ಪ್ರಥಮ ಚುಂಬನಂ ದಂತಭಗ್ನಂನಂತಾದ ಹೋಬಳಿಮಟ್ಟದ ಕುಂದುಕೊರತೆಗಳ (ಜಿಲ್ಲಾಧಿಕಾರಿಗಳ) ಪರಿಶೀಲನಾ ಕಾರ್ಯಕ್ರಮ


ಸರ್ಕಾರದ ಕಾರ್ಯಕ್ರಮಗಳಿಗೆ ಸ್ಫಷ್ಟತೆ ಇದ್ದರೆ ಅವುಗಳಿಂದ ಸಾರ್ವಜನಿಕರಿಗೆ ನೆರವಾಗುತ್ತದೆ. ಆದರೆ ಸರ್ಕಾರಿ ಕಾರ್ಯಕ್ರಮಗಳು ಕಾಟಾಚಾರಕ್ಕೆ ಎಂಬಂತೆ ನಡೆದರೆ ಅವುಗಳಿಂದ ಸಾರ್ವಜನಿಕರಿಗೆ ಲಾಭವೂ ಆಗುವುದಿಲ್ಲ,ಸರ್ಕಾರದ ಉದ್ದೇಶವೂ ಈಡೇರಿದಂತಾಗುವುದಿಲ್ಲ. ಇದೇ ವರ್ಷ ಪ್ರಾರಂಭವಾದ ಹೋಬಳಿ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಂದ ಸಾರ್ವಜನಿಕ ಕುಂದುಕೊರತೆಗಳ ಪರಿಶೀಲನಾ ಸಭೆ ಇಂಥ ವಿಫಲ ಕಾರ್ಯಕ್ರಮಗಳಿಗೊಂದು ಉದಾಹರಣೆ. ಉತ್ತರ ಕನ್ನಡ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳ ಹೋಬಳಿ ಮಟ್ಟದ ಸಾರ್ವಜನಿಕ ಕುಂದು ಕೊರತೆಗಳ ಪ್ರಗತಿ ಪರಶೀಲನಾ ಸಭೆ ಪ್ರಥಮ ಚುಂಬನಂ,ದಂತಭಗ್ನಂ ಎಂಬಂತಾಯಿತು.


ಸಿದ್ಧಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ್‌ ನಲ್ಲಿ ನಡೆದ ಈ ಸಭೆಗಾಗಿ ಸ್ಥಳಿಯಾಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಿತ್ತು. ಸ್ವಾಗತಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಕುಂಬಮೇಳ! ಜಿಲ್ಲಾಧಿಕಾರಿಗಳ ಸ್ವಾಗತಕ್ಕೆ ಯಕ್ಷಗಾನ ವೇಶಧಾರಿ ಹೀಗೆ ಬಾಹ್ಯ ಆಕರ್ಷಣೆಯಾಗಿ ಕಾರ್ಯಕ್ರಮ ಜಿಲ್ಲೆಯ ಗಮನ ಸೆಳೆದಂತಿತ್ತು. ಜಿಲ್ಲಾಡಳಿತದ ಪೂರ್ವತಯಾರಿಯಿಂದ ಸಾಕಷ್ಟು ಜನರೂ ಆಗಮಿಸಿದ್ದರು. ಆದರೆ ವಿಶಿಷ್ಟ ತಯಾರಿಯಿಂದ ಪ್ರಾರಂಭವಾದ ಕಾರ್ಯಕ್ರಮಕ್ಕೆ ತಕ್ಕಂತೆ ಸಾರ್ವಜನಿಕರ ಅಹವಾಲು ಹೇಳಲು ಅವಕಾಶವಾಗಲಿಲ್ಲ. ಜಿಲ್ಲಾಧಿಕಾರಿಗಳನ್ನು ಮುತ್ತಿಕೊಂಡ ಸಾರ್ವಜನಿಕರು ತಮ್ಮ ಅಹವಾಲು ಹೇಳಲು ಗೋಳಾಡಿದರು. ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು  ತಂದ ಅರ್ಜಿಗಳನ್ನು ನೀಡಿ ವೇದಿಕೆಯಲ್ಲಿ ಏನಾಗುತ್ತಿದೆ ಎಂದು ತಿಳಿಯದ ಸಾರ್ವಜನಿಕರು ಪರದಾಡಿದರು.

ಹೋಬಳಿಮಟ್ಟದ ಕುಂದುಕೊರತೆ ಕೇಳಲು ಬಂದ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿದರಾದರೂ ಸಾರ್ವಜನಿಕರಿಗೆ ತಮ್ಮ ಅಹವಾಲುಗಳ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿದ ಉತ್ತರ ಸಮಧಾನ ತರಲಿಲ್ಲ. ಪೂರ್ಣಕುಂಭ ಸ್ವಾಗತ ನೀಡಿದ ಅಂಗನವಾಡಿ ಕಾರ್ಯಕರ್ತೆಯರು ಬಿಸಿಲಲ್ಲಿ ನಿಂತು ಹೆಣಗಿದ್ದು, ಕೆಲವು ಪ್ರಮುಖ ಅಹವಾಲುಗಳನ್ನಾದರೂ ಸಾರ್ವಜನಿಕರಿಗೆ ಕೇಳುವಂತೆ ಧ್ವನಿವರ್ಧಕದ ಮೂಲಕ ಹೇಳಿಸಿ ಅವುಗಳಿಗೆ ಜಿಲ್ಲಾಧಿಕಾರಿಗಳೂ ಮೈಕ್‌ ನಲ್ಲೇ ಉತ್ತರಿಸಿದ್ದರೆ ಸೇರಿದ್ದ ಸಾರ್ವಜನಿಕರಿಗೆ ಈ ಕುಂದುಕೊರತೆಗಳ ಪರಿಶೀಲನೆ ಅರ್ಥವಾಗುತಿತ್ತೇನೋ. ಒಟ್ಟಾರೆ ಬಹುನಿರೀಕ್ಷೆಯ ಜಿಲ್ಲಾಮಟ್ಟದ ಕಾರ್ಯಕ್ರಮ ಹೋಬಳಿಮಟ್ಟದ ಕುಂದುಕೊರತೆಗಳ ಪರಿಶೀಲನಾ ಸಭೆಯ ಪ್ರಾರಂಭೋತ್ಸವ ಸರ್ಕಾರದ ಅಗ್ಗದ ಕಾರ್ಯಕ್ರಮ ಎನ್ನುವ ಟೀಕೆಗೆ ಒಳಗಾಗುವಂತಾಯಿತು. ಹೋಬಳಿ ಮಟ್ಟದ ವೈಯಕ್ತಿಕ ಸಮಸ್ಯೆಗಳಷ್ಟೇ ಅಲ್ಲದೆ ಸಾರ್ವಜನಿಕ ಅಹವಾಲುಗಳಿಗೂ ಸರಿಯಾದ ಉತ್ತರ ಪರಿಹಾರದ ಭರವಸೆ ದೊರೆಯದಿರುವುದು ಈ ಕಾರ್ಯಕ್ರಮದ ವಿಫಲತೆಯ ವಿಷಯ ವೈರಲ್‌ ಆಗುವುದಕ್ಕೆ ಸೀಮಿತವಾದಂತಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *