ವಿಪರೀತ ಮಳೆ, ಅಪಾರ ಹಾನಿ, ಸಮರೋಪಾದಿಯಲ್ಲಿ ಪರಿಹಾರ ಕಾರ್ಯ

  • ಯಲ್ಲಾಪುರ ದಕ್ಷಿಣ ಭಾಗದಲ್ಲಿ ಧರೆ ಕುಸಿತ, ರಸ್ತೆ, ಮನೆಗಳಿಗೆ ಹಾನಿ
  • ಶಿರಸಿ-ಸಿದ್ಧಾಪುರ ರಸ್ತೆ ಬಂದ್, ಶಿರಸಿ-ಸಿದ್ಧಾಪುರದ ನಗರ ಪ್ರದೇಶವೂ ಜಲಾವೃತ್ತ.
  • * ಸಿದ್ಧಾಪುರ ಕಲ್ಯಾಣಪುರ-ಗೋಳಗೋಡು ರಸ್ತೆ ಸಂಪರ್ಕ ಕಡಿತ, ಮುಳುಗಿದ ಭತ್ತದ ಬೆಳೆ
  • ಹೆಮ್ಮನಬೈಲ್, ಕಲ್ಯಾಣಪುರಗಳಲ್ಲಿ ಕಾಳಜಿಕೇಂದ್ರ ಪ್ರಾರಂಭ
  • * ಅಂಕೋಲಾದಲ್ಲಿ ಪ್ರವಾಹ ಕಾರ್ಯಾಚರಣೆಯಲ್ಲಿದ್ದ ಇಬ್ಬರು ನೀರು ಪಾಲು
  • * ಕೆರೆ ಒಡೆಯುವ ಅಪಾಯ

ಮಲೆನಾಡು ಕರಾವಳಿಯಲ್ಲಿ ವರ್ಷಧಾರೆ ತಗ್ಗಿಲ್ಲ, ಕಳೆದ 24 ಗಂಟೆಗಳಲ್ಲಿ  ಸುರಿದ 200 ಮಿ.ಮೀ ಮಳೆ  ಅಪಾರ ಹಾನಿ ಮಾಡಿದೆ. ಕರಾವಳಿ ಪ್ರದೇಶದಲ್ಲಿ ತುಂಬಿ ಹರಿಯುತ್ತಿರುವ ನದಿಗಳು, ಬಿದ್ದ ಮರಗಳಿಂದ ಪ್ರಮುಖ ರಸ್ತೆಗಳ ಸಂಪರ್ಕ ಸ್ಥಗಿತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಹಾಮಳೆಗೆ ನಗರ, ಗ್ರಾಮೀಣ ಪ್ರದೇಶಗಳೆನ್ನದೆ ಎಲ್ಲಾ ಕಡೆ ಜಲಾವೃತ್ತವಾದ ಪರಿಸ್ಥಿತಿಯಿಂದ ಜನರು ಮನೆಯಿಂದ ಹೊರಬರದ ಸ್ಥಿತಿ ಉಂಟಾಗಿದೆ.


ಶಿರಸಿ-ಸಿದ್ಧಾಪುರ ರಸ್ತೆ ಸೇರಿದಂತೆ ಪ್ರಮುಖ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿವೆ. ಮಳೆ, ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಜಿಲ್ಲಾಡಳಿತ ಹೆಣಗಾಡುತ್ತಿದೆ. ಶಿರಸಿ-ಸಿದ್ಧಾಪುರ ಸೇರಿದಂತೆ ಜಿಲ್ಲೆಯ ನಗರಪ್ರದೇಶಗಳ ನೂರಾರು ಮನೆಗಳಿಗೆ ಮಳೆಯ ನೀರು ತುಂಬಿ ಕೆಲವೆಡೆ ಜನರನ್ನು ಸ್ಥಳಾಂತರಿಸಲಾಗಿದೆ. ಶಿರಸಿ ಮುಗವಳ್ಳಿ, ಸಿದ್ಧಾಪುರದ ಕಲ್ಯಾಣಪುರ, ಹೆಮ್ಮನಬೈಲು ಗಳಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.


ಗುರುವಾರ-ಶುಕ್ರವಾರದ ಮಹಾಮಳೆಯಿಂದ ತೊಂದರೆಗೆ ಒಳಗಾದ ಜನರನ್ನು ಸ್ಥಳಾಂತರಿಸಲಾಗಿದ್ದು ಜಾನುವಾರುಗಳನ್ನು ಸಂಬಂಧಿಗಳ ಮನೆಗೆ ಸಾಗಿಸಲಾಗಿದೆ. ಜಿಲ್ಲೆಯ ಘಟ್ಟದ ಮೇಲಿನ ಶಿರಸಿ,ಸಿದ್ಧಾಪುರ, ಯಲ್ಲಾಪುರಗಳಲ್ಲಿ ಸಾವಿರಾರು ಎಕರೆ ಭತ್ತದ ಗದ್ದೆಗಳು, ಕೆಲವೆಡೆ ತೋಟ ಕೂಡಾ ನೀರಿನಲ್ಲಿ ಮುಳುಗಿದೆ. ಸಿದ್ಧಾಪುರದ ಕೆರೆಕಟ್ಟೆಗಳು ತುಂಬಿ ಒಡೆಯುವ ಅಪಾಯವಿದ್ದು ಕಾನಗೋಡಿನಲ್ಲಿ ನೂರಾರು ಎಕರೆ ಬೆಳೆ ತೊಳೆದುಹೋಗಿದೆ. ಪ್ರಮುಖ ರಸ್ತೆಗಳು ಧರೆಕುಸಿತದಿಂದ ಸಂಪರ್ಕ ಕಡಿದುಕೊಂಡಿದ್ದು ಜಿಲ್ಲಾಡಳಿತ  ಇವುಗಳನ್ನು ತೆರವು ಮಾಡಲು ಸಮರೋಪಾದಿಯ ಕಾರ್ಯಾಚರಣೆ ನಡೆಸಿದೆ. ಹಲವೆಡೆ  ಮರಬಿದ್ದು ವಿದ್ಯುತ್ ಕಂಬಗಳು  ನೆಲಕ್ಕುರುಳಿರುವುದರಿಂದ ವಿದ್ಯುತ್ ಸಂಪರ್ಕಕ್ಕೆ ವ್ಯತ್ಯಯ ಉಂಟಾಗಿದೆ.ಜಿಲ್ಲೆಯ  ಅಂಕೋಲಾ ಶಿರೂರಿನಲ್ಲಿ ಪ್ರವಾಹ ಕಾರ್ಯಾಚರಣೆ ಮಾಡುತಿದ್ದ ಇಬ್ಬರು ವ್ಯಕ್ತಿಗಳು ನದಿಯಲ್ಲಿ ತೇಲಿಹೋಗಿದ್ದಾರೆ. ಕೆಲವೆಡೆ ರಸ್ತೆ ಕುಸಿದು, ಮನೆಗಳು ಹಾನಿಗೊಳಗಾಗಿವೆ. ಮಳೆ ಮಾಡಿರುವ ಹಾನಿ, ಅನಾಹುತದ ವರದಿಗಳು ಬರುತಿದ್ದು ಈ ವರ್ಷದ ಮಳೆ ಉತ್ತರ ಕನ್ನಡವನ್ನು ಕಂಗಾಲುಮಾಡಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *