ಲಕ್ಷ್ಮಿ ಇರದ ಮನೆಗೆ ಉಪ ರಾಷ್ಟ್ರಪತಿಗಳು ಬಂದು ಹೋದರು! #vice president visit#

ಯಾಕೋ ಆ ಮನೆ ಕಡೆ ಹೋಗುವ ಮನಸ್ಸೇ ಆಗಿರಲಿಲ್ಲ….

ಮೊದಲಾದರೆ ಹಿರಿಯಣ್ಣ ಕೃಷ್ಣಣ್ಣ ನನ್ನಂಥ ಚಿಕ್ಕವರನ್ನೂ ಅಣ್ಣಾ ಎಂದೇ ಕರೆಯುತಿದ್ದರು.

ಅವರಮ್ಮ ಲಕ್ಷ್ಮಿ ಸಾಕ್ಷಾತ್‌ ಅನ್ನಪೂರ್ಣೇಶ್ವರಿ ಅವರ ಕೈ ತುತ್ತು ತಿನ್ನದ ವ್ಯಕ್ತಿಗಳೇ ಪಾಪಿಗಳು. ಈ ಮನೆಯ ಹಿರಿಯ ಜೀವ ನಾರಾಯಣ ನಾಯ್ಕ ಕೋಟ್‌ ತೊಟ್ಟರಷ್ಟೇ ವಕೀಲರಲ್ಲ, ಕೋಟ್‌ ಇಲ್ಲದೆ ಕುಂತಲ್ಲಿ ನಿಂತಲ್ಲಿ ಪರಿಹಾರ ಸೂಚಿಸಬಲ್ಲರು. ಇವರೆಲ್ಲರೂ ಒಂದೇ ಮನೆಯಲ್ಲಿದ್ದಾಗ ಅಲ್ಲಿ ದಾಸೋಹ ನಡೆದಿದ್ದೇ ಹೆಚ್ಚು.

ಆರು ತಿಂಗಳ ಹಿಂದೆ ಕೃಷ್ಣಣ್ಣ ಅಕಾಲಿಕವಾಗಿ ನಿಧನರಾದ ವಾರ್ತೆ ಬಂತು,ಈಗ ಎರಡು ವಾರಗಳ ಕೆಳಗೆ ಅಮ್ಮನದ್ದು ಬಹುಶ: ಮೊದಲು ಸುದ್ದಿ ಪ್ರಕಟಿಸಿದ್ದೇ ನಾವು.

ನಮಗೆ ಸುದ್ದಿಯ ಧಾವಂತಕ್ಕಿಂತ ನಮ್ಮಂಥ ಅದೆಷ್ಟೋ ಜನರಿಗೆ ವಿಷಯ ಮುಟ್ಟಿಸುವ ಜವಾಬ್ಧಾರಿ. ಒಳಿತು ಕೆಡುಕುಗಳೇನೇ ಇರಲಿ ಗುರು ಒಂದು ಸಂದೇಶ ಕಳಿಸುತ್ತಾರೆ, ದಿನೇಶಣ್ಣ ಸಿಕ್ಕರೆ ಒಂದ್ನಿಮಿಷದ ಮಾತು, ರಾಜೇಶ್‌ ಈಗ ಕರೆ ಪಡೆಯಲಿಕ್ಕಿಲ್ಲ ಅಂದುಕೊಂಡಾಗೆಲ್ಲಾ ಹಲೋ ಎನ್ನುತ್ತಾರೆ.

ಹೀಗೆ ವಕೀಲ ಎನ್.ಡಿ.ನಾಯ್ಕರಿಂದ ಹಿಡಿದು ಅವರ ಮೊಮ್ಮಗ ದಿಶಾಂತನ ವರೆಗೆ ಅವರ ಮನೆಯವರೆಲ್ಲಾ ನಮಗೆ ಆತ್ಮೀಯರೆ, ಕೆಲಸವಿಟ್ಟುಕೊಂಡು ಅವರ ಮನೆಗೆ ಹೋಗಿದ್ದಕ್ಕಿಂತ ವಿನಾಕಾರಣ ಎನ್ನುವಂತೆ ಹೋಗಿದ್ದೇ ಹೆಚ್ಚು.

ಅಮ್ಮ ಒಳಗಿಂದ ಬಂದವರು ಸುಮಾರ್‌ ದಿವ್ಸಾತಲ್ಲ ಬರಲಿಲ್ಲ ಎನ್ನುತಿದ್ದರು. ಚಾ ಕುಡಿಸದೆ ಕಳುಹಿಸುತ್ತಿರಲಿಲ್ಲ. ಇಂಥ ಮನೆಯಲ್ಲಿ ಸೂತಕವಾದರೆ ಅರಗಿಸಿಕೊಳ್ಳುವುದು ಕಷ್ಟ.

ಎಲ್ಲರನ್ನೂ ಇವ ನಮ್ಮವ…. ಎಂದೆಣಿಸುತ್ತಲೇ ಎಲ್ಲರ ಅಮ್ಮನಾಗಿದ್ದ ಲಕ್ಷ್ಮೀ ಸಿದ್ಧಾಪುರದ ಹೆಗ್ಗೇರಿಯ ಪಟೇಲರ ಮಗಳು, ಅಪ್ಪ ತನ್ನ ಮಗಳು ವಿದ್ಯಾವಂತೆಯಾಗಲಿ ಎಂದು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಹುಬ್ಬಳ್ಳಿಯ ಸೈನಿಕ ಶಾಲೆಗೆ ಸೇರಿಸಿದ್ದರು!

ನಮ್ಮೂರಲ್ಲಿ ಹುಡುಗಿಯರಿಗ್ಯಾಕೆ ಕಲಿಕೆ ಎಂದು ಉಪೇಕ್ಷಿಸಿ ವಯಸ್ಸು ತುಂಬುವ ಮೊದಲೇ ಮದುವೆ ಮಾಡಿ ಜವಾಬ್ಧಾರಿ ಕಳೆದುಕೊಳ್ಳುತಿದ್ದ ಕಾಲದಲ್ಲಿ ಲಕ್ಷ್ಮಿ ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದರು. ಅದೇ ಅವಧಿಯಲ್ಲಿ ಅವರ ದೂರದ ಸಂಬಂಧಿ ಐಸೂರು ನಾರಾಯಣ ನಾಯ್ಕ ವಕೀಲರಾಗಿ ಸಮೂದಾಯದ ಮೆರವಣಿಗೆಯೊಂದಿಗೆ ಕೋರ್ಟ್‌ ಮೆಟ್ಟಿಲೇರಿದ್ದರು.

ಆಗತಾನೆ ಪಕ್ಕದ ಕಾಗೋಡಿನಲ್ಲಿ ಗೇಣಿ ರೈತರ ಚಳವಳಿ ನಡೆದು ಜನ ಸಂಘಟಿತರಾಗುತಿದ್ದರು. ಊಳುವವನೇ ಒಡೆಯ ಕಾನೂನು ಬಂತು ಗೇಣಿದಾರರ ಅರ್ಜಿ ತುಂಬಲು ಎನ್.ಡಿ. ನಾಯ್ಕರ ಮನೆಯೇ ಛತ್ರ. ಪುಟ್ಟಮಕ್ಕಳ ಸಂಸಾರದ ನೊಗ ಹೊತ್ತಿದ್ದ ಯುವ ವಕೀಲ ನಾರಾಯಣ ನಾಯ್ಕ ಹೊತ್ತಿಂದೊತ್ತಿಗೆ ಮನೆ ಸೇರುತ್ತಿರಲಿಲ್ಲ, ಬಂದರೆ ಒಬ್ಬರೇ ಬರುತ್ತಿರಲಿಲ್ಲ. ಎಳೆ ಮಕ್ಕಳ ತಾಯಿ ಬೇಸರಿಸದೆ ಮನೆ ಸಾಗಿಸುತಿದ್ದಳು, ಬಂದವರಿಗೆಲ್ಲಾ ಚಾ, ಊಟ ಕೊಟ್ಟು ಓಟ ಕೀಳುವ ಸ್ಥಿತಿ. ಆದರೆ ಆಕೆಗೆ ಮನೆಯ, ಶಿಕ್ಷಣದ ಸಂಸ್ಕಾರ ನೆರವಿಗೆ ಬಂತು ಮನೆ ಸಂಭಾಳಿಸುವ ಜೊತೆಗೆ ಊರು ಸಂತೈಸಿದರು. ಅವರೇ ಹಿರಿಯವಕೀಲ ಎನ್.ಡಿ. ನಾಯ್ಕರ ಪತ್ನಿ ಲಕ್ಷ್ಮಿ ನಾಯ್ಕ ಈಗ ಎರಡು ವಾರಗಳ ಹಿಂದೆ ಗತಿಸಿದರು.

ಇವರ ಕಿರಿಯ ಮಗ ರಾಜೇಶ್‌ ರಾಷ್ಟ್ರಪತಿ ಭವನದಲ್ಲಿ ಹಿರಿಯ ಅಧಿಕಾರಿ ಊರಿಗೆ ಬಂದಾಗ ಯಾವ ಹಮ್ಮಿಲ್ಲದೆ ಹುಟ್ಟೂರು ಐಸೂರಿನಲ್ಲಿ ಇರಬಲ್ಲರು, ಅವರ ಊರಿಗೆ ಬಂದಾಗ ತಮ್ಮ ಪೇಟೆ ಮನೆಯಲ್ಲಿರುವುದಕ್ಕಿಂದ ಕುಗ್ರಾಮ ಐಸೂರಿನಲ್ಲಿರುವುದೇ ಹೆಚ್ಚು ಅವರ ಪತ್ನಿ ಮಗಳು ಕೂಡಾ!

ಹೀಗೆ ತಾಯಿ ಸೈನಿಕ ಶಾಲೆಯಲ್ಲಿ ಓದಿ ಗ್ರಹಿಣಿಯಾಗಬಲ್ಲರು, ಮಗ ಆಯ್.‌ ಎ. ಎಸ್.‌ ಅಧಿಕಾರಿಯಾಗಿ ಹಳ್ಳಿ ಹೈದನಂತಿರಬಲ್ಲರು ಅವರ ಉಳಿದ ಮಕ್ಕಳು ಎಲ್ಲರೊಳಗೊಂದಾಗಿ ಸರಳವಾಗಿ ಇರಬಲ್ಲರು. ಇಂಥ ಸರಳ ಕುಟುಂಬದ ಕೆಲವರು ಅನೇಕ ವೇದಿಕೆಗಳಲ್ಲಿ ಸನ್ಮಾನಿತರಾಗಿದ್ದಾರೆ. ನಮ್ಮ ಸಾಹಿತ್ಯ ಪರಿಷತ್‌ ಚಟುವಟಿಕೆಗಳ ಅವಧಿಯಲ್ಲಿ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಎನ್.ಡಿ. ನಾಯ್ಕರನ್ನು ಭುವನಗಿರಿಯಲ್ಲಿ ಸನ್ಮಾನಿಸಿ ಈ ದಂಪತಿಗಳಿಂದ ಸಮಾಜಕ್ಕೆ ದೊರೆತದ್ದು ಅನೇಕ ಆದರೆ ಇವರ ಕುಟುಂಬದ ಕುಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕಾರಣವಾಗಿದ್ದು ಈ ಕುಟುಂಬದ ಮೇಲೆ ಸಮಾಜಕ್ಕಿರುವ ಅನ್ನದ ಋಣಭಾರದಿಂದ ಎಂದು ಬಣ್ಣಿಸಿದ್ದೆವು.

ಅದೇ ಕುಟುಂಬ ಈಗ ದೇಶದ ಉಪರಾಷ್ಟ್ರಪತಿಗಳನ್ನು ಮನೆಗೆ ಕರೆಸಿ ಸತ್ಕರಿಸಿದೆ. ಗೌರವಾಧರ, ಪ್ರೀತಿ-ವಿಶ್ವಾಸಗಳ ಆ ಮನೆಯಲ್ಲಿ ಈಗ ಹಿರಿಯಮ್ಮನಿಲ್ಲ ಅವರ ಜಾಗ ತುಂಬಲು ಮೂರುಜನ ಸೊಸೆಯರು, ಮೊಮ್ಮಕ್ಕಳಿದ್ದಾರೆ. ಹಿರಿಯ ಅಧಿಕಾರಿಯಾಗಿರುವ ರಾಜೇಶ್‌ ಮೊನ್ನೆಯ ಕಾರ್ಯಕ್ರಮದಲ್ಲಿರಲಿ ಅದರ ಹಿಂದಿನ ದಿನಗಳಲ್ಲಿರಲಿ ಒಟ್ಟಾರೆ ಬದುಕಿನುದ್ದಕ್ಕೂ ತುಂಬಿದ ಕೊಡದಂತಿದ್ದಾರೆ. ಸಿದ್ಧಾಪುರ ಉತ್ತರ ಕನ್ನಡದ ಹಿರಿಮೆಗೆ ಗರಿ ಮೂಡಿಸಿರುವ ರಾಜೇಶ್‌ ನಮ್ಮ ರಾಜ್ಯದ ಪ್ರತಿನಿಧಿಯಾಗಿ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜೃಂಬಿಸುತ್ತಿರುವುದು ಈ ಮಣ್ಣಿನ ಹಿರಿಮೆ, ಮತ್ತು ಅವರದ್ದೇ ಆದ ವೈಯಕ್ತಿಕ ಘನತೆಯಿಂದ. ಈ ಕುಟುಂಬ ತಣ್ಣಗಿರಲಿ ಎಂದು ಹಾರೈಸಲು ಅಶ್ರುತರ್ಪಣದ ಸಂದರ್ಭ ಸಾಕ್ಷಿಯಾಗಿರುವುದು ವೇದನೆ. ದೇವರಿದ್ದರೆ ಅವರ ಕುಟುಂಬವನ್ನು ನೆಮ್ಮದಿಯಿಂದ ಇಡಲಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

2 Comments

Leave a Reply

Your email address will not be published. Required fields are marked *