ಇಂದು ಸಸ್ಪೆಂಡ್ ಆದ ಪಿ.ಎಸ್.ಐ. ಮಾಡಿದ ಅಪರಾಧ ಏನು ಗೊತ್ತಾ?

ಮೇಕೆಮರಿ ರಕ್ಷಿಸಿದ ನಾಟಕ: ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಪಿಎಸ್ಐ, ವಿಡಿಯೋ ವೈರಲ್!

ಈ ಹಿಂದೆ ಕೊರೊನಾ ಭೀತಿ ಸಂದರ್ಭದಲ್ಲೂ ತಮ್ಮ ಬೆಂಬಲಿಗರಿಂದ ಹಾಲಿನ ಅಭಿಷೇಕ ಮಾಡಿಸಿಕೊಂಡು ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಇಲಾಖೆಯ ಕಂಗಣ್ಣಿಗೆ ಗುರಿಯಾಗಿದ್ದ ಜಿಲ್ಲೆಯ ಪಿಎಸ್ಐ ಇದೀಗ ಜಿಲ್ಲಾ ಪೊಲೀಸ್ ಇಲಾಖೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದಾರೆ. ಇಂಥ ಅನೇಕ ಹುಚ್ಚಾಟಗಳ ಹಿನ್ನೆಲೆಯಲ್ಲಿ ಈ ಪಿ.ಎಸ್.ಐ. ಇಂದು ಅಮಾನತ್ತಾಗಿದ್ದಾರೆ.

Mallanna yalagoda

ಕಲಬುರಗಿ: ಈ ಹಿಂದೆ ಕೊರೊನಾ ಭೀತಿ ಸಂದರ್ಭದಲ್ಲೂ ತಮ್ಮ ಬೆಂಬಲಿಗರಿಂದ ಹಾಲಿನ ಅಭಿಷೇಕ ಮಾಡಿಸಿಕೊಂಡು ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಇಲಾಖೆಯ ಕಂಗಣ್ಣಿಗೆ ಗುರಿಯಾಗಿದ್ದ ಜಿಲ್ಲೆಯ ಪಿಎಸ್ಐ ಇದೀಗ ಜಿಲ್ಲಾ ಪೊಲೀಸ್ ಇಲಾಖೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದಾರೆ.

ಜಿಲ್ಲೆಯ ‌ಜೇವರ್ಗಿ ತಾಲ್ಲೂಕಿನ ನೆಲೋಗಿ ಠಾಣೆಯ ಪಿಎಸ್ಐ ಮಲ್ಲಣ್ಣ ‌ಯಲಗೋಡ ಅವರು ಮೇಕೆಮರಿ ರಕ್ಷಿಸುವಂತೆ ನಾಟಕವಾಡಿ ಜಿಲ್ಲಾ ಪೊಲೀಸ್ ಇಲಾಖೆ ಮುಜುಗರಪಡುವಂತೆ ಮಾಡಿದ್ದಾರೆ. ಪಿಎಸ್ಐ ಮಲ್ಲಣ್ಣ ಯಲಗೋಡ ಬೇರೆ ಕಡೆಯಿಂದ ಕುರಿ ಮರಿಗಳನ್ನು ತರಿಸಿ ಅವುಗಳನ್ನು ಎತ್ತಿ ಹಿಡಿದು, ಇವು ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದವು. ಇವುಗಳನ್ನು ತಾನೇ ರಕ್ಷಿಸಿರುವುದಾಗಿ ಗ್ರಾಮಸ್ಥರಿಂದ ಹೇಳಿಸಿ ವಿಡಿಯೋವನ್ನು ಮಾಡಿಸಿದ್ದರು.

ಕೂಡಲಗಿ ಗ್ರಾಮ ಪ್ರವಾಹಕ್ಕೆ ಜಲಾವೃತವಾಗಿದ್ದು ನೀರಿನಲ್ಲಿ ನಾಲ್ವರು ಯುವಕರ ಸಹಾಯದಿಂದ ಥರ್ಮಾಕೋಲ್ ಮೇಲೆ ಪಿಎಸ್ಐ ನಿಂತಿದ್ದಾರೆ. ಕಡಿಮೆ ನೀರಿದ್ದ ಜಾಗದಲ್ಲಿ ಯುವಕರಿಂದ ಥರ್ಮಾಕೋಲ್ ತಳ್ಳಿಸಿಕೊಂಡು ತಾನು ಹೀರೋ ತರಹ ಪೋಸ್ ಕೊಟ್ಟಿದ್ದಾರೆ. ನಂತರ ಸೊಂಟದವರೆಗೆ ನೀರಿರುವಲ್ಲಿಗೆ ಹೋಗಿ ಕುರಿ ಮರಿ ರಕ್ಷಣೆ ಮಾಡಿರುವ ರೀತಿ ಪೋಸ್ ನೀಡಿದ್ದಾರೆ.

ಇದೇ ಅಲ್ಲದೆ ತಮ್ಮ ಹುಟ್ಟುಹಬ್ಬದಂದು ಮಲ್ಲಣ್ಣ ಹಾಲಿನಲ್ಲಿ ಅಭಿಶೇಕ ಮಾಡಿಸಿಕೊಂಡು ಟೀಕೆಗೆ ಗುರಿಯಾಗಿದ್ದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

ಯಾರಾಗ್ತಾರೆ…ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ?

ಉತ್ತರಕನ್ನಡಜಿಲ್ಲೆಯ೧೩ ಬ್ಲಾಕ್ಕಾಂಗ್ರೆಸ್ ಗಳ ವೇಟ್ ಒಂದಾದರೆ ಸಿದ್ದಾಪುರದ ತಾಲೂಕಾ ಕಾಂಗ್ರೆಸ್ ಬಲವೇ ಬೇರೆ . ಒಂದು ಕಾಲದಲ್ಲಿ ಬಂಗಾರಪ್ಪ ಒಲುವಿನಿಂದ ಇಡೀ ಜಿಲ್ಲೆ ಸಿದ್ದಾಪುರವನ್ನು...

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ ಒಬ್ಬರೇ ಶಾಸಕರು’. ಆದರೆ ಹೈಕಮಾಂಡ್ ಸೂತ್ರ ಮಾತ್ರ ಅತ್ತ ಶಿರಸಿಯಲ್ಲಿ ಬೆಂಕಿ ಹಚ್ಚಿದರೆ, ಇತ್ತ ಸಿದ್ದಾಪುರದಲ್ಲಿ ಅದೇ ಸೂತ್ರ ಸಾಹೇಬರಿಗೆ ಬಾಯಿಗೆ ಜಾರಿ ಬಿದ್ದ ತುಪ್ಪದಂತಾಗಿದೆ! ಬನ್ನಿ.. ಸಿದ್ದಾಪುರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *