ಕಾಗೋಡು_ಚಳವಳಿ @69

ಗೇಣಿ_ಪದ್ಧತಿ ಎಂಬ ಹೇಯ ಮತ್ತು ಅಮಾನವೀಯ ಜಮೀನ್ದಾರಿ ಶೋಷಕ ವ್ಯವಸ್ಥೆಯನ್ನು ವಿರೋಧಿಸಿ ನಿರಕ್ಷರಕುಕ್ಷಿ ಬಡ ಗೇಣಿದಾರ ರೈತರನ್ನು ಸಂಘಟಿಸಿ ಸ್ವತಂತ್ರ ಭಾರತದ ಮೊಟ್ಟಮೊದಲ ರೈತ ಕ್ರಾಂತಿಗೆ ನಾಂದಿ ಹಾಡಿದ ಹೋರಾಟಗಾರ ಇವರು.#ಎಚ್_ಗಣಪತಿಯಪ್ಪ, ಗಾಡಿ ಗಣಪತಿಯಪ್ಪ ಎಂದೇ ಹೆಸರಾದ ಈ ಮಹಾನ್ ಬಂಡಾಯಗಾರನ ಮಹತ್ವ ಕೇವಲ #ಕಾಗೋಡು_ಚಳವಳಿಯ ಕಟ್ಟಿದ್ದಷ್ಟೇ ಅಲ್ಲ; 1969ರಲ್ಲಿ ಇಂಥಹದ್ದೆ ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಹಿಂಸಾ ಕ್ರಾಂತಿಗೆ ಕಾರಣವಾದ ಪಶ್ಚಿಮಬಂಗಾಳದ #ನಕ್ಸಲ್ಬಾರಿ_ಚಳವಳಿಗೆ ಸುಮಾರು ಎರಡು ದಶಕ ಮುನ್ನವೇ(1951) ಭೂಮಾಲೀಕರ ಅಟ್ಟಹಾಸದ ಹಿಂಸಾ ದಬ್ಬಾಳಿಕೆಯ ನಡುವೆಯೂ ರಕ್ತರಹಿತ, ಹಿಂಸೆರಹಿತ ಚಳವಳಿಯಾಗಿ #ಕಾಗೋಡು_ಚಳವಳಿ ಕಟ್ಟಿದ್ದು ನಿಜವಾದ ಹೆಗ್ಗಳಿಕೆ.

ಅವರ ಆ ಅಹಿಂಸಾ ಚಳವಳಿಗೆ #ಸಮಾಜವಾದಿ_ಹೋರಾಟ ಮತ್ತು ಅದರ ಮುಂಚೂಣಿಯಲ್ಲಿದ್ದ #ಶಾಂತವೇರಿ_ಗೋಪಾಲಗೌಡರು, ಜಿ ಆರ್ ಜಿ ನಗರ್ ಕರ್ ಅವರಂಥ ಸ್ಥಳೀಯ ನಾಯಕರು ಮತ್ತು #ಡಾ_ರಾಮಮನೋಹರ_ಲೋಹಿಯಾ ಅವರಂಥ ರಾಷ್ಟ್ರೀಯ ನಾಯಕರು ನೀಡಿದ ಸೈದ್ಧಾಂತಿಕ ಮತ್ತು ತಾತ್ವಿಕ ಚೌಕಟ್ಟು ಕೂಡ ದೊಡ್ಡದು.ಇವತ್ತು ಹೈಫೈ ಮೊಬೈಲ್ ಹಿಡಿದು ಶೋಷಕ ವ್ಯವಸ್ಥೆಯ ಪರ ಟ್ರೋಲ್ ಮಾಡುವ ಮಂದಿ, ಕೇವಲ ಏಳು ದಶಕದ ಹಿಂದೆ ಕಾಲಿಗೆ ಮೆಟ್ಟು ಹಾಕಲಾಗದ, ಮೊಣಕಾಲಿನ ಕೆಳಗೆ ಪಂಚೆ ಬಿಡಲಾಗದ, ಭೂ ಒಡೆಯರ ಮುಂದೆ ತಲೆ ಎತ್ತಿ, ಕೈಕಟ್ಟಿ ನಿಲ್ಲಲಾಗದ ತಮ್ಮ ಪೂರ್ವಜರ ಎದೆಯಲ್ಲಿ ಸ್ವಾಭಿಮಾನದ ಬೀಜ ನೆಟ್ಟ ಈ ಅಜ್ಜ ಮತ್ತು ಕಾಗೋಡು ಚಳವಳಿಯನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ..

ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ, ಆಸ್ತಿ ಹಕ್ಕು, ದುಡಿಮೆಯ ಹಕ್ಕುನಂತಹ ಸಂವಿಧಾನಿಕ, ಪ್ರಜಾಪ್ರಭುತ್ವದ ಆಶಯಗಳನ್ನು ಅದರ ನೈಜ ಸದಾಶಯದೊಂದಿಗೆ ಜಾರಿಗೆ ತಂದ ಗಣಪತಿಯಪ್ಪ, ಇಂದು ನಮ್ಮ ನಡುವೆ ಇಲ್ಲ, ಆದರೆ ಅವರ ಹೋರಾಟದ ಫಲವಾಗಿ ಸಿಕ್ಕ ಭೂಮಿ ಕೊಟ್ಟ ಆರ್ಥಿಕ, ಸಾಮಾಜಿಕ, ರಾಜಕೀಯ ಬಲ ಮತ್ತು ಸ್ವಾಭಿಮಾನ ನಮ್ಮ ಇಂದಿನ ನೆಮ್ಮದಿಯ(ಕೆಲವೊಮ್ಮೆ ಇತಿಹಾಸ ಮರೆಯುವ ಧಿಮಾಕಿನ) ಬದುಕಿಗೆ ಕಾರಣ ಎಂಬುದನ್ನು ಮರೆಯದಿರೋಣ.

#ಉಳುವವನೇ_ಹೊಲದೊಡೆಯ ಎಂಬ ಭೂಸುಧಾರಣಾ ಕಾನೂನು ಮೂಲಕ ರಾಜ್ಯವಷ್ಟೇ ಅಲ್ಲದೇ ದೇಶಾದ್ಯಂತ ದುಡಿಯುವ ರೈತನ ಬೆವರಿಗೆ ಭೂಮಿಯ ಒಡೆತನದ ಫಲಕೊಟ್ಟ #ಕಾಗೋಡು_ಚಳವಳಿ_ಚಿರಾಯುವಾಗಲಿ#ಪೂರ್ವಾಸೂರಿಗಳ_ಹೋರಾಟ_ತೆರೆಮರೆಗೆ_ಸರಿಯದಿರಲಿ

#ಶಶಿ_ಸಂಪಳ್ಳಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

ಯಾರಾಗ್ತಾರೆ…ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ?

ಉತ್ತರಕನ್ನಡಜಿಲ್ಲೆಯ೧೩ ಬ್ಲಾಕ್ಕಾಂಗ್ರೆಸ್ ಗಳ ವೇಟ್ ಒಂದಾದರೆ ಸಿದ್ದಾಪುರದ ತಾಲೂಕಾ ಕಾಂಗ್ರೆಸ್ ಬಲವೇ ಬೇರೆ . ಒಂದು ಕಾಲದಲ್ಲಿ ಬಂಗಾರಪ್ಪ ಒಲುವಿನಿಂದ ಇಡೀ ಜಿಲ್ಲೆ ಸಿದ್ದಾಪುರವನ್ನು...

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ ಒಬ್ಬರೇ ಶಾಸಕರು’. ಆದರೆ ಹೈಕಮಾಂಡ್ ಸೂತ್ರ ಮಾತ್ರ ಅತ್ತ ಶಿರಸಿಯಲ್ಲಿ ಬೆಂಕಿ ಹಚ್ಚಿದರೆ, ಇತ್ತ ಸಿದ್ದಾಪುರದಲ್ಲಿ ಅದೇ ಸೂತ್ರ ಸಾಹೇಬರಿಗೆ ಬಾಯಿಗೆ ಜಾರಿ ಬಿದ್ದ ತುಪ್ಪದಂತಾಗಿದೆ! ಬನ್ನಿ.. ಸಿದ್ದಾಪುರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *