

ಉಕ್ರೇನ್ ಮೇಲೆ ರಷ್ಯಾ ದಾಳಿ ಹಿನ್ನೆಲೆಯಲ್ಲಿ ಭಾರತದ ವಿದ್ಯಾರ್ಥಿಗಳು ಆಪತ್ತಿಗೆ ಸಿಕ್ಕಿರುವ ಬಗ್ಗೆ ತೀವೃ ವಿಷಾದ ವ್ಯಕ್ತಪಡಿಸಿರುವ ಮಾಜಿ ಕೇಂದ್ರ ಸಚಿವೆ, ರಾಜ್ಯಪಾಲೆ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಹಲವು ರಗಳೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪಾಲಕರು ಸಹಕರಿಸದೆ ವಿಧಿ ಇಲ್ಲ ಎಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಖಾಸಗಿ ಪ್ರವಾಸಿ ನಿಮಿತ್ತ ಶಿರಸಿ-ಸಿದ್ಧಾಪುರಗಳಲ್ಲಿ ಪ್ರವಾಸ ಮಾಡಿದ ಅವರುರಷ್ಯಾ ದಾಳಿ ಅಮಾನವೀಯ, ನಮ್ಮ ವಿದ್ಯಾರ್ಥಿಗಳು ಅಲ್ಲಿ ತೊಂದರೆಗೀಡಾಗಿರುವ ಬಗ್ಗೆ ನಮಗೆ ನೋವಿದೆ. ಆದರೆ ವಾಸ್ತವ, ಅನಿವಾರ್ಯತೆ,ಸಾಧ್ಯತೆ ಹಿನ್ನೆಲೆಯಲ್ಲಿ ನಾವು ಯೋಚಿಸಬೇಕು. ಸರ್ಕಾರಕ್ಕೆ ಬಾಧಿತರ ಸಹಕಾರ ಬಾಧಿತರಿಗೆ ಎಲ್ಲರ ಸಹಕಾರ ಮುಖ್ಯ. ಸರ್ಕಾರದ ಮೇಲೆ ಗೂಬೆ ಕೂರಿಸುವ ಸಮಯ ಇದಲ್ಲ ಸಂಕಟ ಪರಿಸ್ಥಿತಿಯಿಂದ ಹೊರಬರಲು ಎಲ್ಲರ ಸಹಕಾರ,ಸಂಯಮ ಅಗತ್ಯ ಎಂದರು.

ಸಮಾಜಮುಖಿ ಡಾಟ್ ನೆಟ್ ಪ್ರತಿನಿಧಿ ಜೊತೆ ಎಕ್ಸಲ್ಯೂಶಿವ್ ಮಾತುಕತೆ ನಡೆಸಿದ ಆಳ್ವಾ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಡಿಜಿಟಲ್ ಜೊತೆಗೆ ಆಫಲೈನ್ ಅವಕಾಶ ಅನಿವಾರ್ಯ ಎಂದರು. ಇಂಟರ್ನೆಟ್ ಸಂಪರ್ಕ ಸಿಗದ ಪ್ರದೇಶದಲ್ಲಿ ಆನ್ಲೈನ್ ಸದಸ್ಯತ್ವ ಸಾಧ್ಯವೆ ಎಂದು ಅವರು ಪ್ರಶ್ನಿಸಿದರು.
ತಮ್ಮ ಉತ್ತರ ಕನ್ನಡ ಪ್ರವಾಸದ ಹಿನ್ನೆಲೆಯಲ್ಲಿ ಮಾತನಾಡಿದ ಮಾರ್ಗರೇಟ್ ಚುನಾವಣೆ ಸಮೀಪಿಸುತ್ತಿದೆ. ಈಗಿನ ಪಂಚರಾಜ್ಯಗಳ ಚುನಾವಣೆಗಳು, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುವವರಿಗೆ ಮುಟ್ಟಿಕೊಳ್ಳುವಂಥ ಉತ್ತರ ಸಿಗಲಿದೆ. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕಾಂಗ್ರೆಸ್ ಬಲವರ್ಧನೆಗೆ ನಾವು ಪ್ರಯತ್ನಿಸುತಿದ್ದೇವೆ.ಕೆ.ಪಿ.ಸಿ.ಸಿ. ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.


ಕಾಂಗ್ರೆಸ್ ಬಲವರ್ಧನೆ ನಮ್ಮ ಉದ್ದೇಶ, ಉತ್ತರ ಕನ್ನಡದ ಮಾಜಿ ಎಂಪಿಯಾಗಿ ಚುನಾವಣೆ ಮೊದಲು ಸಂಘಟನೆ ಮಾಡುವ ಜವಾಬ್ಧಾರಿಯನ್ನು ನಿರ್ವಹಿಸುತ್ತೇನೆ.-ಮಾರ್ಗರೇಟ್ ಆಳ್ವ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






