ಇವನೊಂಥರಾ ಅಕ್ಕದಾಸನಿದ್ದಂಗೆ…..! (time pass)

ಕೆಲವು ಶಬ್ಧಗಳ ಉತ್ಫತ್ತಿ ವಿಶೇಶವಾಗಿರುತ್ತದೆ. ಕನ್ನಡದ ಹರಸಾಹಸ ಶಬ್ಧ ಹರಕ್ಯುಲಿಯನ್‌ ಟಾಸ್ಕ್‌ ಹರಕ್ಯುಲಸ್‌ ನಿಂದ ಬಂದ ಬಗ್ಗೆ ಹಿಂದೆ ಬರೆದಿದ್ದೆ.

ಈಗ ಅಕ್ಕದಾಸನ ಬಗ್ಗೆ ತಿಳಿಯೋಣ.

ಶಿರಸಿಯಲ್ಲಿ ಸಂಪ್ರದಾಯಸ್ಥ ಹವ್ಯಕ ಮನೆತನದಲ್ಲಿ ಗಣಪತಿ ಭಟ್ಟ ಎಂಬುವವನೊಬ್ಬನಿದ್ದ ಅವರ ಮನೆತನದ ಹೆಸರು ಅಕ್ಕದಾಸ ಅಂದರೆ ಅಕ್ಕದಾಸರ ಮನೆತನ.

ಈ ಅಕ್ಕದಾಸ ಗಣಪತಿ ಭಟ್ಟ ಕರ್ಮಠ ಹವ್ಯಕ ಆಚರಣೆಗಳ ವಿರುದ್ಧ ಸಿಡಿದೆದ್ದು ಸರಿಸುಮಾರು ಒಂದು ಶತಮಾನದ ಹಿಂದೆ ಸುಧಾರಣಾ ಚಳವಳಿ ಪ್ರಾರಂಭಿಸಿದ್ದಾತ. ವಿದವಾ ವಿವಾಹದ ಮೂಲಕ ಕ್ರಾಂತಿ ಮಾಡಿದ್ದ ಅಕ್ಕದಾಸ ಭಟ್ಟ ಲೌಕಿಕರ ಲೆಕ್ಕದಲ್ಲಿ ಲೇವಡಿಗೆ ಬಳಸುವ ಹೆಸರಾಗಿದ್ದ!

ಇವರ ನೊಬೆಲ್‌ ಕೆಲಸದ ಬಗ್ಗೆ ಕೆಲವರಿಗೆ ಒಪ್ಪಿಗೆ, ಮೆಚ್ಚುಗೆ ಇದ್ದರೆ ಬಹುಸಂಖ್ಯಾತ ಸಂಪ್ರದಾಯಸ್ಥರು ಇವರ ಕೆಲಸದ ವಿರುದ್ಧವಿದ್ದರು. ಇವರ ಸುಧಾರಣಾ ಕ್ರಮದಿಂದ ಸಮಾಜದಲ್ಲಿ ಪರಿವರ್ತನರಯಾದದ್ದಂತೂ ಸತ್ಯ

ಇಂಥ ಸುಧಾರಣಾ ವಾದಿ ಹೋರಾಟಗಾರನನ್ನು ಬಹುಸಂಖ್ಯಾತರು ಗೇಲಿ ಮಾಡುತಿದ್ದುದು ಇವನೊಬ್ಬ ಅಕ್ಕದಾಸನ ಥರದವನು ಅಥವಾ ಇವಳೊಂಥರಾ ಅಕ್ಕದಾಸನ ಥರದವಳು ಎಂದು.

ಈ ಅಕ್ಕದಾಸ ಮತ್ತು ಅಕ್ಕದಾಸನ ಥರದೋನು ಎನ್ನುವುದು ಈಗ ಅಷ್ಟು ಬಳಕೆಯಲ್ಲಿಲ್ಲ.

ಇತ್ತೀಚೆಗೆ ಸಾಗರದ ಕಲಗಾರಿನ ಲಕ್ಷ್ಮೀ ನಾರಾಯಣ ಶರ್ಮ ಈ ಬಗ್ಗೆ ಪುಸ್ತಕವೊಂದನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಪ್ರಕಟಿಸಿದವರು ಬೆಂಗಳೂರಿನ ಬಹುರೂಪಿ ಪ್ರಕಾಶನ. ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಶಿರಸಿ ಮುಂಡಗೆಸರದಲ್ಲಿ ನಡೆಯಿತು. ಯಥಾಪ್ರಕಾರ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸೇರಿದವರು ಬಹುತೇಕ ಅದೇ ಕರ್ಮಠ ವ್ಯವಹಾರಿಗಳು ಎನ್ನುವುದು ಈ ಕಾರ್ಯಕ್ರಮದ ಬಗ್ಗೆ ಇದ್ದ ಟೀಕೆ. ಅದೇನೆ ಇರಲಿ, ಹಿರಿಯ ಸಾಹಿತಿ, ಸಂಶೋಧಕ ಮಧುರಾವ್‌ ಮಡೇನೂರು ಈ ಪುಸ್ತಕಕ್ಕೆ ಮುನ್ನುಡಿ ಬರೆದು ಆ ಬಗ್ಗೆ ಆಸಕ್ತಿಕಾರಕ ಕೆಲವು ವಿಚಾರಗಳನ್ನು ತಿಳಿಸಿದರು. ಇಂಥ ಚರ್ಚೆಗಳ ಮೂಲಕ ಕೆಲವು ಒಳನೋಟಗಳನ್ನು ಕೊಡುವ ಮಧುರಾವ್‌ ಹಳೆಪೈಕ ದೀವರ ಬಗ್ಗೆ ಮಾಹಿತಿಪೂರ್ಣ ಪುಸ್ತಕವೊಂದನ್ನು ಬರೆದಿದ್ದಾರೆ. ಅಕ್ಕದಾಸನನ್ನು ನೆನಪಿಸಿದ, ಬರೆದ, ಪ್ರಕಟಿಸಿದ ಮಧು ರಾವ್‌, ಶರ್ಮ, ಜಿ.ಎನ್.ಮೋಹನ್‌ ಈ ಕಾಲಕ್ಕೆ ಒಂದು ಶತಮಾನದ ಹಿಂದಿನ ಸುಧಾರಣಾವಾದಿ ಚಳವಳಿಯೊಂದನ್ನು ನೆನಪಿಸುವ ಮೂಲಕ ಸಾರಸ್ವತ ಲೋಕಕ್ಕೆ, ಕನ್ನಡ ಸಾಹಿತ್ಯಕ್ಕೆ ಅಪೂರ್ವ ಎನ್ನುಬಹುದಾದ ಕೊಡುಗೆ ನೀಡಿದ್ದಾರೆ ಎನ್ನುವುದು ನನ್ನ ಭಾವನೆ. …ಇಂತಿ ನಿಮ್ಮ ಕನ್ನೇಶ್….‌ ಕೋಲಶಿರ್ಸಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *