

5 ಕಿ.ಮೀ. ಬೈಕ್‍ರ್ಯಾಲಿ, ಪಾದಯಾತ್ರೆ ಮೂಲಕ ಪ್ರತಿಭಟನೆ
ಉ.ಕ.ಜನವಸತಿಪ್ರದೇಶಗಳನ್ನುಒಂದುತಿಂಗಳೊಳಗೆ ಶರಾವತಿ ಅಭಯಾರಣ್ಯವ್ಯಾಪ್ತಿಯಿಂದ ಕೈಬಿಡದಿದ್ದರೆ ಪ್ರತಿಭಟನೆ & ನ್ಯಾಯಾಂಗ ಹೋರಾಟಕ್ಕೆ ತೀರ್ಮಾನ
ಉತ್ತರ ಕನ್ನಡ ಜಿಲ್ಲೆಯ ಜನವಸತಿ ಪ್ರದೇಶಗಳನ್ನು ಶಿವಮೊಗ್ಗ ಶರಾವತಿ ಅಭಯಾರಣ್ಯದ ವ್ಯಾಪ್ತಿಗೆ ತಂದ ಸರ್ಕಾರದ ಕ್ರಮದ ವಿರುದ್ಧ ಜನಪ್ರತಿನಿಧಿಗಳು ತುಟಿಬಿಚ್ಚದಿರುವುದು ಅವರ ಬದ್ಧತೆ,ಅಭಿರುಚಿಯ ಧ್ಯೋತಕ ಎಂದಿರುವ ಜಿಲ್ಲಾ ಅರಣ್ಯಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ಒಂದು ತಿಂಗಳೊಳಗಾಗಿ ಸ್ಥಳಿಯ ಶಾಸಕರು ಮತ್ತು ಸಂಸದರು ಈ ಬಗ್ಗೆ ಸದನಗಳಲ್ಲಿ ಪ್ರಸ್ಥಾಪಿಸಿ,ನ್ಯಾಯ ದೊರಕಿಸಲು ಪ್ರಯತ್ನಿಸದಿದ್ದರೆ ಉಗ್ರಹೋರಾಟ ಮತ್ತು ನ್ಯಾಯಾಂಗದ ಮೂಲಕ ಸ್ಥಳಿಯರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.
ಇಂದು ತಾಲೂಕಿನ ತಂಡಾಗುಂಡಿ ಗ್ರಾಮಪಂಚಾಯತ್ ಕುಳ್ಳೆಯಲ್ಲಿ ಅಭಯಾರಣ್ಯ ವಿರೋಧಿ ಹೋರಾಟ ಸಮೀತಿ ಸಭೆ ಮತ್ತು ಪ್ರತಿಭಟನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ
ಅರಣ್ಯವಾಸಿಗಳು ಸರ್ಕಾರದ ಕಾನೂನು ರೀತಿಗಳಿಂದ ಬೇಸತ್ತು ಗಾಯಗೊಂಡಿದ್ದಾರೆ.ಈ ಸಮಯದಲ್ಲಿ ಅರಣ್ಯಭೂಮಿ ಸಾಗುವಳಿದಾರರ ಪರ ಇರಬೇಕಾದ ಪ್ರಭುತ್ವ ಮತ್ತೆ ಅಭಯಾರಣ್ಯಕ್ಕೆ ಜಿಲ್ಲೆಯ ಜನವಸತಿ ಪ್ರದೇಶಗಳನ್ನು ಸೇರಿಸುವ ಮೂಲಕ ಉಪ್ಪು ಸವರುತ್ತಿದೆ.
ಜಿಲ್ಲೆಯ 85757 ಅರಣ್ಯಭೂಮಿ ಸಾಗುವಳಿದಾರರ ಅರ್ಜಿಗಳಲ್ಲಿ ಅವೈಜ್ಞಾನಿಕ ಮತ್ತು ಕಾನೂನುಬಾಹೀರವಾಗಿ 74220 ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಈಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಪ್ರಶ್ನಿಸಿಲ್ಲ, ಹಾಗಾಗಿ ನಾವು ಈ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಿ ಅರಣ್ಯ ಹಕ್ಕು ಸಾಗುವಳಿದಾರರ ತಿರಸ್ಕೃತವಾದ ಅರ್ಜಿಗಳ ಆಧಾರದಲ್ಲಿ ಅರಣ್ಯತಿಕ್ರಮಣದಾರರನ್ನು ಒಕ್ಕಲೆಬ್ಬಿಸಬಾರದು ಎಂದು ತಡೆಯಾಜ್ಞೆ ತಂದಿದ್ದೇವೆ.
ಜನಪ್ರತಿನಿಧಿಗಳು ರಾಜ್ಯದ ಮುಖ್ಯಮಂತ್ರಿಗಳು ಅರಣ್ಯ ಅತಿಕ್ರಮಣದಾರರ ಪರವಾಗಿಯೂ ಸದನದಲ್ಲಿ ಮಾತನಾಡುವುದಿಲ್ಲ ಅಭಯಾರಣ್ಯ ವ್ಯಾಪ್ತಿಗೆ ಜಿಲ್ಲೆಯ ಜನವಸತಿಪ್ರದೇಶಗಳನ್ನು ಸೇರಿಸಿದಾಗಲೂ ತುಟಿಬಿಚ್ಚುವುದಿಲ್ಲ ಇಂಥ ಕರ್ತವ್ಯ ನಿರ್ವಹಣೆ, ಜನಪರತೆಯಿಲ್ಲದ ಜನಪ್ರತಿನಿಧಿಗಳು, ಸರ್ಕಾರ ಜನರು, ಮನುಷ್ಯರಿಗಿಂತ ವನ್ಯಪ್ರಾಣಿಗಳ ರಕ್ಷಣೆಗೆ ಆದ್ಯತೆ ನೀಡುತಿದ್ದಾರೆ ಇದರಿಂದ ಮನುಷ್ಯ ವನ್ಯಜೀವಿಗಳ ನಡುವೆ ಸಂಘರ್ಷ ಏರ್ಪಟ್ಟು ಅಶಾಂತಿಗೆ ಕಾರಣವಾಗುವ ಬಗ್ಗೆ ಯೋಚಿಸದಿದ್ದರೆ ಅಪಾಯವಿದೆ ಎಂದು ಎಚ್ಚರಿಸಿದರು.
ಈ ಸಭಾಕಾರ್ಯಕ್ರಮದ ಮೊದಲುಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ಸಮೀತಿಯ ನೇತೃತ್ವದಲ್ಲಿ ಹೆಗ್ಗರಣೆಯಿಂದ ಕುಳ್ಳೆವರೆಗೆ 5 ಕಿ.ಮೀ. ಪಾದಯಾತ್ರೆ ಮತ್ತು ಬೈಕ್ ರ್ಯಾಲಿ ನಡೆಯಿತು. ಈ ರ್ಯಾಲಿ ಮತ್ತು ಸಭಾ ಕಾರ್ಯಕ್ರಮದ ಪ್ರಮುಖರ ಭಾಷಣದ ಮುಖ್ಯಾಂಶಗಳು ಹೀಗಿವೆ-
ವಿಧಾನಸಭಾ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಸದನದಲ್ಲಿ ಅಭಯಾರಣ್ಯಕ್ಕೆ ಸೇರಿಸಿದ ಉತ್ತರಕನ್ನಡ ಜಿಲ್ಲೆಯ ಜನವಸತಿಪ್ರದೇಶಗಳನ್ನು ಹೊರಗಿಡಲು ಪ್ರಯತ್ನಿಸಬೇಕು. ಈ ಬಗ್ಗೆ ಗ್ರಾಮ ಪಂಚಾಯತ್ ಗಳು, ತಾಲೂಕಾ ಪಂಚಾಯತ್ ಗಳು, ಜಿಲ್ಲಾ ಪಂಚಾಯತ್ ಠರಾವು ಮಾಡಬೇಕು. ತಂಡಾಗುಂಡಿಪಂಚಾಯತ್ ಮತ್ತು ಹೆಗ್ಗರಣೆ ಗ್ರಾಮ ಪಂಚಾಯತ್ ಗಳು ಈ ಬಗ್ಗೆ ಠರಾವು ಮಾಡಿವೆ. ಅಲ್ಲಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಅಭಿನಂದನೆ -ಎ.ರವೀಂದ್ರ
ನಾವು ಕೃಷಿಕರು ಆದರೆ ಅರಣ್ಯಭೂಮಿ ಸಾಗುವಳಿ ಹಕ್ಕು ನಮಗಿಲ್ಲ. ವ್ಯವಸಾಯಮಾಡಿಯೂ ಕೃಷಿ ಅನುಕೂಲ,ಸರ್ಕಾರದ ಸೌಲಭ್ಯ ನಮಗಿಲ್ಲ. ಈ ಸ್ಥಿತಿಯಲ್ಲಿ ಅರಣ್ಯ ಇಲಾಖೆ ಬಡವರಿಗೆ ಎಲ್ಲದೂ ಅಕ್ರಮ, ಶ್ರೀಮಂತರಿಗೆ ಎಲ್ಲವೂ ಸಕ್ರಮ ಎನ್ನುವ ದ್ವಂದ್ವ ನೀತಿ ಅನುಸರಿಸುತ್ತಿದೆ. ಅರಣ್ಯ ಇಲಾಖೆಯ ದೌರ್ಜನ್ಯದಿಂದಲೂ ನಾವು ಬೇಸತ್ತಿದ್ದೇವೆ
-ಈಶ್ವರ ಗೌಡ ಕುಳ್ಳೆ
ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಅನುಮಾನ ಬರುತ್ತಿದೆ. ತೋಟ, ಬೆಟ್ಟ ಸಾಕುವ ರೈತರೇ ಅರಣ್ಯನಾಶಕ್ಕೆ ಕಾರಣ ಎನ್ನುವ ಮನೋಭಾವ ಅರಣ್ಯ ಇಲಾಖೆಯದ್ದು, ರವೀಂದ್ರನಾಯ್ಕರ ಹೋರಾಟದಿಂದ ಅರಣ್ಯ ಇಲಾಖೆಯ 50% ದೌರ್ಜನ್ಯ ಕಡಿಮೆಯಾಗಿದೆ.
-ಎಂ.ಎಲ್.ಭಟ್ ಉಂಚಳ್ಳಿ
ಅರಣ್ಯ ಇಲಾಖೆಯ ಕಾನೂನು,ಆದೇಶಗಳಿಗೆ ನಾವು ಸಹಕರಿಸುತ್ತಿರುವುದರಿಂದ ಇಲಾಖೆಯ ಅಧಿಕಾರಿಗಳು ನಮ್ಮ ಮೇಲೆ ದಬ್ಬಾಳಿಕೆ ಮಾಡುತಿದ್ದಾರೆ.ಈ ಸ್ಥಿತಿ ಮುಂದುವರಿದರೆ ಅರಣ್ಯ ಇಲಾಖೆಯ ಸಿಬ್ಬಂಧಿಗಳಿಗೆ ದಿಗ್ಬಂಧನ ಹಾಕಬೇಕಾಗುತ್ತದೆ. ಅನಿವಾರ್ಯವಾದರೆ ಹೊಡೆತಹಾಕಲೂ ಹಿಂಜರಿಯಲ್ಲ. -ಸೀತಾರಾಮ ಗೌಡ
ಸರ್ಕಾರದಿಂದಲೇ ದೌರ್ಜನ್ಯ, ಶೋಷಣೆ ನಡೆಯುತ್ತಿದೆ. ಇದರ ವಿರುದ್ಧ ಪ್ರತಿಭಟನೆ ಅನಿವಾರ್ಯ, ನಾವು ಅಭಯಾರಣ್ಯಕ್ಕೆ ಜನವಸತಿಪ್ರದೇಶಗಳ ಸೇರ್ಪಡೆ ಮತ್ತು ನದಿತಿರುವು ಯೋಜನೆಗಳಿಗೆ ವಿರುದ್ಧವಾಗಿ ಠರಾವು ಮಾಡಿದ್ದೇವೆ.
-ಸುಮನಾ ಹೆಗಡೆ
ಉ.ಕ.ಜಿಲ್ಲೆಯ ಜನರ ಬುದ್ಧಿವಂತಿಕೆ,ತಾಳ್ಮೆಗಳ ಪರೀಕ್ಷೆ ನಡೆಯುತ್ತಿದೆ. ಇಂಥ ಜನಪರ ಹೋರಾಟಕ್ಕೆ ಜಮೀನುಹೊಂದಿರುವ ಜನರು ಭೂಮಾಲಿಕರೂ ಕೈ ಜೋಡಿಸಬೇಕು.

- ಮಹೇಶ್ ಗೌಡ
ಅರಣ್ಯಭೂಮಿಸಾಗುವಳಿದಾರರು ಮೂರುತಲೆಮಾರಿನ ವೈಯಕ್ತಿಕ ದಾಖಲೆ ಸಲ್ಲಿಸಬೇಕೆಂಬ ನಿಯಮ ಅಧಿಸೂಚನೆಯಲ್ಲಿಲ್ಲ. ಅಭಯಾರಣ್ಯಕ್ಕೆ ಜನವಸತಿ ಪ್ರದೇಶ ಸೇರ್ಪಡೆ ಅವೈಜ್ಞಾನಿಕ ಮತ್ತು ಕಾನೂನುಬಾಹೀರ. ಈ ಬಗ್ಗೆ ಯಾವ ಜನಪ್ರತಿನಿಧಿಯೂ ಸದನದ ಒಳಗೆ, ಹೊರಗೆ ಎಲ್ಲೂ ಮಾತನಾಡಿಲ್ಲ. ಅಭಯಾರಣ್ಯದ ಬಗ್ಗೆ ಸ್ವರ್ಣವಲ್ಲೀ ಶ್ರೀ ಮತ್ತು ಬಂಗಾರಮಕ್ಕಿ ಮಾರುತಿ ಗುರೂಜಿ ಧ್ವನಿ ಎತ್ತಿದ್ದಾರೆ. ಅವರ ಸಲಹೆ,ಮಾರ್ಗದರ್ಶನದ ಮೇರೆಗೆ ಜನಾಂದೋಲನ ರೂಪಿಸುತ್ತೇವೆ. - ಎ.ರವೀಂದ್ರ


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






