ಮಿಶ್ರ ಕೃಷಿಯಲ್ಲಿ ಲಾಭ ಪಡೆಯುತ್ತಿರುವ ಸುನಿಲ್‍ಕುಮಾರ

ಆಧುನಿಕ ಅನುಕೂಲ, ತಂತ್ರಜ್ಞಾನಕ್ಕಾಗಿ ಮಹಾನಗರಕ್ಕೆ ಹೋಗಬೇಕು, ಕೃಷಿಗೆ ಗ್ರಾಮ ಸೇರಬೇಕು ಎನ್ನುವ ಸಾಮಾನ್ಯ ಗ್ರಹಿಕೆಯೊಂದಿದೆ. ಆದರೆ ಕಾಲ ಈ ಗೃಹಿಕೆ,ಗಾದೆ,ಪರಿಸ್ಥಿತಿಗಳನ್ನು ಬದಲಿಸುತ್ತಿದೆ. ನಗರದಲ್ಲಿ, ನಗರದ ಮನೆಯ ಟಾರಸಿಮೇಲೆ ಕೃಷಿ ಮಾಡಿ ಲಾಭ ಕಂಡವರಿದ್ದಾರೆ. ಗ್ರಾಮೀಣ ಪರಿಸರದಲ್ಲಿದ್ದೂ ಎಲ್ಲಾ ಆಧುನಿಕ ಅನುಕೂಲಗಳೊಂದಿಗೆ ಸುಖವಾಗಿದ್ದವರಿದ್ದಾರೆ. ಇಂಥ ಅಪವಾದಗಳಲ್ಲಿ ಸಂಪಕಂಡದ ಸುನಿಲ್ ನಾಯ್ಕ ಒಬ್ಬರು. ಆಟೋಮೊಬೈಲ್ ಡಿಪ್ಲೊಮಾ ಓದಿ ವಿಜ್ಞಾನ, ತಂತ್ರಜ್ಞಾನ ಎಂದು ನಗರ ಸೇರದೆ, ಹುಟ್ಟೂರಲ್ಲೇ ಕೃಷಿಯಲ್ಲಿ ಖುಷಿ ಕಂಡಿದ್ದಾರೆ.
ಇವರ ತೋಟದಲ್ಲಿ ಬೊನ್ಸಾಯಿ ಕಾಳುಮೆಣಸಿನ ಬಳ್ಳಿಗಳಿವೆ. ಅಗರ್ವುಡ್ ಮರಗಳಿವೆ, ಯಾಲಕ್ಕಿ ಗಿಡಗಳಿವೆ ಹೀಗೆ ಮಿಶ್ರ ಕೃಷಿಯಲ್ಲಿ ಎಲ್ಲವನ್ನೂ ಬೆಳೆಯುತ್ತಾ ಪ್ರಯೋಗಶೀಲರಾಗಿ ಕೃಷಿಯಲ್ಲಿ ತೊಡಗಿಕೊಂಡ ಇವರಿಗೆ ಕಾಳುಮೆಣಸು, ಯಾಲಕ್ಕಿ, ಅಡಿಕೆಯಷ್ಟೇ ಆದಾಯ ಕೊಡುತ್ತಿವೆ. ಅಗರ್‍ವುಡ್ ಕೈ ಹಿಡಿಯಬಹುದೆಂದು ಕಾಯುತಿದ್ದಾರೆ. ಮಂಗನಕಾಟದಲ್ಲಿ ಏಲಕ್ಕಿ ಬೆಳೆದ್ದು ಹೇಗೆ ಎಂದರೆ ಬ್ಲೂಟೂತ್ ಮೂಲಕ ತೋಟದಲ್ಲಿ ಸೈರನ್ ಕೂಗಿಸಿ ಮಂಗ ಓಡಿಸುತ್ತೇವೆ ಎನ್ನುತ್ತಾರೆ.
ಅವರ ತೋಟಗಳಲ್ಲಿ ಸಾಂಪ್ರದಾಯಿಕ ಮಾದರಿಯೊಂದಿಗೆ ಆಧುನಿಕ ಅನುಕೂಲಗಳನ್ನೂ ಅಳವಡಿಸಿದ್ದಾರೆ. ಹನಿ ನೀರಾವರಿ ನೀರಿಗಿಂತ ಸ್ಪಿಂಕ್ಲರ್ ನೀರಿನಿಂದ ಭೂಮಿ ಹೆಚ್ಚು ಹಸಿಯಾಗುತ್ತದೆ ಎನ್ನುವ ಸುನಿಲ್ ಕುಮಾರ್ ಅಪ್ಪ-ಅಮ್ಮ ಶಿಕ್ಷಕ-ಶಿಕ್ಷಕಿಯರಾದರೂ ಸರ್ಕಾರಿ ನೌಕರಿ ದೂರದೂರಿನ ಕೆಲಸಕ್ಕೆ ಕೈ ಚಾಚದೆ ಕೃಷಿಗೆ ಒಗ್ಗಿಕೊಂಡು ಯುವಕೃಷಿಕನಾಗಿ ಹೆಸರುಮಾಡುತಿದ್ದಾರೆ.
ಈ ವರ್ಷದ ಬರ-ಮಳೆಗಳು ಎಲ್ಲರಂತೆ ಇವರನ್ನೂ ಬಾಧಿಸಿವೆ ಆದರೆ ಕೃಷಿಯಲ್ಲಿ ಏರು-ಪೇರು ಸಾಮಾನ್ಯ ಎನ್ನುವ ಸುನಿಲ್ ಒಂದುವರ್ಷ ಕಡಿಮೆಯಾದರೆ ಮತ್ತೊಂದು ವರ್ಷ ಹೆಚ್ಚಾಗುತ್ತದೆ ಎನ್ನುವ ಆತ್ಮವಿಶ್ವಾಸದ ಮಾತನ್ನಾಡುತ್ತಾರೆ.
ಕೃಷಿಯಲ್ಲಿ ನಗದಿತ-ನಿಯಮಿತ ಆದಾಯವಿಲ್ಲ ಆದರೆ ಕೃಷಿ ಕೊಡುವ ಖುಷಿ ಬೇರೆ ಎಲ್ಲೂ ಸಿಗುವುದಿಲ್ಲ ಎನ್ನುವ ಇವರು ಕೃಷಿ-ಆಧಾರಿತ ಮತ್ತು ಪೂರಕ ಚಿಕ್ಕ ಉದ್ಯಮಗಳಿಂದ ಗ್ರಾಮೀಣ ಪ್ರದೇಶದಲ್ಲಿ ಜನ ಉಳಿಯುವಂತೆ ಮಾಡಬಹುದೆನ್ನುವ ಸುನಿಲ್‍ಕುಮಾರ ಮಲೆನಾಡಿನ ನೀರು, ವಾತಾವರಣ ಬಳಸಿಕೊಂಡು ಇಲ್ಲಿರದಿದ್ದರೆ ಈ ನೈಸರ್ಗಿಕ ಅನುಕೂಲಗಳಿಂದ ವಂಚಿತರಾಗಬೇಕಾಗುತ್ತದೆ ಎನ್ನುತ್ತಾ ಕೃಷಿಯ ಬಗ್ಗೆ ಆಸಕ್ತಿ ತುಂಬಿದ ತಂದೆ-ತಾಯಿಯರ ಸಹಕಾರ, ಆಶೀರ್ವಾದಗಳಿಂದ ಹೀಗಿರಲು ಸಾಧ್ಯವಾಗಿದೆ ಎನ್ನುವದನ್ನು ಮರೆಯದೇ ಹೇಳುತ್ತಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *