

ಆರ್.ಕೆ.ನಾರಾಯಣ್ ರ ಮಾಲ್ಗುಡಿ ದಿನಗಳು ನನ್ನ ನೆಚ್ಚಿನ ಪುಸ್ತಕಗಳಲ್ಲೊಂದು ಅದರ ಒಂದು ಅಧ್ಯಾಯದಲ್ಲಿ ಸ್ವಾಮಿನಾಥನ್ ಎನ್ನುವ ವಿದ್ಯಾರ್ಥಿ ಶಾಲೆ ತಪ್ಪಿಸಿಕೊಳ್ಳಲು ತಲೆನೋವಿನ ಕಾರಣ ಕೊಟ್ಟು ಪ್ರಹಸನವೊಂದಕ್ಕೆ ಕಾರಣನಾಗುತ್ತಾನೆ.
ವಾಸ್ತವದಲ್ಲಿ ಆತನ ತಲೆನೋವಿನ ಕಾರಣ, ಅವರ ಶಿಕ್ಷಕಸಾಮ್ಯುಯೆಲ್ ಹೊಡೆಯುತ್ತಾರೆನ್ನುವ ದಂತಕತೆ ಇದರ ಸುತ್ತ ತಿರುಗಿ, ಮಗನ ಮಾತು, ಆರೋಪದಿಂದ ಕ್ಷುದ್ರನಾಗುವ ಅಪ್ಪ ಸ್ವಾಮಿಯ ಶಿಕ್ಷಕರ ವಿರುದ್ಧ ದೂರು ಬರೆಯುವುದು, ಅದನ್ನು ತೆಗೆದುಕೊಂಡು ಹೋದಾತ ಸ್ವಾಮಿ ತನ್ನ ಶಿಕ್ಷಕರನ್ನು ತನಗೆ ಹೊಡೆಯುವಂತೆ ಪ್ರೇಪಿಸುವುದು ನಂತರ ಸಾಮ್ಯುಯೆಲ್ ಈ ಸ್ವಾಮಿಯ ಕೀಟಲೆಗಳಿಂದ ಬೇಸತ್ತು ಹೊಡೆಯುವುದು, ನಂತರ ಸ್ವಾಮಿ ಅಪ್ಪ ಬರೆದುಕೊಟ್ಟ ದೂರನ್ನು ಪ್ರಾಂಶುಪಾಲರಿಗೆ ನೀಡಲು ಹೋಗುವುದು.

ಈ ಪ್ರಹಸನದುದ್ದಕ್ಕೂ ಅಪ್ಪ ಮಗ ಶಿಕ್ಷಕ ಸಾಮ್ಯುಯೆಲ್ ಪಡಬಹುದಾದ ಯಾತನೆ, ತೊಂದರೆಗಳ ಬಗ್ಗೆ ನಿರೀಕ್ಷಿಸುವುದು. ಕೊನೆಯಲ್ಲಿ ಪ್ರಾಂಶುಪಾಲರ ರಜೆಯಿಂದಾಗಿ ದೂರುಪತ್ರ ಕೊಡದ ಸ್ವಾಮಿ ಹೇಡಿಯೆನಿಸಿಕೊಂಡು ಆ ಪತ್ರವನ್ನು ಅಪ್ಪನೇ ಹರಿದು ಹಾಕುವ ಸಿಟ್ಟಿನ ಪ್ರಸಂಗ ಮಕ್ಕಳಿಗೆ, ಹಿರಿಯರಿಗೆ ವಿದ್ಯಾರ್ಥಿ ಶಿಕ್ಷಕರಿಗೆ ಪಾಠ, ಮಾರ್ಗದರ್ಶನದಂತಿದೆ. ವಿನೋದಕ್ಕೆಂದು ಮಾಲ್ಗುಡಿ ದಿನಗಳನ್ನು ಓದಿದರೂ ಈ ಕತೆಯ ನೀತಿ ನಮ್ಮನ್ನು ಮುಟ್ಟುತ್ತದೆ, ತಟ್ಟುತ್ತದೆ.
ಈ ಕತೆಯ್ಯಾಕೋ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ವಿರೋಧ ಹುಟ್ಟಿಸಲು ಪ್ರಯತ್ನಿಸಿ, ಕೊನೆಗೆ ಮುಸ್ಲೀಂರು ಸಿಟ್ಟಾಗಬೇಕೆಂದು ನಿರೂಪಿಸುವ ಮತೀಯವಾದಿಗಳ ನಿರೀಕ್ಷೆಯಂತೆ ಹೋಲಿಕೆಯಾಗುವಂತೆನಿಸಿತು. ಸ್ವಾಮಿ ತನ್ನ ಶಿಕ್ಷಕರು ತನಗೆ ಹೊಡೆಯುವಂತೆ ಉದ್ಧೀಪಿಸುವ, ಉತ್ತೇಜಿಸುವ ಕೆಲಸಕ್ಕೂ ಈಗಿನ ಆಡಳಿತ ಮುಸ್ಲಿಂರನ್ನು ಉತ್ತೇಜಿಸಿ, ಉದ್ದೀಪಿಸಿ ಸಿಡಿದೇಳುವಂತೆ, ಉತ್ತೇಜಿಸುವಂತೆ ಮಾಡುವ ಪ್ರಯತ್ನಗಳನ್ನು ನೆನಪಿಸಿತು. ತಂದೆಯವರ ಸಹಾಯ ಎನ್ನುವ ಈ ಮಾಲ್ಗುಡಿ ದಿನಗಳ ಅಧ್ಯಾಯ ಕೆಲವು ಕೆಡುಕರನ್ನಾದರೂ ಬದಲಿಸಬಹುದೇನೋ ಎನಿಸಿತು. ಸಾಹಿತ್ಯ ಇಷ್ಟನ್ನಾದರೂ ಮಾಡಬೇಕಲ್ಲವೆ?
-ಕನ್ನೇಶ್



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






