ಕುಡಿಯುವ ನೀರಿಗೆ ಮೊದಲ ಆದ್ಯತೆ

ಈ ವರ್ಷ ಬರಗಾಲ ಪರಿಸ್ಥಿತಿ ಎದುರಿಸಲು ಸಿದ್ಧರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಭೀಮಣ್ಣ ನಾಯ್ಕ ಕುಡಿಯುವ ನೀರು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿ, ಕೆಲಸಗಳಿಗೆ ಆದ್ಯತೆ ನೀಡುವಂತೆ ಆದೇಶಿಸಿದರು. ಸಿದ್ಧಾಪುರ ತಹಸಿಲ್ಧಾರರ ಕಛೇರಿಯ ಸಭಾಭವನದಲ್ಲಿ ನಡೆದ ಬರ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಗರ ಪ್ರದೇಶ,ಗ್ರಾಮೀಣ ಪ್ರದೇಶ, ವಸತಿಶಾಲೆಗಳು,ವಸತಿ ನಿಲಯಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಮುನ್ನೆಚ್ಚರಿಕೆ ವಹಿಸುವ ಭಾಗವಾಗಿ ನೀರಿನ ಮೂಲ, ಲಭ್ಯತೆಯ ಸಾಧ್ಯತೆ, ಉಪಕ್ರಮಗಳ ಬಗ್ಗೆ ಆದ್ಯತೆಯ ಮೇರೆಗೆ ಸಿದ್ಧರಾಗಲು ತಿಳಿಸಿದರು.

ಜಿಲ್ಲಾ ಪಂಚಾಯತ್‌ ಇಂಜಿನಿಯರಿಂಗ್‌ ಮತ್ತು ನೀರಿನ ಪೂರೈಕೆ ಮತ್ತು ಕಾಮಗಾರಿ ನಿರ್ವಹಿಸುವವರೆಲ್ಲರೂ ತಕ್ಷಣ ತಮ್ಮ ವ್ಯಾಪ್ತಿಯ ಕೆಲಸಗಳನ್ನು ನಿರ್ವಹಿಸಿ ಸಂಬಂಧಿಸಿದವರೊಂದಿಗೆ ಸಮನ್ವಯದೊಂದಿಗೆ ಬರಲಿರುವ ಪರಿಸ್ಥಿತಿ ಎದುರಿಸಲು ತಯಾರಾಗಬೇಕು. ತಾಲೂಕಿನಲ್ಲಿ ಜನರ ಕುಡಿಯುವ ನೀರು ಮತ್ತು ಬಳಕೆಗೆ ಸಂಬಂಧಿಸಿದ ಅನುಕೂಲ ಮಾಡಿಕೊಡಲು ಸಮರೋಪಾದಿಯಲ್ಲಿ ಕೆಲಸಮಾಡಬೇಕೆಂದು ತಾಕೀತು ಮಾಡಿದರು.

ರೈತರಿಗೆ ಮೇವಿನ ಬೀಜ ವಿತರಿಸಿ ಮಾತನಾಡಿದ ಅವರು ಬೆಳೆ, ಜಾನುವಾರುಗಳು, ಕೃಷಿ ಸಂಬಂಧಿ ಅಗತ್ಯಗಳ ಜೊತೆಗೆ ನೀರಿಗೆ ಆದ್ಯತೆ ನೀಡಬೇಕು. ನೀರಿನ ಲಭ್ಯತೆ, ಸಾಧ್ಯತೆಗಳನ್ನು ನೋಡಿ ಕೃಷಿ ಚಟುವಟಿಕೆ ನಡೆಸುವಂತೆ ರೈತರನ್ನು ಮನ ಒಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನೀರಿನ ಮೂಲಗಳನ್ನು ಶೋಧಿಸಿ ಅಗತ್ಯ ಕೆಲಸಗಳ ಪಟ್ಟಿ ಮಾಡಲು ೧೫ ದಿನಗಳ ಕಾಲಮಿತಿಯ ಗಡುವು ನೀಡಿದರು.ತಹಸಿಲ್ಧಾರ ಎಂ.ಆರ್.‌ ಕುಲಕರ್ಣಿ, ಎ.ಸಿ.ಎಫ್.‌ ಬಾಸೂರು, ತಾ.ಪಂ. ಕಾ.ನಿ.ಅ. ದೇವರಾಜ್‌ ಹಿತ್ತಲಕೊಪ್ಪ ಸೇರಿ ಎಲ್ಲಾ ಇಲಾಖೆಗಳ ಬಹುತೇಕ ಅಧಿಕಾರಿಗಳು ಉಪಸ್ಥಿತರಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

namdhari-issue- part-01 – ಚರಿತ್ರೆಯಿಂದ ಪಾಠ ಕಲಿಯಿರಿ… ವಿವೇಕದಿಂದ ಮುಂದುವರಿಯಿರಿ….

ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘ ಯಾನೆ ದೀವರ ಸಂಘದ ವಿಚಾರ ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇದು ಒಂದು ಸಮೂದಾಯದ ಅದರಲ್ಲೂ ಹಿಂದುಳಿದ ವರ್ಗದ...

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ...

ಶಾಲೆಗೆ ಹೋಗದ ರಾಜ!

ಅಕ್ಷರ ಕಲಿಯದೇ ಆಕಾಶದೆತ್ತರಕ್ಕೆ ಬೆಳೆದ ಅಪರೂಪದ ನಟ ಅನರ್ಘ್ಯ ರತ್ನ. ಮತ್ತೇ ಶಾಲೆಗೆ ಮುಖ ತೋರಿಸಲೇ ಇಲ್ಲ.

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

Latest Posts

namdhari-issue- part-01 – ಚರಿತ್ರೆಯಿಂದ ಪಾಠ ಕಲಿಯಿರಿ… ವಿವೇಕದಿಂದ ಮುಂದುವರಿಯಿರಿ….

ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘ ಯಾನೆ ದೀವರ ಸಂಘದ ವಿಚಾರ ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇದು ಒಂದು ಸಮೂದಾಯದ ಅದರಲ್ಲೂ ಹಿಂದುಳಿದ ವರ್ಗದ ಸಮೂದಾಯವೊಂದರ ವಿಚಾರ. ಈ ವಿಷಯ ಅವರ ಆಂತರಿಕ ವಿಚಾರ ಆದರೆ ಇಲ್ಲಿ ರಾಜಕೀಯ ನುಸುಳಿರುವುದು ಎಲ್ಲಾ ವಿವಾದದ ಮೂಲಬಿಂದು ಎನ್ನುವ ವಿಚಾರ ಈಗ ಚರ್ಚೆಯಲ್ಲಿದೆ. ಸುಮಾರು ೨೫ ವರ್ಷಗಳ...

Recommended For You

About the Author: Kanneshwar Naik

Leave a Reply

Your email address will not be published. Required fields are marked *