ಸಮಾಜಮುಖಿ ವರದಿ ಫಲಶೃತಿ- ಹೆಗ್ಗೆಕೊಪ್ಪ ಕಿರುಸೇತುವೆಗೆ 10ಲಕ್ಷ ರೂ. ಅನುದಾನ ಮಂಜೂರು


ಉತ್ತರಕನ್ನಡಜಿಲ್ಲೆ ಸಿದ್ದಾಪುರ ತಾಲೂಕಿನ ಕಾವಂಚೂರುಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಮತ್ತು ಮನಮನೆ ಗ್ರಾಮ ಪಂಚಾಯತಿಗೆ ಹೊಂದಿಕೊಂಡಿರುವ ಬಸರಮನೆ ಹಳ್ಳಕ್ಕೆ ಕಾಲುಸಂಕದ ಅವಶ್ಯಕತೆಕುರಿತು ಸಾಮಾಜಿಕಜಾಲತಾಣದಲ್ಲಿ ಅಭಿಯಾನದಂತೆ ನಡೆದಿದ್ದಕಾರ್ಯಕ್ಕೆ ಕರಾವಳಿ ಪ್ರಾಧಿಕಾರದ ಮಾಜಿಅಧ್ಯಕ ನಿವೇದಿತ್‍ಆಳ್ವಾ ತಕ್ಷಣ ಸ್ಪಂದಿಸಿ ತಮ್ಮಆತ್ಮೀಯರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ ರ ಪ್ರಾದೇಶಿಕ ಅಭಿವೃದ್ಧಿ ನಿಧಿಯಲ್ಲಿರೂಪಾಯಿ10,00,000/-(ಹತ್ತುಲಕ್ಷ) ಗಳನ್ನು ಮಂಜೂರಿ ಮಾಡಿಸಿದ್ದಾರೆ.
ಸುತ್ತಮುತ್ತಲ ಹಳ್ಳಿಗಳಲ್ಲಿ ಕಲ್ಲೂರಿನಲ್ಲಿ ಮಾತ್ರ ಶಾಲೆಯಿದ್ದು, ಸಾಮಾಜಿಕಜಾಲತಾಣದಲ್ಲಿ ಹೆಗ್ಗೆಕೊಪ್ಪದ ಶಾಲಾ ಮಕ್ಕಳುತಮ್ಮ ಪ್ರಾಣವನ್ನುಕೈಯಲ್ಲಿಟ್ಟುಕೊಂಡುತುಂಬಿದ ಹೊಳೆಯನ್ನು ಮರದ ದಿಮ್ಮಿಯ ಕಾಲು ಸಂಕದಿಂದದಾಟುತ್ತಿರುವದೃಶ್ಯವು ಮೈ ಜುಮ್ಮೆನ್ನಿಸುವಂತಿತ್ತು.
ಇದನ್ನು ನೋಡಿದ ನಿವೇದಿತ ಆಳ್ವಾ ತಕ್ಷಣಸ್ಥಳೀಯರನ್ನು ಸಂಪರ್ಕಿಸಿ ವಿಷಯದ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ಪಡೆದು ಈ ಜಾಗದಲ್ಲಿಜರೂರಾಗಿ ಕಾಲುಸಂಕ ನಿರ್ಮಾಣದಅಗತ್ಯತೆಯನ್ನುಮನಗಂಡುಕಾಲುಸಂಕ ಮಂಜೂರಿಮಾಡಿಸಲುಕಾರ್ಯಪ್ರವೃತ್ತರಾಗಿಯಶಸ್ಸು ಗಳಿಸಿದ್ದಾರೆ.
ಈ ಬಗ್ಗೆ ಮೊದಲು ಜಿಲ್ಲಾಧಿಕಾರಿಗಳ ಗಮನ ಸೆಳೆದ ಮಾಜಿ ತಾ.ಪಂ. ಸದಸ್ಯ ವಸಂತ ನಾಯ್ಕರ ಸಾಮಾಜಿಕ ಜಾಲತಾಣದ ಮಾಹಿತಿ ಆಧರಿಸಿ, ಸಮಾಜಮುಖಿ ಪತ್ರಿಕೆ ಮತ್ತ ನ್ಯೂಸ್‍ವೆಬ್ ಸೈಟ್‍ನಲ್ಲಿ ಮೊಟ್ಟಮೊದಲು ವರದಿ ಪ್ರಸಾರವಾದದ್ದನ್ನು ಇಲ್ಲಿ ಸ್ಮರಿಸಬಹುದು.
ಸಮಾಜಮುಖಿ ವರದಿಗಳ ನಂತರ ಇತರ ಮಾಧ್ಯಮಗಳೂ ವರದಿ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನದ ಮಾದರಿಯ ಹಕ್ಕೊತ್ತಾಯ ನಡೆದಿತ್ತು.
ಈ ಬಗ್ಗೆ ಹಾಲಿ ತಾ.ಪಂ. ಸದಸ್ಯ ನಾಶಿರ್ ಖಾನ್,ಮಾಜಿ ತಾ.ಪಂ. ಸದಸ್ಯ ವಸಂತ ನಾಯ್ಕ, ಜಿ.ಪಂ.ಸದಸ್ಯೆ ಸುಮಂಗಲಾ ನಾಯ್ಕ ಸೇರಿದಂತೆ ಅನೇಕ ಸ್ಥಳಿಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ ಈ ಸಂಕರ್ಪ ಸೇತುವೆ ವ್ಯವಸ್ಥೆ ಮಾಡಲು ಸಾಧ್ಯವೆ? ಎಂದು ಸಮಾಜಮುಖಿ ಗಮನ ಸೆಳೆದಿತ್ತು.
ನಂತರ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೇ ನಡೆದಿತ್ತು.
ಹೆಗ್ಗೆಕೊಪ್ಪದ ಈ ಅವಶ್ಯ ಸೇತುವೆ ಬಗ್ಗೆ ಆಡಳಿತ ವ್ಯವಸ್ಥೆಯ ಗಮನ ಸೆಳೆದ ಬಗ್ಗೆ ಸಮಾಜಮುಖಿ, ವಸಂತ ನಾಯ್ಕ,ಸೇರಿದಂತೆ ಆಭಾಗದ ಜನಪ್ರತಿನಿಧಿಗಳು ಮುಖಂಡರ ಪ್ರಯತ್ನದ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದರು.
ಅವಶ್ಯ ತುರ್ತು ಕೆಲಸದ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ನಿವೇದಿತ್ ಆಳ್ವರೊಂದಿಗೆ ಸ್ಥಳಿಯರ ಪ್ರಯತ್ನದ ಬಗ್ಗೆ ಸಮಾಜಮುಖಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
(ಇದು ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ನಮಗೆ ಸಿಕ್ಕ ಪ್ರಶಸ್ತಿಗಿಂತಲೂ ಸಾವಿರ ಪಟ್ಟು ಹೆಚ್ಚು ಸಮಾಧಾನ ತಂದಿದೆ.)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *