ಕಾಗೇರಿಯವರ ಒಕ್ಕಲಿಗರ ಓಲೈಕೆ! ಶಶಿಭೂಷಣರ ದೀವರ ಪ್ರೀತಿ ಹಿಂದೆ ಜಾತಿನಿಂದನೆ ಪ್ರಕರಣ ಇರುವುದು ದುರಂತ!

ಇದೇ ತಿಂಗಳು ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಯುವಘಟಕಗಳ ಅಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಲಾಯಿತು. ಈ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವುದು ಬಹಿರಂಗ ಗುಟ್ಟು.

ಈ ಪ್ರಕರಣಕ್ಕಿಂತ ಸ್ವಲ್ಪ ಮೊದಲು ಸಿದ್ಧಾಪುರ ಬಿಳಗಿಯಲ್ಲಿ ಕೆಲವು ಪುಂಡರು ದನದ ವ್ಯಾಪಾರಿ ಗೋವಿಂದ ಗೌಡರ ಮೇಲೆ ಹಲ್ಲೆ ನಡೆಸಿದರು.ಈ ಪ್ರಕರಣದಲ್ಲಿ ಪೊಲೀಸರು ಗೋವಿಂದ ಗೌಡರನ್ನು ಹೊಂದಾಣಿಕೆಗೆ ಬರುವಂತೆ ಒತ್ತಡ ತಂದರು.

ಈ ಘಟನೆಗಳಿಗಿಂತ ಸ್ಪಲ್ಪ ಹಿಂದೆ ಸ್ಥಳಿಯ ಶಾಸಕರು ನಾಮಧಾರಿ ಕಲ್ಯಾಣಮಂಟಪಕ್ಕೆ ಮಂಜೂರಿಯಾದ ಅನುದಾನ ತಡೆಹಿಡಿದರು. ನಂತರ ಸರಿಸುಮಾರು 9 ನೇ ಬಾರಿ ಮುಖ್ಯಂಂತ್ರಿಗಳು ನಾಮಧಾರಿ ಸಭಾಭವನಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಮತ್ತೆ ಸುದ್ದಿಯಾಯಿತು. (ಪ್ರಚಾರ ನೀಡಲಾಯಿತು)

ಈ ಪ್ರಕರಣಗಳನ್ನು ಪ್ರತ್ಯೇಕವಾಗಿ ನೋಡಿದರೆ ಸಂಶಯಕ್ಕೆ ಅವಕಾಶವಿಲ್ಲ ಆದರೆ ಈ ಪ್ರಕರಣಗಳ ಹಿಂದುಮುಂದಿನ ವಿದ್ಯಮಾನಗಳನ್ನು ಅವಲೋಕಿಸಿದರೆ ಸ್ಥಳಿಯ ಶಾಸಕ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ದೊಡ್ಡ ಸಮೂದಾಯಕ್ಕೆ ಸೆಡ್ಡು ಹೊಡೆಯುತ್ತಿರುವಂತೆ ಭಾಸವಾಗುತ್ತಿದೆ.

ಪ್ರಕರಣ ಒಂದು- ಉತ್ತರ ಕನ್ನಡ ಜಿಲ್ಲೆಯ ಬಿ.ಜೆ.ಪಿ. ಕಾಗೇರಿ ಆಪ್ತರಲ್ಲಿ ಪ್ರಮುಖರಾಗಿದ್ದ ಕೆ.ಜಿ.ನಾಯ್ಕ ಹಣಜಿಬೈಲ್‌ ಚುನಾವಣೆ ಮೊದಲು ನಾಮಧಾರಿಗಳಿಗೆ ನಿಗಮ ಮಂಡಳಿ ಅಥವಾ ಪ್ರಮುಖ ಸ್ಥಾನ ಮಾನ ಕೇಳಿ ಕಾಗೇರಿಯವರಿಂದ ದೂರಾಗುವಂತಾಯಿತು.

ಪ್ರಕರಣ 2- ಸಿದ್ಧಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಯ ದೀವರನ್ನು ಓಲೈಸಲು ಕಾಗೋಡು ತಿಮ್ಮಪ್ಪ,ಕುಮಾರ ಬಂಗಾರಪ್ಪ, ಹಾಲಪ್ಪರನ್ನು ಬಳಸಿಕೊಳ್ಳುತಿದ್ದ ಕಾಗೇರಿ ಈಗ ಅರಗಜ್ಞಾನೇಂದ್ರ ಮೂಲಕ ಒಕ್ಕಲಿಗರ ಮನ ಒಲಿಸುವ ಕೆಲಸ ಪ್ರಾರಂಭಿಸಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ.

ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಲಗದ್ದೆಯಲ್ಲಿ ರಾಜಮಾನ್ಯ ಪ್ರಶಸ್ತಿ ನೀಡಲು ಗೃಹಸಚಿವ ಅರಗಜ್ಞಾನೇಂದ್ರರೇ ಬರಬೇಕು, ಅಲ್ಲಿ ಒಕ್ಕಲಿಗರಿಂದ ಅರಗಜ್ಞಾನೇಂದ್ರರಿಗೆ ಸನ್ಮಾನ ಆಗಬೇಕೆಂದು ಕಾರ್ಯಕ್ರಮದ ರೂಪರೇಷೆ ಕೊಟ್ಟವರೇ ಕಾಗೇರಿಯವರಂತೆ!

ಇಲ್ಲಿಗೆ ದೀವರ ಸಹವಾಸ ತನಗೆ ಅಗತ್ಯವಿಲ್ಲ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸವಾಲು ಹಾಕಿದಂತಾಯಿತು. ಇದರ ಮುಂದುವರಿದ ಭಾಗವೆಂದರೆ ತಾವು ಹೇಳಿದ್ದನ್ನು ಮಾತ್ರ ಚಾಚೂ ತಪ್ಪದೆ ಬರೆಯುವವರು, ತಾವು ಹೇಳದೇ ಇದ್ದುದನ್ನು ಬರೆಯುವವರು ಎಂದು ವಿಂಗಡಿಸಿದ್ದಾರಂತೆ.

ಸರಳ-ಸಜ್ಜನ ಎನ್ನುವ ಗುರುತರ ಆರೋಪಗಳಿಗೆ ತುತ್ತಾಗಿರುವ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜಕೀಯ ಸೇಡು ಪ್ರಾರಂಭಿಸಿರುವುದು, ಅದರ ಅಂಗವಾಗಿ ತಮ್ಮ ವಂದಿಮಾಗಧರು, ವಿರೋಧಿಗಳೆಂದು ವಿಂಗಡಿಸಿಕೊಂಡಿರುವುದು. ಇವೆಲ್ಲಕ್ಕಿಂತ ಮುಖ್ಯವಾಗಿ ಅಮಾಯಕ ಪರಿಶಿಷ್ಟರನ್ನು ಎತ್ತಿಕಟ್ಟಿ ತಮ್ಮ ವಿರೋಧಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸುತ್ತಿರುವುದು, ಸ್ವಯಂ ತಾವೇ ಕಾರ್ಯಕ್ರಮ ರೂಪಿಸಿಕೊಂಡು ಸನ್ಮಾನ, ಪ್ರಶಸ್ತಿಯ ಹೆಸರಿನಲ್ಲಿ ತಮ್ಮನ್ನೇ ಬಿಂಬಿಸಿಕೊಳ್ಳುವುದು, ಈ ಕಾರ್ಯಕ್ರಮಕ್ಕೆ ಚಪ್ಪಾಳೆ ತಟ್ಟಲು ಕೆಲವರನ್ನು ಆಹ್ವಾನಿಸಿಕೊಳ್ಳುವುದು ಇವೆಲ್ಲಾ ರಾಜ್ಯ ವಿಧಾನಸಭಾ ಅಧ್ಯಕ್ಷರ ಹೊಸ ಖಯ್ಯಾಲಿಗಳೆಂದರೆ ಅಲ್ಲ ಗಳೆಯುವವರು ಈ ಗೌರವಾನ್ವಿತರಿಗೆ ಮೊದಲೇ ಈ ಚಟ ಇತ್ತೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಒಟ್ಟಾರೆ ರಾಜಕೀಯ ಕ್ಷೇತ್ರ ಹದಗೆಟ್ಟಿದೆ ಎನ್ನುವವರು ಕೆಲವರು ಕಣ್ಮುಚ್ಚಿ ಅದೇನನ್ನೋ ಕುಡಿಯುತಿದ್ದಾರೆ ಎನ್ನುವುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. 40 ವರ್ಷಗಳ ಸುಧೀರ್ಘ ಕಾಲ ಈ ಕ್ಷೇತ್ರದ ಶಾಸಕರಾಗಿದ್ದ ಪರಿಶಿಷ್ಟರ ಅವಧಿಯಲ್ಲಿ ಕಾಣದ ಜಾತಿನಿಂದನೆ ಪ್ರಕರಣಗಳು ರಾಷ್ಟ್ರೀಯವಾದಿಗಳ ಆಡಳಿತದಲ್ಲಿ ಬಹುಸಂಖ್ಯಾತ ಮೂಲನಿವಾಸಿಗಳ ವಿರುದ್ಧ ದಾಖಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿ ವಿರೋಧ, ಜಾತಿ ನಿಂದನೆ, ಜಾತಿಆಧಾರಿತ ಸುಳ್ಳುಪ್ರಕರಣಗಳು ಸಿದ್ಧಾಪುರದಲ್ಲಿ ಪ್ರಾರಂಭವಾಗಿರುವುದು ಉತ್ತರ ಕನ್ನಡ ಜಿಲ್ಲೆಗೇ ಕಳಂಕ. ಅಂದಹಾಗೆ ಈಗ ಕಾಮಗಾರಿ ಭರದಿಂದ ನಡೆಯುತ್ತಿರುವ ಸಿದ್ಧಾಪುರ ನಾಮಧಾರಿ ಸಭಾಭವನಕ್ಕೆ ದೊಡ್ಡಮನೆ ಶಶಿಭೂಷಣ ಹೆಗಡೆಯವರು ಐದು ಲಕ್ಷ ರೂಪಾಯಿ ದೇಣಿಗೆ ನೀಡಿರುವುದು, ಮಾಜಿ ಸಚಿವ ಆರ್.‌ ವಿ. ದೇಶಪಾಂಡೆ ಡಾ. ಶಶಿಭೂಷಣ ಹೆಗಡೆಯವರನ್ನು ಕಾಂಗ್ರೆಸ್‌ ಗೆ ಆಹ್ವಾನಿಸಿರುವುದು ಶಿರಸಿ ಕ್ಷೇತ್ರದ ಸಂಚಲನದ ದೃಷ್ಟಾಂತ ಎನ್ನಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *