ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಳ್ಳಿ

: ಸಾರಿಗೆ ಇಲಾಖೆಯ ಆದೇಶ- ರಾಜ್ಯದಲ್ಲಿ ಹೆಲ್ಮೆಟ್ ನಿಯಮಕ್ಕೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಇತ್ತೀಚೆಗೆ ಆಂತರಿಕ ಅಧಿಸೂಚನೆ ಹೊರಡಿಸಿದೆ.

Representational image

ಬೆಂಗಳೂರು: ರಾಜ್ಯದಲ್ಲಿ ಹೆಲ್ಮೆಟ್ ನಿಯಮಕ್ಕೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಇತ್ತೀಚೆಗೆ ಆಂತರಿಕ ಅಧಿಸೂಚನೆ ಹೊರಡಿಸಿದೆ.

ನೊಟೀಸ್ ನಲ್ಲಿ, ಹೆಲ್ಮಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವವರಿಗೆ ಕಡ್ಡಾಯವಾಗಿ 500 ರೂಪಾಯಿ ದಂಡ ಮತ್ತು ಅವರ ಡ್ರೈವಿಂಗ್ ಲೈಸೆನ್ಸ್ ನ್ನು ಮೂರು ತಿಂಗಳವರೆಗೆ ರದ್ದುಪಡಿಸಬೇಕೆಂದು ಸೂಚಿಸಲಾಗಿದೆ.

ನೂತನ ಮೋಟಾರ್ ವಾಹನ ಕಾಯ್ದೆ ಕಳೆದ ವರ್ಷ ಸೆಪ್ಟೆಂಬರ್ 1ರಂದು ಜಾರಿಗೆ ಬಂದಿತ್ತು. ಆದರೆ ತಳಮಟ್ಟದಲ್ಲಿ ಅದನ್ನು ಜಾರಿಗೆ ತರುವ ಬಗ್ಗೆ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ತರುವ ಕೆಲಸವಾಗಿಲ್ಲ. ನಿಯಮ ಉಲ್ಲಂಘಿಸಿದವರಿಗೆ ಕಡ್ಡಾಯವಾಗಿ ದಂಡ ಮತ್ತು ಲೈಸೆನ್ಸ್ ರದ್ದುಪಡಿಸಲು ಎಲ್ಲಾ ಅಧಿಕಾರಿಗಳಿಗೆ ಹೇಳಬೇಕೆಂದು ನೊಟೀಸ್ ನಲ್ಲಿ ತಿಳಿಸಲಾಗಿದೆ. ಹೆಲ್ಮೆಟ್ ಧರಿಸುವ ನಿಯಮ ಚಲಾಯಿಸುವವರಿಗೆ ಮತ್ತು ಹಿಂಬದಿ ಪ್ರಯಾಣಿಕರಿಗೆ ಕಡ್ಡಾಯವಾಗಿರುತ್ತದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎನ್ ಶಿವಕುಮಾರ್ ತಿಳಿಸಿದ್ದಾರೆ.

ಉತ್ತರ ಸಂಚಾರ ವಿಭಾಗದ ಉಪ ಆಯುಕ್ತ ಸಜೀತ್ ವಿ ಜೆ, ಟ್ರಾಫಿಕ್ ಪೊಲೀಸರಿಗೆ ಪರವಾನಗಿ ರದ್ದು ಮಾಡುವ ಅಧಿಕಾರವಿಲ್ಲ, ಅವರು ಆರ್ ಟಿಒ ಅಧಿಕಾರಿಗಳಿಗೆ ಡಿಎಲ್ ರದ್ದುಪಡಿಸುವ ಬಗ್ಗೆ ಬರೆಯಬೇಕು. ಇದುವರೆಗೆ ಈ ನಿಯಮ ಉಲ್ಲಂಘಿಸಿದ ಸಾವಿರದಿಂದ 2 ಸಾವಿರ ಲೈಸೆನ್ಸ್ ಗಳನ್ನು ರದ್ದು ಮಾಡುವಂತೆ ಶಿಫಾರಸು ಮಾಡಲಾಗಿದೆ. ಸೆಪ್ಟೆಂಬರ್ 31ರವರೆಗೆ ಬೆಂಗಳೂರು ಸಂಚಾರ ಪೊಲೀಸರು 20.7 ಲಕ್ಷ ನಿಯಮ ಉಲ್ಲಂಘನೆ ಕೇಸು ದಾಖಲಿಸಿದ್ದಾರೆ. ಅದರ ಜೊತೆಗೆ 12.5 ಲಕ್ಷ ಹಿಂಬದಿ ಪ್ರಯಾಣಿಕರಿಗೆ ಕಡ್ಡಾಯವಾಗಿದೆ ಎಂದರು.

ಕಳೆದ ಸೆಪ್ಟೆಂಬರ್ 13ರಿಂದ 19ರವರೆಗೆ ಪೊಲೀಸರು 48,141 ಕೇಸುಗಳನ್ನು ದಾಖಲಿಸಿದ್ದು, 2 ಕೋಟಿಯ 14 ಲಕ್ಷದ 38 ಸಾವಿರ ಹಣವನ್ನು ಸಂಗ್ರಹಿಸಿದೆ.(kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿಕ್ಷಣ – ಉದ್ಯಮ, ರಾಜಕೀಯ ಕ್ಷೇತ್ರಗಳ ಮುಂಚೂಣಿಯ ವಾಲ್ಮೀಕಿ ಕುಟುಂಬ

ತಾಲೂಕುಪಂಚಾಯತ್ & ಜಿಲ್ಲಾಪಂಚಾಯತ್ ಜೊತೆಗೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹೊಸ್ತಿಲಲ್ಲಿರುವುದರಿಂದ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲೂ ಚುನಾವಣೆ ಸದ್ದು. ಗ್ರಾಮೀಣ ಚುನಾವಣಾಕಣಎಂದರೆ… ಅದು ಕೋಳಿಕಾಳಗದಂತೆ...

ರಾಜೀವ್ ಮೈದಾನಉಳಿಸಲು ಸೂಚನೆ

ಸಿದ್ಧಾಪುರ ‘ರಾಜೀವ ಮೈದಾನ’ ಉಳಿಸಲು ಗ್ರಾಮಸ್ಥರ ಆಗ್ರಹ; ಕ್ರೀಡೆಗೆ ಹೊರತುಪಡಿಸಿ ಅನ್ಯ ಚಟುವಟಿಕೆಗೆ ನೀಡದಂತೆ ಶಿರಸಿ ಉಪವಿಭಾಗಾಧಿಕಾರಿ ಸೂಚನೆ ​ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿರುವ ಏಕೈಕ...

ತ್ಯಾರಸಿ ಯುವತಿಗೆ ಬಂಗಾರದ ಪದಕ

ಸಿದ್ದಾಪುರ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಸಿದ್ದಾಪುರ ತಾಲೂಕಿನ ತ್ಯಾರ್ಸಿಯ ರಚನಾ ಪ್ರಕಾಶ ಗೌಡರ್ ರಾಜ್ಯದ ರಾಜ್ಯಪಾಲರಿಂದ ಬಂಗಾರದ( ಗೋಲ್ಡ್ ಮೆಡಲ್...

ಸಹಕಾರಿ ಸೇರಿದಂತೆ…. ನಾನಾ ಕ್ಷೇತ್ರಗಳ ಕೀಲಿಕೈ ಕಳ್ಳನ ಕೈ ಸೇರಿದರೆ ಅಪಾಯ!!!

ಕನ್ನ ಹಾಕಿದವರಿಗಿಂತ ಕಾವಲು ನಿಂತು ಕಣ್ಣುಮುಚ್ಚಿದವನೇ ಪ್ರಧಾನ ಆರೋಪಿ!?(ಸಹಕಾರಿ ರಂಗದ ರಕ್ಷಾ ಕವಚವಾದ ಸನ್ನದು ಲೆಕ್ಕಪರಿಶೋಧಕರ ನೈತಿಕ ಅಧಃಪತನದ ಕರಾಳ ದರ್ಶನ) “ಭಾರತೀಯ ಸಂಸ್ಕೃತಿಯಲ್ಲಿ...

Latest Posts

ಶಿಕ್ಷಣ – ಉದ್ಯಮ, ರಾಜಕೀಯ ಕ್ಷೇತ್ರಗಳ ಮುಂಚೂಣಿಯ ವಾಲ್ಮೀಕಿ ಕುಟುಂಬ

ತಾಲೂಕುಪಂಚಾಯತ್ & ಜಿಲ್ಲಾಪಂಚಾಯತ್ ಜೊತೆಗೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹೊಸ್ತಿಲಲ್ಲಿರುವುದರಿಂದ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲೂ ಚುನಾವಣೆ ಸದ್ದು. ಗ್ರಾಮೀಣ ಚುನಾವಣಾಕಣಎಂದರೆ… ಅದು ಕೋಳಿಕಾಳಗದಂತೆ ಸೋಲು- ಗೆಲುವುಅಂತಿಮಫಲಿತಾಂಶ ಆದರೆ ರಾಜಕೀಯಮುಖಂಡರಿಗೆ ಇದುಪ್ರತಿಷ್ಠೆಯಪ್ರಶ್ನೆ..ಕೆಲವು ಕುಟುಂಬಗಳು ರಾಜಕೀಯಅಖಾಡದಲ್ಲಿ ನೆಲೆನಿಂತವರಿಗೆ ಸೋಲು- ಗೆಲುವಿನ ಅಂತಿಮತೀರ್ಪಿನ ಬಗ್ಗೆ ಲೆಕ್ಕವೇಇಲ್ಲ. ಚುನಾವಣೆಎಂದರೆ ಅವರಿಗೆ ಹೋರಾಟದಅಂಕಣ ಇಂಥ ವಿಶೇಷ ಗುಣವಿಶೇಷಗಳಲ್ಲಿ ಸಿದ್ದಾಪುರ ಬಿಳಗಿಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *