

ರಾಜ್ಯ ಸರ್ಕಾರ ನಡೆಸುತ್ತಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಜಾತಿ ಗಣತಿ ಎಂದು ಪ್ರಚಾರ ಮಾಡಲಾಗುತ್ತಿದೆ.

ರಾಜ್ಯ ಸರ್ಕಾರದ ಸಮೀಕ್ಷೆ ಮೇಲ್ಜಾತಿಗಳನ್ನು ತುಳಿಯುವ ಹುನ್ನಾರ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಇನ್ನೊಬ್ಬ ಕೇಂದ್ರ ಸಚಿವ ಪ್ರಹಲ್ಹಾದ್ ಜೋಷಿ ಈ ಗಣತಿಗೆ ನಾನು ಮಾಹಿತಿ ನೀಡುವುದಿಲ್ಲ ಎಂದಿದ್ದಾರೆ!.


ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪ್ರಸ್ತುತ ಚರ್ಚೆಗಳನ್ನು ನೋಡಿದರೆ… ಈದು ಸ್ವತಂತ್ರ ಭಾರತವೋ? ಇಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಇದೆಯೋ? ಎನ್ನುವ ಅನುಮಾನ ಹುಟ್ಟುವಂತಿದೆ.
ಸರಿಸುಮಾರು ಒಂದು ದಶಕದ ಹಿಂದೆ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂಥದ್ದೇ ವರದಿಯೊಂದನ್ನು ಸಿದ್ಧಪಡಿಸಿತ್ತು. ಹಿಂದುಳಿದ ವರ್ಗಗಳ ಆಯೋಗ, ಸಮಾಜ ಕಲ್ಯಾಣ ಸಚಿವಾಲಯಗಳು ಅವಿರತ ಶ್ರಮದಿಂದ ರಾಜ್ಯದ ನಾನಾ ಜಾತಿ-ಸಮೂದಾಯ, ಪ್ರದೇಶಗಳ ಜನರ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಪ್ರಗತಿಯ ಸಮೀಕ್ಷೆಗೆ ಮುಂದಾಗಿ ಪರಿಶ್ರಮದಿಂದ ಈ ವರದಿ ತಯಾರಿಸಿತು. ಈ ಪ್ರಕ್ರೀಯೆ ಪ್ರಾರಂಭವಾಗಿ ಈ ವರೆಗೆ ನಾಲ್ಕೈದು ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಅವರಲ್ಲಿ ರಾಜ್ಯದ ಪ್ರಬಲ ಸಮೂದಾಯಗಳ ಯಡಿಯೂರಪ್ಪ, ಸದಾನಂದ ಗೌಡ, ಕುಮಾರಸ್ವಾಮಿ ಬಿಟ್ಟರೆ ಅಲ್ಲಿಂದ ಇಲ್ಲಿಯವೆರೆಗೆ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿದ್ದವರು ಸಿದ್ಧರಾಮಯ್ಯ.
ಸುಮಾರು ೫೦ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಭೂ ಸುಧಾರಣಾ ಕಾನೂನು ಜಾರಿಯಾಗುವ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ನೇತೃತ್ವದ ಸರ್ಕಾರದಲ್ಲಿ ಅಂದಿನ ಯುವ ನಾಯಕರು ಭೂಸುಧಾರಣೆ ಕಾನೂನು ಜಾರಿಗೆ ಸದನದ ಒಳಗೆ-ಹೊರಗೆ ಹೋರಾಟ ಮಾಡುತಿದ್ದಾಗ ಇದೇ ಈಗಿನ ಪ್ರಬಲ ಸಮೂದಾಯಗಳು ವಿರೋಧಿಸಿದ್ದವು.
ರೈತ ಹೋರಾಟಗಾರರು, ಶಾಸಕರಾಗಿದ್ದ ಅಂದಿನ ಕೆಲವು ಮುಖಂಡರಿಗೆ ಸದನದ ಒಳಗೇ ಕುರ್ಚಿಕಿತ್ತು ಹೊಡೆಯುವ ಪ್ರಯತ್ನದಲ್ಲಿ ಪ್ರಬಲರು ಸಫಲರಾದರೂ ಭೂಸುಧಾರಣೆ ಮಸೂದೆ ತಡೆಯಲು ಆಗಲಿಲ್ಲ.
ಲಕ್ಷಾಂತರ ಬಡ ಗೇಣಿದಾರರನ್ನು ಭೂಮಾಲಿಕರನ್ನಾಗಿಸಿದ ಕರ್ನಾಟಕದ ಭೂ ಸುಧಾರಣೆ ಕಾನೂನು ಜಾರಿಗೆ ವಿರುದ್ಧವಾಗಿದ್ದವರು ಪ್ರಬಲರು!
ಇದೇ ಪ್ರಭಲರ ರಾಜಕಾರಣ ಮಂಡಲ್ ಆಯೋಗದ ವರದಿ ಜಾರಿ ವಿರೋಧಿಸಿತು. ಈಗ ಸಿದ್ಧರಾಮಯ್ಯ ಮುಖ್ಯಮಂತ್ರಿ ಅದೇ ಪ್ರಬಲರು ರಾಜ್ಯದ ಆರ್ಥಿಕ, ಸಾಮಾಜಿಕ. ಶೈಕ್ಷಣಿಕ ಸಮೀಕ್ಷೆಯನ್ನು ಜಾತಿ ಸಮೀಕೆಯೆಂದು, ಇದರಿಂದ ಮೇಲ್ಜಾತಿಯವರನ್ನು ತುಳಿಯುವ ಹುನ್ನಾರ !! ನಡೆಯುತ್ತಿದೆಯೆಂದೂ, ಈ ಸಮೀಕ್ಷೆಗೆ ತಾನು ಮಾಹಿತಿ ನೀಡುವುದಿಲ್ಲ ಎಂದು ಪ್ರಬಲರು, ಅವರ ಪರಿವಾರ ಕೂಗಾಡುತ್ತಿದೆ! ಇದೇ ಸಮಯಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷಗಳು ತುಂಬಿವೆ.
ಹಿಂದೆ ಕಾಂಗ್ರೆಸ್ ನಲ್ಲಿದ್ದ ಕೆಲವರು ಈಗ ತಮ್ಮ ಹಿತಕ್ಕಾಗಿ ಪ್ರಬಲರ ಪಕ್ಷ, ಪರಿವಾರ ಸೇರಿದ್ದಾರೆ.
ಜನಸಾಮಾನ್ಯರ ಭಾರತದಲ್ಲಿ ಅಜಲು ಪದ್ಧತಿ, ಮಲಹೊರುವ ವ್ಯವಸ್ಥೆ, ನಿಷೇಧಿಸಲೂ ಪ್ರಬಲರ ಅನುಮತಿ ಬೇಕು.
ಭೂಸುಧಾರಣೆ, ಊಳುವವನೇ ಒಡೆಯ, ವಾಸಿಸುವವನೇ ಯಜಮಾನ ಸೇರಿದಂತೆ ಅನೇಕ ಜನಪರ ಕಾನೂನು, ಕಾಯಿದೆ ಜಾರಿಗೂ ಪ್ರಬಲರ ಅನುಮತಿಗೆ ಕಾಯಬೇಕು!. ನಂತರ ಧರ್ಮಕ್ಷೇತ್ರಗಳ ಅತ್ಯಾಚಾರ, ಅನಾಚಾರ ತಡೆಗೂ ಇದೇ ಶ್ರೀಮಂತರ ಪರ ಇರುವ ಪಟ್ಟಭದ್ರರ ಪರಿವಾರದ ಅನುಮತಿ ಬೇಕು!?
ಖಂಡಿತ ಯಾವ ರಹಸ್ಯವೂ ಇಲ್ಲ ಪ್ರಬಲರೆನ್ನುವ ಜಾತಿ-ಸಮೂದಾಯಗಳು ದೇಶದ ಸಂಪತ್ತಿನ ಬಹುಭಾಗವನ್ನು ತಮ್ಮ ಹಿತಕ್ಕೆ ಬಳಸುತ್ತಿವೆ. ಈ ರಾಜಕೀಯ, ಆಡಳಿತದ ಹಿಡಿತ-ನಿಯಂತ್ರಣ ತಮ್ಮ ಕೈ ತಪ್ಪಬಾರದೆನ್ನುವ ಸರ್ವಾಧಿಕಾರಿ ಧೋರಣೆ ಈ ಪ್ರಬಲ ಗುಂಪು- ಪರಿವಾರದ ರಹಸ್ಯ ಕಾರ್ಯಸೂಚಿ. ಉಳ್ಳವರ ಹಿತಕ್ಕೇ ದೇಶದ ಬಹುಪಾಲು ಬಳಕೆಯಾಗಬೇಕೆನ್ನುವ ಅಲ್ಪಸಂಖ್ಯಾತ ಪಟ್ಟಭದ್ರರು ಜನಸಾಮಾನ್ಯರ ಪರವಿರುವ ಹೋರಾಟ, ಆಡಳಿತ, ಚಳವಳಿ, ಜನಹೋರಾಟಗಳನ್ನು ಹತ್ತಿಕ್ಕುತ್ತವೆ. ಈ ಪಟ್ಟಭದ್ರರ ಹಿತಾಸಕ್ತಿ ಮೀರಿ ಜನಸಾಮಾನ್ಯರ ಪರ ಮಿಡಿಯುವ ಸಿದ್ಧರಾಮಯ್ಯ, ಬಂಗಾರಪ್ಪ, ದೇವರಾಜ್ ಅರಸು, ಗೋಪಾಲಗೌಡ, ಲೋಹಿಯಾ, ಖರ್ಗೆಯಂಥವರು ಇಂಥವರ ನಿಯಂತ್ರಣದ ಮಾಧ್ಯಮ, ಸಂಘ, ಪರಿವಾರಗಳ ಮುಂದೆ ದುಷ್ಟರು- ಬ್ರಷ್ಟರು ಆಗುತ್ತಾರೆ!. ಈಗ ಹೇಳಿ ಜನರೇ ಜನರಿಂದ ತಮಗಾಗಿ ಮಾಡಿಕೊಂಡ ಪ್ರಜಾಪ್ರಭುತ್ವದ ಕೆಳಗೆ ನಮ್ಮ ಸರ್ಕಾರ, ಈಗಿನ ವ್ಯವಸ್ಥೆ ನಡೆಯುತ್ತಿದೆಯೆ?
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






