


ಮಾರುತಿ ಯಶವoತ್ ಮಾಳವಿ… ೨೦ ವರ್ಷಗಳ ಹಿಂದೆ ಸೈಕಲ್ ಏರಿ ಕೋಲಶಿರಸಿ ಗೆ ಬಂದು ಇಲ್ಲಿ vss ceo ಆದ ಹಿಂದೆ ದೊಡ್ಡ ಕತೆಯೇ ಇದೆ.

ಕೂಡು ಕುಟುಂಬದ ಮಾರುತಿ ಅದ್ಹೇಗೋ ಡಿಗ್ರಿ ಮಾಡಿಕೊಂಡಿದ್ದ ಡಿಗ್ರಿ ಮುಗಿಯುವ ಮೊದಲೇ ಅಪ್ಪನನ್ನು ಕರೆದುಕೊಂಡು ಹಳಿಯಾಳ ಸುಲ್ತಾನರಾದ ಶಾಸಕದ್ವಯರು ಆರ್. ವಿ. ದೇಶಪಾಂಡೆ ಮತ್ತು ಗೊಟನೇಕರ ರ ಹೊಸ್ತಿಲು ತುಳಿದು kdcc ಬ್ಯಾಂಕ್ ನಲ್ಲಿ ಡಿ ದರ್ಜೆ ನೌಕರಿ ಗಿಟ್ಟಿಸಿದ…..

ಹಳಿಯಾಳ, ಶಿರಸಿ ಬಸ್ ಹತ್ತಿ ಓಡಾಡಿಕೊಂಡಿದ್ದ ಮಾರುತಿಗೆ ಕೋಲಶಿರಸಿ vss ಜವಾಬ್ದಾರಿ ಹೊರು ಎಂದಾಗ ಹಾರಿ ಬಂದಿದ್ದ…. ಕೋಲಶಿರ್ಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘಕ್ಕೆ ಬಂದವನೇ ಅಂದಿನ ಆಡಳಿತ ಮಂಡಳಿ ಪಳಗಿಸಿದ ಕೆಲವರಿಗೆ ಸಂತೆ ಖರ್ಚು ಕೊಟ್ಟು.. ಕೆಲವರ ದೇಖರಿಕೆ ನೋಡಿಕೊಳ್ಳುತ ತ್ತಾ ಸಾಗಿದ ಮಾಳವಿ ಆಡಳಿತ ಮಂಡಳಿ ಸದಸ್ಯರಿಗೆ ಚೀಲ ಹಿಡಿಸುತ್ತಾ, ಕೂಲಿ ಕೊಡತೊಡಗಿದ…!!!!


ರೈತರಿಗೆ ಆಡಳಿತ ಮಂಡಳಿ ಹೆದರಿಕೆ, ಆಡಳಿತ ಮಂಡಳಿಗೆ ಗೊಟನೇಕರರ ಸಾಂಗತ್ಯದ ಕತೆ ಹೇಳುತ್ತಾ ಆಡಳಿತ ಮಂಡಳಿಯನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸತೊಡಗಿದ ಕೆಲವರ ಹೆಸರಲ್ಲಿ ಸೊಸೈಟಿಯಲ್ಲಿ ಸಾಲ ಮಾಡಿ ಸದಸ್ಯರಿಗೆ ಬಡ್ಡಿ ನೀಡುತ್ತ ಬೆಳೆಯತೊಡಗಿದ… ಸೈಕಲ್ ಮೇಲೆ ಬಂದವನು ಕಾರ್ಬಾರ್ ಶುರುಹಚ್ಚಿ ದಾಗ ಆಡಳಿತ ಮಂಡಳಿಯೂ ತಲೆದೂಗಿತು. ಉಳಿದ ನೌಕರರಿಗೆ ಬೇಕಾದ ನೆರವು ನೀಡುತ್ತಾ ವ್ಯವಹಾರ ಹೆಚ್ಚಿಸದೇ ನೌಕರರಿಗೆ ವೇತನ ಹೆಚ್ಚಿಸಿಬಿಟ್ಟ… ಸದ ಸ್ಯರಿಗೆ ಸಿಕ್ಕಲ್ಲೇ ಸಾಲ ಕೊಟ್ಟ, ಕೆಲವರ ಖಾತೆಗೆ ರಾಮ ಲಕ್ಷ್ಮಣರ ಲೆಕ್ಕ ಬರೆದ…. ಸೊಸೈಟಿ ರಸೀದಿ ಜೊತೆ ತನ್ನದೆಂದು ಬಡ್ಡಿ ಬರೆದ ಸಾಲಮಾಡದವರ ಹೆಸರಲ್ಲಿ ಖರ್ಚು ಹಾಕಿ ಸಾಲಮನ್ನಾ ಲಾಭ ಪಡೆದ ನೋಟ್ ಬ್ಯಾನ್, ಸಾಲಮನ್ನಾ ಸದಸ್ಯರಿಗೆ ಸಿಗುವ ಲಾಭದ ಇಡಿ ಗಂಟು ಈತನೇ ಹೊತ್ತೊಯ್ದ….
ಉಳಿದ vss ಗಳಿಗೆ ಆಗದ ಕೆಲಸ ಈ ಸೆಕ್ರೆಟರಿ ಯಿಂದ ಆಗುತ್ತಿದೆ ಎನ್ನುವ ಪ್ರಚಾರವನ್ನು ಹರಿಬಿಟ್ಟ…. ದಿಕ್ಕು ತಪ್ಪಿದ್ದೇ ಅಲ್ಲಿ ಕೋಲಶಿರ್ಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಗ್ರಾಮೀಣ ಸಹಕಾರಿ ಸಂಘ ವೋ ರಿಯಲ್ ಎಸ್ಟೇಟ್ ಕಾರ್ಪೊರೇಟ್ ಕಚೇರಿಯೂ ಎನ್ನುವಂತೆ ಬದಲಾಯಿತು ವ್ಯವಸ್ಥೆ..!!

ಪ್ರಶಸ್ತಿ ತಂದು ಕೊಟ್ಟ…. Kdcc ಬ್ಯಾಂಕಿನ ಡಿ ದರ್ಜೆ ಅನುಭವ ಹಳಿಯಾಳದ ಕಾಂಟೆಕ್ಟ್ ಕೂತಲ್ಲೇ ಬೆಳೆಯುತ್ತಿದ್ದ ಸಂಘದ ಸದಸ್ಯರ ಹೊಂದಾಣಿಕೆ ವ್ಯವಹಾರದ ಬಡ್ಡಿ ಹಣ ಮಾರುತಿ ಭಜರಂಗಿ ಹನುಮಂತನಾಗಲು ಇಷ್ಟು ಸಾಕಿತ್ತು…. ಹಡಬೆ ಹಣ ಊರಿನ ಸಹಕಾರ ಹೈಲೆವಲ್ ಕಾಂಟ್ಯಾಕ್ಟ್! ಮಾರುತಿ ಆಡಿದ್ದೇ ಆಟ ಮಾರುತಿಯೆಂದರೆ… ಅಸಾಧ್ಯ ಪುರುಷ ಎಂದು ಕೇವಲ ಕೋಲಶಿರಸಿಯಲ್ಲ ಸಿದ್ದಾಪುರವೇ ಮಾತನಾಡುವಂತಾಯಿತು.. ಅನ್ಯರು ಇವನ ವಿರುದ್ಧ ಚಕಾರ ಎತ್ತದಂತಾಯಿತು ಇದಕ್ಕೆ ಕಾರಣ ಕೋಲಶಿರಸಿ ಮತ್ತು ಸಂಘ ಹಾಗೂ ರಾಜಕೀಯ ಸಂಪರ್ಕ!….(ಮುಂದುವರಿ ಯಲಿದೆ….)



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________




