muttalli gouramma of haliyala-ಚಾರಿತ್ರಿಕ ಮಹತ್ವದ ಮುಠ್ಠಳ್ಳಿ ಗೌರಮ್ಮನ ಚೌತಿ ಮುಂದೂಡಿಕೆ

ಇಂದು ಅರಮನೆ ಗೌರಿ, ನಾಳೆ ಲೋಕಚೌತಿ ಅಥವಾ ಇಂದು ಹಿರಿಗೌರಿ, ನಾಳೆ ಕಿರಿಗೌರಿ ಹಬ್ಬ ಆಚರಿಸುವ ಮಲೆನಾಡಿನ ಗೌರಿ ಗಣೇಶ ಹಬ್ಬ ಇಂದಿನಿಂದಲೇ ಪ್ರಾರಂಭವಾಗಿದೆ.ಆದರೆ ನಾಳೆಯಿಂದ ಪ್ರಾರಂಭವಾಗುವ ಲೋಕಚೌತಿಯ ದಿನದಿಂದ ಪ್ರಾರಂಭವಾಗಬೇಕಿದ್ದ ಹಳಿಯಾಳದ ಮುಠ್ಠಳ್ಳಿ ಗೌರಮ್ಮನ ಹಬ್ಬ, ಪೂಜೆಯನ್ನು ಮುಂದೂಡಲಾಗಿದೆ.

ಪ್ರತಿವರ್ಷ ಅನ್ಯ ತಾಲೂಕು, ಜಿಲ್ಲೆ, ಪರ ಊರುಗಳಿಂದ ಸಿದ್ಧಾಪುರದಿಂದ 25 ಕಿ.ಮೀ ದೂರದ ಹಳಿಯಾಳದ ಮುಠ್ಠಳ್ಳಿ ಗೌರಮ್ಮನ ಪೂಜೆಗೆ ಸಹಸ್ರಾರು ಜನರು ಬರುತಿದ್ದರು. ಮಕ್ಕಳಾಗವರು, ಅನಾರೋಗ್ಯ ಉಂಟಾದವರು ತಾವು ಮುಠ್ಠಳ್ಳಿ ಗೌರಮ್ಮನಿಗೆ ಹರಕೆ ತೀರಿಸಿ, ಹಣ್ಣ-ಕಾಯಿ ನೈವೇದ್ಯ ಮಾಡಿಸಿ ಪ್ರಸಾದ ಪಡೆದು ತೆರಳುತಿದ್ದರು. ಬಿಳಗಿ ಅರಸರ ಕಾಲದಿಂದ ಪ್ರಾರಂಭವಾಗಿದ್ದ ಈ ಮುಠ್ಠಳ್ಳಿ ಗೌರಮ್ಮನ ಪೂಜೆ, ಚೌತಿ ಹಬ್ಬ ನೂರಾರು ವರ್ಷಗಳಿಂದ ಸಂಪ್ರದಾಯ, ಪರಂಪರೆ, ಸಾಂಸ್ಕೃತಿಕ ಆಚರಣೆಯಂತೆ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಮುಠ್ಠಳ್ಳಿಯಲ್ಲಿ ಅಮೇಯ ಻಻ಅಥವಾ ಸೂತಕ ಇರುವುದರಿಂದ ಈ ವರ್ಷದ ಲೋಕಚೌತಿಯ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

‘ಹಳಿಯಾಳದ ಮುಠ್ಠಳ್ಳಿ ಗೌರಮ್ಮನ ಚೌತಿ ಪೂಜೆ-ಹಬ್ಬ ಯಾವಾಗಲೂ ನಿಂತಿದ್ದು, ಮುಂದೂಡಿದ್ದೇ ಇಲ್ಲ. ಈ ವರ್ಷ ಅನಿವಾರ್ಯವಾಗಿ ಸೂತಕದ ಹಿನ್ನೆಲೆಯಲ್ಲಿ ಈ ಪೂಜೆ ಮುಂದೂಡಿದ್ದೇವೆ. ಮುಂದಿನ ತಿಂಗಳುಪೂಜೆ ಹಬ್ಬಾಚರಿಸುತ್ತೇವೆ ಆ ಸಮಯದಲ್ಲಿ ಭಕ್ತರಿಗೆ ಮುಕ್ತ ಻಻ಅವಕಾಶ ನೀಡಬೇಕೋ, ಬೇಡವೋ ಎನ್ನುವ ತೀರ್ಮಾನವಾಗಿಲ್ಲ. ಕರೋನಾ ಹಿನ್ನೆಲೆಯಲ್ಲಿ ನಿಯಮ, ಸರ್ಕಾರದ ಆದೇಶ, ಅನುಮತಿ ಅವಲಂಬಿಸಿ ಮುಂದೆ ಪ್ರಕಟಣೆ ನೀಡುತ್ತೇವೆ ಎಂದು ಜಿ.ಟಿ.ನಾಯ್ಕ ಹಳಿಯಾಳ ತಿಳಿಸಿದ್ದಾರೆ. ಕರೋನಾ ಹಿನ್ನೆಲೆಯಲ್ಲಿ ಈ ವರ್ಷದ ಗೌರಿ ಗಣೇಶ ಹಬ್ಬದ ಸಂಬ್ರಮ ಕುಗ್ಗಿದೆ. ಮುಠ್ಠಳ್ಳಿ ಗೌರಮ್ಮನ ಹಬ್ಬ,ಪೂಜೆ ನಿಂತಿರುವುದರಿಂದ ಮುಠ್ಠಳ್ಳಿ ಗೌರಮ್ಮನ ಒಕ್ಕಲು ಅಥವಾ ಕುಳಾವಿಗಳು ಈ ವರ್ಷ ಚೌತಿ ಖುಷಿಯನ್ನೂ ಮುಂದೂಡಬೇಕಾದ ಻ಅನಿವಾರ್ಯತೆ ಎದುರಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *