ಇದು ಪಕ್ಷಾತೀತ,ಜಾತ್ಯಾತೀತವಾಗಿ ಸರ್ವರ ಬೇಡಿಕೆ

ಬಸ್‍ಡಿಪೋ ಸ್ಥಾಪನೆ ಯಾವಾಗ? ಇದು ಪಕ್ಷಾತೀತ,ಜಾತ್ಯಾತೀತವಾಗಿ ಸರ್ವರ ಬೇಡಿಕೆ
ಸಿದ್ಧಾಪುರಕ್ಕೆ ಹೊಸ ಬಸ್ ನಿಲ್ಧಾಣ ಮಂಜೂರಿಯಾದಾಗ ಅದು ಬಸ್ ನಿಲ್ದಾಣ ಮತ್ತು ಡಿಪೋ ಎಂದೇ ಆದೇಶವಾಗಿದೆ. ವಾಸ್ತವದಲ್ಲಿ ಬಸ್ ನಿಲ್ಧಾಣಕ್ಕಿಂತ ಮೊದಲು ಡಿಪೊ ನಿರ್ಮಾಣವಾದರೆ ಸಾರಿಗೆ ತೊಂದರೆ ಬಗೆಹರಿಸುವುದು ಸುಲಭ. ಜನರ ಬೇಡಿಕೆ, ಆದಾಯ, ಸಾಮಾಜಿಕ ನ್ಯಾಯಗಳ ಹಿನ್ನೆಲೆಯಲ್ಲಿ ಸಿದ್ದಾಪುರದ ಬಸ್ ಡಿಪೋ ನಿರ್ಮಾಣ ಆದ್ಯತೆಯ ಕೆಲಸವಾಗಬೇಕು. ಆದರೆ ಪ್ರಭುತ್ವ, ಅಧಿಕಾರಶಾಹಿ ಜನರ ಪ್ರತಿನಿಧಿಗಳು ಸಿದ್ದಾಪುರದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತಿದ್ದಾರೆ. ಅನೇಕ ವರ್ಷಗಳ ಬಸ್ ಡಿಪೋ, ಬಸ್ ನಿಲ್ಧಾಣಗಳ ಮಂಜೂರಿ ಪ್ರಯತ್ನ ಮಾಡಿದವರು ಒಬ್ಬ ಹಿರಿಯ ಅಧಿಕಾರಿ.ಡಿಪೋ ನಿರ್ಮಾಣದ ಮೊದಲು ಬಸ್ ನಿಲ್ದಾಣ ಮಾಡಿದ್ದೇ ತಪ್ಪು. ಹಳೆ ಬಸ್ ನಿಲ್ದಾಣದ ಪ್ರದೇಶ ಅಥವಾ ನಗರಕ್ಕೆ ಸಮೀಪದ ಯಾವುದೇ ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಾಣ ಮಾಡದೆ ಹೊಸ ಬಸ್ ನಿಲ್ದಾಣ ಉದ್ಘಾಟಿಸಿದರೆ ಅದಕ್ಕೆ ಅರ್ಥ, ಪ್ರಾಮುಖ್ಯತೆಯೇ ಇಲ್ಲ. ಜನಸಾಮಾನ್ಯರ ಬವಣೆ, ಅಪೇಕ್ಷೆ, ಅನುಕೂಲಗಳ ಅರಿವು, ಆ ಬಗ್ಗೆ ಬದ್ಧತೆ ಇಲ್ಲದ ನಾಯಕತ್ವದಿಂದಾಗಿ ಸಿದ್ದಾಪುರದ ಬಹುಜನರ ಬೇಡಿಕೆ ಈಡೇರದಿರುವುದು ನಮ್ಮ ತಾಲೂಕಿನ ದುರಂತ ಎನ್ನದೆ ವಿಧಿಯಿಲ್ಲ
-ಡಾ.ಶಶಿಭೂಷಣ ಹೆಗಡೆ, ಸಾಮಾಜಿಕ ಧುರೀಣ.
ಸಿದ್ಧಾಪುರ, ತಾಲೂಕಿನ ಸಾರಿಗೆ ಅವ್ಯವಸ್ಥೆ ಒಮ್ಮೆ ಸರಿಯಾಗುತ್ತಾ ಮತ್ತೆ ಹಾಳಾಗುತ್ತಾ ನಿತ್ಯ ರಗಳೆಯಾಗಿ ಜನಸಾಮಾನ್ಯರನ್ನು ಕಾಡುತ್ತಿದೆ, ಗ್ರಾಮೀಣ ಪ್ರದೇಶದ 75 ಸಾವಿರ ಜನಸಂಖ್ಯೆ ಸಂಪರ್ಕ ಸಾಧನ ಸಾರಿಗೆ ಇಲಾಖೆವಾಹನಗಳು ನಿತ್ಯ ಸಂಚರಿಸುತ್ತಿದ್ದರೂ ತೊಂದರೆ ಮಾತ್ರ ಬಗೆಹರಿಯದ ವಿಷಯವಾಗಿದೆ.
ಸಿದ್ಧಾಪುರ ಶಿರಸಿಗಳಲ್ಲಿ ಸಾರಿಗೆ ಅವ್ಯವಸ್ಥೆಗಳ ಬಗ್ಗೆ ಬಹುಜನರ ದೂರು,ದುಮ್ಮಾನಗಳಿದ್ದರೂ ವಿದ್ಯಾರ್ಥಿ ಸಮೂಹ ಮಾತ್ರ ಪ್ರತಿನಿತ್ಯ ಗೋಳಾಡುವ ದೊಡ್ಡ ಸಮೂಹ. ಈ ವಿದ್ಯಾರ್ಥಿಗಳು ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರಿಗೆ ಇಲಾಖೆಯ ಪ್ರಮುಖರು ಯಾರಿಗೆ ಮನವಿ ನೀಡಿ, ಪ್ರತಿಭಟನೆ ಮಾಡಿದರೂ ಸಾರಿಗೆ ವ್ಯವಸ್ಥೆ ಸಂಪೂರ್ಣ ಸುಧಾರಿಸುವ ಲಕ್ಷಣಗಳಿಲ್ಲ. ಈ ಅವ್ಯವಸ್ಥೆ ಸುಧಾರಣೆಗೆ ಸಿದ್ಧಾಪುರದಲ್ಲಿ ಬಸ್ ಡಿಪೋ ನಿರ್ಮಾಣದಿಂದ ಮಾತ್ರ ಸಾಧ್ಯ ಎನ್ನುವ ಅಭಿಪ್ರಾಯ ಅನೇಕರಲ್ಲಿದೆ.
ಹಾಗಾಗಿ ಸಿದ್ಧಾಪುರಕ್ಕೆ ಅವಶ್ಯವಿರುವ ಬಸ್ ಡಿಪೊ ಮಂಜೂರಿ ಮತ್ತು ನಿರ್ಮಾಣಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ. ಸಾರಿಗೆ ನೌಕರರ ಸಂಘಟನೆಗಳು, ನಿತ್ಯ ಸಾರಿಗೆ ವಾಹನ ಅವಲಂಬಿಸಿರುವ ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇಲ್ಲಿಯ ಬಸ್ ಡಿಪೋ ನಿರ್ಮಾಣದ ಬಗ್ಗೆ ಪ್ರಯತ್ನಿಸುವ ಭರವಸೆ ನೀಡಿದ್ದಾರೆ. 50 ವರ್ಷಗಳ ಬಸ್ ನಿಲ್ದಾಣದ ಮಂಜೂರಿ ಬೇಡಿಕೆ ಈಡೇರಿಸಿರುವ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅನೇಕ ಬಾರಿ ಸಿದ್ಧಾಪುರದ ಬಸ್ ಡಿಪೋ ಮಂಜೂರಿ ಬಗ್ಗೆ ಭರವಸೆ ನೀಡಿದ್ದು ಬಿಟ್ಟರೆ ಆ ಹಿನ್ನೆಲೆಯಲ್ಲಿ ಕೆಲಸ ನಡೆದಿಲ್ಲ ಎನ್ನಲಾಗುತ್ತಿದೆ.
ಬಸ್ ಡಿಪೋ ನಿರ್ಮಾಣಕ್ಕೆ ಅವಶ್ಯವಿರುವ ಸ್ಥಳಾವಕಾಶದ ಹಿನ್ನೆಲೆಯಲ್ಲೂ ಬೀದಿ, ಚರ್ಚೆ, ಸಾರ್ವಜನಿಕ ಭಾಷಣಗಳು ನಡೆದಿದ್ದು ಬಿಟ್ಟರೆ ಪ್ರಗತಿ ಶೂನ್ಯ. ಬಸ್ ಡಿಪೋ ನಿರ್ಮಾಣಕ್ಕಾಗಿ ಬಾಲಿಕೊಪ್ಪದ ಬೆಟ್ಟ, ಕೋಲಶಿರ್ಸಿ ತಿರುವಿನ ಬಳಿಯ ಪ್ರದೇಶ, ಈಗಿನ ಹೊಸ ಬಸ್ ನಿಲ್ಧಾಣದ ಹಿಂದಿನ ಜಾಗ ಸೇರಿದಂತೆ ಅನೇಕ ತಾಂತ್ರಿಕ ಕೆಲಸದ ಬೇಡಿಕೆ,ಯೋಜನಾ ವರದಿಗಳು ಕೂಡಾ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಜಿಲ್ಲಾಧಿಕಾರಿಗಳ ವರೆಗೆ ಪ್ರಸ್ಥಾವನೆಗಳು ಮಂಡನೆಯಾಗಿವೆ. ಆದರೆ ಸಿದ್ದಾಪುರದ ಡಿಪೋ ಬೇಡಿಕೆ ಮಾತ್ರ ಯಾರೂ ಪರಿಗಣಿಸದ ಯೋಜನೆಯಾಗಿ ನೆನೆಗುದಿಗೆ ಬಿದ್ದಿದೆ.
ಕಾಂಗ್ರೆಸ್ ಆಡಳಿತ, ಶಿವರಾಮ ಹೆಬ್ಬಾರರ ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷತೆಯ ಅವಧಿ ಸೇರಿದಂತೆ ಅನೇಕ ಬಾರಿ ಹಲವು ಪ್ರಯತ್ನಗಳಾಗಿದ್ದರೂ ಅನುಷ್ಠಾನವಾಗದ ಕೆಲಸವಾಗಿರುವ ಡಿಪೋ ನಿರ್ಮಾಣದ ಬಗ್ಗೆ ವಾ.ಕರಾ.ರ.ಸಾ.ಸಂಸ್ಥೆಯ ನೂತನ ಅಧ್ಯಕ್ಷ ವಿ.ಎಸ್.ಪಾಟೀಲ್ ಬಳಿ ತೆರಳಿದ ಬಿ.ಜೆ.ಪಿ. ನಿಯೋಗ ಸಿದ್ಧಾಪುರದ ಸಾರಿಗೆ ಸಮಸ್ಯೆ ಮತ್ತುಆ ಸಮಸ್ಯೆ ಪರಿಹಾರಕ್ಕೆ ಅವಶ್ಯವಿರುವ ಬಸ್ ಡಿಪೋ ಬಗ್ಗೆ ವಿ.ಎಸ್. ಪಾಟೀಲರ ಗಮನ ಸೆಳೆದಿರುವ ವಿಚಾರ ಸಮಾಜಮುಖಿ ಗಮನಿಸಿದೆ.
ಜಿಲ್ಲಾಧ್ಯಕ್ಷರು, ವಿಧಾನಸಭಾಧ್ಯಕ್ಷರು ಮಾಜಿ ಕೇಂದ್ರ ಸಚಿವರು ಪ್ರತಿನಿಧಿಸುವ ಸಿದ್ಧಾಪುರಕ್ಕೆ ಅವಶ್ಯವಾಗಿರುವ ಡಿಪೋ ಮಂಜೂರಿ ಮತ್ತು ನಿರ್ಮಾಣಕ್ಕೆ ಈಗಿನ ಸರ್ಕಾರ ಸ್ಫಂದಿಸುವ ನಿರೀಕ್ಷೆ ಇದೆ. ನಿರಂತರ ಎರಡುಬಾರಿ ಉತ್ತರ ಕನ್ನಡದವರೇ ವಾ.ಕ.ರಾ.ರ.ಸಾ.ಸ. ಅಧ್ಯಕ್ಷರಾಗಿಯೂ ಡಿಪೋ ನಿರ್ಮಾಣ ಕಷ್ಟಸಾಧ್ಯವೆಂದರೆ ಸಿದ್ದಾಪುರದ ಸಾರಿಗೆ ಸಂಕಷ್ಟ ಕೊನೆಯಾಗುವ ಸಾಧ್ಯತೆ ಕಡಿಮೆ. ಹಾಗಾಗಿ ಈಗಿನ ಸರ್ಕಾರದ ಅವಧಿಯಲ್ಲೇ ಸಿದ್ದಾಪುರದ ಬಸ್ ಡಿಪೋ ನಿರ್ಮಾಣವಾಗಿ ಜನಸಾಮಾನ್ಯರ ಸಂಕಷ್ಟ ದೂರಾಗಬೇಕು ಎಂಬುದು ಸಮಾಜಮುಖಿ ಹಾರೈಕೆ.

ನಿವೃತ್ತ ಅಧಿಕಾರಿಯನ್ನು ಸಲಹೆಗಾರರನ್ನಾಗಿ ಸಿಕೊಂಡ ಸ್ಪೀಕರ್ ಕಾಗೇರಿ
ನಿವೃತ್ತ ವಿಧಾನಸಭೆಯ ಕಾರ್ಯದರ್ಶಿ ಓಂಪ್ರಕಾಶರನ್ನು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕೃತ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಮೂಲಕ ಹೊಸ ಸಂಪ್ರದಾಯಕ್ಕೆ ಕಾರಣರಾಗಿದ್ದಾರೆ.
ವಿಧಾನಸಭೆಯ ಶಿಸ್ತಿಗೆ ವ್ಯತಿರಿಕ್ತವಾಗಿ ನಿವೃತ್ತ ಅಧಿಕಾರಿಯನ್ನು ಸ್ಫೀಕರ್ ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವುದಕ್ಕೆ ವಿಧಾನಸಭೆಯ ಒಳಗೆ ಮತ್ತು ಹೊರಗೆ ತೀವೃ ವಿರೋಧ ವ್ಯಕ್ತವಾಗಿದೆ. ವಿಧಾನಸಭೆಯ ಉದ್ಯೋಗಿಗಳು,ಅನ್ಯಪಕ್ಷಗಳ ಪ್ರಮುಖರು ಸೇರಿದಂತೆ ಅನೇಕರು ಕಾಗೇರಿಯವರ ಈ ಕ್ರಮವನ್ನು ವಿರೋಧಿಸಿದ್ದಾರೆ.ಈ ಬಗ್ಗೆ ಸ್ಫೀಕರ್ ಕಛೇರಿ ಯಾವ ಸ್ಫಸ್ಟನೆಯನ್ನೂ ನೀಡಿಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *