


ಉತ್ತರ ಕನ್ನಡ ಜಿಲ್ಲೆಯಲ್ಲಿ ನಗರಗಳ ನೀರಿನ ವ್ಯವಸ್ಥೆಗೆ ೫೫೦ ಕೋಟಿ ವ್ಯಯಿಸುತಿದ್ದೇವೆ ಎಲ್ಲಾ ಗ್ಯಾರಂಟಿ ಯೋಜನೆಗಳ ನಡುವೆ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಹಿಂದಿನ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳೂ ಇರಲಿಲ್ಲ, ಅಭಿವೃದ್ಧಿಯೂ ಆಗಿಲ್ಲ ಹಾಗಾದರೆ ಸರ್ಕಾರದ ಹಣ ಎಲ್ಲಿ ಹೋಗುತಿತ್ತು ಎಂದು ಪ್ರಶ್ನಿಸಿದ ಸಚಿವ ಮಂಕಾಳು ವೈದ್ಯ ಕೆಲಸಮಾಡಲಾಗದವರು ಸುಳ್ಳಿನ ಮೊರೆ ಹೋಗುತ್ತಾರೆ. ಎಲ್ಲಾ ಅಭಿವೃದ್ಧಿಗಳ ನಡುವೆ ನಮ್ಮ ವಿರುದ್ಧ ಅಪಪ್ರಚಾರ ಮಾಡುವವರು ಕೆಲಸ ಮಾಡದವರು, ಸುಳ್ಳು ಹೇಳುವವರು ಎಂದು ಪರೋಕ್ಷವಾಗಿ ವಿರೋಧಿಗಳನ್ನು ಚುಚ್ಚಿದರು.


ಸಿದ್ದಾಪುರದಲ್ಲಿ ನಡೆದ ೬೯.೫ ಕೋಟಿ ನೀರಿನ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಎಷ್ಟು ವರ್ಷಗಳಿಂದ ಅಧಿಕಾರದಲ್ಲಿದ್ದೀರಿ ನೀವು ಕೆಲಸ ಮಾಡಿದ್ದರೆ ಈ ಸ್ಥಿತಿ ಇರುತಿತ್ತೆ? ಎಂದು ಸಂಸದ ವಿಶ್ವೇಶ್ವರ ಹೆಗಡೆಯವರಿಗೆ ಸಚಿವರು ಟಾಂಗ್ ನೀಡಿದಂತಿತ್ತು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






