ಸಿಎಂ ತವರು ಜಿಲ್ಲೆಯಲ್ಲಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಮುಹೂರ್ತ ಫಿಕ್ಸ್​

86ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಕುರಿತು ಇಂದು ನಡೆದ ಸಭೆಯಲ್ಲಿ, ಹಾವೇರಿಯಲ್ಲಿ ಸೆ.23 ರಿಂದ ಮೂರು ದಿನಗಳ ಕಾಲ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು.

ಬೆಂಗಳೂರು: ಹಾವೇರಿಯಲ್ಲಿ ಸೆಪ್ಟೆಂಬರ್ 23, 24 ಹಾಗೂ 25 ರಂದು ಮೂರು ದಿನಗಳ ಕಾಲ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು.

ಗೋಷ್ಠಿಗಳಲ್ಲಿ ಹೆಚ್ಚಿನ ಜನ ಭಾಗವಹಿಸುವಂತಾಗಬೇಕು ಹಾಗೂ ಅವು ಅರ್ಥಪೂರ್ಣವಾಗಿರಬೇಕು. ಸಮಿತಿಗಳಲ್ಲಿ ಸಕ್ರಿಯವಾಗಿರುವ ಸ್ಥಳೀಯ ಜನರನ್ನು ತೊಡಗಿಸಿಕೊಳ್ಳಬೇಕು. ಗೋಷ್ಠಿಗಳಲ್ಲಿಯೂ ಸ್ಥಳೀಯರಿಗೆ ಅವಕಾಶ ನೀಡಬೇಕು. ಎಲ್ಲಾ ತಾಲ್ಲೂಕುಗಳ ಸ್ವಯಂಸೇವಕರು ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಸೂಕ್ತ ವಸತಿ ವ್ಯವಸ್ಥೆ: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ವಸತಿ ವ್ಯವಸ್ಥೆಯಾಗಬೇಕು. ಎಲ್ಲಿ, ಎಷ್ಟು ಜನರಿಗೆ ವಸತಿ ವ್ಯವಸ್ಥೆಯಾಗಿದೆ ಎಂಬ ಬಗ್ಗೆ ನಿಖರವಾಗಿ ಯೋಚಿಸಿ. ಹಾಸ್ಟೆಲ್​ಗಳು ಮತ್ತು ಡಾರ್ಮಿಟರಿಗಳನ್ನು ವಸತಿ ಶಾಲೆಗಳನ್ನು ಸದುಪಯೋಗಿಸಿಕೊಳ್ಳಬೇಕು. ಪ್ರಮುಖ ಕಲ್ಯಾಣ ಮಂಟಪಗಳನ್ನು ಗುರುತಿಸಿ. ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿಯೂ ವಸತಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಮಾರ್ಗ ಮಧ್ಯೆಯೂ ಉತ್ತಮ ಹೋಟೆಲ್​ಗಳಿವೆ. ಖಾಸಗಿ ಶಾಲೆಗಳನ್ನು ಸಹ ಬಳಕೆ ಮಾಡಿಕೊಳ್ಳಬಹುದು. ತುರ್ತು ಪರಿಸ್ಥಿತಿಗಳಲ್ಲಿ ಬಳಕೆ ಮಾಡಲು ಕುಂಭಮೇಳದಲ್ಲಿ ಆಯೋಜಿಸಿದಂತೆ ಟೆಂಟ್​ಗಳನ್ನು ಉಪಯೋಗಿಸಬಹುದು. ಇವುಗಳ ಬಗ್ಗೆ ಸೂಕ್ತ ನೀಲನಕ್ಷೆ ಸಿದ್ಧಪಡಿಸಲು ತಿಳಿಸಿದ್ದಲ್ಲದೇ, ಊಟ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯ ಬಗ್ಗೆಯೂ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಸಿದ್ಧತೆಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಸಭೆ ಕರೆದು, ಅಂತಿಮಗೊಳಿಸಬೇಕು. ಬಜೆಟ್​ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 20 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪರಿಸರ ಸ್ನೇಹಿ ಸಮ್ಮೇಳನ: ಸಮ್ಮೇಳನವನ್ನು ಪರಿಸರಸ್ನೇಹಿಯಾಗಿಸಲು ಫ್ಲೆಕ್ಸ್​ಗಳ ಬಳಕೆಯನ್ನು ನಿಷೇಧಿಸಿ ಜಾಹೀರಾತು ಫಲಕಗಳನ್ನು ಬಳಸುವಂತೆ ಮುಖ್ಯ ಮಂತ್ರಿಗಳು ಸೂಚಿಸಿದರು. ಸಭೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಚಂದ್ರಶೇಖರ್ ಕಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಅರುಣ್ ಕುಮಾರ್ ಪೂಜಾರ್, ನೆಹರು ಒಲೆಕಾರ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಹಾವೇರಿ ಜಿಲ್ಲಾಧಿಕಾರಿ ಡಾ. ಸಂಜಯ ಶೆಟ್ಟೆಣ್ಣವರ್ ಇದ್ದರು. (etbk)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

ಯಾರಾಗ್ತಾರೆ…ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ?

ಉತ್ತರಕನ್ನಡಜಿಲ್ಲೆಯ೧೩ ಬ್ಲಾಕ್ಕಾಂಗ್ರೆಸ್ ಗಳ ವೇಟ್ ಒಂದಾದರೆ ಸಿದ್ದಾಪುರದ ತಾಲೂಕಾ ಕಾಂಗ್ರೆಸ್ ಬಲವೇ ಬೇರೆ . ಒಂದು ಕಾಲದಲ್ಲಿ ಬಂಗಾರಪ್ಪ ಒಲುವಿನಿಂದ ಇಡೀ ಜಿಲ್ಲೆ ಸಿದ್ದಾಪುರವನ್ನು...

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ ಒಬ್ಬರೇ ಶಾಸಕರು’. ಆದರೆ ಹೈಕಮಾಂಡ್ ಸೂತ್ರ ಮಾತ್ರ ಅತ್ತ ಶಿರಸಿಯಲ್ಲಿ ಬೆಂಕಿ ಹಚ್ಚಿದರೆ, ಇತ್ತ ಸಿದ್ದಾಪುರದಲ್ಲಿ ಅದೇ ಸೂತ್ರ ಸಾಹೇಬರಿಗೆ ಬಾಯಿಗೆ ಜಾರಿ ಬಿದ್ದ ತುಪ್ಪದಂತಾಗಿದೆ! ಬನ್ನಿ.. ಸಿದ್ದಾಪುರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *