

ಗೌರಿ ಹಬ್ಬದೊಂದಿಗೆ ಪ್ರಾರಂಭವಾಗುವ ಗಣೇಶ ಚತುರ್ಥಿ ಒಂದು ವಾರದ ಆಚರಣೆ. ಈ ಹಬ್ಬಗಳನ್ನು ಆಯಾ ಪ್ರಾದೇಶಿಕತೆ, ಜನಾಂಗೀಯ ಹಿನ್ನೆಲೆಯಲ್ಲಿ ಬಹುಭಿನ್ನವಾಗಿ ವೈವಿಧ್ಯಮಯವಾಗಿ ಆಚರಿಸುತ್ತಾರೆ. ಗೌರಿ ಮೊದಲ ದಿನ ಬಂದರೆ ಗಣಪತಿ ಅಥವಾ ಗಣೇಶ ಮಾರನೆಯ ದಿನ ಮನೆಗೆ ಬರುತ್ತಾನೆ. ಗೌರಿ ಮೊದಲ ದಿನ ಬಂದು ವೃತ ಮಾಡಿಸಿಕೊಳ್ಳಲು ಒಂದು ಕಾರಣ ಬೇಕಲ್ಲವೆ? ಪರ್ವತರಾಜನ ಮಗಳು ಪಾರ್ವತಿ ಅಂದರೆ ಗೌರಿ ರಾಜನ ಕರೆಯ ಮೇರೆಗೆ ತಂದೆಯೊಂದಿಗೆ ಮೊದಲ ದಿವಸ ತವರು ಮನೆಗೆ ಬರುತ್ತಾಳೆ. ಹೀಗೆ ಭಾದ್ರಪದ ಶುಕ್ಲಪಕ್ಷದ ತದಿಗೆ ದಿನ ತವರಿಗೆ ಬರುವ ಗೌರಿ ತವರು ಮನೆಯಲ್ಲಿ ಪೂಜಿಸಲ್ಪಡುತ್ತಾಳೆ.

ನಂತರ ಗಣೇಶ ಮಾರನೆಯ ದಿನ ಮನೆಮನೆಗೆ ಬರುತ್ತಾನೆ. ಇದೇ ಶಾಸ್ತ್ರ-ಪುರಾಣಗಳನ್ನು ಅವಲಂಬಿಸಿ ಅನುಕರಿಸಿ ದೇಶದಾದ್ಯಂತ ಸ್ಪಲ್ಫ ಬದಲಾವಣೆ ಗಳೊಂದಿಗೆ ಈ ಹಬ್ಬ ಆಚರಿಸಲಾಗುತ್ತದೆ. ಮಲೆನಾಡಿನಲ್ಲಿ ಮನೆಮನೆಗಳಲ್ಲಿ ಗಣೇಶನ ಪೂಜೆ ನಡೆಯುವುದಿಲ್ಲ.ಆದರೆ ಪ್ರತಿಮನೆಯಲ್ಲಿ ಗೌರಿ ವೃತ ನಡೆಯುತ್ತದೆ. ಮೊದಮೊದಲು ವೃತಕ್ಕೆ ಸೀಮಿತವಾಗಿದ್ದ ಸ್ವರ್ಣಗೌರಿ ಉತ್ಸವ ಈಗ ಗೌರಿ ಹಬ್ಬವಾಗಿ ಆಚರಿಸಲ್ಪಡುತ್ತದೆ.
ಮಲೆನಾಡು ಕರಾವಳಿಯ ಉತ್ತರ ಕನ್ನಡ, ಶಿವಮೊಗ್ಗ ಸೇರಿದ ಕೆಲವೆಡೆ ಗೌರಿ-ಗಣೇಶನನ್ನು ಒಟ್ಟಿಗೇ ಪೂಜಿಸುವ ರೂಢಿ ಇದೆ ಆದರೆ ಕೆಲವೆಡೆ ಗೌರಿಯನ್ನು ಮೊದಲದಿನ ತದಿಗೆಯಂದು ತಂದು ಪೂಜಿಸುತ್ತಾರೆ. ಸ್ವರ್ಣಗೌರಿ ವೃತದ ದಿವಸ ಗೌರಿ ಪೂಜೆ ಪ್ರಾರಂಭಿಸುವ ಆಸ್ತಿಕರು ಈ ಹಬ್ಬಕ್ಕೆ ಮನೆಯ ಮಗಳನ್ನು ಕಡ್ಡಾಯವಾಗಿ ಆಮಂತ್ರಿಸುತ್ತಾರೆ. ಗೌರಿ ಮನೆಗೆ ಬಂದ ದಿವಸವೇ ಮನೆಗೆ ಮಗಳು ಬಂದು ಸಂಬ್ರಮದಿಂದ ತಿಂದುಂಡು ತವರಿನ ಆತಿಥ್ಯ ಸ್ವೀಕರಿಸುತ್ತಾಳೆ. ಗೌರಿಹಬ್ಬದ ದಿನ ಮನೆಗೆ ಮಗಳು ಬಂದರೆ ಮಾರನೆ ದಿನ ಗಣಪತಿ ಬರುವಂತೆ ಮನೆ ಮಗಳ ಮಕ್ಕಳು ಮಾರನೇ ದಿನ ಅಜ್ಜನ ಮನೆಗೆ ಬರುತ್ತಾರೆ.
ಗೌರಿ ಸ್ತ್ರೀಯರ ಆರಾಧನೆ, ಆತಿಥ್ಯಕ್ಕೆ ವಿಶೇಶವಾದರೆ ಗಣಪತಿ ಪುರುಷರ ಆರಾಧನೆ, ಆತಿಥ್ಯಕ್ಕೆ ನೆಪ. ಹೀಗೆ ಗೌರಿಯನ್ನು ಮೊದಲ ದಿನ ಆರಾಧಿಸುವ ಆಚರಣೆಗೆ ಮಲೆನಾಡಿನಲ್ಲಿ ಅರಮನೆ ಗೌರಿ ಎಂದು ಕರೆಯುತ್ತಾರೆ. ಮಾರನೆ ದಿನ ಲೋಕಚೌತಿ ಗಣೇಶ ಚತುರ್ಥಿಯ ಈ ದಿನ ಕೂಡಾ ಗೌರಿಯನ್ನು ಆರಾಧಿಸಿ ಆಚರಿಸುವವರಿದ್ದಾರೆ. ಇಂಥ ವಿಭಿನ್ನ ಆಚರಣೆ, ಆರಾಧನೆ ಮೂಲಕ ಸಂಬ್ರಮದಿಂದ ಮಾಡುವ ಗೌರಿ-ಗಣೇಶ ಹಬ್ಬ ಸಹೋದರತ್ವ,ಸಹಬಾಳ್ವೆ,ಸೌಹಾರ್ದತೆಯ ಸಂಕೇತ ಕೂಡಾ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






