

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್ ನಲ್ಲಿದ್ದು ಏನು ಪ್ರಯೋಜನ?

ಎಂದು ಬಹುತೇಕ ಮೇಲ್ವರ್ಗದವರು ಕೆಲವು ಮಾಧ್ಯಮದ ಸ್ನೇಹಿತರು ನಮಗೆ ಆಗಾಗ ಎಚ್ಚರಿಸುತಿದ್ದರು. ಅವರ ಮಾತು ನಂಬಿ ನಾವು ಮೋಸಹೋದೆವು. ಬಿ.ಜೆ.ಪಿ. ಬಡವರ ವಿರೋಧಿ ಎಂದು ಗೊತ್ತಿದ್ದರೂ ನಾವು ಆ ಪಕ್ಷ ಸೇರಿದೆವು. ಈಗ ಈ ಮೇಲ್ವರ್ಗದ ಮಾಧ್ಯಮಗಳ ಮಂದಿ, ಕೆಲವು ಶ್ರೀಮಂತರ ಕುಟಿಲತೆ ಅರ್ಥವಾಗುತ್ತಿದೆ. ಈಗ ನಾವು ಕಾಂಗ್ರೆಸ್ ನಲ್ಲಿದ್ದರೆ ಮರ್ಯಾದೆ ಇರುತಿತ್ತು ಈ ಪಕ್ಷಕ್ಕೆ ಬಂದು ನಮ್ಮ ಪರಿಸ್ಥಿತಿ ಬೇಡುವ ಬದುಕಾಗಿದೆ.
– ಒಬ್ಬ ಬಿ.ಜೆ.ಪಿ. ಮುಖಂಡ


ನಾವು ಬಿ.ಜೆ.ಪಿ. ಪಕ್ಷ ಕಟ್ಟಿದವರು, ನಮ್ಮ ಅನಂತಕುಮಾರ ಸರ್ ಇದ್ದಾಗ ನಮಗೆ ಒಂದು ನಂಬಿಕೆಯಾದರೂ ಇತ್ತು. ಮೂವತ್ತು ವರ್ಷ ಜನಪ್ರತಿನಿಧಿಗಳ ಜೊತೆಗೆ ಕಳೆದ ನಮಗೆ ಈಗ ನಿಜವಾದ ಜನಪ್ರತಿನಿಧಿ ಯಾರು? ಅಭಿವೃದ್ಧಿ ಮಾಡುವವರು ಹ್ಯಾಗಿರುತ್ತಾರೆ ಎನ್ನುವುದು ಭೀಮಣ್ಣ ನಾಯ್ಕರನ್ನು ನೋಡಿ ಅರ್ಥವಾಗುತ್ತಿದೆ. ಮೂವತ್ತು ವರ್ಷ ಆಗದ ಅಭಿವೃದ್ಧಿ ಈಗ ಆಗುತ್ತಿದೆ. ಒಣ ಭಾಷಣ ನಂಬಿ ನಾವು ಹಿಂದುತ್ವ- ದೇಶಪ್ರೇಮ ಎಂದು ಮೋಸಹೋದ ಬಗ್ಗೆ ನಮಗೇ ನಾಚಿಕೆಯಾಗುತ್ತಿದೆ. ಕಾಂಗ್ರೆಸ್ ನವರು ನಮಗೆ ಆಹ್ವಾನಿಸುತಿದ್ದಾರೆ. ಪಕ್ಷಭೇದ ವಿಲ್ಲದೆ ಕೆಲಸ ಮಾಡುವ ಜನಸಾಮಾನ್ಯರಿಗೆ ಸ್ಫಂದಿಸುವ ಭೀಮಣ್ಣ ನವರ ಕಾರಣಕ್ಕೆ ನಾವು ಬಿ.ಜೆ.ಪಿ.ಗೆ ಗುಡ್ ಬೈ ಹೇಳಿದರೂ ಆಶ್ಚ ರ್ಯವಿಲ್ಲ…
ಮತ್ತೊಬ್ಬ ಬಿ.ಜೆ.ಪಿ. ಮುಖಂಡ.
ಅನಂತಕುಮಾರ ಹೆಗಡೆ ಕೆಲಸ ಮಾಡುತ್ತಿರಲಿಲ್ಲ, ಆದರೆ ನಮ್ಮನ್ನು ಗೌರವಿಸುತಿದ್ದರು. ಕಾಗೇರಿ ಬರೀ ಭಾಷಣ ಮಾಡುತ್ತಾ ನಮಗೆ ಆಕಾಶ ತೋರಿಸಿ ತಾವು ಗೆಲ್ಲುತಿದ್ದರು, ನಮಗೆ ದೇಶ, ದೇಶಪ್ರೇಮದ ಗುಂಗು ತುಂಬಿ ಬಿ.ಜೆ.ಪಿ. ನಾಯಕರು ತಾವು ಶ್ರೀಮಂತರಾದರು. ದೇಶಪ್ರೇಮ, ಹಿಂದುತ್ವ,ರಾಷ್ಟ್ರೀಯತೆ ಎಂದು ಜನರನ್ನು ನಂಬಿಸಿ ಮೋಸ ಮಾಡುವ ಬಿ.ಜೆ.ಪಿ. ನಾಯಕರು ಬ್ರಷ್ಟಾ ಚಾರ ಮಾಡಿ ಶ್ರೀಮಂತರಾಗುತ್ತಾರೆ. ಆದರೆ ಕಾರ್ಯಕರ್ತರಿಗೆ ನೆರವಾಗುವುದಿಲ್ಲ. ಕಾಂಗ್ರೆಸ್ ದೇಶ ಕಟ್ಟಿದ ಪಕ್ಷ ,ಅಲ್ಲಿ ಮುಖಂಡರು ತಾವೂ ಬೆಳೆಯುತ್ತಾರೆ ಬಡವರಿಗೆ ನೆರವಾಗುತ್ತಾರೆ. ಬಿ.ಜೆ.ಪಿ. ಬೂಟಾಟಿಕೆ, ಕಪಟ ನಾಟಕ ನಮಗೆ ಅರ್ಥವಾಗಿದೆ. ಬಡವರನ್ನು ವಿರೋಧಿಸುವ ಈ ಪಕ್ಷದಲ್ಲಿ ನಾವಿದ್ದಿದ್ದಕ್ಕೆ ನಮಗೇ ನಾಚಿಕೆಯಾಗುತ್ತಿದೆ…. ಇನ್ನೊಬ್ಬ ಬಿ.ಜೆ.ಪಿ. ಪ್ರಮುಖ.
ಹೀಗೆ ಬಿ.ಜೆ.ಪಿ. ಮತ್ತು ಬಿ.ಜೆ.ಪಿ. ನಾಯಕತ್ವ, ಮುಖಂಡರ ಬಗ್ಗೆ ಯಾವ ಮುಲಾಜೂ ಇಲ್ಲದೆ ಛೀ… ಥೂ.. ಎನ್ನುತ್ತಿರುವವರು ಅನ್ಯಪಕ್ಷದವರಲ್ಲ ಬದಲಾಗಿ ಬಿ.ಜೆ.ಪಿ. ಮುಖಂಡರು. ಈವರೆಗೆ ಸಿದ್ಧಾಪುರ-ಶಿರಸಿಗಳಲ್ಲಿ ದೇಶಪ್ರೇಮ, ಸೈನಿಕರು, ರಾಷ್ಟ್ರೀಯತೆ, ಹಿಂದುತ್ವ ಎಂದು ಬೋಂಗು ಬಿಟ್ಟು ಧರ್ಮದ ಹೆಸರಿನಲ್ಲಿ ಜಾತಿ ತುಷ್ಟೀಕರಣ ಮಾಡಿದ ನಾಯಕರಿಂದಾದ ದ್ರೋಹವಿದು. ಬಿ.ಜೆ.ಪಿ.ಯ ಜಿಲ್ಲಾಧ್ಯಕ್ಷರು, ರಾಜ್ಯ ಕಾರ್ಯಕಾರಿ ಸಮೀತಿ ಸದಸ್ಯರಾಗಿದ್ದ ಕೆ.ಜಿ.ನಾಯ್ಕರಿಗೆ ವಿ.ಪ. ಸದಸ್ಯರನ್ನಾಗಿಸುತ್ತೇವೆ ಎಂದು ಗುತ್ತಿಗುಡ್ಡ ತೋರಿಸಿ ವಂಚಿಸಲಾಯಿತು.
ಜಿ.ಪಂ. ಸದಸ್ಯರಾಗಿದ್ದ ನಾಗರಾಜ್ ನಾಯ್ಕ ಬೇಡ್ಕಣಿಯವರಿಗೆ ಬಿ.ಜೆ.ಪಿ. ಸರ್ಕಾರ ಸ್ಥಳೀಯ ವಿ.ಸ.ಸದಸ್ಯರೇ
ಸಚಿವ,ವಿ.ಪ. ಅಧ್ಯಕ್ಷರಾಗಿದ್ದಾಗಲೂ ಬೆಂಬಲಿಸಲಿಲ್ಲ, ಬದಲಾಗಿ ತಮ್ಮವರನ್ನು ಓಲೈಸಲಾಯಿತು.
ಹೀಗೆ ಬಿ.ಜೆ.ಪಿ. ಪಕ್ಷ ಅದರ ನಾಯಕತ್ವ ಶಿರಸಿ-ಸಿದ್ದಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಡಿದ ರಗಳೆ ಸಹಸ್ರಾರು! ಆ ಪಕ್ಷ, ಅದರ ನಾಯಕತ್ವದ ನಂಬಿಕೆ ಎಂದರೆ….. ಏನೂ ಮಾಡದೆಯೂ ಹಿಂದುತ್ವ, ದೇಶಪ್ರೇಮ, ರಾಷ್ಟ್ರೀಯತೆಗಳ ಸುಳ್ಳು ಸೋಗಿನಲ್ಲಿ ಚುನಾವಣೆ ಗೆಲ್ಲಬಹುದು ಎಂಬುದು & ಅದಕ್ಕೆ ಮುಖಂ ಡರು, ಕಾರ್ಯಕರ್ತರ ದರ್ಧೇನು? ಎನ್ನುವುದು.!
ಹೀಗೆ ಜನಪ್ರತಿನಿಧಿಗಳು, ನಾಯಕರು ಆಗಿ ಮೂರು ದಶಕಗಳ ವರ್ಷ ಕಳೆದರೂ ಹಿಂದುತ್ವ ನಂಬಿಕೊಂಡಿದ್ದ ಕಾರ್ಯಕರ್ತರು,ಬೆಂಬಲಿಗರಿಗೆ ಸಿಕ್ಕಿದ್ದು ಚೊಂಬು! ಇವೆಲ್ಲಾ ಶಿರಸಿ-ಸಿದ್ಧಾಪುರ ಸೇರಿದ ಉತ್ತರ ಕನ್ನಡ ಜಿಲ್ಲೆಯ ಪ್ರಸಕ್ತ ವಿದ್ಯಮಾನ ಈ ವಾಸ್ತವದ ಹಿನ್ನೆಲೆಯಲ್ಲಿ ನೋಡಿದಾಗ ಸಿದ್ಧಾಪುರದ ಬಿ.ಜೆ.ಪಿ. ಬಂಡಾಯದ ಅಸಲಿಯತ್ತು ಅರ್ಥವಾಗುತ್ತದೆ.
ಸಿದ್ಧಾಪುರದಲ್ಲಿ ಉಳಿದ ಮಲೆನಾಡು, ಕರಾವಳಿ ಪ್ರದೇಶದಂತೆ ಜನರಿಗೆ ಕೋಮುವಾದದ ಎಣ್ಣೆ ಮೆತ್ತಿ ಬಿ.ಜೆ.ಪಿ. ಮತ ಪಡೆಯುವುದು ಅಷ್ಟು ಸುಲಭವಲ್ಲ.. ಈ ಸತ್ಯ ಅರಿತಿದ್ದ ಬಿ.ಜೆ.ಪಿ., ಶಿರಸಿ ಶಾಸಕರಾಗಿದ್ದ ವಿವೇಕಾನಂದ ವೈದ್ಯರ ಬದಲು ಕಾಗೇರಿಯವರನ್ನು ಲಾಂಚ್ ಮಾಡಲು ಬಳಸಿಕೊಂಡಿದ್ದು ಸ್ಥಳೀಯರ ನಾಯಕರನ್ನು ಅವರನ್ನು ಗ್ರಾ.ಪಂ.. ಪ.ಪಂ. ಮಟ್ಟದಲ್ಲಿ ಕೂರಿಸಿ ತಾವು ಸಂಸದ, ಶಾಸಕ, ಸಚಿವ, ವಿಧಾನಸಭಾ ಅಧ್ಯಕ್ಷರಾಗುವ ತಂತ್ರ ಬಳಸುತಿದ್ದ ಅನಂತ ಹೆಗಡೆ & ವಿಶ್ವೇಶ್ವರ ಹೆಗಡೆ ಕಾಗೇರಿಗಳು ತಮಗೆ ಅನುಕೂಲವಾಗುವಂತೆ ಗ್ರಾ.ಪಂ. ಮತ್ತು ತಾ.ಪಂ. ಮಟ್ಟಗಳಲ್ಲಿ ತಮ್ಮ ಬೆಂಬಲಿಗರನ್ನು ಕೂರಿಸಿ ಜಾತಿ ಸಮೀಕರಣದ ಮೂಲಕ ಚುನಾವಣೆ ಗೆಲ್ಲುವ ವೈದಿಕ ತಂತ್ರಗಳನ್ನು ಬಳಸಿ ಗೆದ್ದಿದ್ದರು.
ಈ ಯಶಸ್ಸಿನಿಂದ ಹಿಗ್ಗಿದ ಈ ಪರಿವಾರ ಶಿರಸಿ ಕ್ಷೇತ್ರದ ಬಹುಸಂಖ್ಯಾತರ ಬದಲು ಇಲ್ಲಿಯ ಅಲ್ಪಸಂಖ್ಯಾತ ಸೂಕ್ಷ್ಮ ಜಾತಿಗಳನ್ನು ಎತ್ತಿಕಟ್ಟಿದಂತೆ ಮಾಡಿ ರಾಜಕೀಯ ಲಾಭಕ್ಕೆ ಸ್ಕೆಚ್ ತಯಾರಿಸಿದ್ದರು. ಇದರ ಭಾಗವಾಗೇ ಸಿದ್ಧಾಪುರದ ಬಿ.ಜೆ.ಪಿ. ಮಂಡಳದ ಅಧ್ಯಕ್ಷರಾಗಿದ್ದ ಮಾರುತಿ ನಾಯ್ಕ ಬದಲು ಕಾಗೇರಿ ಕಾಂಗ್ರೆಸ್ ನಿಂದ ಬಂದಿದ್ದ ತಿಮ್ಮಪ್ಪ ಎಂ.ಕೆ. ಯವರಿಗೆ ಮಂಡಳದ ಅಧ್ಯಕ್ಷರನ್ನಾಗಿಸಿದ್ದರು. ಈ ಕಾರ್ಯತಂತ್ರದ ಪೂರ್ವತಯಾರಿ ಎನ್ನುವಂತೆ ಕೆಲವು ಕಾಲೇಜುಗಳ ಉಪಾಧ್ಯಕ್ಷತೆಯನ್ನು ಪ್ರಭಾವಿಗಳಿಗೆ ದಯಪಾಲಿಸಿ ಒಂದೇ ಏಟಿಗೆ ಎರಡು ಮುಖಂಡರನ್ನು ಹೊಡೆಯುವಂತೆ ಸಿದ್ಧಾಪುರದ ಪ್ರಮುಖರಾದ ಕೆ.ಜಿ.ನಾಯ್ಕ ಮತ್ತು ಮಾರುತಿ ನಾಯ್ಕರಿಗೆ ಗುರಿ ಮಾಡಿದ್ದರು. ಇವುಗಳ ಪರಿಣಾಮ ಬಿ.ಜೆ.ಪಿ.ಯ ಆಂತರಿಕ ವಲಯ ಕೊತಕೊತನೆ ಕುದಿಯುತಿತ್ತು.
ಜಿಲ್ಲಾ ಬಿ.ಜೆ.ಪಿಯ ಪ್ರಮುಖರಾಗಿದ್ದ ಅನಂತ ಹೆಗಡೆ ತನ್ನ ನಾಲಿಗೆಯ ಕಾರಣಕ್ಕೆ ಬಿ.ಜೆ.ಪಿ.ಯ ಹೈಕಮಾಂಡ್ ಗೆ ವಿರೋಧವಾಗಿದ್ದರು. ಅನಂತ ಹೆಗಡೆ ನಂತರ ಆ ಸ್ಥಾನ ತುಂಬಲು ಜಿಲ್ಲೆಯಲ್ಲಿ ಯಾವೊಬ್ಬ ನಾಯಕನಿಗೂ ಸಾಧ್ಯವಾಗದಂತೆ ತಂತ್ರ ಹೆಣೆದಿದ್ದ ಅನಂತ ಹೆಗಡೆ ಮತ್ತು ಕಾಗೇರಿ ಹೆಗಡೆಗಳಿಗೆ ತಾವಿಲ್ಲದೆ ಪಕ್ಷವಿಲ್ಲ ಎಂಬ ಭ್ರಮೆಯೂ ಇತ್ತು. ಅಂತಿಮವಾಗಿ ಜಿಲ್ಲೆಯ ಯಜಮಾನಿಕೆಗೆ ಅವರಿಬ್ಬರಲ್ಲೇ ನಾನೋ?, ನೀನೋ ಎನ್ನುವ ಸ್ಫರ್ಧೆ ಎದುರಾದಾಗ ಕಾಗೇರಿ ತನ್ನ ಸಂಘ-ಪ್ರಭಾವ, ಹಣ ಬಳಸಿ ಅನಂತ ಹೆಗಡೆಯ ವಿರುದ್ಧವೇ ಸಮರ ಸಾರಿದರು. ಈ ಸಂಘರ್ಷದಲ್ಲಿ ಗೆದ್ದ ಕಾಗೇರಿ ಅನಂತನಂಥ ಅನಂತನನ್ನೇ ಮೂಲೆಗೆ ತಳ್ಳಿದ್ದೇನಿ ಎಂದು ಎರಡನೇ ಹಂತದ ನಾಯಕರಿಗೆ ನೀವ್ಯಾವ ಲೆಕ್ಕ ನನಗೆ ಎಂದು ಹೂಂಕರಿಸತೊಡಗಿದರು.
ಇದರ ಪರಿಣಾಮ ಒಂದೋದೇ ತಾಲೂಕಿನಲ್ಲಿ ಬಿ.ಜೆ.ಪಿ. ಮನೆ ಮೂರು ಬಾಗಿಲಾಗತೊಡಗಿತು! ಸಿದ್ಧಾಪುರದ್ದು ಮೊದಲ ಕಂತಾದರೆ ಇನ್ನುಳಿದ ಹನ್ನೊಂದು ತಾಲೂಕುಗಳ ಕತೆ ಇದಕ್ಕಿಂತ ಭಿನ್ನವಿಲ್ಲ. ಈ ವಿದ್ಯಮಾನದಲ್ಲಿ ಸಿದ್ಧಾಪುರ ಬಿ.ಜೆ.ಪಿ. ತಾಲೂಕಾ ಮಂಡಳದ ಅಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರ ವಿರುದ್ಧ ಬಂಡಾಯದ ಬಾವುಟ ಹಾರಿಸಿದೆ. ಸಿದ್ದಾಪುರವನ್ನನುಸರಿಸಿ ಕಾರವಾರ, ಭಟ್ಕಳ, ಮುಂಡಗೋಡು ಸೇರಿದಂತೆ ಜಿಲ್ಲೆಯ ನಾಲ್ಕು ದಿಕ್ಕುಗಳಲ್ಲಿ ಬಿ.ಜೆ.ಪಿ.ಯ ಬಂಡಾಯ ಬಾವುಟ ಹಾರಾಟಕ್ಕೆ ದಿನಗಣನೆ ಪ್ರಾರಂಭವಾಗಿದೆ, ಶಾಸಕ ಭೀಮಣ್ಣ ನಾಯ್ಕ ಶಿರಸಿ ಕ್ಷೇತ್ರದಲ್ಲಿ ಕೊಟ್ಟ ಟಾನಿಕ್ ಇಡೀ ಜಿಲ್ಲೆಯಲ್ಲಿ ಕೆಲಸ ಮಾಡುವ ಲಕ್ಷಣಗಳು ಮೇಲ್ನೋಟಕ್ಕೆ ಕಾಣುತ್ತಿವೆ. ಬಡವರ ಗ್ಯಾರಂಟಿ ಯೋಜನೆ ಹೀಯಾಳಿಸುವ ಬಿ.ಜೆ.ಪಿ.ಗೆ ಬಡವರು ಲತ್ತೆಯೇಟು ಕೊಡಲು ಕಾದು ಕೂತಿದ್ದಾರೆ. ಇನ್ನೇನು ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತರ ಕನ್ನಡದ ಕಮಲ ಕಸದಂತೆ ಅರಬ್ಬೀ ಸಮುದ್ರ ಸೇರಲಿರುವುದಕ್ಕೆ ಸಿದ್ಧಾಪುರದ ಬಿ.ಜೆ.ಪಿ. ಬಂಡಾಯ ನಾಂದಿಯಾಗಲಿದೆ ಎಂದು ಸಾಕ್ಷಾತ್ ಹಿಂದುತ್ವವಾದಿಗಳೇ ಭವಿಷ್ಯ ನುಡಿಯುತಿದ್ದಾರೆ. ಅಂದಹಾಗೆ…. ಕಮಲ ಗುಡಿಸಲು ಪೊರಕೆ ಹಿಡಿಯಲಿರುವವರು ಬೇರೆ ಪಕ್ಷದವರಲ್ಲ ಕೇಂದ್ರ-ರಾಜ್ಯಗಳಲ್ಲಿ ಅಧಿಕಾರ ಹಿಡಿದೂ ತಮ್ಮನ್ನು ಕೇಳದ ಮುಖಂಡರಿಗೆ ವಿರೋಧಿಗಳಾಗಿರುವ ಬಿ.ಜೆ.ಪಿ.ಯ ಹಿಂದುತ್ವವಾದಿ!? ಕಾರ್ಯಕರ್ತರು!!!
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________







3 Comments