..ಇರುವುದೆಲ್ಲವ ಬಿಟ್ಟು.. ಸಣ್ಣ ಕತೆ

ಇಬ್ಬರು ಆತ್ಮೀಯ ಸ್ನೇಹಿತರು ಸದಾ ಕೆಲಸ,ಪ್ರಗತಿ, ಹಣ ಎಂದೆಲ್ಲಾ ಯೋಚಿಸುತಿದ್ದರು. ತಮ್ಮ ಸಾಮರ್ಥ್ಯಕ್ಕೆ ಈ ಊರೇನು,ತಾಲೂಕು, ಜಿಲ್ಲೆ, ರಾಜ್ಯ, ರಾಜಧಾನಿ,ದೇಶದ ರಾಜಧಾನಿ ಗಳೆಲ್ಲಾ ಬೇಡ ವಿದೇಶಕ್ಕೇ ಹೋಗಿ ದುಡಿದು ಬಂದು ಇಲ್ಲಿ ಏನಾದರೂ ಮಾಡೋಣ ಎಂದು ನಿರ್ಧರಿಸಿ ಹೊರದೇಶಕ್ಕೂ ಹೊರಟು ಹೋದರು. ಅಲ್ಲಿ ಹಗಲಿರುಳೆನ್ನದೆ ದುಡಿದರು. ನಿರಂತರ ದುಡಿಮೆ ಒಬ್ಬನಿಗೆ ಸಕ್ಕರೆ ಖಾಯಿಲೆಯನ್ನೂ ದಯಪಾಲಿಸಿತು. ಸಕ್ಕರೆ ಖಾಯಿಲೆಯಿಂದ ಹೆದರಿದ ಮೊದಲ ಸ್ನೇಹಿತ ಮತ್ತೊಬ್ಬನ ಬಳಿ ಅಲವತ್ತುಕೊಂಡ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂದು ಬೇಸರಿಸಿದ. ಇದಕ್ಕೆ ನಿರುತ್ತರನಾದ ಮೊದಲಸ್ನೇಹಿತ ಸಕ್ಕರೆ ಖಾಯಿಲೆ ಬದುಕನ್ನೇ ಮುಳುಗಿಸುವಷ್ಟು ಅಪಾಯಕಾರಿಯೇ ಎಂದು ಯೋಚಿಸಿದ.

ಡಯಾಬಿಟಿಕ್‌ ಸ್ನೇಹಿತನಿಗೆ ನೀನು ಊರಿಗೆ ಮರಳು ಅಲ್ಲಿ ನಿನ್ನ ಸಕ್ಕರೆ ಖಾಯಿಲೆ ಚಿಕಿತ್ಸೆ ಜೊತೆಗೆ ಈ ಬಾರಿ ಶಾಸಕನಾಗುವ ಬಗ್ಗೆಯೂ ತಯಾರಿ ಮಾಡಿಕೊ ನಿನ್ನ ಎಲ್ಲಾ ಕೆಲಸಕ್ಕೆ ನನ್ನ ನೆರವಂತೂ ಇದ್ದೇ ಇರುತ್ತದೆ ಎಂದೂ ಭರವಸೆ ಕೊಟ್ಟ. ಸಕ್ಕರೆ ಸ್ನೇಹಿತ ಊರಿಗೆ ಮರಳಿದ ಸಕ್ಕರೆ ಖಾಯಿಲೆ ನಿಯಂತ್ರಿಸಿಕೊಂಡ ಸಾಮಾಜಿಕ ಕೆಲಸಗಳನ್ನೂ ಶುರು ಹಚ್ಚಿಕೊಂಡ ನೋಡುನೋಡುತ್ತಲೇ ಸಕ್ಕರೆ ಸ್ನೇಹಿತನ ಪ್ರಚಾರ,ಪ್ರಭಾವ ಬೆಳೆಯತೊಡಗಿತು. ಚುನಾವಣೆ ಸಮೀಪಿಸಿ ಶಾಸಕನೂ ಆಗಿಬಿಟ್ಟ. ಎಲ್ಲದಕ್ಕೂ ನೆರವಾಗುತಿದ್ದ ಸ್ನೇಹಿತ ಗ್ರಾಮಕ್ಕೆ ಮರಳಿ ಸ್ನೇಹಿತನ ಸಾಧನೆ ಮೆಚ್ಚಿ ನಾನೂ ಕೆಲವು ವರ್ಷ ಮಾತ್ರ ಅಲ್ಲಿ, ಕಡೆಗೆ ಇತ್ತ ಬಂದರಾಯಿತು. ಎಂದುಕೊಂಡ ಅದಕ್ಕೊಂದು ನೀಲನಕ್ಷೆಯನ್ನೂ ಹಾಕಿಕೊಂಡ. ಈಗ ಎಲ್ಲವೂ ಅಂದುಕೊಂಡಂತೇ ನಡೆಯತೊಡಗಿತ್ತು. ಸಕ್ಕರೆ ಸ್ನೇಹಿತ ಎಣಿಸಿದಂತೆ ಎಲ್ಲವೂ ನಡೆಯುತ್ತಿರಲಿಲ್ಲ. ಸಕ್ಕರೆಪ್ರಮಾಣ ಹೆಚ್ಚತೊಡಗಿತು. ಕನಸು ನನಸಾಗಿತ್ತಾದರೂ ಸದನದ ಒಳಗೆ ಹೊರಗೆ ಎಲ್ಲವೂ ಈತನಿಗೆ ವ್ಯತಿರಕ್ತವಾಗೇ ನಡೆಯತೊಡಗಿದ್ದವು.

ಸಕ್ಕರೆ ಸ್ನೇಹಿತ ಆತ್ಮೀಯ ಸ್ನೇಹಿತನಿಗೆ ವಾಸ್ತವ ತಿಳಿಸಿದ. ಶಾಸಕತ್ವ, ಜನಪ್ರತಿನಿಧಿ ಎಂದರೆ ನಾವಂದುಕೊಂಡಂತಲ್ಲ ಕಾಲಮಿತಿಯಲ್ಲ ನಾವು ಎಲ್ಲವನ್ನೂ ಸಾಧಿಸಲೂ ಸಾಧ್ಯವಿಲ್ಲ. ನನಗ್ಯಾಕೋ ಮರಳಿ ನೀನಿದ್ದಲ್ಲಿಗೇ ಬಂದು ಬಿಡಬೇಕು ಎನಿಸುತ್ತದೆ ಎಂದು ಎಲ್ಲಾ ಸಾಧನಗಳ ಮೂಲಕ ಸ್ಫಷ್ಟಪಡಿಸಿದ. ಆತ್ಮೀಯ ಸ್ನೇಹಿತ ಹುಟ್ಟೂರಿಗೆ ಮರಳಬೇಕು ಸಕ್ಕರೆ ಸ್ನೇಹಿತ ವಿದೇಶಕ್ಕೆ ಹಾರಬೇಕು ಎನ್ನುವ ಯೋಚನೆಗಳೆಲ್ಲಾ ಮನೋವೇಗದಂತೇ ನಡೆದುಹೋದವು. ಸಕ್ಕರೆ ಸ್ನೇಹಿತ ಊರುಬಿಟ್ಟ, ಆತ್ಮೀಯ ಸ್ನೇಹಿತ ಮರಳಿಬಿಟ್ಟ ವಿಧಿಲಿಖಿತವೋ? ಕಾಕತಾಳೀಯವೋ ಎಲ್ಲವೂ ಸಣ್ಣ ಸಮಯದಲ್ಲೇ ಸಂದು ಹೋದವು.

ಸಕ್ಕರೆ ಸ್ನೇಹಿತನ ಶಾಸಕತ್ವದ ರಾಜೀನಾಮೆ ಆತ್ಮೀಯ ಸ್ನೇಹಿತನ ಕೆಲಸದ ರಾಜೀನಾಮೆಏಕಸಮಯದಲ್ಲೇ ನಡೆದುಹೋದವು. ಸಕ್ಕರೆ ಸ್ನೇಹಿತ ವಿದೇಶ ಸೇರಿಕೊಂಡ ಅವನ ದುಡುಕಿನ ತೀರ್ಮಾನದ ಬಗ್ಗೆ ಆತ್ಮೀಯ ಸ್ನೇಹಿತನಿಗೂ ಹಿತವೆನಿಸಲಿಲ್ಲ. ಇಬ್ಬರ ದಾರಿಗಳೂ ಬೇರೆ ಆದಂತಾದವು ವಿದೇಶದಿಂದ ಮರಳಿದ ಆತ್ಮೀಯ ಸ್ನೇಹಿತ ಕೃಷಿ ಆಯ್ದುಕೊಂಡ ಮಾಜಿ ಶಾಸಕರೂ ಮರಳಿ ಕೃಷಿಗೇ ಧುಮಿಕಿದರು. ಬರಗಾಲ ಹೆಚ್ಚಾಯಿತು. ಸಕ್ಕರೆ ಕಡಿಮೆಯಾಯಿತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *