ಸಿದ್ಧಾಪುರದಲ್ಲಿ 25 ಸಾ. ಮೌಲ್ಯದ ಗಾಂಜಾದೊಂದಿಗೆ ಆರೋಪಿ ವಶ

ಗಾಂಜಾ ದಾಸ್ತಾನಿನ ಇನ್ನೊಂದು ಪ್ರಕರಣ ಸಿದ್ಧಾಪುರದಲ್ಲಿ ಪತ್ತೆಯಾಗಿದೆ. ವಿವರ ಹೀಗಿದೆ. ಕೆರೆಗದ್ದೆ ಮೇಲಿನ ಸರಕುಳಿಯ ಕಟ್ಯಾ ಮಾಚಾ ಗೌಡ ಬೀಜ ಮತ್ತು

ಹೂವುಗಳ ಒಣ ಗಾಂಜಾ ಸಂಗ್ರಹಿಸಿಟ್ಟಿ ದ್ದು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಶಿರಸಿಯ ಅಬಕಾರಿ ಇಲಾಖೆ ಅಧಿಕಾರಿಗಳು ಮಾಲು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿವರ ಹೀಗಿದೆ.

ದಿನಾಂಕ:02_11_2021ರಂದು ರಾತ್ರಿ 9__45 ಗಂಟೆಗೆ ಸಿದ್ದಾಪುರ ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಗದ್ದೆ, ಮೇಲಿನ ಸರಕುಳಿ ಗ್ರಾಮದ ನಿವಾಸಿಯಾದ ಕಟ್ಯಾ ಮಾಚ ಗೌಡ ಮನೆಯಲ್ಲಿ ದಾಳಿ ನಡೆಸಲಾಗಿ, ಸದರಿ ಆರೋಪಿಯು ತನ್ನ ಮನೆಯ ಒಳಗಡೆ ಇಡಲಾಗಿರುವ ಟೆಲಿವಿಷನ್‌ ಸೆಟ್ ನ ಹಿಂಭಾಗದಲ್ಲಿ ಎರಡು ಚೀಲಗಳಲ್ಲಿ ಬೀಜ ಮತ್ತು ಹೂವುಗಳನ್ನು ಒಳಗೊಂಡ ಒಣ ಗಾಂಜಾವನ್ನು ಹೊಂದಿರುವುದು ಕಂಡು ಬಂದಿರುತ್ತದೆ.. ಚೀಲಗಳಲ್ಲಿ ಇದ್ದ ಮಾದಕ ವಸ್ತುಗಳನ್ನು ಡಿಜಿಟಲ್ ತೂಗು ಯಂತ್ರದಲ್ಲಿ ತೂಗಲಾಗಿ, ಒಂದನೆಯ ಚೀಲದಲ್ಲಿ 483 ಗ್ರಾಮ್ ಹಾಗೂ ಇನ್ನೊಂದು ಚೀಲದಲ್ಲಿ 360 ಗ್ರಾಮ್ ಈ ರೀತಿಯಲ್ಲಿ ಒಟ್ಟು 843 ಗ್ರಾಮ್ ಮಾದಕ ವಸ್ತುವನ್ನು ಮಾರಾಟಕ್ಕಾಗಿ ಹೊಂದಿರುವುದನ್ನು ಪತ್ತೆಹಚ್ಚಿ ಅವುಗಳನ್ನು ಜಪ್ತುಪಡಿಸಿ, ಆರೋಪಿಯನ್ನು ದಸ್ತಗೀರ್ ಮಾಡಿ, ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ..

ದಾವಣಗೆರೆ: 67 ಕೆಜಿ ಪಂಗೋಲಿನ್ ಚಿಪ್ಪು ವಶ, 18 ಮಂದಿ ಬಂಧನ

ಶಿವಮೊಗ್ಗ ರಸ್ತೆಯ ಹರಿಹರದ ಬಳಿಯ ಡಾಬಾದಿಂದ ಸುಮಾರು 67 ಕೆಜಿ ಪಂಗೋಲಿನ್ ಚಿಪ್ಪುಗಳನ್ನು ಸಾಗಿಸುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

Davangere DCRB police team with the seized pangolin scales

ದಾವಣಗೆರೆ: ಶಿವಮೊಗ್ಗ ರಸ್ತೆಯ ಹರಿಹರದ ಬಳಿಯ ಡಾಬಾದಿಂದ ಸುಮಾರು 67 ಕೆಜಿ ಪಂಗೋಲಿನ್ ಚಿಪ್ಪುಗಳನ್ನು ಸಾಗಿಸುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮದ ಬಗ್ಗೆ ಮಾಹಿತಿ ಪಡೆದ ಡಿಸಿಆರ್‌ಬಿ ಡಿಎಸ್‌ಪಿ ಬಿ.ಎಸ್.ಬಸವರಾಜು ಮತ್ತು ತಂಡ ಶಿವಬಸವ ಡಾಬಾ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಎರಡು ವ್ಯಾನ್‌ಗಳಲ್ಲಿ ಪ್ಯಾಂಗೋಲಿನ್ ಸ್ಕೇಲ್ ಸಾಗಿಸುತ್ತಿರುವುದು ಪತ್ತೆಯಾಗಿದೆ.  ಇದರೊಂದಿಗೆ 18 ಮಂದಿಯನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಪ್ರಕರಣವನ್ನು ಸಹ ದಾಖಲಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚೀನಾ ಔಷಧಿಗೆ ಮುಳ್ಳುಹಂದಿ ಚಿಪ್ಪು ಬಳಕೆ ಮಾಡುವುದರಿಂದ ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಈ ದಂಧೆ ನಡೆಯುತ್ತಿದ್ದು, ಹೀಗಾಗಿ ಅಳಿವಿನಂಚಿನಲ್ಲಿರುವ ಈ ಸಸ್ತನಿಯನ್ನು ರಕ್ಷಿಸಬೇಕಾಗಿದೆ. (ಕ.ಪ್ರ.ಡಾ.)

ಶ್ರೀಮತಿ ಶೈಲಜಾ ಕೋಟೆ, ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ರವರ ನಿರ್ದೇಶನದಂತೆ, ವನಜಾಕ್ಷಿ ಎಮ್. ಅಬಕಾರಿ ಉಪ ಆಯುಕ್ತರು ಉ.ಕ. ಜಿಲ್ಲೆ ಕಾರವಾರ ರವರ ಮಾರ್ಗದರ್ಶನದಲ್ಲಿ, ಮಹೇಂದ್ರ ಎಸ್. ನಾಯ್ಕ ಅಬಕಾರಿ ಉಪ_ ಅಧೀಕ್ಷಕರು(ಪ್ರಭಾರ)ಉಪ -ವಿಭಾಗ ಶಿರಸಿ ಇವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಜ್ಯೋತಿಶ್ರೀ ಜಿ. ನಾಯ್ಕ ಅಬಕಾರಿ ನಿರೀಕ್ಷಕರು ಶಿರಸಿ ವಲಯ ಇವರು ಪ್ರಕರಣ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿಕೊಂಡಿದ್ದು, ದಾಳಿಯಲ್ಲಿ ಡಿ. ಎನ್. ಶಿರಸಿಕರ ಅಬಕಾರಿ ಉಪ-ನಿರೀಕ್ಷಕರು ಶಿರಸಿ ವಲಯ, ಸಿಬ್ಬಂದಿಗಳಾದ ನಿರ್ಮಲಾ ಎಮ್. ನಾಯ್ಕ ಪ್ರಸನ್ನ ಯು. ನೇತ್ರಕರ್, ಬಸವರಾಜ ಒಂಟಿ, ಗಂಗಾಧರ vi ಕಲ್ಲೇದ್,ಕುಮಾರೇಶ್ವರ ಅಂಗಡಿ,ಸವಿತಾ ಎಸ್. ಲಂಕೇರ ಹಾಗೂ ವಾಹನ ಚಾಲಕರಾದ ಎನ್. ಕೆ. ವೈದ್ಯ ಮತ್ತು ಬಿ. ಎಮ್. ಗಾಯಕವಾಡ ಇವರುಗಳು ಪಾಲ್ಗೊಂಡಿದ್ದರು… ಜಪ್ತು ಪಡಿಸಿದ ಗಾಂಜಾ ದ ಅಂದಾಜು ಮೌಲ್ಯ 25000ರೂಪಾಯಿಗಳು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *