ಭಾಷೆ ಬರದಿರುವುದು ಅಂಗವೈಕಲ್ಯ ಎಂದವನಿಗೊಂದು ಲಾಲ್‌ ಸಲಾಮ್‌

ಹೈದರಾಬಾದಿನ ರಂಗರಾವ್‌ ಜಿಲ್ಲೆಯ ರಾಮೋಜಿ ಫಿಲ್ಮ್‌ ಸಿಟಿಯ ಎತ್ತರದ ಪ್ರದೇಶದಲ್ಲಿ ರಾಮೋಜಿರಾವ್‌ ಮನೆ ಇತ್ತು. ಈ ಭದ್ರ ಕಟ್ಟಡದ ಮೇಲೆ ಅವರ ಹೆಲಿಕಾಪ್ಟರ್‌ ನಿಲ್ಲುತಿತ್ತು. ಈ ಮನೆಯ ಯಜಮಾನ ಕಟ್ಟಿದ ಈ ನಾಡಿನ ರಾಮೋಜಿ ಫೀಲ್ಮ್‌ ಸಿಟಿ ಸಾವಿರಾರು ಎಕರೆ ವ್ಯಾಪ್ತಿಯ ಪ್ರದೇಶದಲ್ಲಿದೆ. ಅಲ್ಲಿ ಸೊಳ್ಳೆಗಳನ್ನೊಂದು ಬಿಟ್ಟು ಇಲಿ, ಜಿರಲೆಗಳೂ ನುಸುಳಲು ಸಾಧ್ಯವಿಲ್ಲ ಅಂಥ ಅಭೇಧ್ಯ ಕೋಟೆ ಕಟ್ಟಿದ ಹುಡುಗ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸೈಕಲ್‌ ಏರಿ ಉಪ್ಪಿನ ಕಾಯಿ ಹಂಚುತಿದ್ದನಂತೆ!

ಈ ಕನಸುಗಾರ ಹುಡುಗನಿಗೆ ಉತ್ಕೃಷ್ಟ ಉಪ್ಪಿನ ಕಾಯಿ, ಹಪ್ಪಳ ತಯಾರಿಸಿಕೊಡುವ ಅಮ್ಮನಿದ್ದಳು!

ಮಗ ಉಪ್ಪಿನ ಕಾಯಿ ತಯಾರಿಸುವ ಚಿಕ್ಕ ಉದ್ಯಮ ಪ್ರಾರಂಭಿಸಿ ಗೆದ್ದ. ನಂತರ ಪತ್ರಿಕೆ ಪ್ರಾರಂಭಿಸಬೇಕೆಂಬ ಆಸೆ ಬಂತು ಹಠದಿಂದ ಅದನ್ನೂ ಪ್ರಾರಂಭಿಸಿಯೇ ಬಿಟ್ಟ ನಂತರ ಎರಡು ಡಜನ್‌ ಸಂಸ್ಥೆಗಳ ಮಾಲಕನಾಗುವತ್ತ ಹೆಜ್ಜೆ ಹಾಕಿದ ತಿರುಗಿ ನೋಡಿದ್ದೇ ಇಲ್ಲ ಏರಿದ ಎತ್ತರ ನಾಲ್ಕೈದಂತಸ್ತಿನ ಮನೆ, ಅದರ ಮೇಲೆ ಹೆಲಿಪ್ಯಾಡ್!‌

ಇಷ್ಟು ಎತ್ತರದ ವ್ಯಕ್ತಿ ಮೂರು ತಿಂಗಳಿಗೊಮ್ಮ ಪ್ರತಿ ನೌಕರನ ಅಭಿಪ್ರಾಯ ಕೇಳುತಿದ್ದರು.

ಆಗಬೇಕಾದ ಕೆಲಸಗಳು ಕೂತಲ್ಲೇ ಆಗುತಿದ್ದವು ಅಳೆದು ತೂಗುವ ಮಾತೇ ಇಲ್ಲ. ರಾಮೋಜಿ ಅಂದರೆ ಹಾಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ವರ್ಷದೊಳಗೆ ಪ್ರಮೋಷನ್ನು ಡಿಮೋಷನ್ನು ಏರುತ್ತಿರಬೇಕಷ್ಟೆ ಏರಲಾಗದವನಿಗೆ ಬೇರೆ ಜಾಗ.

ಇದು ನಾವು ನೋಡಿದ ರಾಮೋಜಿ. ಈ ನಾಡು ಸಂಸ್ಥೆ, ರಾಮೋಜಿ ಫಿಲ್ಮ್‌ ಸಿಟಿ, ಇದರೊಂದಿಗೆ ಅದೆಷ್ಟೋ ವ್ಯಾಪಾರ, ವ್ಯವಹಾರ ಎಲ್ಲಾ ಕಡೆ ಕರಾರುವಕ್ಕು. ಮೊದಲ ೨೦ ವರ್ಷ ಶ್ರಮ, ನಂತರ ೨೦ ವರ್ಷ ಅನುಭವ, ನಂತರ ಸ್ಥಾಪನಾ ಪರ್ವ, ನಡುವೆ ರಾಜಕಾರಣ ಸಾಧಿಸುವ ಮನಸ್ಸಿದ್ದರೆ ಸಾಧನೆ ಅವನ ಸ್ವತ್ತು ಈ ವಾಖ್ಯಕ್ಕೆ ಮೆರುಗು ನೀಡಿದ ಮೇರು ಪರ್ವತ ರಾಮೋಜಿ (೮೮).

೧೯೬೯ ರಲ್ಲಿ ಅನ್ನದಾತ ಪಾಕ್ಷಿಕ ಪ್ರಾರಂಭಿಸಿದ್ದ ರಾಮೋಜಿ ರಾವ್‌ ಕೃಷಿ ಬಗ್ಗೆ ಒಲವಿದ್ದ ಪತ್ರಕರ್ತರಾಗಿದ್ದರು.ಈ ಟಿ.ವಿ. ವಾಹಿನಿಗಳಲ್ಲಿ ಕೃಷಿ ಕಾರ್ಯಕ್ರಮಗಳಿಂದ ಅನ್ನದಾತರಿಗೆ ನೆರವಾದ ರಾಮೋಜಿ ರಾವ್‌ ಕೃಷಿ ನನ್ನ ಉಸಿರು ಎನ್ನುತಿದ್ದರು. ಉದ್ಯಮಿಯಾಗಿ ಲಕ್ಷಾಂತರ ಜನರಿಗೆ ಉದ್ಯೋಗದಾತನಾಗಿ ಅನೇಕ ಸಂಸ್ಥೆಗಳ ಒಡೆಯನಾಗಿ ರಾಮೋಜಿ ರಾವ್‌ ಏರಿದ ಎತ್ತರ ಅವರಿಗೆ ಅಭಿಸಿದ ಪದ್ಮಭೂಷಣಕ್ಕಿಂತ ನೂರಾರು ಪಟ್ಟು. ಕನ್ನಡದ ಈ ಟಿವಿ, ಸಿನೆಮಾ ನಿರ್ಮಾಣ, ಚಿತ್ರವಿತರಣೆ ಮಾಡಿದ ಮಾದರಿಯಲ್ಲೇ ಇಪ್ಪತ್ತು ಭಾಷೆಗಳಲ್ಲಿ ೨೫ ರಾಜ್ಯಗಳಲ್ಲಿ ಅವರು ಮೂಡಿಸಿದ ಗುರುತು ಮರೆಯಾಗದ ಅಕ್ಷರ. ಹಲವು ಭಾಷೆ ಬಲ್ಲವರಾಗಿದ್ದ ರಾಮೋಜಿ ಭಾಷೆ ಬರದಿದ್ದರೆ ಅಂಗವಿಕಲನಾದಂತೆ ಎಂದಿದ್ದ ಅವರ ಮಾತು ಈಗಲೂ ಕಿವಿ,ಎದೆಯಲ್ಲಿ ರಿಂಗಣಿಸುವ ಧ್ಯೇಯವಾಖ್ಯ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *