ನೋಟು ಅಮಾನ್ಯೀಕರಣಕ್ಕೆ 6 ವರ್ಷ: ಇದು ‘ಆರ್ಥಿಕ ನರಮೇಧ’, ‘ಅಪರಾಧ ಕೃತ್ಯ’ ಎಂದು ಕರೆದ ವಿರೋಧ ಪಕ್ಷಗಳು

ನೋಟು ಅಮಾನ್ಯೀಕರಣವನ್ನು ‘ಆರ್ಥಿಕ ನರಮೇಧ’ ಮತ್ತು ‘ಅಪರಾಧ ಕೃತ್ಯ’ ಎಂದು ಬಣ್ಣಿಸಿರುವ ವಿರೋಧ ಪಕ್ಷಗಳು, 2016 ರಲ್ಲಿ ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

Representational Image

ನವದೆಹಲಿ: ನೋಟು ಅಮಾನ್ಯೀಕರಣವನ್ನು ‘ಆರ್ಥಿಕ ನರಮೇಧ’ ಮತ್ತು ‘ಅಪರಾಧ ಕೃತ್ಯ’ ಎಂದು ಬಣ್ಣಿಸಿರುವ ವಿರೋಧ ಪಕ್ಷಗಳು, 2016 ರಲ್ಲಿ ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

2016 ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ 1,000 ಮತ್ತು 500 ರೂಪಾಯಿಗಳ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು.

ಭಯೋತ್ಪಾದಕ ನಿಧಿಯನ್ನು ನಿರ್ಮೂಲನೆ ಮಾಡುವುದರ ಜೊತೆಗೆ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು ಮತ್ತು ಕಪ್ಪುಹಣವನ್ನು ತಡೆಯುವುದು ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶಗಳಾಗಿವೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಮತ್ತು ರಾಜ್ಯಸಭೆಯಲ್ಲಿ ಪಕ್ಷದ ನಾಯಕ ಡೆರೆಕ್ ಒ’ಬ್ರಿಯಾನ್, ನೋಟು ಅಮಾನ್ಯೀಕರಣ ಮಾಡಿದ ಈ ಕ್ರಮವು ‘ಗಿಮಿಕ್’ ಆಗಿದೆ. 6 ವರ್ಷಗಳ ಹಿಂದೆ, ಇದೇ ದಿನ ಆರ್ಥಿಕ ನರಮೇಧವಾಗಿ ಹೊರಹೊಮ್ಮಿದ ದಿನ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕರೆ ನೀಡಿದ್ದರು. ಈ ನಿರ್ಧಾರವನ್ನು ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಮೊದಲಿಗೆ ಮಮತಾ ಬ್ಯಾನರ್ಜಿ ಅವರು ‘ಈ ಕಠಿಣ ನಿರ್ಧಾರವನ್ನು ಹಿಂತೆಗೆದುಕೊಳ್ಳಿ’ ಎಂದು ಹೇಳಿದರು. ಆದರೆ, ಕೆಲವು ವಾರಗಳ ನಂತರವೇ ಇತರರು ಇದನ್ನು ಒಪ್ಪಿದರು’ ಎಂದು ಬ್ರಿಯಾನ್ ಗಮನಸೆಳೆದರು.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ‘ಎಲ್ಲಾ ಉತ್ತಮ ಪ್ರಜ್ಞೆ, ಪುರಾವೆಗಳು ಮತ್ತು ಸಲಹೆಗಳಿಗೆ ವಿರುದ್ಧವಾಗಿ ನೋಟು ಅಮಾನ್ಯೀಕರಣದ ಕ್ರಿಮಿನಲ್ ಕೃತ್ಯದ ಮೇಲೆ ಸರ್ಕಾರವು ತನ್ನದೇ ಆದ ಡ್ರಮ್ ಅನ್ನು ಹೊಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.

ಇದು ಭಾರತದ ಆರ್ಥಿಕತೆಯನ್ನು ಕೊಂದು ಹಾಕಿದ ಮೋದಿ ಮತ್ತು ಅವರ ಸರ್ಕಾರದ ಸೊಕ್ಕಿನ ಆರನೇ ವಾರ್ಷಿಕೋತ್ಸವ. ನೋಟು ಅಮಾನ್ಯೀಕರಣವು ಚಲಾವಣೆಯಲ್ಲಿರುವ ದಾಖಲೆಯ 30.88 ಲಕ್ಷ ಕೋಟಿ! ನಗದು ಸೇರಿದಂತೆ ಅವ್ಯವಸ್ಥೆಗೆ ಕಾರಣವಾಗಿದೆ. ಇದೊಂದು ಎಲ್ಲಕ್ಕಿಂತಲೂ ಕೆಟ್ಟ ಸುಳ್ಳು – ‘ಈ ಸಂಕಟ ಕೇವಲ 50 ದಿನಗಳು’ ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ಹಿರಿಯ ನಾಯಕ ಬಿನೋಯ್ ವಿಶ್ವಂ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ‘ಆರು ವರ್ಷಗಳ ಹಿಂದೆ, ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವ ಕ್ರಮವನ್ನು ಬಹಳ ಸಂಭ್ರಮದಿಂದ ತೆಗೆದುಕೊಳ್ಳಲಾಯಿತು. ಕಪ್ಪುಹಣ ಮತ್ತು ಭಯೋತ್ಪಾದನೆಯನ್ನು ಕೊನೆಗೊಳಿಸುವ ಭರವಸೆಯನ್ನು ನೀಡಲಾಯಿತು. ಇದು ದೇಶಕ್ಕೆ ಹೇಗೆ ಸಹಾಯ ಮಾಡಿದೆ ಎಂಬುದನ್ನು ಪರಿಶೀಲಿಸುವ ಸಮಯ ಇದೀಗ ಬಂದಿದೆ’ ಎಂದು ಹೇಳಿದ್ದಾರೆ.

ಅಂದು ನೀಡಿದ್ದ ಭರವಸೆಗಳ ಮೌಲ್ಯಮಾಪನ ಮಾಡುವ ಸಮಯ ಬಂದಿದೆ. ನೋಟು ಅಮಾನ್ಯೀಕರಣದ ಬಗ್ಗೆ ಶ್ವೇತಪತ್ರ ಮಂಡಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿನಂತಿಸಲಾಗಿದೆ’ ಎಂದು ತಿಳಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *