Rcb-ಕಾಲತುಳಿತದಲ್ಲಿ ಮೃತಪಟ್ಟ ಅಕ್ಷತಾ ಪೈ ಅಪ್ಪಟ ಸಾಹಸಿ

ಆರ್.ಸಿ.ಬಿ. ವಿಜಯೋತ್ಸವ ನೋಡಲು ತೆರಳಿದ್ದ ದಂಪತಿಗಳಿಗೆ ಉಚಿತ ಪ್ರವೇಶದ ಸಮೂಹ ಹಿಂದೆ ಸುನಾಮಿಯಂತೆ ಬರುತ್ತಿರುವ ಅಂದಾಜಿರಲಿಲ್ಲ. ಕೈ ಕೈ ಹಿಡಿದು ಒಳನುಗ್ಗುವ ಇವರ ಪ್ರಯತ್ನದಲ್ಲಿ ದಂಪತಿಗಳು ಬೇರ್ಪಟ್ಟು ಜನ ಸಮೂಹದ ಕಾಲಡಿ ಸಿಲುಕಿದ್ದಾರೆ. ಅಲ್ಲಿದ್ದ ಜನರೇ ಇಬ್ಬರನ್ನೂ ಬಚಾವು ಮಾಡಲು ಪ್ರಯತ್ನಿಸಿದ್ದಾರೆ. ಆಶಯ್‌ ಸುದೈವದಿಂದ ಪಾರಾಗಿದ್ದಾರೆ. ಅಕ್ಷತಾ ಆಸ್ಫತ್ರೆ ತಲುಪುವ ಮೊದಲೇ ಕೊನೆಯ ಉಸಿರೆಳಿದಿದ್ದಾರೆ. ಸುಖ ಸಂಸಾರದ ಜೋಡಿಗೆ ಆರ್.ಸಿ.ಬಿ. ದುರಂತವಾಗಿ ಅಪ್ಪಳಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲತುಳಿತವಾಗಿ ಹನ್ನೊಂದು ಜನ ಮೃತಪಟ್ಟ ವಿಚಾರ ವಿರೋಧಿ ಪಕ್ಷಗಳಿಗೆ ಆಹಾರವಾಗಿ ಕಾಂಗ್ರೆಸ್‌ ತಲೆಬಿಸಿ ಹೆಚ್ಚಿಸಿದೆ. ಇದೇ ವಿಚಾರ ಗೃಹ ಮಂತ್ರಿಗಳ ಖುರ್ಚಿಗೂ ಕಂಟಕ ತರಲಿದೆ ಎನ್ನಲಾಗುತ್ತಿದೆ!.

ಆರ್.ಸಿ.ಬಿ. ವಿಜಯೋತ್ಸವ ಆಯೋಜಿಸಿದ್ದ ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಈ ಅನಾಹುತದ ಹೊಣೆ ಹೊರಬೇಕು. ಕ್ರಿಕೇಟ್‌ ಪ್ರೀಯರ ವಿವೇಕಶೂನ್ಯತೆ, ರಾಜ್ಯ ಕ್ರಿಕೆಟ್‌ ಮಂಡಳಿ ಪ್ರಮಾದ ಇವುಗಳಿಂದಾಗಿ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಕ್ಕಿ ಮೃತರಿಗೆ ಸೂಕ್ತ ಎನ್ನುವ ಪರಿಹಾರ ವಿತರಿಸಿದೆ.

ಬಹುತೇಕ ಯುವಕರು, ಎಳೆಯರೇ ಮೃತಪಟ್ಟ ಈ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮುಲ್ಕಿ ಮೂಲದ ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ಗೃಹಿಣಿ ದುರದೃಷ್ಟೆ ಎನ್ನಲಾಗುತ್ತಿದೆ.

ಮುಲ್ಕಿಯ ಬಡ ಕುಟುಂಬದ ಅಕ್ಷತಾ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಹುಟ್ಟೂರಲ್ಲಿ ಪದವಿ ಮುಗಿಸುತ್ತಲೇ ಬಾಹ್ಯವಾಗಿ ಸಿ.ಎ. ಕಟ್ಟಿ ಓದಿ ಗೋಲ್ಡ್‌ ಮೆಡಲ್ ಪಡೆದವಳು. ಪ್ರತಿಭಾವಂತ ಯುವಕ ಆಶಯ ಅಂಬಳ್ಳಿಗೆ ವರವಾಗಿ ಸಿಕ್ಕ ಅಕ್ಷತಾ ಬಡ ಪ್ರತಿಭಾವಂತೆ ಯಷ್ಟೇ ಅಲ್ಲದೆ ಅಪ್ಪಟ ಮಾನವೀಯ ಗುಣದವಳು.ಪ್ರತಿಭಾವಂತರಾದ ಅಕ್ಷಯ ಮತ್ತು ಆಶಯ್‌ ಪರಸ್ಫರ ಪ್ರೀತಿಸಿ ಮದುವೆಯಾದವರು. ಹುಟ್ಟೂರು ಮುಲ್ಕಿ, ಗಂಡನ ಮನೆ ಸಿದ್ಧಾಪುರ ಗಳಲ್ಲಿ ಎಲ್ಲರೊಳಗೊಂದಾಗಿದ್ದ ಅಕ್ಷತಾ ಪತಿ ಆಶಯ್‌ ನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಹಿಂದಿನ ವಾರ ವಾರದ ಕೊನೆಯ ದಿನಗಳಲ್ಲಿ ಹೊರ ಹೋಗಬೇಕಿದ್ದ ಈ ದಂಪತಿಗಳಿಗೆ ವೀಕೆಂಡ್‌ ಗೆ ಹೊರಹೋಗಲು ಸಾಧ್ಯವಾಗಿರಲಿಲ್ಲ. ಕೆಲಸದ ಹುಳುಗಳಂತಿದ್ದ ದಂಪತಿಗಳಿಗೆ ಆರ್.ಸಿ.ಬಿ. ಗೆಲವು ಸಹಜವಾಗಿ ಖುಷಿ ಕೊಟ್ಟಿದೆ. ಹಿಂದಿನ ವೀಕ್‌ ಎಂಡ್‌ ಔಟಿಂಗ್‌ ಮುಂದೂಡಲ್ಪಟ್ಟಿದ್ದರಿಂದ ಆರ್.ಸಿ.ಬಿ. ಪೇಜ್‌ ನ ಮಾಹಿತಿಯಂತೆ ಪರೇಡ್‌ ಗಾಗಿ ಸಮಯ ಹೊಂದಿಸಿಕೊಂಡಿದ್ದಾರೆ. ( ಮೆರವಣಿಗೆ, ಪರೇಡ್‌, ವಿಜಯೋತ್ಸವದ ಆಯೋಜಕರು, ಸಂಘಟಕರಿಗೆ ಇವೆಲ್ಲಾ ಬೃಹತ್‌ ಆದಾಯ ತರುವ ತಂತ್ರಗಳು!)

ಆರ್.ಸಿ.ಬಿ ಪರೇಡ್‌ ಸ್ಥಗಿತಗೊಂಡಿತೋ? ಲಾಭಕ್ಕಾಗಿ ಪರೇಡ್‌ ವಿಚಾರ ಪ್ರಚಾರ ಮಾಡಲಾಗಿತ್ತೋ? ತನಿಖೆಯಿಂದ ಸತ್ಯ ಹೊರಬರಬೇಕಿದೆ. ಆದರೆ ಆರ್.ಸಿ.ಬಿ. ಜಯ,ಅಭಿಮಾನಗಳನ್ನು ಹಣವಾಗಿ ಪರಿವರ್ತಿಸಿಕೊಳ್ಳುವ ಹಿತಾಸಕ್ತರು ವ್ಯವಸ್ಥೆ, ಸರ್ಕಾರ, ಪೊಲೀಸ್‌ ಭದ್ರತೆಗಳ ಬಗ್ಗೆ ವಿಚಾರಮಾಡದೆ ತಮ್ಮ ಲಾಭ ಕೇಂದ್ರೀಕರಿಸಿದ್ದಾರೆ. ಇದರ ಪರಿಣಾಮ ಸಾವು- ನೋವುಗಳಾಗಿವೆ. ಈಗ ಈ ಪ್ರಕರಣದಲ್ಲಿ ಸರ್ಕಾರವನ್ನು ಹೊಣೆ ಮಾಡುವವರು ಪಹಲ್ಗಾಮ್‌ ದುರಂತ,ಕುಂಬಮೇಳಗಳ ನೂರಾರು ಸಾವುಗಳ ಬಗ್ಗೆ ಮಾತನಾಡುವುದಿಲ್ಲ!. ಎಲ್ಲದರಲ್ಲೂ ಲಾಭ ಹುಡುಕುವ ಉದ್ಯಮಿಗಳು,ಶ್ರೀಮಂತರು ಇಂಥ ದುರ್ಘಟನೆಗಳ ನೈಜ ಹೊಣೆಗಾರರು ಎನ್ನುವುದು ಸ್ಪಷ್ಟ.

ಕ್ರಿಕೆಟ್‌ ಮೂರ್ಖರ ಆಟ ಎನ್ನುವ ಹೇಳಿಕೆ ಬಹುಪ್ರಸಿದ್ಧ. ಇಂಥ ಸಮೂಹ ಸನ್ನಿಗಳಲ್ಲಿ ಶಿಕ್ಷಿತರು, ಪ್ರತಿಭಾವಂತರು ಜೀವ ಕಳೆದುಕೊಳ್ಳುವುದು ದುರಂತ. ಆಶಯ್‌ ಹೇಳುವಂತೆ ಪರೇಡ್ ರದ್ದಾಗಿ ಉಚಿತ-ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದಾಗ ಸಮೂಹ ನಿಯಂತ್ರಣದ ಬಗ್ಗೆ ವಿಚಾರ ಮಾಡಬೇಕಿತ್ತು. ಅಂತೂ ರಾಜ್ಯದ ದೊಡ್ಡ ದುರಂತ ಒಂದು ನಡೆದು ಹೋಗಿ ಹನ್ನೊಂದು ಅಮೂಲ್ಯ ಜೀವಗಳು ಬಲಿಯಾಗಿವೆ. ಹಣಕ್ಕಾಗಿ ಪ್ರಚಾರ, ಸಂಬ್ರಮ,ವಿಜಯೋತ್ಸವ ಆಚರಿಸುವವರಿಗೆ ಪರವಾನಗಿ ಇಲ್ಲದೆ ಇಷ್ಟು ದೊಡ್ಡ ಜನಸಮೂಹ ಸೇರಿಸಲು ಅವಕಾಶ ಕೊಟ್ಟವರ್ಯಾರು? ಈಗ ಸರ್ಕಾರ ದೂಷಿಸುವವರು ಸರ್ಕಾರವನ್ನು ಬದಲಿಸುವ, ತಮ್ಮ ಅನುಕೂಲಕ್ಕೆ ಸರ್ಕಾರವನ್ನೇ ರೂಪಿಸುವ ಬಲಿಷ್ಠ ಲಾಭಕೋರ ಪರಿವಾರದ ಮನಸ್ಥಿತಿಯ ವಿರುದ್ಧ ಸಮರ ಸಾರಬೇಕಿದೆ. ರಾಜ್ಯದ ಹನ್ನೊಂದು ಜೀವಗಳ ಬಲಿಯ ಬಿಸಿಯಲ್ಲಿ ಮುಂಗಾರಿನ ಚಳಿ ಕಾಯಿಸಿಕೊಳ್ಳುತ್ತಿರುವ ಮಾಧ್ಯಮಗಳು, ರಾಜಕೀಯ ಪಕ್ಷಗಳು ಜನರ ಕ್ಷಮೆಗೂ ಅರ್ಹರಲ್ಲ. ಆರ್ಥಿಕತೆಯ ಈ ಸುನಾಮಿ ಅವರವರ ಮನೆ ಬಾಗಿಲಿಗೆ ಬಂದಾಗ ಮಾತ್ರ ಅದರ ಸ್ವರೂಪ ಅರ್ಥವಾಗುತ್ತದೆ. ಜನತೆ ಕ್ರಿಕೆಟ್‌ ನ ಈ ಸಮೂಹ ಸನ್ನಿಗೆ ಧಿಕ್ಕಾರ ಹೇಳದಿದ್ದರೆ ಭವಿಷ್ಯ ಕರಾಳವಾಗಲಿದೆ ಯಷ್ಟೇ. ಸಿದ್ಧಾಪುರದ ಆಶಯ್‌ ಮತ್ತವರ ಅಂಬಳ್ಳಿ ಕುಟುಂಬದ ನೋವಿಗೆ ಇಡೀ ಜಿಲ್ಲೆಯೇ ಮರುಗಿರುವುದು ಉತ್ತರ ಕನ್ನಡ ಜಿಲ್ಲೆಯ ಮಾನವೀಯತೆಗೆ ಸಾಕ್ಷಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *