ಅಧಿಕಾರಿಗಳ ದರ್ಭಾರ್…ವೈದ್ಯರ ಕಾರ್ಬಾರ್! ಶಾಸಕರು, ಸಚಿವರ ವಿರಸದಿಂದ ಬಡವಾಗುತ್ತಿರುವ ಜನರು!

ಶಿರಸಿ ಎ.ಸಿ. ಶಿರಸಿಯಿಂದ ೧೫೦ ಕಿ.ಮೀ.ದೂರದ ಭಟ್ಕಳಕ್ಕೆ ಹೋಗಿ ವಾರದ ಮೂರು ದಿವಸ ಅಲ್ಲಿ ಕೆಲಸ ಮಾಡುತ್ತಾರೆ.

ಶಿರಸಿ ತಹಸಿಲ್ಧಾರರ ವರ್ಗಾವಣೆಯಾಗಿ ಮೂರು ತಿಂಗಳಾದರೂ ಹೊಸಬರು ಬಂದಿಲ್ಲ.

ಸಿದ್ಧಾಪುರದ ಪಿ.ಎಸ್. ಆಯ್.‌ ಕೆ.ಎ.ಟಿ. ಆದೇಶದ ಮೇಲೆ ಸಿದ್ಧಾಪುರದಲ್ಲಿ ಮುಂದುವರಿದಿದ್ದಾರೆ.

ಕೆಲಸ ಮಾಡದೆ ಬಿಲ್‌ ಮಾಡುತ್ತಾರೆ ಎನ್ನುವ ಆರೋಪವಿರುವ ಸಿದ್ಧಾಪುರ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಶಶಿ ಗೌಡ ವರ್ಗಾವಣೆಯಾದರೂ ಕೆ.ಎ.ಟಿ.ಯಿಂದ ತಡೆಯಾಜ್ಞೆ ತಂದಿದ್ದಾರೆ!.

ಹೀಗೆ ಮಂಕಾಳ್‌ ವೈದ್ಯರ ಉಸ್ತುವಾರಿ ಜವಾಬ್ಧಾರಿಯಡಿ ಶಿರಸಿ-ಸಿದ್ಧಾಪುರದ ಸ್ಥಿತಿ ಇದಾದರೆ… ಉಳಿದ ತಾಲೂಕುಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಶಿರಸಿ ಜಿಲ್ಲೆಯ ವಾಣಿಜ್ಯ ಕೇಂದ್ರ ಇಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ನಿರ್ವಹಿಸಿದರೆ ಸುತ್ತಮುತ್ತಲಿನ ತಾಲೂಕುಗಳ ಜನರಿಗೂ ಅನುಕೂಲ ಆದರೆ ವೈದ್ಯ, ಭೀಮಣ್ಣರ ಶೀಥಲ ಸಮರದಲ್ಲಿ ಜನಸಾಮಾನ್ಯರು ಬಡವರಾಗುತ್ತಿರುವುದಕ್ಕೆ ಯಾರನ್ನು ದೂರೋಣ?

ಕ್ರೀಯಾಶೀಲ, ಜನಸ್ಫಂದನೆಯ ಶಾಸಕ ಭೀಮಣ್ಣ ಹೆಚ್ಚಿನ ಅನುದಾನ ತರುತಿದ್ದಾರೆ, ಕ್ಷೇತ್ರದ ಜನರ ಬಳಿ ತೆರಳಿ ಜನರಿಗೆ ಸ್ಪಂ ದಿಸುತಿದ್ದಾರೆ ಆದರೆ, ಅವರ ವೇಗಕ್ಕೆ ಬ್ರೇಕ್‌ ಹಾಕುವಂತೆ ಜಿಲ್ಲಾ ಉಸ್ತುವಾರಿಗಳ ವರ್ತನೆ ಇದೆ ಎನ್ನಲಾಗುತ್ತಿದೆ.

ಈ ವಿದ್ಯಮಾನಗಳ ನಡುವೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿಲ್ಲೆಯ ಬಹುಸಂಖ್ಯಾತರ ವಿರುದ್ಧ ಕೆಲಸ ಮಾಡುತ್ತಾ ಬಿ.ಜೆ.ಪಿ.ಗರನ್ನು ಮೆಚ್ಚಿಸುವ ಕೆಲಸ ಮಾಡುತಿದ್ದಾರೆ ಎನ್ನುವ ಆರೋಪಗಳಿವೆ. ಪ್ರಗತಿಪರ, ಕ್ರೀಯಾಶೀಲ,ಜಾತ್ಯಾತೀತ ಎನ್ನುವ ವಿಶೇಶಣಗಳ ಪೊಲೀಸ್‌ ವರಿಷ್ಠರು ತಮಗೆ ಬೇಕಾದವರನ್ನು ಹೆಚ್ಚು ಬೆಂಬಲಿಸುತ್ತಾ ಇಲಾಖೆಯ ಕಿರಿಯ ಅಧಿಕಾರಿಗಳ ಕಿರಿ-ಕಿರಿಗೆ ಕಾರಣರಾಗುತಿದ್ದಾರೆ ಎನ್ನುವ ಸ್ಥಿತಿ ಉದ್ಭವಿಸಿದೆ.

ಸಿದ್ಧಾಪುರದ ಪೊಲೀಸ್‌ ಠಾಣೆಯಲ್ಲಿ ಲಾಗಾಯ್ತಿನಿಂದಲೂ ಹಿರಿ-ಮತ್ತು ಕಿರಿ ಅಧಿಕಾರಿಗಳ ತಂಡಗಳ ಘರ್ಷಣೆ ನಡೆಯುತ್ತಿರುವುದಕ್ಕೆ ಅನೇಕ ದೃಷ್ಟಾಂತಗಳು ಸಿಗುತ್ತವೆ. ಹಿರಿಯ ಅಧಿಕಾರಿಯ ಬದಲು ಕಿರಿಯ ಅಧಿಕಾರಿ ಪೊಲೀಸ್‌ ವರಿಷ್ಠರ ಅನುಕಂಪ ಗಿಟ್ಟಿಸಿದರೆ ಠಾಣೆಯ ವ್ಯವಸ್ಥೆ ಏನಾಗಬಹುದು ಎಂಬುದಕ್ಕೆ ಸಿದ್ಧಾಪುರ ಉತ್ತಮ ಉದಾಹರಣೆ. ಇಲ್ಲಿ ಸಾರಿಗೆ ನಿಯಮಗಳಿಲ್ಲ ಏಕಮುಖ ಮಾರ್ಗ, ಮುಖ್ಯರಸ್ತೆಗಳಲ್ಲಿ ವೇಗವಾಗಿ ಬರುವ ಜನರು ಸರಿಯಾದ ಮಾರ್ಗದಲ್ಲಿ ನಿಯಮಾನುಸಾರ ಸಾಗುವವರನ್ನೇ ಬೆದರಿಸುತ್ತಾರೆ!. ಪೊಲೀಸರ ಎದುರೇ ಸಾರಿಗೆ ನಿಯಮಗಳನ್ನು ಧಿಕ್ಕರಿಸುವವರನ್ನು ಕೇಳುವ ಸ್ಥಿತಿಯಲ್ಲಿ ಪೊಲೀಸರಿಲ್ಲ. ಈ ವಿದ್ಯಮಾನಗಳ ನಡುವೆ ಸಿದ್ಧಾಪುರದ ತೌಡತ್ತಿ ಆತ್ಮಹತ್ಯೆ ಪ್ರಕರಣದಲ್ಲಿ ರಾತ್ರಿ ಅಮಾನತ್ತಾದ ಪೊಲೀಸರು ಮುಂಜಾನೆ ಕೆಲಸಕ್ಕೆ ಹಾಜರ್‌!?

ಹೀಗೆ ಏಕಾಏಕಿ ನಿರ್ಧಾರಗಳು, ದಿನಕಳೆಯುವುದರೊಳಗಾಗಿ ಬದಲಾವಣೆ ಉತ್ತರ ಕನ್ನಡ ಪೊಲೀಸ್‌ ಎಂದರೆ… ತುಘಲಕ್‌ ದರ್ಭಾರ್‌ ಎನ್ನುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನಡುವಿನ ಅಭಿಪ್ರಾಯ ಭೇದ ಅಧಿಕಾರಿಗಳ ಅಂಧಾ ದರ್ಭಾರ್ ಗೆ ಕಾರಣವಾಗಿರುವುದು ಉತ್ತಮ ಬೆಳವಣಿಗೆಯಲ್ಲ ಎನ್ನುವ ಅಭಿಪ್ರಾಯವಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *