

ಮಂಗಳವಾರ ರಾತ್ರಿ ಬೆಂಗಳೂರು ಬಸವನಗುಡಿ ವ್ಯಾಪ್ತಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಿದ್ಧಾಪುರ ತಾಲೂಕಿನ ಕೋಲಶಿರ್ಸಿಯ ಸುರೇಶ್ ಈರ ನಾಯ್ಕ ಸದೆಗುಡ್ಡೆ ಮೃತರಾಗಿದ್ದಾರೆ. ಬೆಂಗಳೂರಿನ ರಾತ್ರಿ ಕರ್ಫ್ಯೂ ನಡುವೆ ಬೈಕ್ ಚಲಾಯಿಸಿಕೊಂಡು ಹೋಗಿದ್ದ ಸುರೇಶ್ ನಾಯ್ಕ ವಾಹನಕ್ಕೆ ಕಾರೊಂದು ಹಿಂದಿನಿಂದ ಬಡಿಯಿತು. ಈ ಅಪಘಾತದಲ್ಲಿ ಸುರೇಶ್ ನಾಯ್ಕ ಸ್ಥಳದಲ್ಲೇ ಮೃತಪಟ್ಟರೆ ಅವರ ವಾಹನ ಸಂಪೂರ್ಣ ಜಖಂ ಆಗಿದೆ. ಈ ಬಗ್ಗೆ ದೂರು ದಾಖಲಾಗುತಿದ್ದಂತೆ ಇನ್ನೋವಾ ಕ್ರಿಸ್ಟಾ ವಾಹನದ ಚಾಲಕ ಪೊಲೀಸರಿಗೆ ಶರಣಾಗಿದ್ದಾನೆ.

ಅವಿವಾಹಿತ ಸುರೇಶ್ ನಾಯ್ಕ ೩೬ ವರ್ಷದ ಯುವಕನಾಗಿದ್ದು ಅಣ್ಣ-ತಂಗಿ, ತಂದೆ-ತಾಯಿಯರೊಂದಿಗೆ ಅಪಾರ ಬಂಧು ಬಳಗವನ್ನು ಅಗಲಿದ್ದಾನೆ. ಮೃತದೇಹ ಇಂದು ಸಾಯಂಕಾಲದ ವರೆಗೆ ಹುಟ್ಟೂರಿಗೆ ಬರಲಿದೆ ಎನ್ನಲಾಗಿದೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






