


ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ ಎಂಬ ಅಮಾಯಕ ವಾಹನ ಚಾಲಕನ ಮನೆಗೆ ನುಗ್ಗಿ ಖ್ಯಾತೆ ತೆಗೆಯುತ್ತಾರೆ. ಅವರು ಬಂದದ್ದು ಈ ವಸಂತ ನಾಯ್ಕ ತಮ್ಮ ಮಹೇಶನ ಮಗಳನ್ನು ಶಿವಮೊಗ್ಗಕ್ಕೆ ಕೊಂಡೊಯ್ಯಲು!


ಹೀಗೆ ರಾತ್ರಿ ವೇಳೆ ಸಿದ್ಧಾಪುರ ಅವರಗುಪ್ಪ ಮನೆಗೆ ನುಗ್ಗಿ ದಾಂಧಲೆ ಮಾಡಿದ ಅಪರಿಚಿತರೊಂದಿಗೆ ಬಂದು ಕಾರಿನಲ್ಲಿ ಕೂತವರು ಇದೇ ವಸಂತನ ನಾದಿನಿ ಸುಚಿತ್ರ ಇವಳೊಂದಿಗೆ ಬಂದಿದ್ದವನು ಮಹಾನ್ ಗುರು ಕಮಲಾಕರ ಭಟ್ಟ!
ಹೀಗೆ ಶಿವಮೊಗ್ಗದಿಂದ ದುಬಾರಿ ಕಾರಿನಲ್ಲಿ ಬಾಡಿಗೆ ಹಂತಕರೊಂದಿಗೆ ಬಂದ ನಾಲ್ಕೈದು ಜನರ ತಂಡದ ಉದ್ದೇಶ ಮಹೇಶ್ ಮತ್ತು ಸುಚಿತ್ರಾ ದಂಪತಿಗಳ ಮಗಳನ್ನು ಶಿವಮೊಗ್ಗಕ್ಕೆ ಕರೆದೊಯ್ಯುವುದು! ಆದರೆ ಆದದ್ದೇ ಬೇರೆ….



ತಮ್ಮನ ಮಗಳನ್ನು ಬಲಾತ್ಕಾರವಾಗಿ ಕರೆದೊಯ್ಯಲು ಬಂದ ಅನ್ಯ ಧರ್ಮೀಯರನ್ನು ತಡೆದು ಕೇಳಿದ ವಸಂತ ಜೊತೆಗೆ ಊರು ಕೇರಿಯವರು ಬಂದು ಸೇರುವುದರೊಳಗೆ ವಸಂತನ ರಕ್ಷಣೆಗೆ ಬಂದ ಕುಮಾರನಿಗೆ ಚಾಕುವಿನಿಂದ ತಿವಿಯುತ್ತಾರೆ. ನಂತರ ವಸಂತ.. ಈ ತಿವಿತಕ್ಕೆ ವಸಂತ ಸ್ಥಳದಲ್ಲೇ ಕುಸಿದು ಬಿದ್ದರೆ…. ಕುಮಾರ ಮತ್ತು ಮಹೇಶ ತೀವ್ರವಾಗಿ ಗಾಯಗೊಳ್ಳುತ್ತಾರೆ. ರಾತ್ರಿ ಸಮಯದಲ್ಲಿ ನಡೆದ ಈ ಭೀಕರ ಕೊಲೆಯ ಜಾಡು ಹಿಡಿದು ಹೋದರೆ….
ಹೆಣ್ಣೊಬ್ಬಳ ಮಾರಿಯ ಅವತಾರದ ದರ್ಶನವಾಗುತ್ತದೆ.
ನಂ ೧ ಆರೋಪಿ ಸುಚಿತ್ತಾ ೨೦ ವರ್ಷಗಳ ಕೆಳಗೆ ಮಹೇಶನನ್ನು ಪ್ರೀತಿಸಿ ಮದುವೆಯಾಗಿ ಬೆಂಗಳೂರು ಸಾಕಾಗಿ ಸಿದ್ಧಾಪುರಕ್ಕೆ ಮರಳಿ ಬಂದವಳು! ಇವಳ ಹುಟ್ಟೂರು ಹೊಸೂರು, ಹೊಸೂರಿನ ಜನತಾ ಕಾಲನಿಯ ಏಕನಾಥನ ಮಗಳು ಸಣ್ಣ ವಯಸ್ಸಿನಿಂದ ವಿಪರೀತ ನಡವಳಿಕೆಗಳಿಂದ ಕುಖ್ಯಾತಳಾಗಿದ್ದವಳು. ಇವಳ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿ ಮರಳಿ ಸಿದ್ಧಾಪುರಕ್ಕೆ ಬಂದು ಮೆರಯಬೇಕೆಂದಿದ್ದಳು!

ಆದರೆ ತಾನೊಂದು ಬಗೆದರೆ…. ಮುಂದೆ ಜ್ಯೋತಿಷ್ಯ, ಭಜನೆ, ಉಪದೇಶಗಳಿಂದ ಪ್ರಖ್ಯಾತನಾದ ಕಮಲಾಕರ ಗುರು ಎನ್ನುವ ದಿಢೀರ್ ಶ್ರೀಮಂತನ ವಶವಾಗಿ ಅವನಿಗೇ ಬೋಳು ತಿಕ್ಕಿದವಳು ಎಂಬುದು ಶಿವಮೊಗ್ಗದ ಸುದ್ದಿ!
ಈ ವಿಚಿತ್ರ ಹೆಂಗಸು ಸುಚಿತ್ರ ಗಂಡನೊಂದಿಗೆ ಖ್ಯಾತೆ ತೆಗೆದು ಸ್ವಾಮಿಯೊಂದಿಗೆ ಸೇರಿ ಗುಟ್ಟಾಗಿ ಸಂಸಾರ ನಡೆಸುತಿದ್ದಳು ಎಂಬ ಮಾಹಿತಿ. ಈ ರಂಗಬಿರಂಗಿ ವ್ಯವಹಾರಗಳಿಂದ ಬೇಸತ್ತ ಸುಚಿತ್ರಾ ಮಗಳು ತಾಯಿಯ ಕಿರುಕುಳ ತಾಳಲಾರದೆ ಅಪ್ಪನೊಂದಿಗೆ ಬಂದು ದೊಡ್ಡಪ್ಪ ವಸಂತ ಮನೆಯಲ್ಲಿ ಸೇರಿಕೊಳ್ಳುತ್ತಾಳೆ.

ಈ ಪ್ಲ್ಯಾಶ್ ಬ್ಯಾಕ್ ಕತೆಯ ಖಳನಾಯಕಿ ಸುಚಿತ್ತಾ ತನ್ನ ಗುರು ಕಮಲಾಕರ ಭಟ್ಟನೊಂದಿಗೆ ಮತ್ತಿಬ್ಬರು ವ್ಯಕ್ತಿಗಳನ್ನು ಜೊತೆಗಿಟ್ಟುಕೊಂಡು ಲೇಡಿಡಾನ್ ಗೆಟಪ್ಪಿನಲ್ಲಿ ಅವರಗುಪ್ಪಾ ಪ್ರವೇಶಿಸುತ್ತಾಳೆ.
ಆಮೇಲೆ ಇದೆಲ್ಲಾ ತಗಾದೆ, ಗಲಾಟೆ ನಡೆದಿದ್ದು!

ಲೇಡಿಡಾನ್ ಹೊಸೂರಿನ ವಿಚಿತ್ರ ತನ್ನ ಸಕಲೆಂಟು ದುರ್ಗುಣಗಳ ಜೊತೆಗೆ ಕುಖ್ಯಾತಿಗಳಿಸಿದ್ದವಳು. ಈ ಅತಿರೇಖಿಯೊಂದಿಗೆ ಸೇರಿಕೊಂಡ ಕಮಲಾಕರ್ ಭಟ್ಟ ತನ್ನ ವಾಹನದೊಂದಿಗೆ ಪ್ರೇಯಸಿಗೆ ನೆರವಾಗಲು ಹೋಗಿ ಈಗ ಕಂಬಿ ಹಿಂದೆ ನಿಂತಿದ್ದಾನೆ! ಈ ಪ್ರಕರಣದಲ್ಲಿ ಕೊಲೆಯಾದ ವಸಂತ, ಗಾಯಗೊಂಡ ಕುಮಾರ ಅಮಾಯಕರು, ಮಹೇಶ ಕೂಡಾ ಒಂಥರಾ ಅಮಾಯಕನೇ ಆದರೆ ಈ ಘಟನೆಯ ಕೇಂದ್ರ ಬಿಂದು ಸುಚಿತ್ರಾ ಎನ್ನುವ ನೀತಿಗೆಟ್ಟ ಹೆಣ್ಣು. ಹಣ-ಹೆಣ್ಣು, ಲಾಭದ ವೈದಿಕತೆಯ ಕಮಲಾಕರ ಭಟ್ಟ ಈ ಪ್ರಕರಣದ ಸೂತ್ರಧಾರ ಈತ ಕೊಲೆಗೆ ಬಳಸಿಕೊಂಡಿದ್ದು ಅನ್ಯ ಧರ್ಮೀಯರನ್ನು! ಸೂಕ್ತ ಪೊಲೀಸ್ ತನಿಖೆಯ ಮೂಲಕ ದುಷ್ಟ ಸುಚಿತ್ರಾ ಮತ್ತು ಕಮಲಾಕರ ಭಟ್ಟ ಜೀವನ ಪರ್ಯಂತ ಜೈಲುವಾಸಿಗಳಾದರೆ ಸಮಾಜಕ್ಕೊಂದು ಒಳ್ಳೆಯ ಸಂದೇಶ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






