ನಾಯಕರ ಪ್ರತಿಷ್ಠೆಯಿಂದ ಕಾಂಗ್ರೆಸ್‌ ಮಂಕಾಗುತ್ತಿದೆಯೆ? ಭಾಗ-೦3 ಬಂಗಾರಪ್ಪ ಮಾಡಿದ ಜಾದೂ ಮುರಿದ ದೇಶಪಾಂಡೆ ಕಟ್ಟಿದ್ದೇನು?

ಉತ್ತರ ಕನ್ನಡ ಜಿಲ್ಲೆಯ ರಾಜಕಾರಣವನ್ನು ಬುಗುರಿಯಂತೆ ಆಡಿಸಿದವರು ಇಬ್ಬರೇ ಇಬ್ಬರು ನಾಯಕರು ಅವರಲ್ಲಿ ಮೊದಲಿಗರು ಮತ್ತು ಪ್ರಭಾವಿಗಳು ಸಾರೆಕೊಪ್ಪ ಬಂಗಾರಪ್ಪ, ಬಂಗಾರಪ್ಪ ಕಾಲದಲ್ಲಿ ಕಾಂಗ್ರೆಸ್‌ ಉತ್ತರ ಕನ್ನಡ ಜಿಲ್ಲೆಯ ೬ ವಿಧಾನ ಸಭಾ ಕ್ಷೇತ್ರಗಳಲ್ಲಿ ಮೂರಕ್ಕಿಂತ ಹೆಚ್ಚು ಮತ್ತು ಒಂದು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ಅನಾಯಾಸವಾಗಿ ಗೆಲ್ಲುತಿತ್ತು. ನಂತರ ಮೂಲ ಕಾಂಗ್ರೆಸ್‌ ನವರೇ ಆದ ಹಳಿಯಾಳದ ದೇಶಪಾಂಡೆ ಜನತಾ ದಳದಿಂದ ಕಾಂಗ್ರೆಸ್‌ ಪ್ರವೇಶಿಸಿದರು ನೋಡಿ ಆಗ ರಾಜಕೀಯ ಚಿತ್ರಣ ಬದಲಾಗತೊಡಗಿತು. ಮಾಜಿ ಸಚಿವ ಆರ್.‌ ವಿ. ದೇಶಪಾಂಡೆ ಶುಭಲತಾ ಅಸ್ನೋಟಿಕರ್‌ ರನ್ನು ರಾಜಕೀಯಕ್ಕೆ ತಂದರು. ಎಸ್. ಎಲ್.ಘೊಟ್ನೇಕರ್‌,ವಿ.ಡಿ. ಹೆಗಡೆ, ಶಾಂತರಾಮ ಹೆಗಡೆ ಜೆ.ಡಿ. ನಾಯ್ಕ, ರಮಾನಂದ ನಾಯಕ ಸೇರಿದಂತೆ ಅನೇಕರನ್ನು ರಾಜಕೀಯಕ್ಕೆ ತಂದರು. ಆದರೆ ಮಾರ್ಗರೇಟ್‌ ಆಳ್ವರಂತೆಯೇ ದೇಶಪಾಂಡೆ ತನ್ನ ಶಿಷ್ಯಂದಿರನ್ನು ಗೆಲ್ಲಿಸಿ, ಜನಪ್ರತಿನಿಧಿಗಳನ್ನಾಗಿ ಮಾಡುವಲ್ಲಿ ಯಶಸ್ವಿಯಾಗಲಿಲ್ಲ.

ನೆರೆಯ ಶಿವಮೊಗ್ಗ ಜಿಲ್ಲೆಯ ಬಂಗಾರಪ್ಪ ಉತ್ತರ ಕನ್ನಡದಲ್ಲಿ ರಾಜಕೀಯ ಪ್ರಯೋಗ ನಡೆಸುತಿದ್ದ ಕಾಲದಲ್ಲಿ ಕಾಂಗ್ರೆಸ್‌ ಗೆಲ್ಲುತಿದ್ದ ೪-೫ ಕ್ಷೇತ್ರಗಳಲ್ಲಿ ಈಗ ಉಳಿದಿರುವುದು ಏಕೈಕ ಕ್ಷೇತ್ರ ಹಳಿಯಾಳ.

ಹಳಿಯಾಳದ ಶಾಸಕರು, ರಾಜ್ಯದ ಮಂತ್ರಿಗಳೂ ಆಗಿ ಆರ್.‌ ವಿ. ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆನ್ನು ೨೫ ವರ್ಷಕ್ಕೂ ಹೆಚ್ಚುಕಾಲ ಆಳಿದ್ದಾರೆ. ದೇಶಪಾಂಡೆಯವರ ರಾಜಕೀಯ ಶಕ್ತಿ, ಹಣಬಲ, ವರ್ಚಸ್ಸಿಗೆ ತಕ್ಕಂತೆ ಅವರ ಶಿಷ್ಯಗಣ ಬೆಳೆಯಲೇ ಇಲ್ಲ. ಆದರೂ ದೇಶಪಾಂಡೆ ಶಾಂತರಾಮ ಹೆಗಡೆ, ಬೀಮಣ್ಣ ನಾಯ್ಕ ಸೇರಿದಂತೆ ಅನೇಕರಿಗೆ ಅವಕಾಶ ನೀಡಿದರು.ಆದರೆ ಕಾಂಗ್ರೆಸ್‌ ಬೆಳೆಯುವ ಬದಲು ಜಿಲ್ಲೆಯಲ್ಲಿ ನಿಧಾನವಾಗಿ ಕಮಲ ತಲೆ ಎತ್ತಿತು.

ಈಗಲೂ ದೇಶಪಾಂಡೆ ಸಿದ್ಧಾಪುರದಿಂದ ಆರ್.‌ ಎಂ. ಹೆಗಡೆ,ಕೆ.ಜಿ.ನಾಗರಾಜ್‌ (ಹಿಂದೆ-ಷಣಮುಖ ಗೌಡರ್)‌ ಸೇರಿದ ಕೆಲವರನ್ನೇ ಡಿ.ಸಿ.ಸಿ., ಕೆ.ಪಿ.ಸಿ.ಸಿ. ಗೆ ಕಳುಹಿಸಿ ಎಂದು ಫರ್ಮಾನು ಹೊರಡಿಸುತ್ತಾರೆ.

ಕೆ.ಪಿ.ಸಿ.ಸಿ.ಆಯ್ಕೆ ಮಾಡುವ ವಿವಿಧ ಸ್ಥರದ ನಾಯಕರ ಆಯ್ಕೆಯಲ್ಲಿ ಶಂಭು ಶೆಟ್ಟಿ (ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಸಮೀತಿ) ದೀಪಕ್‌ ದೊಡ್ಡೂರು (ಯುವ ಸಬಲೀಕರಣ ಮತ್ತು ಉದ್ಯೋಗ ಸಮೀತಿ) ಸುಜಾತಾ ಗಾಂವಕರ್‌ (ಮಹಿಳಾ ಸಬಲೀಕರಣ) ರಮಾನಂದ ನಾಯಕ ( ರಾಜಕೀಯ,ಆರ್ಥಿಕ ವಿದ್ಯಮಾನಗಳ ಸಮೀತಿ ಅಧ್ಯಕ್ಷ) ಶಿವಾನಂದ ಹೆಗಡೆ (ಬೂತ್‌ ರಚನೆ,ತಾಲೂಕಾ ಘಟಕ ರಚನೆ ಸಮೀತಿ ಅಧ್ಯಕ್ಷ)

ಈ ಸಂಘಟನಾತ್ಮಕ ಜವಾಬ್ಧಾರಿಗಳಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಹುಸಂಖ್ಯಾತ ಮತದಾರರಾದ ಮರಾಠಾ (ಮರಾಠಿ ಮಾತೃಭಾಷೆ) ನಾಯಕರು ಎಷ್ಟಿದ್ದಾರೆ. ಜಿಲ್ಲೆಯ ಹೆಚ್ಚನ ಜನಸಂಖ್ಯೆ ಮತ್ತು ಮತದಾರರಾದ ನಾಮಧಾರಿಗಳ ಪ್ರಾತಿನಿಧ್ಯವೇನು?( ಭೀಮಣ್ಣ ನಾಯ್ಕ ಡಿ.ಸಿ.ಸಿ. ಅಧ್ಯಕ್ಷತೆಯಿಂದ ನಿರ್ಗಮಿಸುತಿದ್ದಾರೆ.)

ಜಿಲ್ಲೆಯ ಮೂರನೇ ದೊಡ್ಡ ಸಂಖ್ಯೆಯ ಮತದಾರರಾದ ಒಕ್ಕಲಿಗರಿಗೆ ಎಲ್ಲಿ ಅವಕಾಶ ನೀಡಲಾಗಿದೆ. ಕಾಂಗ್ರೆಸ್‌ ನ ಸಾಂಪ್ರದಾಯಿಕ ಮತದಾರರು ಜಿಲ್ಲೆಯಮೂರನೇ ದೊಡ್ಡ ಸಂಖ್ಯೆಯ ಮತದಾರರಾದ ಅಲ್ಪಸಂಖ್ಯಾತರಿಗೆ ಯಾವ ಹುದ್ದೆ,ಗೌರವ, ಈ ಬಹುಸಂಖ್ಯಾತರ ನಂತರ ಬರುವ ೫ ನೇ ಬಹುಸಂಖ್ಯಾತ ಮತದಾರರಾದ ಹವ್ಯಕರಲ್ಲಿ ಒಬ್ಬರು, ಯಾವ ಮತಕ್ಷೇತ್ರದ ನಿರ್ಣಾಯಕ ಮತದಾರರಲ್ಲದ ನಾಡವರಿಗೆ, ಶೆಟ್ಟರಿಗೆಹೆಚ್ಚಿನ ಅವಕಾಶ ಏನನ್ನೂ ಸೂಚಿಸುತ್ತದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಮತ್ತು ಕನಿಷ್ಟ ಮೂರು ವಿಧಾನಸಭಾ ಕ್ಷೇತ್ರಗಳ ನಿರ್ಣಾಯಕ ಮತದಾರರಾದ ಸ್ಥಳಿಯ ದೀವರು ಅಥವಾ ನಾಮಧಾರಿಗಳಿಗೆ ಕಾಂಗ್ರೆಸ್‌ ನಲ್ಲಿ ಸಿಗುತ್ತಿರುವ ಮಾನ್ಯತೆ ಏನು? ಜಿಲ್ಲೆಯ ನಿರ್ಲಕ್ಷಿತ ಜನಸಮೂಹವಾದ ಒಕ್ಕಲಿಗರಲ್ಲಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ(ಎನ್.ಎಚ್.ಗೌಡ)‌ ಬಂಗಾರಪ್ಪ ಕಾಲದಲ್ಲಿ (ಕೆ. ಎಚ್.) ಗೌಡ ಬಿಟ್ಟರೆ ಒಕ್ಕಲಿಗರೊಬ್ಬರೂ ಶಾಸಕರಾಗಲು ಸಾಧ್ಯವಾಗಿಲ್ಲ.

ಭಟ್ಕಳದಲ್ಲಿ ನಾಮಧಾರಿಗಳ ನೆರವಿನಿಂದ ಮುಸ್ಲಿಂರನ್ನು ಶಾಸಕರನ್ನಾಗಿಸಲಾಗಿತ್ತು ಆದರೆ ಅಲ್ಪಸಂಖ್ಯಾತರಾದ ಮಾರ್ಗರೇಟ್‌ ಆಳ್ವ,ದೇಶಪಾಂಡೆ ಯಜಮಾನಿಕೆ ನೇತೃತ್ವದ ಕಾಲದಲ್ಲಿ ಮೃಧುಹಿಂದುತ್ವದ ಪರಿಣಾಮ ಮುಸ್ಲಿಂರೂ, ನಾಮಧಾರಿಗಳೂ ಸೋಲುವಂತಾಯಿತು. ಈ ಸ್ಥಿತಿಯಲ್ಲಿ ಮರಾಠರ ಮತಬಾಹುಳ್ಯದ ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರಗಳಲ್ಲಿ ಮತಬಲವಿಲ್ಲದ ಸಣ್ಣ ಸಮೂದಾಯಗಳು ಗೆಲ್ಲುವಂತಾದದ್ಹೇಗೆ? ಆರ್.ವಿ.ದೇಶಪಾಂಡೆ ತಮ್ಮ ಹಣಬಲ,ರಾಜಕೀಯ ಶಕ್ತಿ,ಸುಧೀರ್ಘ ಅನುಭವದ ಆಧಾರದಲ್ಲಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮೇಲ್ವರ್ಗವನ್ನು ಅಧಿಕಾರಕ್ಕೇರಿಸುವ ಹಠದಲ್ಲಿ ಕಾಂಗ್ರೆಸ್‌ ಹಿತ ಬಲಿಕೊಟ್ಟು ಬಿ.ಜೆ.ಪಿ.ಗೆ ನೆರವಾದರೆ?

ಇಂಥ ಅನೇಕ ಅನುಮಾನ,ಸವಾಲುಗಳಿಗೆ ದೇಶಪಾಂಡೆ ನಿರ್ದೇಶಿತ ಉತ್ತರ ಕನ್ನಡ ಕಾಂಗ್ರೆಸ್‌ ಗುರಿಯಾಗಿರುವುದು ಈ ಕಾಲದ ಸತ್ಯ. ಈ ನಡುವೆ ದೇಶಪಾಂಡೆ ತಮ್ಮ ಶಿಷ್ಯರನ್ನೆಲ್ಲಾ ಬಿ.ಜೆ.ಪಿ.ಗೆ ಕಳುಹಿಸಿ ಕ್ರಮೇಣ ಇವರೂ ಕಮಲದ ಮೆರವಣಿಗೆಯಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ ಎನ್ನುವವರಿದ್ದಾರೆ.ಈಗಲೂ ಕೊನೆಗೂ ಉಳಿಯುವ ಪ್ರಶ್ನೆ ಬಂಗಾರಪ್ಪ ಕಟ್ಟಿದ ಕಾಂಗ್ರೆಸ್‌ ನ ಭದ್ರ ಕೋಟೆಯನ್ನು ಉರುಳಿಸಿ ದೇಶಪಾಂಡೆ ಬಿ.ಜೆ.ಪಿ. ಬೆಳೆಯಲು ಅವಕಾಶ ಮಾಡಿಕೊಟ್ಟರೆ? ಹಾಗಾದರೆ ಹಿಂದುತ್ವ,ಮೋದಿ ಬಗ್ಗೆ ಸೌಮ್ಯರಾಗಿರುವ ದೇಶಪಾಂಡೆಯವರ ಒಳಗುಟ್ಟೇನು?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *