ಸಿದ್ಧಾಪುರಕ್ಕೂ ಕಾಲಿಟ್ಟ ಆನ್ಲೈನ್‌ ಸೆಕ್ಸ್!‌ ಪರರಾಜ್ಯದ ಹುಡುಗಿಯರಿಗೆ ಪಡ್ಡೆಗಳೇ ಟಾರ್ಗೆಟ್!!

ಸಭ್ಯ-ಸುಸಂಸ್ಕೃತರ ಊರಾದ ಸಿದ್ಧಾಪುರದಲ್ಲಿ ಹೊರರಾಜ್ಯದ ವಿದ್ಯಾರ್ಥಿನಿಯರು ಪಡ್ಡೆಗಳನ್ನು ಗುರಿಯಾಗಿಸಿ ಹಣ ಮಾಡುವ ದಂಧೆಗಿಳಿದಿರುವ ಬಗ್ಗೆ ಗಲ್ಲಿ ಚರ್ಚೆ ಪ್ರಾರಂಭವಾಗಿದೆ.

ನಗರದ ಹೊರವಲಯದ ಕಾಲೇಜಿನಲ್ಲಿ ಕಲಿಯುತ್ತಿರುವ ಹೊರರಾಜ್ಯದ ವಿದ್ಯಾರ್ಥಿನಿಯರು ತಮ್ಮ ಖಾಸಗಿ ಜಾಲದ ಮೂಲಕ ಪಡ್ಡೆಗಳನ್ನು ಆಕರ್ಷಿಸುತಿದ್ದು ಹಣದ ಆಸೆಗಾಗಿ ಪಡ್ಡೆಗಳನ್ನು ಖೆಡ್ಡಾಕ್ಕೆ ಕೆಡುವುತ್ತಿರುವ ಬಗ್ಗೆ ಜನಮಾನಸದಲ್ಲಿ ಆತಂಕ ಶುರುವಾಗಿದೆ.

ತಮ್ಮ ಆಪ್ತರು, ಖಾಸಗಿ ಸಂಪರ್ಕಗಳ ಮೂಲಕ ಮೊಬೈಲ್‌ ನಂಬರ್‌ ಸಂಗ್ರಹಿಸಿ ಕರೆಮಾಡುವ ಪಡ್ಡೆಗಳಿಗೆ ವಿಡಿಯೋ ಮೂಲಕ ಲೈಂಗಿಕ ಆಮಿಷ ಒಡ್ಡುವ ಕೆಲವು ವಿದ್ಯಾರ್ಥಿನಿಯರು ಇದನ್ನೇ ಬಳಸಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿರುವ ಬಗ್ಗೆ ತಾಲೂಕಿನಾದ್ಯಂತ ಗುಸುಗುಸು ಪ್ರಾರಂಭವಾಗಿದೆ.

ಒಂದೆರಡು ಪ್ರಕರಣಗಳಲ್ಲಿ ಹೊರರಾಜ್ಯದ ಸುಂದರ ಹುಡುಗಿಯರು ಪಡ್ಡೆಗಳಿಗೆ ತಮ್ಮ ಮೊಬೈಲ್‌ ಸಂಪರ್ಕ ಸಂಖ್ಯೆ ಕೊಟ್ಟು ಹುಡುಗರ ಕುತೂಹಲ ತಣಿಸಿದರು. ಈ ಗುಪ್ತ ಸುದ್ದಿ ಪಿಸುಮಾತಾಗಿ ಅನೇಕರನ್ನು ತಲುಪಿ ಶಿರಸಿ ರಸ್ತೆಯ ಹೊರ ರಾಜ್ಯದ ಹುಡುಗಿಯರು ಹಣಕ್ಕಾಗಿ ಎಲ್ಲವನ್ನೂ ಕೊಡುತ್ತಾರೆ ಎನ್ನುವುದು ಗುಲ್ಲಾಯಿತು. ಈ ಗುಟ್ಟು-ಗುಲ್ಲಿನ ವಿಚಾರಗಳೆಲ್ಲಾ ಮೋಬೈಲ್‌ ಗಳಲ್ಲಿ ಹರಿದಾಡಿ ಈಗ ಇದು ಬೀದಿ ಚರ್ಚೆಯ ವಿಷಯವಾಗಿದೆ.

ಈ ಬಗ್ಗೆ ಕಾಲೇಜು, ಪೊಲೀಸರವರೆಗೂ ಸುದ್ದಿ ತಲುಪಿದ್ದರೂ ಇದರ ಮೇಲೆ ಕ್ರಮ ಜರುಗಿಸಿದ ಮಾಹಿತಿ ಇಲ್ಲ.

ಹಣ, ಸೆಕ್ಸು,ಸುಖಕ್ಕಾಗಿ ಏನೆಲ್ಲಾ ನಡೆಯುತ್ತಿರುವ ಕಾಲದಲ್ಲಿ ನಮ್ಮೂರಲ್ಲೊಂದು ಇಂಥದ್ದೆಲ್ಲಾ ಇಲ್ಲ ಎಂದು ಬೀಗುತಿದ್ದ ಜನತೆ ಈ ವಿಚಾರ ತಿಳಿದು ಆಶ್ಚರ್ಯ ಚಕಿತರಾಗಿದ್ದಾರೆ. ಈ ದಂಧೆ,ಹಣದ ವಹಿವಾಹಿಟಿನ ಅನೈತಿಕ ಆನ್‌ ಲೈನ್‌ ವ್ಯವಹಾರ ನಿಲ್ಲದಿದ್ದರೆ ದೊಡ್ಡ ಅಪಾಯ ಎನ್ನುವ ಹಿನ್ನೆಲೆಯಲ್ಲಿ ಸಮಾಜಮುಖಿ ಡಾಟ್‌ ನೆಟ್‌ ಈ ಸಾಮಾಜಿಕ ಕಾಳಜಿ ಮತ್ತು ಜಾಗೃತಿಯ ಬದ್ಧತೆಯಿಂದಾಗಿ ಈ ವರದಿ ಪ್ರಕಟಿಸುತ್ತಿದೆ. ಈ ಬಗ್ಗೆ ಎಲ್ಲಾ ಮಾಹಿತಿ,ದಾಖಲೆಗಳನ್ನು ಸಂಗ್ರಹಿಸಿರುವ ಸಮಾಜಮುಖಿ ಡಾಟ್‌ ನೆಟ್‌ ಅವುಗಳನ್ನು ಸಾಮದಾಯಿಕಹಿತಾಸಕ್ತಿ,ಗುಣಮಟ್ಟಗಳ ಹಿನ್ನೆಲೆಯಲ್ಲಿ ಗುಪ್ತವಾಗಿಟ್ಟಿದೆ.

ಈ ಪ್ರಕರಣದ ವ್ಯಕ್ತಿ ಸಿದ್ಧಾಪುರದವರಾದರೂ ಮಹಿಳೆ ಇಲ್ಲಿಗೆ ಸಂಬಂಧಿಸಿದವರಲ್ಲ ಈ ವೈರಲ್‌ ವಿಡಿಯೋ ವಿಚಾರವನ್ನು ಕೋಲಶಿರ್ಸಿ ಗ್ರಾ.ಪಂ. ವ್ಯಾಪ್ತಿಯ ಪ್ರತಿಷ್ಠಿತ ಕಾಲೇಜಿನ ವಿಷಯ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ವಾಸ್ತವದಲ್ಲಿ ಈ ಪ್ರಕರಣ ಮತ್ತು ಯಾವ ಕಾಲೇಜಿಗೂ ಯಾವ ಸಂಬಂಧವೂ ಇಲ್ಲ. ಇದನ್ನು ಕಾಲೇಜಿನ ವಿರೋಧಿ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಳ್ಳುತಿದ್ದಾರೆ. ಈ ಬಗ್ಗೆ ಸೈಬರ್‌ ಕ್ರೈಂ ನಲ್ಲಿ ದೂರು ದಾಖಲಾಗಿದ್ದು ಬಾಧಿತರು ತಮ್ಮ ಮೇಲೆ ಉದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡುವವರು ಸೃಷ್ಟಿಸಿದ ನಕಲಿ ವಿಡಿಯೋ ಇದು. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಎಂಬುದನ್ನು ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *