

ನಿಮ್ಮ ಮಗ ಬಿಸಿಸಿಐ ಕಾರ್ಯದರ್ಶಿಯಾದದ್ದು ಹೇಗೆ? ಎಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ, ಎಷ್ಟು ರನ್ ಗಳಿಸಿದ್ದಾರೆ ಎಂದು ತಮಿಳುನಾಡು ಕ್ರೀಡಾ ಸಚಿವ ಉದಯಾನಿಧಿ ಸ್ಟಾಲಿನ್ ಅವರು ಗೃಹ ಸಚಿವ ಅಮಿತ್ ಷಾ ಅವರನ್ನು ಪ್ರಶ್ನಿಸಿದ್ದಾರೆ.


ಚೆನ್ನೈ: ನಿಮ್ಮ ಮಗ ಬಿಸಿಸಿಐ ಕಾರ್ಯದರ್ಶಿಯಾದದ್ದು ಹೇಗೆ? ಎಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ, ಎಷ್ಟು ರನ್ ಗಳಿಸಿದ್ದಾರೆ ಎಂದು ತಮಿಳುನಾಡು ಕ್ರೀಡಾ ಸಚಿವ ಉದಯಾನಿಧಿ ಸ್ಟಾಲಿನ್ ಅವರು ಗೃಹ ಸಚಿವ ಅಮಿತ್ ಷಾ ಅವರನ್ನು ಪ್ರಶ್ನಿಸಿದ್ದಾರೆ.
ಡಿಎಂಕೆಯನ್ನು ರಾಜವಂಶದ ಪಕ್ಷ ಎಂದು ಕರೆದಿದ್ದಕ್ಕಾಗಿ ತಮಿಳುನಾಡು ಕ್ರೀಡಾ ಸಚಿವ ಉದಯಾನಿಧಿ ಸ್ಟಾಲಿನ್ ಅವರು ಗೃಹ ಸಚಿವ ಅಮಿತ್ ಷಾ ಅವರನ್ನು ಟೀಕಿಸಿದ್ದಾರೆ. ಗೃಹ ಸಚಿವರ ಮಗ ಜಯ್ ಶಾ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿ (ಬಿಸಿಸಿಐ) ಆಯ್ಕೆ ಆಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.


ಅಮಿತ್ ಶಾ ಅವರು ಶುಕ್ರವಾರ ರಾಮೇಶ್ವರಂನಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರ ಪಾದಾಯಾತ್ರೆಗೆ ಚಾಲನೆ ನೀಡಿ, ವಂಶ ರಾಜಕೀಯದ ಕುರಿತು ಮಾತನಾಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಡಿಎಂಕೆ ಮಿತ್ರ ಪಕ್ಷಗಳು ರಾಜವಂಶದ ರಾಜಕಾರಣವನ್ನು ಉತ್ತೇಜಿಸುತ್ತಿವೆ ಎಂದು ಅವರು ಆರೋಪಿಸಿದ್ದರು ಹಾಗೂ ಡಿಎಂಕೆಯನ್ನು ರಾಜವಂಶದ ಪಕ್ಷ ಎಂದು ಕರೆದಿದ್ದರು.
ಚೆನ್ನೈನಲ್ಲಿ ಡಿಎಂಕೆ ಯೂತ್ ವಿಂಗ್ನ ಹೊಸ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಉದಯಾನಿಧಿ, “ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ನಾನು ಶಾಸಕನಾಗಿದ್ದೇನೆ. ಆ ನಂತರ ನನ್ನನ್ನು ಮಂತ್ರಿಯನ್ನಾಗಿ ಮಾಡಲಾಯಿತು” ಎಂದು ಹೇಳಿದರು.
ನಮ್ಮ ಪಕ್ಷದ ನಾಯಕರು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ, ನಾನು ಅಮಿತ್ ಶಾರನ್ನು ಕೇಳಲು ಬಯಸುತ್ತೇನೆ, ನಿಮ್ಮ ಮಗ ಬಿಸಿಸಿಐ ಕಾರ್ಯದರ್ಶಿ ಆಗಿದ್ದು ಹೇಗೆ? ಜಯ ಶಾ ಅವರು ಎಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ ಹಾಗೂ ಅವರು ಎಷ್ಟು ರನ್ ಗಳಿಸಿದ್ದಾರೆ? ಎಂದು ಉತ್ತರಿಸುವಂತೆ ಉದಯನಿಧಿ ಆಗ್ರಹಿಸಿದ್ದಾರೆ. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






