


ಪ್ರಕಾಶ್ ರಾಜ್ ಯಾನೆ ಪ್ರಕಾಶ್ ರೈ ಅದ್ಭುತ ವ್ಯಕ್ತಿತ್ವ ಅವಿಭಜಿತ ದಷ್ಕಿಣಕನ್ನಡ ಜಿಲ್ಲೆಯಿಂದ ಹೊರಟು ವಿಶಾಲ ಭಾರತದ ಅನೇಕ ಭಾಷೆಗಳಲ್ಲಿ ನಟಿಸಿ ಕನ್ನಡಕ್ಕೆ ಹೆಸರು ತಂದಿರುವ ಇವರು ಸರಳ, ನೇರ ಮನುಷ್ಯ. ಅವರ ಸಿದ್ಧಾಂತ, ನಿಷ್ಠೂರತೆ ಹಿಂದೆ ಮನುಷ್ಯತ್ವವಿದೆ, ಜನಪರ ಕಾಳಜಿಯ ಮಾನವೀಯ ಮನುಷ್ಯ ಮಾತ್ರ ಪ್ರಕಾಶ್ ರಾಜ್ ರಷ್ಟು ಸರಳವಾಗಿ, ನೇರವಾಗಿ, ದಿಟ್ಟವಾಗಿ, ಪ್ರಾಮಾಣಿಕವಾಗಿ ಇರಬಲ್ಲ.

ಪ್ರಕಾಶ್ ನಮಗೆಲ್ಲಾ ಹತ್ತಿರವಾದದ್ದು ಅವರ ಅಭಿನಯದಿಂದ ೯೦ ರ ದಶಕದಲ್ಲಿ ತೆರೆಕಂಡ ಯಾರೇ ನೀನು ಚೆಲುವೆ ಚಿತ್ರದಲ್ಲಿ ಅವರ ಮಾಡಿದ್ದ ಅತಿಥಿ ಪಾತ್ರ ಎಷ್ಟು ಇಷ್ಟವಾಗಿತ್ತೆಂದರೆ… ಕ್ಷಣಕ್ಷಣಂ ನ ವೆಂಕಟೇಶ್, ಓಂ ನ ಶಿವರಾಜ್ ಕುಮಾರ್, ಮಂದಾರಹೂವೆಯ ರಮೇಶ್, ಅನುರಾಗ ಸಂಗಮದ ಕುಮಾರ ಗೋವಿಂದರ ಪಾತ್ರಗಳಂತೆ…ಅವರು ನಮ್ಮ ಭಾವಭಿತ್ತಿಯಿಂದ ಮರೆಯಾಗಲೇ ಇಲ್ಲ.
ಸದಾ ಸಿಡುಕುವ ಭಾವನ ಒಳಗೆ ಒಬ್ಬ ಶ್ರೇಷ್ಠ ಮನುಷ್ಯನಿದ್ದಾನೆ ಎಂದು ಸಾಬೀತುಮಾಡುವ ಯಾರೇನೀನು ಚೆಲುವೆಯ ಭಾವನ ಪಾತ್ರದಂತೆ ಪ್ರಕಾಶ್ ರಾಜ್ ಪಾತ್ರಗಳು ಬಹಿರಂಗದಲ್ಲಿ ಖಳನಾಗಿ ಅಂತರಂಗದಲ್ಲಿ ಮಾನವೀಯತೆ ಸ್ಪುರಿಸುವ ಜೀವಂತ ಮನುಷ್ಯನಂತಹ ಆಕೃತಿಗಳು.


ಭಾಷೆ, ಕಣ್ಣೋಟ, ಗಾಂಭೀರ್ಯಗಳಿಂದ ಪಾತ್ರವನ್ನು ಪರಕಾಯಪ್ರವೇಶ ಮಾಡುವ ಪ್ರಕಾಶ್ ರಾಜ್ ಭಾರತದ ನಂ೧ ಖಳನಾಯಕ ಪಾತ್ರಧಾರಿ.
ಈ ಪ್ರಕಾಶ್ ರೈಯವರನ್ನು ಬರಹ, ಅಭಿನಯ, ಹೋರಾಟ, ಜನಪರ ಧ್ವನಿಯಾಗಿ ಗುರುತಿಸುವ ನಮಗೆ ತೆರೆಯ ಮೇಲೆ ಕೂಡಾ ಪಕ್ಕದ ಮನೆಯ ಸಂಭಾವಿತ ಅಂಕಲ್ನಂತೆ ಅನೇಕರಿಗೆ ಭಾಸವಾಗುವ ಹಿಂದೆ ಅವರ ಕ್ರೀಯಾಶೀಲತೆ, ಜನಪರತೆಗಳಿವೆ.
ಈ ಪ್ರಕಾಶ್ ರ ಒಗ್ಗರಣೆ ಸಿನೆಮಾವನ್ನು ತುಸು ವಿಳಂಬವಾಗೇ ನೋಡುವ ಅವಕಾಶ ನನಗೆ ದೊರೆಯಿತು. ಒಗ್ಗರಣೆಯ ಅವರ ಪಾತ್ರ ನಮ್ಮ ನಡುವಿನ ಮನುಷ್ಯನಂತೆ ನೋಡುವಾಗ ಇವರು ಮತ್ತವರ ಪಾತ್ರಗಳು ನಮಗೇಕೆ ಇಷ್ಟವಾಗುತ್ತವೆ ಎನ್ನುವುದು ಅರ್ಥವಾಗುತ್ತದೆ.
ಒಗ್ಗರಣೆಯಲ್ಲಿ ನಾಯಕಿಗೆ ಚಾಲನಾ ಪರವಾನಗಿ ಪಡೆಯುವ ಸಂದರ್ಭದಲ್ಲಿ ಪಾತ್ರವೊಂದು ಅದು ನಮ್ಮ ಸ್ಟುಡೆಂಟ್ ಎಂದು ಉಸರುತ್ತದೆ.
ಪ್ರತಿಶಿಕ್ಷಕ, ತರಬೇತುದಾರನಿಗೆ ತನ್ನ ವಿದ್ಯಾರ್ಥಿ ಎನ್ನುವ ಹೆಮ್ಮೆ. ಆ ಅಭಿಮಾನ ಅವರ ಗುರುತ್ವದ ರುಜುವಾತಿಗೆ ಸಾಕ್ಷಿ. ಇಂಥ ಒಂದೊಂದು ಪಾತ್ರಗಳು ನಮ್ಮ ನಡುವಿನ ವ್ಯಕ್ತಿ-ವ್ಯಕ್ತಿತ್ವಗಳನ್ನು ನೆನಪಿಸಿದರೆ ಆ ಚಿತ್ರ-ವಿಷಯ ವಸ್ತುವಿಗೆ ದೊರಕುವ ಆಪ್ತತೆ ಹೆಚ್ಚು.
ನಮ್ಮೂರಲ್ಲೊಬ್ಬ ಮೊಟ್ಟೆ ಖಾದ್ಯ ಮಾಡುವ ರವಿ ಎನ್ನುವವರೊಬ್ಬರಿದ್ದಾರೆ. ಸಣ್ಣ ಅಂಗಡಿ ನಡೆಸುವ ಅವರಿಗೆ ತಮ್ಮ ಗಿರಾಕಿಗಳನ್ನು ಇಂವ ನಮ್ ಸ್ಟುಡೆಂಟು ಎನ್ನುವುದರಲ್ಲೇನೋ ಖುಷಿ, ಧನ್ಯತೆ. ಪ್ರತಿದಿನ ಇವರ ರುಚಿಕರ ಮೊಟ್ಟೆ ಖಾದ್ಯ ತಿನ್ನಲು ಬರುವ ಗಿರಾಕಿಗಳಲ್ಲಿ ಅವರ ಸ್ಟುಡೆಂಟುಗಳದ್ದೇ ಸಿಂಹಪಾಲು.!
ಬಹುತೇಕ ಎಲ್ಲರನ್ನೂ ಏಕವಚನದಲ್ಲೇ ಸಂಭೋದಿಸುವ ರವಿಯಣ್ಣ ಸು ಫ್ರಾಮ್ ಸೋ ನ ರವಿಯಣ್ಣನಂಥ ವ್ಯಕ್ತಿತ್ವ. ವ್ಯಾಪಾರಿಯೊಬ್ಬನಿಗೆ ಇರಬೇಕಾದ ಎಲ್ಲಾ ಗುಣಗಳ ಮೂಟೆಯಾದ ರವಿಯಣ್ಣನ ಸ್ಟುಡೆಂಟ್ ಲೀಸ್ಟ್ನಲ್ಲಿ ನಮ್ಮಂಥ ಬೆರಳೆಣಿಕೆಯವರನ್ನು ಬಿಟ್ಟರೆ ಬಹುತೇಕ ತನ್ನ ವಾರಿಗೆಯ ಅವರಿಗಿಂತ ಕಿರಿಯವರಲ್ಲೆಲ್ಲಾ ಶಿಷ್ಯರನ್ನು ಕಾಣುವ ರವಿಯಣ್ಣ ನಮ್ಮಂತೆ ಕೆಲವು ತಿಂಗಳುಗಳೂ ಯಾರಿಗೂ ಗುರುವಾದವರಲ್ಲ! ಅವರ ಅನುಭವ, ಹಿರಿತನದ ವೈಶಿಷ್ಟ್ಯವೆಂದರೆ ನಮ್ಮೂರ ಹಿಂದಿನ ಏಕೈಕ ಡಿಗ್ರಿ ಕಾಲೇಜ್ ನ ಎದುರು ಒಂದು ಸಣ್ಣ ಅಂಗಡಿ ನಡೆಸಿದ ರವಿಯಣ್ಣ ಆಗ ಆ ಕಾಲೇಜಿಗೆ ಬಂದು ತನ್ನ ಅಂಗಡಿ ಸಾವಾಸಕ್ಕೆ ಬಿದ್ದವರಿಗೆಲ್ಲಾ ಅವರು ಕರೆಯುವುದು ಅಂವ, ಅವಳು ನನ್ನ ಸ್ಟುಡೆಂಟ್ ಎಂದು.!
ಆ ಕಾಲೇಜಿಗೂ ಹೋಗದ, ಆ ಕಾಲದಲ್ಲಿ ರವಿಯಣ್ಣನ ಎಗ್ ಮಂಡಾಕಿ, ಎಗ್ ರೈಸ್, ಎಗ್ ಮುಗುಲಾಯಿ, ಎಗ್ ಬುಲು ಬುಲ್ ಸೆಯಂಥ ಅವರೇ ನಾಮಕರಣಮಾಡಿಕೊಂಡ ನಾನಾ ವೆರೈಟಿ ರುಚಿ ತಿನ್ನದ ನಮ್ಮಂಥ ದುರಾದೃಷ್ಟ ವಂತರು ಮಾತ್ರ ಅವರ ಸ್ಟುಡೆಂಟ್ ಆಗುವ ಯೋಗದಿಂದ ತಪ್ಪಿಸಿಕೊಂಡಿದ್ದೇವೆ.
ಪ್ರಕಾಶ್ ರೈ ಅಭಿನಯದ ಅದ್ಭುತ ಸಂಭಾಷಣೆಯ ಒಗ್ಗರಣೆ ಸಿನೆಮಾ ನೋಡಿದ ಮೇಲೆ ನನ್ನ ತಲೆಗೆ ತುಂಬಿಕೊಂಡ ಹುಳುಗಳ ಗಾನವನ್ನು ನಿಮ್ಮ ಓದಿಗೆ ಸಪರ್ಪಿಸಿದ್ದೇನೆ. ನಾನು ನನ್ನ ಓದುಗ ದೊರೆಗಳ ಪ್ರೀತಿಯ ಸ್ಟುಡೆಂಟ್ ಎಂದು ಹೇಳಿಕೊಳ್ಳಲು ನನಗೆ ಖುಷಿ—ಹೆಮ್ಮೆ ಹ್ಯಾಪಿ ವೀಕ್, ಮಂಥ್ & ಇಯರ್ ಎಂಡ್…. ನಿಮ್ಮ ಕನ್ನೇಶ್.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






