

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು ಆಗಾಗ ನಿಧಾನವಾಗಿ ರಭಸದ ಮಳೆ ಬೀಳುತ್ತಿದೆ!.

ಗಾಳಿ ಸಾಧಾರಣವಾಗಿ ಬೀಸುತಿದ್ದು ವಿದ್ಯುತ್ ಗುತ್ತಿಗೆದಾರರಿಗೆ ಲಾಭ ತರುವಷ್ಟು ವಿದ್ಯುತ್ ಕಂಬಗಳು ನೆಲಕ್ಕೆ ಬೀಳುತ್ತಿವೆ. ಒಂಬತ್ತು ತಿಂಳು ಆರಾಂ ಇದ್ದ ಕೆ.ಇ ಬಿ. ಕೆಳಹಂತದ ನೌಕರರು ಈಗ ಸುರಿಯುವ ಮಳೆಯಲ್ಲಿ ಬೆವರುತ್ತ ತಮ್ಮ ಕರ್ತವ್ಯ ನಿರ್ವಹಿಸುತಿದ್ದಾರೆ.
ನಿನ್ನೆ ಸಿದ್ಧಾಪುರದ ಕಲ್ಲೂರಿನಲ್ಲಿ ಕೃಷಿ ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬ ನೀರಿನಲ್ಲಿ ಬಿದ್ದು ನಿಧನರಾಗಿದ್ದು ಆತ ಸಾಯಂಕಾಲ ಮೀನು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದು ಸತ್ತಿರಬಹುದೆಂದು ಅಂದಾಜಿಸಿದ ಅವರ ಸಂಬಂಧಿಗಳು ಸರ್ಕಾರದ ೫ ಲಕ್ಷ ಪರಿಹಾರ ಧನದಿಂದ ವಂಚಿತರಾಗಿದ್ದಾ ರೆಂದು ಸಾರ್ವಜನಿಕರು ಬೇಸರಿಸುತಿದ್ದಾರೆ.



ಮಾವಿನಗುಂಡಿಯ ಯುವತಿಯೊಬ್ಬಳು ನಾಪತ್ತೆಯಾಗಿರುವುದಕ್ಕೂ ಜೋಗದ ಬಳಿಯ ಜೋಗಿನಮಠದ ಬಳಿ ಧರೆ ಕುಸಿದಿರುವುದಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ಯುವತಿ ಓಡಿಸಿಕೊಂಡು ಹೋದವರು ಧರೆ ಅಗೆದು ರಸ್ತೆ ಬಂದ್ ಮಾಡಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿ ಈ ಬಗ್ಗೆ ಮಾಹಿತಿ ನೀಡಿದ ಸಿದ್ಧಾಪುರದ ಪೊಲೀಸರನ್ನು ಅವಮಾನಿಸಿದ ಡೈನಾಮಿಕ್ ಎಸ್ಪಿ ಸಾಹೇಬರು ಸಿದ್ಧಾಪುರದ ಪೊಲೀಸರ ಸಾವಾಸ ಬ್ಯಾಡ ಮಾರ್ರೆ ಯಾರದೋ ತಪ್ಪಿಗೆ ಯಾರದೋ ತಲೆದಂಡವಾಗಬಾರದೆಂದು ನಾನು ಇಪ್ಪತ್ನಾಲ್ಕು ಗಂಟೆಯೊಳಗೆ ತುಘಲಕ್ ನಂತೆ ಇಬ್ಬರನ್ನು ಅಮಾನತ್ ಮಾಡಿ, ಆ ಆದೇಶವನ್ನೇ ರದ್ದು ಮಾಡಿದರೆ ನೀವೆಲ್ಲಾ ಸಿದ್ಧಾಪುರದ ಕಿರಿಯ ಅಧಿಕಾರಿಗೆ ಹೆಚ್ಚು ಅಧಿಕಾರದ ನೀಡಿದ್ದು ನಿಮ್ದೆ ತಪ್ಪು ಎಂದು ನಿಂದಿಸುತಿದ್ದೀರಿ ಅದಕ್ಕೇ ನಾನು ಸಿದ್ಧಾಪುರದ ಪೊಲೀಸರಿಗಿಂತ ಯಲ್ಲಾಪುರ, ಶಿರಸಿ ಪೊಲೀಸರೇ ಲೇಸು ಎಂದು ಕಿರುಚಾಡಿದ್ದು ಎಂದು ಸಮಾಧಾನ ಮಾಡಿಕೊಂಡರಂತೆ!

ಸಿದ್ಧಾಪುರದಿಂದ ಯಲ್ಲಾಪುರದ ವರೆಗೆ ಆಗಾಗ ಗುಡ್ಡ ಕುಸಿತವಾಗುತಿದ್ದು ಅದಕ್ಕಾಗಿ ಬೆಂಗಳೂರಿಗೆ ಹೋಗುವವರು ಹೊನ್ನಾವರ-ಸಿದ್ಧಾಪುರ ಮಾರ್ಗ ಬಳಸಿ ಸಾಗರಕ್ಕೆ ತೆರಳಿ, ಶಿವಮೊಗ್ಗಕ್ಕೆ ಹೋಗುವವರು ಮಾವಿನಗುಂಡಿ ಕಾರ್ಗಲ್ ಮೂಲಕ ಸಾಗರ ತಲುಪಿ, ಕುಮಟಾದಿಂದ ಬರುವವರು ಸಿದ್ಧಾಪುರ ಸೊರಬಾ ಹಿರೇಕೇರೂರು ಮಾರ್ಗ ಬಳಸಿ, ಅತ್ತ ಅಂಕೋಲಾದಿಂದ ಬರುವವರು ಕಾರವಾರ- ಬೆಳಗಾವಿ ಮಾರ್ಗಬಳಸಿ, ಕುಮಟಾ ದಿಂದ ಬರುವವರು ಸಿದ್ಧಾಪುರ, ಬನವಾಸಿ ಮಾರ್ಗ ಬಳಸಿ ಎಂದು ಹೆದ್ದಾರಿ ಎಂಜಿನಿಯರ್ ಕೊಟ್ಟ ಸಲಹೆ ಅರ್ಥವಾಗದೆ ಕೆಲವರು ಅಲ್ಲಲ್ಲೇ ಮಾರ್ಗಮಧ್ಯದಲ್ಲೆ ಅಡುಗೆ ತಯಾರಿಸಿ ತಿಂದುಂಡು ಬಸ್- ಕಾರ್ ಗಳಲ್ಲೇ ನಿದ್ರೆಹೋಗಿರುವುದು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ತಲೆ ಬಿಸಿ ಹೆಚ್ಚಿಸಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸರ ನಿದ್ದೆ ಗೆಡಿಸಿದ ತೌಡತ್ತಿ ಸಂತೋಷ್ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ ಸಾಬೀತಾಗಿದೆ. ಪೊಲೀಸ್ ದ್ವಂದ್ವದಲ್ಲಿ ಮರಣಪತ್ರದಾಖಲಿಸಿದ್ದ ಸಂತೋ಼ಷ್ ಎನ್. ಎಂ. ಎನ್. ಎನ್ನುವ ಬದಲು ಎಂ.ಎನ್.ಎನ್. ಎಂದಿದ್ದು ಗೋಟಾಳೆಗೆ ಕಾರಣವಾಗಿದ್ದು ಆತುರಗಾರನಿಗೆ ಬುದ್ದಿ ಮಂದ ಎನ್ನುವಂತೆ ಮೃತ ಹಾಗೂ ಪೊಲೀಸರ ತಪ್ಪಿನಿಂದ ವಕೀಲರೊಬ್ಬರಿಗೆ ಕಿರಿಕಿರಿಯಾಗಿದೆ. ಈ ತೊಂದರೆಗೆ ಪರಿಹಾರ ಕೇಳಲಿರುವ ವಕೀಲರು ಪೊಲೀಸರೊಂದಿಗೆ ಒಂದು ಡಜನ್ ಜನರ ವಿರುದ್ಧ ಮಾನಹಾನಿ, ಮಾನಸಿಕ ಕಿರಿಕಿರಿಗೆ ಕಾರಣರಾಗಿದ್ದಾರೆಂದು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________







2 Comments