ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ: ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆಗೆ ಸರ್ಕಾರ ನಿರ್ಧಾರ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.

CM bommai

ದಾವಣಗೆರೆ: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ದಿನಗಳಿಂದ ಸರ್ಕಾರಿ ನೌಕರರಿಂದ ಒತ್ತಾಯಗಳಿದ್ದವು, ಇದರಂತೆ ವೇತನ ಪರಿಷ್ಕರಣೆ ಹಾಗೂ ಸೌಲಭ್ಯಗಳ ವಿಸ್ತರಣೆಗೆ 7ನೇ ವೇತನ ಆಯೋಗ ರಚಿಸಲು ನಿರ್ಧರಿಸಲಾಗಿದೆ. ನವೆಂಬರ್ ಅಂತ್ಯದ ಒಳಗೆ ವೇತನ ಆಯೋಗ ರಚನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ದಾವಣಗೆರೆ ಉತ್ತರದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ನಾನು ದಾವಣಗೆರೆ ಉತ್ತರದಿಂದ ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದೆ ಎಂದು ಹೇಳಿದ್ದಾರೆ.

ನನ್ನ ತಲೆಯಲ್ಲಿ ಅ ಬಗ್ಗೆ ಯಾವುದೇ ಪ್ರಶ್ನೆ ಇಲ್ಲ. ಉತ್ತರದಿಂದ ನಾನು ಸ್ಪರ್ಧೆ ಮಾಡುವುದೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಭಾನುವಾರ ಭೇಟಿ ಮಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ನಿಯೋಗ ಜೊತೆ ಸಿಎಂ ಬೊಮ್ಮಾಯಿ ಅವರು ಮಾತುಕತೆ ನಡೆಸಿದ್ದರು.

ಮಾತುಕತೆ ವೇಳೆ ಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ವೇತನ ಆಯೋಗ ರಚಿಸಲಾಗುವುದು. ತ್ವರಿತವಾಗಿ ಮಧ್ಯಂತರ ವರದಿ ನೀಡಲು ಸೂಚಿಸಲಾಗುವುದು. 2023ರ ಮಾರ್ಚ್‌ ಒಳಗೆ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

ಯಾರಾಗ್ತಾರೆ…ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ?

ಉತ್ತರಕನ್ನಡಜಿಲ್ಲೆಯ೧೩ ಬ್ಲಾಕ್ಕಾಂಗ್ರೆಸ್ ಗಳ ವೇಟ್ ಒಂದಾದರೆ ಸಿದ್ದಾಪುರದ ತಾಲೂಕಾ ಕಾಂಗ್ರೆಸ್ ಬಲವೇ ಬೇರೆ . ಒಂದು ಕಾಲದಲ್ಲಿ ಬಂಗಾರಪ್ಪ ಒಲುವಿನಿಂದ ಇಡೀ ಜಿಲ್ಲೆ ಸಿದ್ದಾಪುರವನ್ನು...

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ ಒಬ್ಬರೇ ಶಾಸಕರು’. ಆದರೆ ಹೈಕಮಾಂಡ್ ಸೂತ್ರ ಮಾತ್ರ ಅತ್ತ ಶಿರಸಿಯಲ್ಲಿ ಬೆಂಕಿ ಹಚ್ಚಿದರೆ, ಇತ್ತ ಸಿದ್ದಾಪುರದಲ್ಲಿ ಅದೇ ಸೂತ್ರ ಸಾಹೇಬರಿಗೆ ಬಾಯಿಗೆ ಜಾರಿ ಬಿದ್ದ ತುಪ್ಪದಂತಾಗಿದೆ! ಬನ್ನಿ.. ಸಿದ್ದಾಪುರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *