ಟಿ.ಎಂ.ಎಸ್.ಗೆ 3 ಕೋಟಿಗೂ ಅಧಿಕ ಲಾಭ

ಲಾಭಕ್ಕಿಂತ ಅಡಿಕೆಬೆಳೆಗಾರರ ಹಿತಮುಖ್ಯ-ಆರ್.ಎಂ.ಹೆಗಡೆ
ಟಿ.ಎಂ.ಎಸ್.ಗೆ 3 ಕೋಟಿಗೂ ಅಧಿಕ ಲಾಭ
ಸಂಘದ ಲಾಭಕ್ಕಿಂತ ಸದಸ್ಯರ ಹಿತಾಸಕ್ತಿ ಮುಖ್ಯ ಎಂದು ಅಭಿಪ್ರಾಯಪಟ್ಟಿರುವ ಟಿ.ಎ.ಪಿ.ಎಂ.ಎಸ್. ಅದ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ 2018-19 ವರ್ಷದಲ್ಲಿ ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ 3ಕೋಟಿ,5 ಲಕ್ಷದ 18 ಸಾವಿರದ 82 ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಘೋಶಿಸಿದ್ದಾರೆ.
ಇಂದು ಸಂಘದ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘ ಸದಸ್ಯರ ಹಿತಕ್ಕೆ ಆದ್ಯತೆ ನೀಡುತ್ತದೆ. ಕಳೆದ 72 ವರ್ಷಗಳ ಸಾರ್ಥಕ ಸೇವೆಯ ಮೆಲುಕಿಗೆ ಇದೇ ಡಿಸೆಂಬರ್ ನಲ್ಲಿ ಸಂಘದ ಅಮೃತಮಹೋತ್ಸವ ನಡೆಯಲಿದೆ ಎಂದರು.
ಸಂಘದ ಪ್ರಗತಿಯ ವಿವರಣೆ ನೀಡಿದ ಅವರು ಸಂಸ್ಥೆ 2018-19 ರಲ್ಲಿ 4 ಕೋಟಿ 40ಲಕ್ಷಗಳಷ್ಟು ಲಾಭ ಗಳಿಸಿದ್ದು ನಿಧಿಗಳನ್ನು ತೆಗೆದಿರಿಸಿದ ನಂತರ 3 ಕೋಟಿ 5 ಲಕ್ಷ ನಿವ್ವಳ ಲಾಭ ಉಳಿದಿದೆ. ಕಳೆದ 35 ವರ್ಷಗಳಿಂದಲೂ ಸಂಸ್ಥೆ ಲಾಭದಲ್ಲೇ ಮುನ್ನಡೆಯುತ್ತಿದೆ ಎಂದು ವಿವರಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಸಾಧಕರು, ಪ್ರತಿಭಾವಂತರು ಸೇರಿದಂತೆ ಸಂಕಷ್ಟದಲ್ಲಿರುವವರ ನೆರವಿಗೂ ಸಂಸ್ಥೆ ಧಾವಿಸುತ್ತಿದೆ ಎಂದ ಅವರು ಸಂಸ್ಥೆಯವಾರ್ಷಿಕ ಸಾಧಾರಣ ಸಭೆ ಸೆ.14 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು ಅಂದು ಸಂಜೆ ವಾಮನ ಚರಿತ್ರೆ ತಾಳಮದ್ದಲೆ ಪ್ರಸಂಗ ನಡೆಸುವುದಾಗಿ ತಿಳಿಸಿದರು.
ಸಂಸ್ಥೆಯ ಸದಸ್ಯರಿಗೆ ಡಿಪೊಜಿಟ್ ಮೇಲೆ 9 ಬಡ್ಡಿ ನೀಡುತಿದ್ದೇವೆ.ಇದಕ್ಕಿಂತ ಹೆಚ್ಚು ಶೇ 10 ಲಾಭಾಂಶ ಶೇರುದಾರರಿಗೆ ನೀಡುತಿದ್ದೇವೆ.ಸಂಸ್ಥೆ ಲಾಭದಲ್ಲಿದ್ದರೂ ಆಂತರಿಕ ಶಕ್ತಿಯ ಅಂತ:ಸತ್ವ ಗಟ್ಟಿಯಾಗಿಲ್ಲ.ನಿರ್ಮಾಣ,ವಿಸ್ತರಣೆ, ಅಭಿವೃದ್ಧಿ ಹಿನ್ನೆಲೆಯಲ್ಲಿ ಶೆ.10 ಮಾತ್ರ ಲಾಭಾಂಶ ನೀಡುತಿದ್ದೇವೆ.
-ಷಣ್ಮುಖ ಗೌಡರ್-ಅಫೆಕ್ಸ್ ಬ್ಯಾಂಕ್ ನಿರ್ಧೇಶಕ
ಅಡಿಕೆ ಬೆಳೆಗಾರರು,ಸಂಸ್ಥೆ ಪರಸ್ಫರ ಅವಲಂಬಿತವಾಗಿವೆ. ಈ ವರ್ಷ ಮಳೆಹಾನಿ ಹಿನ್ನೆಲೆಯಲ್ಲಿ ವಿಶೇಶ ಪ್ಯಾಕೇಜ್ ನೀಡುವ ಮೂಲಕ ಸರ್ಕಾರ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು.

  • ಆರ್.ಎಂ. ಹೆಗಡೆ ಬಾಳೇಸರ
    ಸಹಕಾರಿ ಸಂಸ್ಥೆಗಳು ಸರ್ಕಾರದ ಕಠಿಣ ನಿಯಮಗಳು, ಅಸಹಕಾರದಿಂದ ತೊಂದರೆಗೆ ಈಡಾಗುತ್ತಿವೆ. ಸರ್ಕಾರ ಸಹಕಾರಿ ಸಂಸ್ಥೆಗಳ ಹಿತ ಕಾಪಾಡುವ ಕೆಲಸ ಮಾಡಬೇಕು.- ರಮೇಶ್ ಹೆಗಡೆ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ...

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ ಮತ್ತೆ ಗೆಲುವಿನ ನಗೆ ಬೀರಿದೆ. ಶುಕ್ರವಾರ ನಡೆದ ಈ ಚುನಾವಣೆಯ ಮತ ಎಣಿಕೆಯ ಪ್ರಕ್ರೀಯೆ ಸ್ಥಳೀಯ ಬಾಲಿಕೊಪ್ಪ ಶಾಲೆಯಲ್ಲಿ ತಡ ರಾತ್ರಿಯ ವರೆಗೆ ನಡೆದಿತ್ತು. ಹಿಂದಿನ ಅವಧಿಗೆ ಆಯ್ಕೆಯಾಗಿದ್ದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *