ಕೆಲಸ ಮಾಡಿ ಇಲ್ಲ ಜಾಗ ಖಾಲಿ ಮಾಡಿ….. ಇಲ್ಲಿಗೂ ಬರಲಿದೆ ಬುಲ್ಡೋಜರ್‌ ಕಾರ್ಯಾಚರಣೆ!

ಸಿದ್ಧಾಪುರ ನಗರದಲ್ಲಿ ಟ್ರ್ಯಾಫಿಕ್‌ ಸಮಸ್ಯೆ ಬಗ್ಗೆ ಯಾರು ಕ್ರಮಕೈಗೊಳ್ಳಬೇಕು, ಸಂಚಾರಿ ನಿಯಮ ಹೇಳುವ ಭಿತ್ತಿ ಫಲಕಗಳೆಲ್ಲಿ?

ನಗರದಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ?

(ಪ.ಪಂ ಸಭೆಯ ಲೈವ್‌ ವಿಡಿಯೋ ನೋಡಲು samajamukhinews yOutube channel & samaajamukhi fb page ನೋಡಿ)

ಸಿಬ್ಬಂದಿಗಳು ಬೆಳಿಗ್ಗೆ ಬಂದು ಸಾಯಂಕಾಲ ಮನೆಗೆ ಹೋದರೆ ಆಯಿತೆ ನಿಮ್ಮ ಕೆಲಸ? ಕೆಲಸ ಮಾಡತೀರೋ? ಜಾಗ ಖಾಲಿ ಮಾಡತೀರೋ?

ಪ್ಲೆಕ್ಸ್‌, ಬ್ಯಾನರ್‌ ಗಳ ಮೇಲೆ ವಿಧಿಸಿದ ತೆರಿಗೆ ಮೊತ್ತ ಎಷ್ಟು?

ನಗರದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ ಪಾರ್ಕಿಂಗ್‌ ಜಾಗ ಯಾವಾಗ ತೆರವು ಮಾಡುತ್ತೀರಿ? ಹೀಗೆ ಸಿದ್ಧಾಪುರ ಪ.ಪಂ. ನಲ್ಲಿ ನಡೆದ ಸಭೆಯಲ್ಲಿ ಪ.ಪಂ. ಸದಸ್ಯರು ಬ್ಯಾಟ್‌ ಮಾಡುತಿದ್ದರೆ ಸಿಬ್ಬಂದಿಗಳು ಎಲ್ಲಾ ಪ್ರಶ್ನೆಗಳಿಗೂ ಬೋಲ್ಡ್!‌

ಉತ್ತರ ನೀಡಲು ಸಾಧ್ಯ ವಾಗದ ಸಿಬ್ಬಂದಿಗಳು ಮೌನ ಧರಿಸದೆ ಬೇರೆ ಆಯ್ಕೆಯೇ ಇರಲಿಲ್ಲ ಇದು ಇಂದು ಸಿದ್ಧಾಪುರ ಪ.ಪಂ. ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯ ವಾತಾವರಣ.

ಸಭೆ ಪ್ರಾರಂಭ ವಾಗುತಿದ್ದಂತೆ ಪ್ಲೆಕ್ಸ್‌, ಬ್ಯಾನರ್‌ ಪರವಾನಗಿ ಶುಲ್ಕದ ಬಗ್ಗೆ ಮಾರುತಿ ನಾಯ್ಕ ಪ್ರಸ್ಥಾ ಪಿಸಿದರು. ಅದಕ್ಕೆ ಉತ್ತರ ನೀಡಿದ ಸಿಬ್ಬಂದಿಗಳು ಇಡೀ ತಿಂಗಳಲ್ಲಿ ಎರಡು ಬ್ಯಾನರ್‌ ಗಳ ಶುಲ್ಕ ಬಂದಿರುವುದನ್ನು ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಾರುತಿ ನಾಯ್ಕರ ಆಕ್ಷೇಪಕ್ಕೆ ಉತ್ತರಿಸುವಂತೆ ವಿವರಣೆ ನೀಡಿದ ಹಿರಿಯ ಸದಸ್ಯ ಕೆ.ಜಿ.ನಾಯ್ಕ ಸರ್ಕಾರೇತರ ಕಾರ್ಯಕ್ರಮಗಳನ್ನು ಬಿಟ್ಟು ಇತರ ಕಾರ್ಯಕ್ರಮಗಳ ಪ್ಲೆಕ್ಸ್‌, ಬ್ಯಾನರ್‌ ಗಳಿಗೆ ಕಡ್ಡಾಯವಾಗಿ ಶುಲ್ಕ ಆಕರಿಸಲು ತಿಳಿಸಿದರು.

ಸಂಚಾರಿ ನಿಯಮ- ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ತಡೆ ಮತ್ತು ಅಕ್ರಮ ಕಟ್ಟಡ ತೆರವಿನ ಬಗ್ಗೆ ಮಾತನಾಡಿದ ಕೆ.ಜಿ.ನಾಯ್ಕ ತೆರಿಗೆ ಸಂಗ್ರಹ, ಆದಾಯ ಕ್ರೋಢೀಕರಣ, ಅಕ್ರಮ ಕಟ್ಟಡ ತೆರವು ಸೇರಿದಂತೆ ಬಹುತೇಕ ಕೆಲಸಗಳು ಆಗುತ್ತಿಲ್ಲ. ಸಿಬ್ಬಂದಿಗಳು ಕೆಲಸ ಮಾಡದೆ ಸದಸ್ಯರು ಸಾರ್ವಜನಿಕರಿಗೆ ಉತ್ತರ ಕೊಡುವುದು ಕಷ್ಟವಾಗುತ್ತಿದೆ. ಸರಿಯಾಗಿ ಕೆಲಸ ಮಾಡುವುದಿದ್ದರೆ ಮಾಡಿ ಇಲ್ಲ ವರ್ಗಾವಣೆ, ನಿಯೋಜನೆ ಮೇಲೆ ತೆರಳಿ ನಾವು ಸಿಬ್ಬಂದಿಗಳೇ ಇಲ್ಲ ಹಾಗಾಗಿ ಕೆಲಸ ಆಗುತ್ತಿಲ್ಲ ಎಂದಾದರೂ ಕಾರಣ ಹೇಳಬಹುದು ಎಂದು ಗದರಿಸಿದರು.

ಪಾರ್ಕಿಂಗ್‌ ಮತ್ತು ಸಂಚಾರಿ ವ್ಯವಸ್ಥೆ ಸರಿಪಡಿಸಲು ಪೊಲೀಸ್‌ ನೆರವು ಪಡೆದು ಶೀಘ್ರ ಕಾರ್ಯಾಚರಣೆ ಪ್ರಾರಂಭಿಸಿ ಎಂದು ಕೆ.ಜಿ. ನಾಯ್ಕ ಸಿಬ್ಬಂದಿಗಳಿಗೆ ಆದೇಶಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *