samajamukhi.net breaking……ಸಿದ್ದಾಪುರದ ಎ.ಜಿ.ನಾಯ್ಕ ಕಡಕೇರಿ ವಿರುದ್ಧ ಪೊಲೀಸ್‌ ದೂರು!

ಬಿ.ಜೆ.ಪಿ. ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಕಾಗೇರಿ ವಿಶ್ವೇಶ್ವರ ಹೆಗಡೆಯವರ ಪರವಾಗಿ ಸಂಸದ ಅನಂತಕುಮಾರ ಹೆಗಡೆ ಚಿತ್ರ ಮತ್ತು ಹೆಸರು ಬಳಸಿ ಬಿ.ಜೆ.ಪಿ. ಪರವಾಗಿ ಮತಕೇಳಿದ ಸಿದ್ಧಾಪುರದ ಅಣ್ಣಪ್ಪ ನಾಯ್ಕ ಕಡಕೇರಿ ವಿರುದ್ಧ ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.!

ಕಾಗೇರಿ ವಿಶ್ವೇಶ್ವರ ಹೆಗಡೆಯವರ ಪರವಾಗಿ ಸಾಮಾಜಿಕ ಜಾಲತಾಣ ಮತ್ತು ಇತರ ವೇದಿಕೆಗಳಲ್ಲಿ ಕೆಲಸ ಮಾಡುವ ಎ.ಜಿ.ನಾಯ್ಕ ಕಡಕೇರಿ ಇಂದು ಮಧ್ಯಾಹ್ನ ೨.೩೦ ರ ಸುಮಾರಿಗೆ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ದೇಶವಿರೋಧಿ ಶಕ್ತಿಗಳ ವಿರುದ್ಧ ಮತ ಚಲಾಯಿಸಿ ಮೋದಿ ಗೆಲ್ಲಿಸಿ ಎಂದು ಬರೆದುಕೊಂಡು ಆ ಪೋಸ್ಟ್‌ ಗೆ ಸಂಸದ ಅನಂತಕುಮಾರ ಹೆಸರು, ಚಿತ್ರ ಬಳಸಿದ್ದರು.!

ಈ ಬಗ್ಗೆ ದೂರು ನೀಡಿರುವ ಸಂಸದರ ಆಪ್ತ ಸುರೇಶ್‌ ಶೆಟ್ಟಿ ಸಂಸದ ಅನಂತಕುಮಾರ ಹೆಸರು-ಚಿತ್ರ ಬಳಸಿ ದುರುದ್ದೇಶದಿಂದ ಸಂಸದರ ಹೆಸರು ಹಾಳು ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿದ್ದಾರೆ ಎಂದು ದೂರಿದ್ದಾರೆ.!

ಈ ರೀತಿ ಮೋದಿ ಹೆಸರು ಅತಿರಂಜಿಸುವುದು, ದೇಶಪ್ರೇಮ ವೈಭವೀಕರಿಸುವುದು, ಅನ್ಯರನ್ನು ದೇಶದ್ರೋಹಿಗಳೆಂದು ಬಿಂಬಿಸುವುದು ಮತಾಂಧ ಸಂಘಟನೆಗಳ ಮಾಮೂಲು ರೂಢಿ. ವಿಶೇಶವೆಂದರೆ ಪ್ರತಿಬಾರಿ ಇಂಥದ್ದೇ ಅವಿವೇಕಗಳಿಂದ ಗೆಲ್ಲುವ ಅವಕಾಶ ಹೆಚ್ಚಿಸಿಕೊಳ್ಳುತಿದ್ದ ಅನಂತಕುಮಾರ ಹೆಗಡೆ ಈ ಬಾರಿ ಇದೇ ಕೆಲಸ ಮಾಡಿದ ತಮ್ಮ ಅಭ್ಯರ್ಥಿ ವಿಶ್ವೇಶ್ವರ ಹೆಗಡೆಯವರ ಹಿಂಬಾಲಕನ ವಿರುದ್ಧ ಪೊಲೀಸ್‌ ದೂರು ನೀಡಿದ್ದಾರೆ.!

ಇದರಿಂದ ಸ್ವಪಕ್ಷದ ಪ್ರಮುಖರು, ಮುಖಂಡರೇ ಬಿ.ಜೆ.ಪಿ. ಅಭ್ಯರ್ಥಿ ಕಾಗೇರಿ ವಿಶ್ವೇಶ್ವರ ಹೆಗಡೆ ವಿರುದ್ಧ ಕೆಲಸಮಾಡುತ್ತಿರುವುದಕ್ಕೆ ಸೂಕ್ತ ದಾಖಲೆ ಸಿಕ್ಕಂತಾಗಿದೆ. ಅನಂತಕುಮಾರ ಹೆಗಡೆ ಬಿ.ಜೆ.ಪಿ. ಪರವಾಗಿ ಪ್ರಚಾರ ಮಾಡದಿರುವುದು ತಮ್ಮ ಮನೆಯ ಕೂಗಳತೆಯ ದೂರದಲ್ಲಿ ಪ್ರಧಾನಿ ಮೋದಿ ಬಂದಿದ್ದರೂ ಡೋಂಟ್‌ ಕೇರ್‌ ಎಂದು ಉಪೇಕ್ಷೆ ಮಾಡಿರುವುದು ಕಾಂಗ್ರೆಸ್‌ ಗೆಲುವಿನ ತಟ್ಟೆಗೆ ಬಿ.ಜೆ.ಪಿ.ಗರೇ ತುಪ್ಪ-ಹೋಳಿಗೆ ಸುರಿದಂತಾಗಿದೆ.!!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *