ತಡರಾತ್ರಿ ಶಿರಸಿ ರಸ್ತೆಯಲ್ಲಿ ವಾಹನ ಬೆನ್ನಟ್ಟುವ ಪಾಪಿಗಳು ಖಾರ ಎರಚಿ ದರೋಡೆ ಮಾಡುವವರೆ?

ಮೊದಲಘಟನೆ-
ಅದು ಒಂದುದಿನದ ಚಳಿಯ ಮುಸ್ಸಂಜೆ ಸಿದ್ಧಾಪುರದ ಕಛೇರಿಯ ಕೆಲಸ ಮುಗಿಸಿ ತೆರಳಿದ ಯುವಜೋಡಿಯೊಂದು ಕಾನಸೂರ ವರೆಗೆ ಬೈಕ್‍ರೈಡ್ ಹೋಗಿ, ಕಾನಸೂರಿನಲ್ಲಿ ಗೋಬಿ, ಪಾವಭಜಿ ತಿಂದು ಹೊರಡುವ ಹೊತ್ತಿಗೆ ಸಂಜೆಯ 8 ಗಂಟೆಯ ಸಮಯ ಕಾನಸೂರು ಅರಣ್ಯ ಇಲಾಖೆ ನರ್ಸರಿಯಿಂದ ಈ ಜೋಡಿಯ ದ್ವಿಚಕ್ರ ವಾಹನವನ್ನು ಹಿಂಬಾಲಿಸಿದ ವ್ಯಕ್ತಿ ಬೈಕ್ ಚಲಾಯಿಸುತಿದ್ದ ಯುವಕನಿಗೆ ನಿರ್ಜನ ಪ್ರದೇಶದಲ್ಲಿ ಕಣ್ಣಗೆ ಖಾರ ಎರಚಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ, ಆದರೆ ಹೆದರಿದ ಯುವಕ (ಅವಿವಾಹಿತ ಜೋಡಿ) ಗೆಳತಿಯ ಮಾರ್ಗದರ್ಶನದಂತೆ ಬೈಕ್ ಚಲಾಯಿಸಿ ಪಾರಾಗಿದ್ದಾನೆ. ಈ ಘಟನೆ ನಡೆದು ಪೊಲೀಸರ ತನಿಖೆಯಾಗಿ ಸ್ಫಷ್ಟ ವಿಚಾರ ತಿಳಿಯದೆ ಹಳೆ ವಿವಾದ ಅಥವಾ ಕೌಟುಂಬಿಕ ಕಲಹದ ಕಾರಣಕ್ಕೆ ಇದಾಗಿರಬಹುದೆಂದು ಪೊಲೀಸರು ಈ ಪ್ರಕರಣ ಕೈ ಬಿಟ್ಟಿದ್ದಾರೆ.
ಘಟನೆ-02-
ಒಂದು ನಿರ್ಜನ ರಾತ್ರಿಯ 2 ಗಂಟೆಯ ಸಮಯ ಗೋವಾ ಪ್ರವಾಸಕ್ಕೆ ತೆರಳಿದ್ದ ಎರಡು ಕುಟುಂಬಗಳ ಒಂದು ಕಾರು ಶಿರಸಿಗೆ ಬರುವ ವೇಳೆಗೆ ಮುಂಜಾನೆ 2 ಗಂಟೆ ಸಮೀಪಿಸಿದೆ.
ಶಿರಸಿ ನೀಲೇಕಣಿಯಿಂದ ಈ ಹೊರಜಿಲ್ಲೆಯ ನೋಂದಣಿ ಸಂಖ್ಯೆ ಇದ್ದ ಕಾರನ್ನು ಒಂದು ಬೈಕ್ ಫಾಲೋ ಮಾಡಿದೆ. ಹಿಂದಿನ ಘಟನೆಯ ಅರಿವಿದ್ದ ಈ ಕಾರಿನ ಜನ ವೇಗವಾಗಿ ಸಿದ್ಧಾಪುರ ಕಡೆ ಬರುತಿದ್ದಂತೆ 15-16 ಕಿ.ಮೀ. ಗೂ ಹೆಚ್ಚು ಫಾಲೋ ಮಾಡಿ ನಂತರ ಮನೆಗಳಿರುವ ಪ್ರದೇಶದ ಸಮೀಪ ಹಿಂದೆ ಸರಿದ ಬೈಕ್ ಸವಾರ ನಂತರ ಕಂಡಿಲ್ಲ.
ಈ ಘಟನೆಯ ಬಗ್ಗೆಯೂ ಪೊಲೀಸರಿಗೆ ತಿಳಿಸಲಾಗಿದೆ ಎನ್ನುತ್ತಾರೆ ಭಾದಿತರು ಈ ಎರಡೂ ಘಟನೆಗಳ ಸಾರಾಂಶವೆಂದರೆ…… ಶಿರಸಿ-ಸಿದ್ಧಾಪುರ ಮಾರ್ಗದಲ್ಲಿ ರಾತ್ರಿ ವೇಳೆ ವಾಹನ ಸವಾರರನ್ನು ಬೆನ್ನಟ್ಟುವ ಮುಸುಕುಧಾರಿ ದ್ವಿಚಕ್ರವಾಹನ ಸವಾರರು ಏನೋ ಸಂಚು ನಡೆಸುತ್ತಿರುವುದಂತೂ ಖಾತ್ರಿ.
ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಿದವರು, ಗೋವಾಕ್ಕೆ ತೆರಳಿ ತಡರಾತ್ರಿ ಮರಳುವ ಸಿದ್ದಾಪುರ, ಸಾಗರ ಸೇರಿದ ಅನೇಕ ಪ್ರವಾಸಿಗಳು ಹೀಗೆ ಈ ಮಾರ್ಗದಲ್ಲಿ ರಾತ್ರಿ ವೇಳೆ ಖಾಸಗಿ ಲಘುವಾಹನಗಳಲ್ಲಿ ಹೋಗುವವರು ತಡರಾತ್ರಿ ಮುಸುಕುಧಾರಿ ಬೈಕ್ ಸವಾರರಿಗೆ ಎದುರಾಗುತ್ತಿರುವ ಸಂಗತಿ ಸಿದ್ದಾಪುರದಲ್ಲಿ ಚರ್ಚೆಯಾಗಿ ಪೊಲೀಸ್ ಠಾಣೆ ತಲುಪಿದೆ. ಪೊಲೀಸರು ಈ ಘಟನೆಗಳ ಆಧಾರದಲ್ಲಿ ಗಸ್ತು ಪ್ರಾರಂಭಿಸಿದ್ದಾರೆ ಎನ್ನುವ ಸುದ್ದಿಯಿದೆ.
ಶಾಂತ ಜಿಲ್ಲೆ, ಸುಸಂಸ್ಕøತರ ತಾಲೂಕುಗಳೆಂಬ ಹೆಗ್ಗಳಿಕೆ ಇರುವ ಶಿರಸಿ-ಸಿದ್ಧಾಪುರ ರಸ್ತೆಗಳಲ್ಲಿ ಇಂಥ ಘಟನೆಗಳಾಗಿರುವುದು ಪೊಲೀಸರನ್ನು ಎಚ್ಚರಿಸಿದಂತಾಗಿದೆ.
ತಡರಾತ್ರಿ ವಾಹನ ಸವಾರಿ ಮಾಡುವವರು, ಅಪರಾಧ ನಿಯಂತ್ರಿಸಬೇಕಾದ ಸ್ಥಳಿಯ ಪೊಲೀಸರು ಈಗ ಈ ಘಟನೆಗಳಿಂದಾಗಿ ಹುಲಿ ಸವಾರಿ ಮಾಡುವಂತಾಗಿರುವ ಅನುಭವಕ್ಕೆ ತುತ್ತಾಗುತ್ತಿರುವುದು ಈ ವಾರದ ಹೊಚ್ಚ ಹೊಸ ಸುದ್ದಿಯಂತೂ ಅಲ್ಲ.!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *