ಎರಡು ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣ ಗಳಲ್ಲಿ ಆರೋಪಿಗಳಿಗೆ ದಂಡ ಮತ್ತು ಶಿಕ್ಷೆ ವಿಧಿಸಿದ ಸಿದ್ದಾಪುರ ಜೆ.ಎಂ.ಎಫ್.ಸಿ ಕೋರ್ಟ್

ಸಿದ್ದಾಪುರ ಜೆ.ಎಂ.ಎಫ್.ಸಿ.ಕೋರ್ಟನಲ್ಲಿ ಶ್ರೀ ವಿನಾಯಕ ಸೌಹಾರ್ದ ಸಹಕಾರಿ ಯಿಂದ ದಾಖಲಿಸಲ್ಪಟ್ಟ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಾದ ಸಂತೋಷ ಹುಚ್ಚಪ್ಪ ನಾಯ್ಕ ಮತ್ತು ಲೋಕೇಶ್ ಬಂಗಾರ್ಯ ನಾಯ್ಕ ರಿಗೆ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.


ಪ್ರಕರಣದ ಹಿನ್ನೆಲೆ.
ಸಿದ್ದಾಪುರದ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ನ ಸಿದ್ದಾಪುರ ಶಾಖೆಯಲ್ಲಿ ಅಕ್ಟೋಬರ್ 2023 ರಲ್ಲಿ ಲೋಕೇಶ್ ಬಂಗಾರ್ಯ ನಾಯ್ಕ ತೆಂಗಿನಮಕ್ಕಿ ಮಾವಿನ ಗುಂಡಿ . ಸಂತೋಷ ಹುಚ್ಚಪ್ಪ ನಾಯ್ಕ ಜೀಕಿನಮಡಕಿ ಮಾವಿನಗುಂಡಿ ಮತ್ತು ಇತರರ ಜಾಮೀನು ನೀಡಿ ಹಿಟಾಚಿ ಖರೀದಿಸಲು ರೂಂ.45,00,000/- ಸಾಲ ಪಡೆದುಕೊಂಡು ಸಾಲದಾತ ಸಂಸ್ಥೆಗೆ ಮಾಹಿತಿ ನೀಡದೇ ಹಿಟಾಚಿ ಯನ್ನು ಗೌಪ್ಯವಾಗಿ ಮಾರಾಟ ಮಾಡಿ, ಸಾಲದ ಹಣ ಪಾವತಿಸದೇ ದುರುಪಯೋಗ ಮಾಡಿಕೊಂಡು ಸಂಸ್ಥೆಗೆ ಮೋಸ ಮಾಡಿದ್ದರು. ಸಂಸ್ಥೆಯಿಂದ ಸಾಲ ವಸೂಲಿಗೆ ಮುಂದಾದಾಗ ಇವರ ದುಷ್ಕೃತ್ಯ ಬೆಳಕಿಗೆ ಬಂದಿದೆ.


ಇವರ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಲು ಮುಂದಾದಾಗ ಆರೋಪಿಗಳಾದ ಸಾಲಗಾರ ಮತ್ತು ಜಾಮೀನುದಾರು ತಾವು ಹಿಟಾಚಿಯನ್ನು ಮಹಾರಾಷ್ಟ್ರ ವ್ಯಕ್ತಿಗಳ ಮೂಲಕ ದುಬೈಗೆ ಮಾರಾಟ ಮಾಡಿರುವುದಾಗಿಯೂ ತಮ್ಮ ವಿರುದ್ಧ ಪ್ರಕರಣ ದಾಖಲಿಸ ಬಾರದಾಗಿಯೂ ಮನವಿ ಮಾಡಿಕೊಂಡು ಪೂರ್ತಿ ಸಾಲ ಮರುಪಾವ್ತಿ ಮಾಡುವುದಾಗಿ ರಾಜಿ ಒಪ್ಪಂದ ಮಾಡಿಕೊಂಡಿದ್ದರು. ರಾಜಿ ಒಪ್ಪಂದದಂತೆ ಲೋಕೇಶ ಬಂಗಾರ್ಯ ನಾಯ್ಕ 14,96,000/-ಮತ್ತು ಸಂತೋಷ ಹುಚ್ಚಪ್ಪ ನಾಯ್ಕ ರೂ.31,00,000/- ಮೊತ್ತ ಗಳಿಗೆ ತಮ್ಮ ತಮ್ಮ ಬ್ಯಾಂಕ್ ಖಾತೆಗಳ ಚೆಕ್ ಗಳನ್ನ ಬರೆದು ಸಹಿ ಮಾಡಿ ಕೊಟ್ಟಿದ್ದರು.


ಸಹಕಾರಿ ಇವರನ್ನು ನಂಬಿ ಚೆಕ್ ಕಲೆಕ್ಷನ್ ಗೆ ಹಾಕಲಾಗಿ, ಎರಡೂ ಚೆಕ್ ಗಳು ಅಪನಗದೀಕರಣ ಗೊಂಡು ಪರತ್ ಬಂದಿರುತ್ತವೆ. ತದನಂತರ ಸಹಕಾರಿಯ ಪ್ರಧಾನ ವ್ಯವಸ್ಥಾಪಕ ಶ್ರೀಧರ್ ಎಂ ಹೆಗಡೆ ಇವರು ಲೋಕೇಶ್ ಮತ್ತು ಸಂತೋಷ ಇಬ್ಬರ ವಿರುದ್ದ ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣ ಗಳನ್ನು ದಾಖಲಿಸಿ, ದಾಖಲೆಗಳನ್ನು ಸಲ್ಲಿಸಿ,ಸಾಕ್ಷಿ, ಹೇಳಿಕೆ ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ .ಉಮೇಶ ಎಂ ಪಿ ಆರೋಪಿಗಳ ಅಪರಾಧ ಸಾಬೀತಾಗಿರುವ ಕಾರಣ ದಿನಾಂಕ 04/10/2025ರಂದು ಶಿಕ್ಷೆಯ ಆದೇಶ ಹೊರಡಿಸಿದ್ದಾರೆ.
ಲೋಕೇಶ್ ಬಂಗಾರ್ಯ ನಾಯ್ಕ ರಿಗೆ 1ವರ್ಷ ಜೈಲು ಶಿಕ್ಷೆ ಮತ್ತು ರೂ15,16,000/- ದೂರುದಾರ ಸಹಕಾರಿಗೆ ಪರಿಹಾರ, 5,000/-ಸರಕಾರಕ್ಕೆ ದಂಡ ಪಾವತಿಸ ತಕ್ಕದ್ದು ತಪ್ಪಿದಲ್ಲಿ, 3 ತಿಂಗಳು ಜೈಲು.
ಸಂತೋಷ್ ಹುಚ್ಚಪ್ಪ ನಾಯ್ಕ ರಿಗೆ 1ವರ್ಷ ಜೈಲು ಶಿಕ್ಷೆ ಮತ್ತು ರೂ31,20,000/- ಸಹಕಾರಿಗೆ ಪರಿಹಾರ, 5,000/-ಸರಕಾರಕ್ಕೆ ದಂಡ ಪಾವತಿಸ ತಕ್ಕದ್ದು ತಪ್ಪಿದಲ್ಲಿ, 3 ತಿಂಗಳು ಜೈಲು.
ಈ ರೀತಿ ಆದೇಶ ಮಾಡಲಾಗಿದೆ.
ಸಹಕಾರಿಯ ಪರವಾಗಿ ಆರ್ ಎಸ್ ಹೆಗಡೆ (ವಕೀಲರು) ಪ್ರಕರಣ ನಡೆಸಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *