ತೈವಾನ್ ದೇಶದ ಕೊರೊನಾ ಚಮತ್ಕಾರ!

ಚೀನಾದ ಪಕ್ಕದಲ್ಲೇ ಇರುವ ಪುಟ್ಟ ದ್ವೀಪದೇಶ ತೈವಾನ್. ಕೊರೊನಾ ದಾಳಿಯಿಂದ ತತ್ತರಿಸಿ ಹೋಗಬೇಕಿತ್ತು. ಏಕೆಂದರೆ ಸುಮಾರು ಹದಿಮೂರು ಲಕ್ಷ ಮಂದಿ ತೈವಾನೀಯರು ಚೀನಾದೊಂದಿಗೆ ನಿತ್ಯ ಸಂಪರ್ಕ ಇಟ್ಟುಕೊಂಡಿದ್ದಾರೆ. ದಿನವೂ ವುಹಾನ್ ಜೊತೆ ನೇರ ವಿಮಾನಗಳ ಸಂಚಾರವಿದೆ. (2019ರಲ್ಲಿ 27 ಲಕ್ಷ ಜನರು ಚೀನಾಕ್ಕೆ ಹೋಗಿ ಬಂದಿದ್ದಾರೆ.) ಆದರೆ ಅಚ್ಚರಿ ನೋಡಿ: ಅಲ್ಲಿ ಕೇವಲ 395 ಜನರಲ್ಲಿ ರೋಗಲಕ್ಷಣ ಕಂಡಿದೆ. 155 ಜನರು ಗುಣಮುಖರಾಗಿದ್ದಾರೆ. 6 ಜನ ಮಾತ್ರ ಸಾವಪ್ಪಿದ್ದಾರೆ. ಹಾಗೆಂದು ಅಲ್ಲಿನ ಪ್ರಜೆಗಳ ಮೇಲೆ ತುರ್ತುಸ್ಥಿತಿಯನ್ನು ಹೇರಿಲ್ಲ. ಯಾವ ಊರನ್ನೂ ಲಾಕ್‌ಡೌನ್ ಮಾಡಲಿಲ್ಲ. ಮನೆಮನೆಗೆ ಹೊಕ್ಕು ಟೆಸ್ಟಿಂಗ್ ಮಾಡಿಲ್ಲ. ಪೊಲೀಸರ ದಬ್ಬಾಳಿಕೆ ಇಲ್ಲ (ಅಲ್ಲಿ ಮಿಲಿಟರಿ ಆಡಳಿತವಿಲ್ಲ, ಪ್ರಜಾಪ್ರಭುತ್ವ ಇದೆ). ವಲಸೆ ಹೊರಟವರ ಗೋಳಿನ ಕತೆಗಳಿಲ್ಲ.

ಜಗತ್ತಿನ ಇತರೆಲ್ಲ ದೇಶಗಳಿಗೆ ಮಾದರಿಯಾಗುವಂಥ ಅದೇನು ಮ್ಯಾಜಿಕ್ ಅಲ್ಲಿ ನಡೆದಿದೆ ಗೊತ್ತೆ?

  1. ಕೊರೊನಾದ ಹೊಸ ಅವತಾರ ತಲೆ ಎತ್ತಿದೆ ಎಂಬುದು ಗೊತ್ತಾದ ತಕ್ಷಣವೇ ಜನವರಿಯಲ್ಲೇ ತೈವಾನ್ ವಿಶೇಷ ನಿಗಾ ದಳವನ್ನು ಸೃಷ್ಟಿಸಿ, ಬಿಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತು. ಅಲ್ಲಿಂದ ಬರುವ ವಿಮಾನಗಳಲ್ಲಿ ಜ್ವರ ಪೀಡಿತರ ತಪಾಸಣೆಯನ್ನು ಆರಂಭಿಸಿತು. ವಿಮಾನ ನೆಲಕ್ಕಿಳಿಯುವ ಮೊದಲೇ ತಪಾಸಣೆ ನಡೆದಿದ್ದರಿಂದ ಉದ್ದುದ್ದ ಕ್ಯೂ ಇರಲಿಲ್ಲ.
  2. ಫೆಬ್ರುವರಿ 10ರ ವೇಳೆಗೆ ಚೀನಾದಲ್ಲಿ 30 ಸಾವಿರ ಮಂದಿ ಕಾಯಿಲೆ ಬಿದ್ದಾಗ ತೈವಾನ್ನಲ್ಲಿ ಕೇವಲ 16 ರೋಗಿಗಳು ಪತ್ತೆ ಆಗಿದ್ದೇ ತಡ, ಚೀನಾದಿಂದ ಬರುವ ಎಲ್ಲ ಉಡ್ಡಾಣಗಳನ್ನೂ ಸ್ಥಗಿತಗೊಳಿಸಿ, ಹಾಂಗ್‌ಕಾಂಗ್ ಮೂಲಕ ಬರುವವರ ಪರೀಕ್ಷೆಯನ್ನು ವಿಮಾನದಲ್ಲೇ ನಡೆಸತೊಡಗಿತು. ತನ್ನ ದ್ವೀಪದ ಸುತ್ತ ಲಕ್ಷ್ಮಣ ರೇಖೆಯನ್ನು ಎಳೆಯಿತು.
  3. ಮುಖವಾಡಗಳ ರಫ್ತನ್ನು ನಿಲ್ಲಿಸಿತು. ಉತ್ಪಾದನೆಯನ್ನು ಎಂಟು ಪಟ್ಟು ಹೆಚ್ಚಿಸಿತು. ಅವುಗಳ ತಯಾರಿಕೆಯನ್ನು ಮೊದಲು ಕೈದಿಗಳಿಗೆ (ಚಿತ್ರ 3- ಹೊಲಿಗೆ ಕೆಲಸದಲ್ಲಿ ನಿರತರಾದ ಕೈದಿಗಳದ್ದು), ಆನಂತರ ಮಿಲಿಟರಿಗೇ ಒಪ್ಪಿಸಿತು. ಪ್ರತಿಯೊಬ್ಬ ಪ್ರಜೆಗೂ ವಾರಕ್ಕೆ ಮೂರುನಾಲ್ಕು ಮುಖವಾಡಗಳ ವ್ಯವಸ್ಥೆ ಮಾಡಿತು. ಅದು ಎಲ್ಲಿ ಸಿಗುತ್ತದೆ ಎಂಬುದನ್ನು ಅವರವರ ಮೊಬೈಲ್‌ನಲ್ಲೇ ಮಾಹಿತಿ ಸಿಗುವಂತೆ ಮಾಡಿತು.
  4. ಕೊರೊನಾ ಪೀಡಿತರನ್ನು ವೈರಸ್ ಥರಾ ಪರಿಗಣಿಸದೆ ಅವರನ್ನು ಪ್ರಜೆಗಳಂತೇ ನೋಡಿಕೊಂಡಿತು. ಅವರಿಗೆ ಅತ್ಯುತ್ತಮ ಕ್ವಾರಂಟೈನ್ ವ್ಯವಸ್ಥೆಯನ್ನು ಕಲ್ಪಿಸಿತು. ಅವರ ನಿವಾಸಕ್ಕೆ ಅನ್ನಾಹಾರ ಹಾಗೂ ಅಗತ್ಯ ವಸ್ತುಗಳ ಕೊರತೆ ಆಗದಂತೆ ನೋಡಿಕೊಂಡಿತು. ಪುಸ್ತಕಗಳನ್ನೂ ಒದಗಿಸಿತು. ದಿನಭತ್ಯೆಯನ್ನೂ ಘೋಷಿಸಿತು. ಜನರು ತಾವಾಗಿ ಖುಷಿಯಿಂದ ಕ್ವಾರಂಟೈನ್ಗೆ ಒಳಪಡುವಂತೆ ಮನವೊಲಿಸಿತು. ಅವರ ಫೋನ್ನಂಬರನ್ನು ಪಡೆದು ಅದರಲ್ಲಿ ವಿಶೇಷ ಆಪ್ ಹಾಕಿತು. ಮನೆಬಿಟ್ಟು ಆಚೆ ಹೋದರೆ ಅವರ ಬ್ಯಾಂಕ್ ಖಾತೆಯಿಂದ ದೊಡ್ಡ ಮೊತ್ತದ ದಂಡ ವಜಾ ಆಗುತ್ತದೆಂದು ಟಿವಿ ಮೂಲಕ ಪ್ರಚಾರ ಕೊಟ್ಟಿತು. ಕಾಯಿಲೆ ಉಲ್ಪಣಗೊಂಡರೆ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿತು.
  5. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುವದಂತಿಗಳನ್ನು ಪತ್ತೆ ಹಚ್ಚಬಲ್ಲ ವಿಶೇಷ ಅಲ್ಗೊರಿದಮ್ಮನ್ನು ಅದು ಸೃಷ್ಟಿಸಿತು. ಅದು ಚೀನಾದಿಂದ ಬರುವ ಸುಳ್ಳುಸುದ್ದಿಗಳನ್ನು ಫಿಲ್ಟರ್ ಮಾಡತೊಡಗಿತು. ದೇಶದೊಳಕ್ಕೆ ಬರುವ ಎಲ್ಲರ ಡೇಟಾಗಳನ್ನು ವಿಮಾ ಕಂಪನಿಗಳಿಂದ ತರಿಸಿಕೊಂಡು, ಅದನ್ನು ವೀಸಾ ವಿಭಾಗದ ಡೇಟಾ ಜೊತೆ ಜೋಡಿಸಿ, ಜ್ವರಪೀಡಿತರ ಕುರಿತ ಮಾಹಿತಿ ಎಲ್ಲ ಆಸ್ಪತ್ರೆ, ಔಷಧಾಲಯಗಳಿಗೂ ಮುಂಚಿತವಾಗಿಯೇ ಲಭಿಸುವಂತೆ ನೋಡಿಕೊಂಡಿತು.
  • ಇತರ ಕೆಲವು ಮಹತ್ವದ ಮಾಹಿತಿಗಳು: ತೈವಾನ್ ದೇಶದ ಅಧ್ಯಕ್ಷರು ವಿಶ್ವವಿಖ್ಯಾತ ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದ ಅರ್ಥತಜ್ಞ. ಉಪಾಧ್ಯಕ್ಷರು ಸ್ವತಃ ಎಪಿಡೀಮಿಯಾಲಜಿ ಡಾಕ್ಟರು- ಅಂದರೆ ಸಾಂಕ್ರಾಮಿಕ ರೋಗತಜ್ಞ. ಅಲ್ಲಿ ಕೊರೊನಾ ಸಂದರ್ಭದ ಅವರ TTT ಘೋಷವಾಕ್ಯ ಏನೆಂದರೆ ಟ್ರಸ್ಟ್, ಟ್ರಾನ್ಸಪರೆನ್ಸಿ ಮತ್ತು ಟೆಕ್ನಾಲಜಿ. ಜನರೊಂದಿಗಿನ ವಿಶ್ವಾಸ, ಪಾರದರ್ಶಕತೆ ಮತ್ತು ತಂತ್ರಜ್ಞಾನ. ಅಲ್ಲಿ ಕೇವಲ 20 ನಿಮಿಷಗಳಲ್ಲಿ ಕೋವಿಡ್ ಟೆಸ್ಟ್ ಫಲಿತಾಂಶ ಬರುವಂಥ ವೈದ್ಯಕೀಯ ವಿಧಾನ ಚಾಲ್ತಿಗೆ ಬಂದಿದೆ (ನಮ್ಮಲ್ಲಿ ಫಲಿತಾಂಶ ಬರಲು 6 ಗಂಟೆಯಿಂದ 24 ಗಂಟೆ ಬೇಕು).

*ತೈವಾನ್ ಜನಸಂಖ್ಯೆ 238 ಲಕ್ಷ ನಿಜ. ಆದರೆ ವುಹಾನ್‌ನಿಂದ ಕೇವಲ 943 ಕಿ.ಮೀ. ದೂರದಲ್ಲಿದೆ. ಅದಕ್ಕೆ ಹೋಲಿಸಿದರೆ ವುಹಾನ್ನಿಂದ 7500 ಕಿ.ಮೀ. ದೂರದ, ಕೇವಲ 192 ಲಕ್ಷ ಜನರಿರುವ ರುಮೇನಿಯಾದಲ್ಲಿ 7700 ರೋಗಿಗಳಿದ್ದು 392 ಮೃತರಾಗಿದ್ದಾರೆ. ಸುಮಾರು ಅಷ್ಟೇ ದೂರದಲ್ಲಿರುವ ಇನ್ನೂ ಕಡಿಮೆ ಜನಸಂಖ್ಯೆಯ ಕತಾರ್ ದೇಶದಲ್ಲಿ 4103 ರೋಗಿಗಳಿದ್ದಾರೆ, 7 ಮಂದಿ ಗತಿಸಿದ್ದಾರೆ. ಸುಮಾರು ಅಷ್ಟೇ ದೂರದಲ್ಲಿರುವ ಬಹ್ರೇನ್ ದೇಶದಲ್ಲೂ 1703 ರೋಗಿಗಳಿದ್ದು 7 ಮಂದಿ ಗತಿಸಿದ್ದಾರೆ. ಕೊನೆಯ ಈ ಎರಡೂ ದೇಶಗಳು ಭಾರೀ ತೈಲಧನಿಕ ಅಷ್ಟೇ ಅಲ್ಲ, ಮುನ್ನೆಚ್ಚರಿಕೆಗೆ ಅವಕ್ಕೆ ಮೂರು ತಿಂಗಳು ಕಾಲಾವಧಿ ಇತ್ತು.

ಕೊನೆಯ ಕುಟುಕು: ವುಹಾನ್ ಮಹಾಮಾರಿಯ ಅಲೆ ದಶದಿಕ್ಕುಗಳಲ್ಲಿ ಹಬ್ಬುತ್ತಿದ್ದಾಗ, ಎಲ್ಲ ಬಿಬಿಸಿ-ಸಿಎನ್ನೆನ್ಗಳಲ್ಲಿ ಅದರದೇ ಪ್ರಮುಖ ಸುದ್ದಿ ಬರುತ್ತಿದ್ದಾಗ ನಮ್ಮ ಮಾಧ್ಯಮಗಳ ಗಮನವೆಲ್ಲ ಕಮಲನಾಥ್ ಸರಕಾರವನ್ನು ಕೆಡವುವ ಕಮಲದ ಸರ್ಕಸ್ ಕಡೆ, ಹಾಗೂ ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಟ್ರಂಪ್ ಮಹಾಶಯನ ಟ್ರಂಪೆಟ್‌ ಕಡೆ ನೆಟ್ಟಿತ್ತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *