ಕಾಡು ಕುರುಬ ನಂತರ ಕಾನ್‌ ದೀವರ ಎಸ್.ಟಿ. ಬೇಡಿಕೆಗೆ ಹೆಚ್ಚಿದ ಒತ್ತಡ

ಬಹಳ ವರ್ಷಗಳ ಬೇಡಿಕೆ ನಂತರ ಕಾಡು ಕುರುಬರಿಗೆ ಪರಿಶಿಷ್ಟ ಪಂಗಡದ ಸ್ಥಾನ ಮಾನ ನೀಡಿದ ನಂತರ ರಾಜ್ಯದ ಕಾನ್‌ ದೀವರಿಗೆ ಎಸ್‌.ಟಿ. ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಈಗ ಬಲಗೊಳ್ಳುತ್ತಿದೆ.

ಚಿಕ್ಕಮಂಗಳೂರು,ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿಶೇ ಶವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಸಿಸುವ ದೀವರನ್ನು ಮೊದಲಿನಿಂದಲೂ ಕಾಡು ದೀವರು, ಕಾನು ದೀವರು, ಬಗನೆ ದೀವರು ಎಂದು ಕರೆಯುವುದು ರೂಢಿ. ಸುಮಾರು೨೦ಲಕ್ಷ ದಷ್ಟು ಜನಸಂಖ್ಯೆ ಹೊಂದಿರುವ ಈ ದೀವರ ಬಗ್ಗೆ ಸಮಾಜವಾದಿ ಮುಖಂಡ ಮಾಜಿ ಶಾಸಕ ದಿ. ಗೋಪಾಲಗೌಡರು ೭೦-೮೦ ರ ದಶಕದಲ್ಲೇ ಮಲೆನಾಡಿನ ಕಾನುದೀವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು.

ಇದೇ ಅವಧಿಯಲ್ಲಿ ಕಾಗೋಡು ಹೋರಾಟದ ರೂವಾರಿ ಎಚ್.‌ ಗಣಪತಿಯಪ್ಪ ಕೂಡಾ ಈಡಿಗರ ಉಪಪಂಗಡ ಎನ್ನುವ ಕಾನುದೀವರು ಅರಣ್ಯ ವಾಸಿಗಳು, ರೈತರು,ಬುಡಕಟ್ಟುಗಳಾಗಿರುವ ಕಾನ್‌ ದೀವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಪ್ರತಿಪಾದಿಸಿದ್ದರು.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಕಾಡುವಾಸಿಗಳಾಗಿ,೧೯೭೦ ರ ದಶಕದ ವರೆಗೂ ಗೇಣಿದಾರರೂ ಬಡವರಾಗಿದ್ದ ದೀವರಲ್ಲಿ ಸೊರಬಾದ ಬಂಗಾರಪ್ಪ ಮುಖ್ಯಮಂತ್ರಿಗಳಾಗಿರುವುದು ಕಾಗೋಡು ತಿಮ್ಮಪ್ಪ ಹಿರಿಯ ನಾಯಕ, ಮಾಜಿಸಚಿವರಾಗಿರುವುದು ಸೇರಿ ತಮ್ಮ ಜನಸಂಖ್ಯೆ ಇರುವ ಅನೇಕ ಕ್ಷೇತ್ರಗಳಲ್ಲಿ ಕನಿಷ್ಟ ಶಾಸಕರು, ಸಂಸದರೂ ಆಗಿರದ ಕಾನ್‌ ದೀವರ ಆಚರಣೆ, ರೂಢಿ ಸಂಪ್ರದಾಯಗಳು ನೈಜ ಬುಡಕಟ್ಟುಗಳಾದ ಹಾಲಕ್ಕಿ ಒಕ್ಕಲಿಗರು,ಕಾಡು ಕುರುಬರ ರೀತಿಯಲ್ಲಿವೆ.

ಜನಾಂಗೀಯ ಅಧ್ಯಯನಗಳು, ಸಾಹಿತ್ಯಕ ದಾಖಲೆಗಳು ಮತ್ತು ರಾಷ್ಟ್ರಕವಿ ಕುವೆಂಪು ಮತ್ತು ನಾ.ಡಿಸೋಜಾರ ಸಾಹಿತ್ಯಗಳಲ್ಲಿ ಕೂಡಾ ನೈಜ ಬುಡುಕಟ್ಟುಗಳಾಗಿ ಚಿತ್ರಿತವಾಗಿರುವ ಮಲೆನಾಡಿನ ದೀವರು ಕಾಡುವಾಸಿಗಳಾಗಿ ಕೆಲವು ಕಾಲಸೈನಿಕರಾಗಿ ಕೆಲಸಮಾಡಿದ್ದಾರೆ. ಇದೇ ಆಧಾರದಲ್ಲಿ ಕಾನ್‌ ದೀವರನ್ನು ಹಳೆಪೈಕರು ಎಂದು ಕೂಡಾ ಕರೆಯಲಾಗುತ್ತದೆ .https://m.youtube.com/watch?v=30oxVRVlhpk

ಅಚಲ ಸ್ವಾಭಿಮಾನಿಗಳೂ,ಧೈರ್ಯವಂತರೂ ಆದ ಕಾನ್‌ ದೀವರು ನಿಸ್ಸೀಮ ಬೇಟೆಗಾರರು ಬೇಟೆ ಮತ್ತು ಬಗನೆ ಕಳ್ಳು ಅಥವಾ ಕಾಡು ಸೇಂದಿ ಇಳಿಸುವ ಈ ಸಮದಾಯ ಪರಿಶಿಷ್ಟ ಪಂಗಡವರೆನ್ನುವುದಕ್ಕೆ ಬೇಡರಂತೆ ಅವರು ಆರಾಧಿಸುವ ಕುಮಾರ ರಾಮನ ಚರಿತ್ರೆ ಕೂಡಾ ಪೂರಕವಾಗಿದೆ. ರಾಜರ ಆಳ್ವಿಕೆಯಲ್ಲಿ ಸೈನಿಕರಾಗಿ ಬಿಡುವುನ ವೇಳೆಯಲ್ಲಿ ಕೃಷಿಕರಾಗಿ ಹವ್ಯಾಸಿ ಬೇಟೆ ಮತ್ತು ಕಾಡು ಉತ್ಫನ್ನ ಸಂಗ್ರಹಿಸುವ ಅಲೆಮಾರಿಗಳಾಗಿ ತಮ್ಮ ವಿಕಾಸದ ವೀಶಿಷ್ಟ್ಯಮಯ ಪಥದ ವೈಭವದ ಚರಿತ್ರೆಯ ತುಂಬಾ ಬುಡಕಟ್ಟು ಜಾನಪದವೇ ತುಂಬಿರುವ ಈ ಕಾನ್‌ ದೀವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಮೂಲಕ ಅವರಲ್ಲಿನ ಅತಿ ಬಡವರ ಅಭಿವೃದ್ಧಿಗೆ ನೆರವಾಗಬೇಕಾದ ಅನಿವಾರ್ಯತೆ ಬಗ್ಗೆ ಈಗ ಎಲ್ಲೆಡೆ ಚರ್ಚೆ ಪ್ರಾರಂಭವಾಗಿದೆ. https://m.youtube.com/watch?v=kGkjklqtYiE&t=3s

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *