತಾಗಿದೆ. ಈ ಪ್ರಕರಣ ಬೇಧಿಸಿ ಆರೋಪಿಗಳಿಗೆ ಶಿಕ್ಷೆಯಾದರೂ ನಿಜ ಖಳ ನಾಯಕರು ಹೊರಗೆ ಉಳಿಯುತ್ತಾರೆ ಎನ್ನುವ ಅನುಮಾನಕ್ಕೆ ಉತ್ತರ ಸಿಗುವುದು ದೌಟು!

ಅಂದಹಾಗೆ………. ಈ ಪ್ರಕರಣದ ಚನಮಾವ್‌ ಆರೋಪಿಗಳಿಗೆ ನೆರವು ನೀಡಿದ್ದರೆನ್ನುವ ಶಂಕೆಯ ಮೇಲೆ ಚನಮಾಂವ ನ ಇಬ್ಬರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಪರಾರಿಯಾಗಿದ್ದ ನೈಜ ಆರೋಪಿಗಳು ಸೆರೆಯಾಗುತ್ತಲೇ ಈ ಇಬ್ಬರು ಯುವಕರು ಮತ್ತು ರಾಜಕಾರಣಿ ದಂಪತಿಗಳನ್ನು ಮನೆಗೆ ಕಳುಸಿರುವ ಮಾಹಿತಿ ಸಿಕ್ಕಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *