

- ನೋವುಂಡು ಜನಹಿತದ ಕನಸು ಕಂಡ ಸಂತ ದಿನಕರ ದೇಸಾಯಿ, ರಾಜ್ಯದ ಅನೇಕ ಹೋರಾಟಗಳಿಗೆ ಸ್ಫೂರ್ತಿ ನೀಡಿದ್ದು ಡಾ. ದಿನಕರ ದೇಸಾಯಿ ಕಟ್ಟಿದ ಅಂಕೋಲಾದ ರೈತ ಚಳವಳಿ- ಕನ್ನೇಶ್ ಕೋಲಶಿರ್ಸಿ
- ದಿನಕರ ದೇಸಾಯಿ ನಿಸ್ವಾರ್ಥದ ಜನಸೇವಕ ಅವರ ೪೭ ವಿದ್ಯಾಸಂಸ್ಥೆಗಳು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ವಿದ್ಯಾದಾನ ಮಾಡಿವೆ. – ಎಂ. ವಿಠ್ಠಲ್ ಅವರಗುಪ್ಪ
- ದಿನಕರ ದೇಸಾಯಿಯವರಂಥ ಧೀಮಂತ ನಾಯಕರನ್ನು ಕ.ಸಾ.ಪ. ದಿಂದ ಸ್ಮರಿಸುವುದು ನಮ್ಮ ಜವಾಬ್ಧಾರಿ.-ಚಂದ್ರಶೇಖರ್ ಕುಂಬ್ರಿ ಗದ್ದೆ
- ಚುಟುಕು, ಸಾಹಿತ್ಯ, ಹೋರಾಟಗಳ ಮೂಲಕ ಜನಮುಖಿ ಆದವರು ನಮ್ಮ ದಿನಕರರು -ವಿ.ಎನ್. ನಾಯ್ಕ

ಇಂದು ಕನ್ನಡ ಸಾಹಿತ್ಯ ಪರಿಷತ್ತು ಸಿದ್ದಾಪುರ ಹಾಗೂ ಜನತಾ ವಿದ್ಯಾಲಯ ಬೇಡ್ಕಣಿ ಸಹಯೋಗದಲ್ಲಿ ಡಾ.ದಿನಕರ ದೇಸಾಯಿ ಜನ್ಮ ದಿನಾಚರಣೆ ಪ್ರಯುಕ್ತ ಚುಟುಕು- ಪ್ರಬಂಧ-ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.ದಿನಕರ ದೇಸಾಯಿ ಬದುಕು ಬರಹ ಕುರಿತು ವಿಠ್ಠಲ ಅವರಗುಪ್ಪ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಪತ್ರಕರ್ತ ಕನ್ನೇಶ ಕೋಲಸಿರ್ಸಿ, ಕಸಾಪ ಕೋಶಾಧ್ಯಕ್ಷರಾದ ಪಿ.ಬಿ.ಹೊಸೂರು, ಉಪಸ್ಥಿತರಿದ್ದು ಮಾತನಾಡಿದರು.


ಚುಟುಕು, ಪ್ರಬಂಧ ಸ್ಪರ್ಧೆ ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಜನತಾ ವಿದ್ಯಾಲಯ ಬೇಡ್ಕಣಿ ಯ ೨೦೨೫ರ ಎಸ್ ಎಸ್ ಎಲ್ ಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ *ಸೇವಾ ಸಂಕಲ್ಪ ಟ್ರಸ್ಟ್ ಸಿದ್ದಾಪುರ * ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪಿ. ಎಂ ನಾಯ್ಕ ರನ್ನು ಕಸಾಪ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷರಾದ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ಪ್ರಾಸ್ತಾವಿಕ ಮಾತನಾಡಿದರು. ಎಸ್. ಡಿ.ಎಂ.ಸಿ ಅಧ್ಯಕ್ಷ ವಿ ಎನ್ ನಾಯ್ಕ ಬೇಡ್ಕಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನತಾ ವಿದ್ಯಾಲಯ ಮುಖ್ಯೋಪಾಧ್ಯಾಯರಾದ ಪ್ರತಿಮಾ ಪಾಲೇಕರ್ ಸ್ವಾಗತಿಸಿದರು. ಪಿ ಎಂ ನಾಯ್ಕ ನಿರೂಪಿಸಿದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಪ್ರಶಾಂತ ಶೇಟ್ ವಂದಿಸಿದರು.
ಜಿ ಟಿ ಭಟ್ ಹಾಗೂ ಇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






