ನೆಲಮೂಲದಿಂದ ಅಂಬಾರದೆತ್ತರಕ್ಕೆ ಬೆಳೆದ ವಿಷ್ಣು- ಅಂಬಾರಕೊಡ್ಲಿನ ಬೀದಿಯಿಂದ ಅಂಬರದತ್ತ ವಿಸ್ತರಿಸಿ ಅನೇಕರಿಗೆ ನೆರಳುನೀಡಿದ ಬಾಳಮರ

ಹಾಲಕ್ಕಿ ಸಮಾಜದಲ್ಲಿ ಅವ್ವನನ್ನು ಹುಡುಕುತಿದ್ದ ಒಬ್ಬ ಪೋರ ಅಮ್ಮನೊಂದಿಗೆ ಮದುವೆಗೆ ಹೊರಡಲು ಸಿದ್ಧನಾಗುತ್ತಾನೆ. ಮದುವೆಮನೆಗೆ ಬಣ್ಣ ಬಣ್ಣದ ಬಟ್ಟೆತೊಟ್ಟು ಬಂದ ಹತ್ತು ವರ್ಷದ ಹುಡುಗನ ಪೋಷಾಕು ೧೫ ವರ್ಷ ಮೇಲ್ಪಟ್ಟವರದ್ದು ಓರಿಗೆಯ ಹುಡುಗರ ಗೇಲಿಗೆ ಮುಖಕೊಡಲಾಗದ ಅಸಹಾಯಕ ಹುಡುಗ ಮದುವೆಮನೆಯಿಂದ ಕಾಲ್ಕೀಳುತ್ತಾನೆ, ಅವ್ವನಿಗೆ ಹೇಳದೆ!

ಈ ಅವಮಾನದ ಮುಂದೆ ಮತ್ತಿನ್ನಾವ ಅಪಮಾನ?

ಈ ಹುಡುಗ ಅಂಬಾರಕೊಡ್ಲಿನ ವಿಷ್ಣು ಇಂಥ ಅವಮಾನ, ಅಸಹಾಯಕತೆಯ ನಡುವೆ ಕೇರಿಯಲ್ಲಿ ಗುಮಟೆಪಾಂಗ್‌ ಹಾಡುತ್ತಾ ರೈತ ಹೋರಾಟದ ತಾಲೀಮು ನಡೆಸುತಿದ್ದ ಭಾವನೊಂದಿಗೆ ಜೊತೆಗಾರನಾಗುವ ವಿಷ್ಣು ದಿನಕರ ದೇಸಾಯಿಯವರ ಕೂಟ ಸೇರುತ್ತಾನೆ. ಶಿಕ್ಷಣ,ಹೋರಾಟ,ಪ್ರತಿಭಟನೆ ಮಾಡುತ್ತಾ ಒಂದೊಂದೇ ಮೆಟ್ಟಿಲೇರುವಾಗ ಇವನ್ಯಾರೆಂದು ಲಕ್ಷಿಸಿದವರೂ ಇಲ್ಲ. ಆದರೆ, ಮುಂದೆ ಇದೇ ವಿಷ್ಣು ಅವತಾರವಾಗಿ ಉತ್ತರ ಕನ್ನಡ ದುಡಿಯುವ ಕೈಗಳ ಹೋರಾಟದ ಕತೆ ಬರೆಯುತ್ತಾರೆ. ಇವರೇ ವಿಷ್ಣು ನಾಯ್ಕ ಅಂಬಾರಕೊಡ್ಲ.

ಅಂಬಾರಕೊಡ್ಲದ ಹಾಲಕ್ಕಿ, ದೀವರ ಕೊಪ್ಪದಲ್ಲಿ ಗೇಣಿದಾರರ ಮಕ್ಕಳು ಮೆರವಣಿಗೆ ಹೊರಟಿದ್ದೇನೋ ಖರೆ ಆದರೆ ಗೇಣಿದಾರರ ಮಗ ವಿಷ್ಣು ರೈತ ಹೋರಾಟದಲ್ಲಿ ಪಾಲ್ಗೊಂಡು, ಜನನಾಯಕ ದಿನಕರ ದೇಸಾಯಿಯವರ ಆಪ್ತ, ಸಹಾಯಕ, ಅಭಿಮಾನಿಯಾಗಿ ಬದುಕು ಪ್ರಾರಂಭಿಸಿದಾಗ ಈ ಹುಡುಗ ಉತ್ತರ ಕನ್ನಡದ ಕಿರೀಟಕ್ಕೆ ಬಣ್ಣದ ಗರಿಯಾಗುತ್ತಾನೆ ಎನ್ನುವುದನ್ನು ಸಾಕ್ಷಾತ್‌ ದಿನಕರ ದೇಸಾಯಿಯವರೂ ಊಹಿಸಿರಲಿಕ್ಕಿಲ್ಲ. ಆದರೆ ಕವಿ, ಹೋರಾಟಗಾರ,ಸಾಹಿತಿ ವಿಷ್ಣು ನಾಯ್ಕ ಸಾಗಿದ ಹಾದಿ ಮಾತ್ರ ಸದಾ ಅನುಕರಣೀಯ.

ದಿನಕರ ದೇಸಾಯಿಯವರ ಜನಪರತೆ, ಬದ್ಧತೆ, ಪ್ರಾಮಾಣಿಕತೆಯನ್ನು ರೂಢಿಸಿಕೊಂಡ ವಿಷ್ಣು ಶಿಕ್ಷಕರಾದರು, ಪ್ರಾಂಶುಪಾಲರಾದರು, ಕೆನರಾ ವೆಲ್ಫೇರ್‌ ಟ್ರಸ್ಟ್‌ ನಿರ್ಧೇಶಕರಾದರು. ಕಂಚಿನ ಕಂಠದ ವಿಷ್ಣು ಮಕ್ಕಳಿಗೆ ಮಧುರವಾಗಿ ಮತನಾಡಿದರು. ಟೀಕಾಕಾರರಿಗೆ ಮೌನ, ತಾತ್ಸಾರದಲ್ಲಿ ಉತ್ತರ ನೀಡಿದರು. ಹೊಸಹುಡುಗರಿಗೆ ದೀನದಲಿತರು, ಬಡವರು, ಅಸಹಾಯಕರ ಪರ ಪಕ್ಷಪಾತ ಮಾಡಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಮೂಲ ಸಮಸ್ಯೆ ಅರಿತು ಮಾತನಾಡುವುದನ್ನು ಕಲಿಸಿದರು. ಅನೇಕರಿಂದ ಕವಿತೆ ಬರೆಸಿ ಸಂಕಲನ ಮಾಡಿದರು. ಉತ್ತರ ಕನ್ನಡದ ರೈತ ಸಂಕಥನ ದಾಖಲಿಸಿದರು, ಅದಕ್ಕೆ ದುಡಿಯುವ ಕೈಗಳ ಹೋರಾಟದ ಕತೆ ಎಂದು ಶೀರ್ಷಿಕೆ ಇಟ್ಟರು. ಮುಗ್ಧ ಹಾಲಕ್ಕಿಗಳ ಬದುಕಿನ ಜಂಗುಂ-ಜಕ್ಕುಂ ಶಬ್ಧವನ್ನು ಹಿಮಾಲದವರೆಗೆ ಪರಿಚಯಿಸಿದರು. ಅವರ ಪ್ರಕಾಶನದ ವೇದಿಕೆ ಏರಿ ಆತಿಥ್ಯ ಉಣ್ಣದ ಹಿರಿಕಿಯರೇ ಇಲ್ಲ. ನಾಮಧಾರಿ- ನಾಡವರ ನಡುವೆ ಸೇತುವೆ ಕಟ್ಟಿದರು. ಜಾತಿ-ಧರ್ಮ ಭೇದ ಮರೆತು ಎಲ್ಲರನ್ನೂ ಒಂಡೆದೆ ಸೇರಿಸಿದರು.

ಇಂಥ ಜೀವಮಾನದ ಸಾಧಕನಿಗೆಅರಸಿ ಬಂದ ಪ್ರಶಸ್ತಿ-ಪುರಸ್ಕಾರಗಳು ಅನೇಕ. ಜಿಲ್ಲೆಯ ಸಾಹಿತ್ಯ ಪರಿಷತ್ತಿನ ತೇರು ಎಳೆದರು. ಸಂಘಟಕರಾಗಿ,ಸಾಹಿತಿಯಾಗಿ, ಹಿರಿಯ ಕವಿಯಾಗಿ, ಪ್ರಸಿದ್ಧ ಪ್ರಕಾಶಕರಾಗಿ ಉತ್ತಮ ವಾಕ್ಪಟುವಾಗಿ ಇಡೀ ಜಿಲ್ಲೆ, ರಾಜ್ಯ, ದೇಶ ಸುತ್ತಿದರು.

ಮದುವೆ ಕಾರ್ಯಕ್ಕೆ ಹೋಗಲು ಬಟ್ಟೆಗಾಗಿ ಖಾತರಿಸಿದ್ದ ವಿಷ್ಣು ಮನೆಗೆ ಮಗನಾಗಿ, ಕುಟುಂಬಕ್ಕೆ ಹಿರಿಣ್ಣನಾಗಿ ಸಮಾಜ, ಕುಟುಂಬ, ಜಾತಿ-ಧರ್ಮ, ಸಾಹಿತ್ಯ, ಸಾಂಸ್ಕೃತಿಕತೆ ಎಲ್ಲೆಲ್ಲೂ ವಿಸ್ತರಿಸಿ ಅಸ್ತಂಗತರಾಗುವ ೮೦ ವರ್ಷಗಳ ಅವಧಿಯಲ್ಲಿ ಅವರು ಮಾಡಿದ್ದು ೮೦೦ ವರ್ಷಗಳ ಕೆಲಸ! ಅವರು ಉತ್ತರ ಕನ್ನಡಕ್ಕೆ ಸಿಕ್ಕಿದ್ದು-ದಕ್ಕಿದ್ದೇ ಜಿಲ್ಲೆಯ ವರ. ಪರಿಮಳದಂಗಳದ ಕಸ್ತೂರಿ ಅಂಬಾರಕೊಡ್ಲಿನ ಬೀದಿಯಿಂದ ಅಂಬರದತ್ತ ವಿಸ್ತರಿಸಿ ಅನೇಕರಿಗೆ ನೆರಳುನೀಡಿದ ಬಾಳಮರ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *