ಶೇಖರ್ ನಾಯ್ಕ ಕಲಕೈ ಇನ್ನಿಲ್ಲ & ದ್ರೋಣಾವಸಾನ

ಜನಾನುರಾಗಿ ಸಮಾಜಸೇವಕರಾಗಿದ್ದ ಶಿರಸಿ ಕಲಕೈ ಶೇಖರ್ ನಾಯ್ಕ ಸೋಮವಾರ ವಿಧಿವಶವಾದರು. ಕಲಕೈ ಕುಟುಂಬದ ಹಿರಿಯರಾಗಿ ಯಡಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿದ್ದ ನಾಯ್ಕ ಕೆಲವು ದಿವಸಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇತ್ತೀಚಿನ ಕೊನೆಯ ಶಸ್ತ್ರ ಚಿಕಿತ್ಸೆ ಸೇರಿ ಕೆಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ತಮ್ಮ ಅನಾರೋಗ್ಯ, ಅಸಹಾಯಕತೆ ಲೆಕ್ಕಿಸದೆ ಜನರ ಕೆಲಸ ಮಾಡುತಿದ್ದರು. ಅವರ ಸಾವಿಗೆ ಶಿರಸಿ-ಸಿದ್ಧಾಪುರ ತಾಲೂಕುಗಳ ಅನೇಕರು ಮರುಗಿದ್ದಾರೆ.

ದ್ರೋಣಾವಸಾನ ಯಕ್ಷಗಾನ ಸಂಪನ್ನ
ಧಾರ್ಮಿಕ ನೆಲೆಗಟ್ಟಿನ ಮಗ್ಗುಲಲ್ಲಿಯೇ ಸಾಂಸ್ಕೃ ತಿಕ ಆಯಾಮಗಳು ತನ್ನತನವನ್ನು ತೆರೆದುಕೊಂಡಿರುವುದು ಸ್ಪಷ್ಟವಾಗಿದೆ. ಅದರಲ್ಲೂ ನಮ್ಮ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನವು ದೇವಾಲಯಗಳಿಂದ ಪೋಷಿತವಾದುದು ಪರಂಪರೆಯಾಗಿದೆ. ತೇರು, ಜಾತ್ರಗಳಲ್ಲದೇ ಎಲ್ಲ ಉತ್ಸವಾದಿಗಳಲ್ಲೂ ಯಕ್ಷಗಾನ ತಾಳಮದ್ದಳೆ ಅಥವಾ ಪ್ರದರ್ಶನಗಳನ್ನು ಏರ್ಪಡಿಸುವುದು ವಾಡಿಕೆ. ತಾಲೂಕಿನ ಪ್ರಸಿದ್ದ ಶಿವಕ್ಷೇತ್ರವಾದ ಇಟಗಿ ರಾಮೇಶ್ವರ ದೇವರ ರಥೋತ್ಸವದಲ್ಲೂ ಪ್ರದರ್ಶನವನ್ನು ಸಂಘಟಿಸಿರುವುದು ಶ್ಲಾಘನೀಯ ಎಂದು ಯಕ್ಷಗಾನ ಭಾಗವತರಾದ ಸತೀಶ ಹೆಗಡೆ ದಂಟಕಲ್ ಹೇಳಿದರು.

ಇಟಗಿಯ ಕಲಾಭಾಸ್ಕರ ಸಂಸ್ಥೆಯವರು ಭಾರತ ಸರಕಾರದ ಸಂಸ್ಕೃ ತಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಸಿದ್ದಪಡಿಸಿದ ದ್ವಿತೀಯ ಪ್ರಯೋಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. ಪ್ರದರ್ಶನಗಳ ಮೂಲಕವಾಗಿಯೇ ಯಕ್ಷಗಾನ ಕಲೆಯು ಉಳಿಯುತ್ತದೆ. ಈ ಮಾಧ್ಯಮಕ್ಕೆ ಅಪಚಾರವಾಗದಂತೆ ಜನಪ್ರೀಯತೆಯನ್ನು ಉಳಿಸಿಕೊಂಡು ಕೃತಿಯನ್ನು ರಂಗಕ್ಕಿಳಿಸುವುದು ಇಂದಿನ ಸವಾಲಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಇಟಗಿ ಮಹಾಬಲೇಶ್ವರ ಸ್ವಾಗತಿಸಿದರು. ಹವ್ಯಾಸಿ ಕಲಾವಿದರಾದ ರಾಮಕೃಷ್ಣ ಹೆಗಡೆ ತಾರಗೋಡು, ಲಕ್ಕಿಜಡ್ಡಿ ಪರಮೇಶ್ವರ ಹೆಗಡೆ, ಗಜಾನನ ಮುರೂರು, ವೀರೇಂದ್ರ ಗೌಡ ಹಾರ್ಸಿಕಟ್ಟೆ ಮುಂತಾದವರು ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಆಭಾರ ಮನ್ನಣೆಗೈದರು. ವಿಜೃಂಬಣೆಯಿಂದ ನಡೆದ ರಾಮೇಶ್ವರ ದೇವರ ರಥೋತ್ಸವದ ಜೊತೆಗೇ “ದ್ರೋಣಾವಸಾನ” ಹಾಗೂ ರಾಮೇಶ್ವರ ಗೆಳೆಯರ ಬಳಗದ ಆಶ್ರಯದಲ್ಲಿ ಪ್ರಸಿದ್ದ ಕಲಾವಿದರ ಕೂಟದೊಂದಿಗೆ “ರಾಜಾ ರುದ್ರಕೋಪ” ಯಕ್ಷಗಾನ ಪ್ರದರ್ಶನಗಳು ನಡೆದವು. ಶಿರಳಗಿ ತಿಮ್ಮಪ್ಪ ಹೆಗಡೆ (ದ್ರೋಣ) ಇಟಗಿ ಮಹಾಬಲೇಶ್ವರ (ಶ್ರೀಕೃಷ್ಣ) ಅತ್ತಿಮರ್ಡು ನರೇಂದ್ರ (ಅಶ್ವತ್ಥಾಮ) ಶಿರಗುಣಿ ಲಕ್ಷ್ಮೀನಾರಾಯಣ (ಕೌರವ), ಮುರೂರು ನಾಗೇಂದ್ರ (ದುಃಶಾಸನ) ಬೈಲಗದ್ದೆ ಮಾರುತಿ ನಾಯ್ಕ(ಧರ್ಮರಾಯ) ನಿತಿನ್ ದಂಟಕಲ್ (ಅರ್ಜುನ), ಸಂತೋಷ ಹೆಗಡೆ ಹುಣಸೇಮಕ್ಕಿ(ಕರ್ಣ), ಕಾರ್ತಿಕ ದಂಟಕಲ್ (ಸಾತ್ಯಕಿ ಹಾಗೂ ದೃಷ್ಟಧ್ಯುಮ್ನ) ದಂಟಕಲ್ ನಂದನ ಹೆಗಡೆ ಮತ್ತು ಸತೀಶ ಹೆಗಡೆಯ ಭಾಗವತಿಕೆಯಲ್ಲಿ ಗುಡ್ಡೆದಿಂಬ ಮಂಜುನಾಥ ಹಾಗೂ ಕೆ.ಎನ್.ಭಾರ್ಗವರ ಮದ್ದಳೆ-ಚಂಡೆ ನಿನಾದದೊಂದಿಗೆ ಉಡುಪಿ ರಾಜಗೋಪಾಲಾಚಾರ್ಯ ಮತ್ತು ಹೊಸತೋಟ ಮಂಜುನಾಥ ಭಾಗವತರು ರಚಿಸಿದ “ದ್ರೋಣಾವಸಾನ”ವು ಅದ್ಭುತ ರಂಗಕೃತಿಯಾಗಿ ಮೈತಳೆಯಿತು.
ಅಜ್ಞಾತ ಕವಿ ರಚಿಸಿದ ಯಕ್ಷಗಾನ “ರಾಜಾ ರುದ್ರಕೋಪ” ವನ್ನು ಸಂಪ ಲಕ್ಷ್ಮೀನಾರಾಯಣ ಹಾಗೂ ಬೋಳ್ಗೆರೆ ಗಜಾನನ ಭಂಡಾರಿಯವರ ಚಂಡೆ–ಮದ್ದಳೆ ಸಾಥ್ ನೊಂದಿಗೆ ಪ್ರಸಿದ್ದ ಭಾಗವತ ಬ್ರಹ್ಮೂರು ಶಂಕರ ಭಟ್ಟ ಸುಶ್ರಾವ್ಯವಾಗಿ ನಡೆಸಿಕೊಟ್ಟರು. ಹೊನ್ನೆಕೈ ಗಣಪತಿ ಹೆಗಡೆ(ಚಂದ್ರಸೇನ), ಪ್ರಭಾಕರ ಹೆಗಡೆ ಹಣಜಿಬೈಲು (ರಕ್ತಜಂಘ), ಅಶೋಕ ಭಟ್ಟ ಸಿದ್ದಾಪುರ (ನಾರದ), ವಿನಯ ಭಟ್ಟ ಬೇರೊಳ್ಳಿ(ರುದ್ರಕೋಪ), ವೆಂಕಟೇಶ ಹೆಗಡೆ ಬೊಗರಿಮಕ್ಕಿ (ರಕ್ತಕೇಶಿ), ಸದಾಶಿವ ಭಟ್ಟ ಮಲವಳ್ಳಿ(ಚಿತ್ರಾಕ್ಷಿ), ಮಾರುತಿ ನಾಯ್ಕ(ಸಖಿ) ನಾಗಪತಿ ಕೊಪ್ಪ (ಸತ್ಯಶೀಲೆ) ಚಪ್ಪರಮನೆ ಶ್ರೀಧರ ಹೆಗಡೆ (ಹಾಸ್ಯ) ಮುಂತಾದವರ ಸಹಯೋಗವು ಸಾಕಾರವಾಯಿತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *