ಶಾಸಕರು-ಸಂಸದರಿಗೆ ಮನವಿ ಕೊಟ್ಟರೂ ಆಗದ ಕೆಲಸ- ತರಳಿ-ಇರಾಸೆ ನಡುವೆ 2 ಸೇತುವೆ, ಸರ್ವಋತು ರಸ್ತೆ ನಿರ್ಮಾಣಕ್ಕೆ ಈ ತಿಂಗಳಲ್ಲೇ ಅನುದಾನ ಮಂಜೂರಾಗದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಸಿದ್ಧಾಪುರ ತಾಲೂಕಿನ ತರಳಿಯಿಂದ ಹಾರ್ಸಿಕಟ್ಟಾ ಮತ್ತು ತ್ಯಾಗಲಿ ಪಂಚಾಯತ್ ವ್ಯಾಪ್ತಿಯ 5 ಕಿ.ಮೀ. ರಸ್ತೆಯ ಇಕ್ಕೆಲಗಳಲ್ಲಿ 50 ಕ್ಕೂ ಹೆಚ್ಚು ಮನೆಗಳಿವೆ.
ಈ ದಾರಿಗಂಟ ಸಾಗಿದರೆ ಗಡಿಹೊಳೆ ಮತ್ತು ಬೆಣ್ಣೇಕೇರಿ ಹೊಳೆಗಳು ರಸ್ತೆಗೆ ಅಡ್ಡ ಬರುತ್ತವೆ. ಬೇಸಿಗೆಯಲ್ಲಾದರೆ ಈ ನದಿಗಳನ್ನು ದಾಟಿ ಹೋಗಬಹುದು ಆದರೆ ಈ ಭಾಗದಲ್ಲಿ ಕನಿಷ್ಟ 4-5 ತಿಂಗಳು ಮಳೆ ಸುರಿಯುತ್ತದೆ. ಆಗ ಸಂಕಗಳೋ ಅಥವಾ ಇಪ್ಪತ್ತು ಇಪ್ಪತೈದು ಕಿ.ಮೀ. ಬಳಸುಮಾರ್ಗವೋ ಇಲ್ಲಿಯ ಜನರಿಗೆ ಅನಿವಾರ್ಯ.
ಇಂಥ ತರಳಿ-ಇರಾಸೆ ನಡುವಿನ ಜನ ಈಗಾಗಲೇ ಎರಡುಬಾರಿ ಶಾಸಕರಿಗೆ ಒಮ್ಮೆ ಸಂಸದರಿಗೆ ತಮ್ಮೂರಿನ ರಸ್ತೆ, ಸೇತುವೆ ಮಾಡಿಕೊಡಿ ಎಂದು ಅರ್ಜಿ ಬರೆದಿದ್ದಾರೆ. ಆದರೆ ಈ ಅರ್ಜಿಗಳು ಏನಾದವು ಎನ್ನುವುದು ಸಂಸದರು, ಶಾಸಕರ ಕಛೇರಿಗಳ ಅಧಿಕಾರಿಗಳಿಗೂ ಮಾಹಿತಿ ಇಲ್ಲ.


ಹೀಗೆ ಶತಮಾನಗಳಿಂದ ಹೊಳೆಗಳಿಗೆ ಸೇತುವೆ, ಊರಿಗೆ ರಸ್ತೆ ಇಲ್ಲದಿದ್ದರೂ ಈ ಭಾಗದ ಜನರು ತಲೆಕೆಡಿಸಿಕೊಂಡಿಲ್ಲ ವರ್ಷಕ್ಕೆ ಒಂದೆರಡು ಬಾರಿ ಇವರೇ ಶ್ರಮದಾನದಿಂದ ರಸ್ತೆ ಮಾಡಿಕೊಳ್ಳುತ್ತಾರೆ. ಈ ತರಳಿ,ಇರಾಸೆ ರಸ್ತೆಗೆ ಒಮ್ಮೆ ಮಾತ್ರ ಸರ್ಕಾರದ ಅನುದಾನದ ಕಾಮಗಾರಿ ಬಂದಿದೆ ಎಂದರೆ ಇಲ್ಲಿಯ ದುಸ್ಥಿತಿಗೆ ಬೇರೆ ದಾಖಲೆಗಳೇ ಬೇಡ.
ಹೀಗೆ ಬುದ್ಧಿವಂತರ ಜಿಲ್ಲೆ, ಸುಸಂಸ್ಲೃತರ ಕ್ಷೇತ್ರದ ಅನೇಕರು ಹಲವಾರು ವರ್ಷಗಳಿಂದ ಸುಮ್ಮನಿದ್ದವರು. ಎರಡ್ಮೂರು ಬಾರಿ ಜನಪ್ರತಿನಿಧಿಗಳಿಗೆ ಅರ್ಜಿ ಕೊಟ್ಟವರು ಒಂದು ದಿನ ಮಾಧ್ಯಮದವರನ್ನು ಕರೆದು ತಮ್ಮ ತೊಂದರೆಗಳನ್ನು ಬಿಚ್ಚಿ ಹೇಳಿದರು.


ತ್ಯಾಗಲಿ ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ನಾಗವೇಣಿ ಹಸ್ಲರ್, ಅಣ್ಣಪ್ಪ ರಾಮಾ ನಾಯ್ಕ, ದ್ಯಾವಾ ನಾರಾಯಣ ಗೌಡ ಕಾನತೋಟ, ಇವರೊಂದಿಗೆ ವಿನಾಯಕ ನಾಯ್ಕರೆಲ್ಲಾ ಸೇರಿ ವಾಟಗಾರಿನ ಗಣೇಶ್ ಹೆಗಡೆಯವರ ಮನೆಯಲ್ಲಿ ಕುಳಿತು ತಮ್ಮ ಸಂಪರ್ಕರಸ್ತೆ, ಸಂಪರ್ಕ ಸೇತುವೆಗಳ ಅನಿವಾರ್ಯತೆ ಹೇಳಿದವರು ಅಲ್ಲಿಯ ಯುವಕರಾದ ಮಹೇಶ್, ಚೇತನ್, ಎಂಬ ಹುಡುಗರೊಂದಿಗೆ ತಮ್ಮ ಹೊಳೆಯ ಪ್ರತ್ಯಕ್ಷ ದರ್ಶನಕ್ಕೆ ಕರೆದೊಯ್ದರು.
ಈ ಮಾರ್ಚ್‍ನಲ್ಲಿ ಗಡಿಹೊಳೆ ನೀರಿಗೆ ಕಾಲು ತಾಕಿಸಿದರೆ ತಣ್ಣನೆಯ ಅನುಭವ ಆದರೆ ಈ ಹೊಳೆಯ ಮಳೆಗಾಲದ ನರ್ತನ ಈ ತಂಪು-ಕಂಪಿಗೆ ವಿರುದ್ಧ ಎನ್ನುವುದನ್ನು ಹೇಳಿದರು.
ಈ ಮಾರ್ಗದಲ್ಲಿ ಈ ಗಡಿಹೊಳೆಗೆ ಒಂದು ಸೇತುವೆ ಮತ್ತು ಇದೇ ಹೊಳೆಗೆ ಮೇಲೆ ಇರಾಸೆ ಬಳಿ ಒಂದು ಸೇತುವೆಯಾದರೆ ತ್ಯಾಗಲಿ ಪಂಚಾಯತ್ ನ ನಾಣಿಕಟ್ಟಾದಿಂದ ತರಳಿ ಮಾರ್ಗವಾಗಿ ಹಾರ್ಸಿಕಟ್ಟಾ ಮತ್ತು ತಾಲೂಕು ಕೇಂದ್ರ ಸಿದ್ಧಾಪುರಕ್ಕೆ ತೆರಳಬಹುದು. ಹೀಗೆ ಈ ಹೊಳೆಗೆ ಎರಡು ಪ್ರದೇಶಗಳಲ್ಲಿ ಸೇತುವೆಗಳಾದರೆ ಕಾನತೋಟ, ಬಾಳೆಗದ್ದೆ, ಪೇರಲಕೊಡ್ಲು ವಾಟಗಾರ, ಗಡಿಹೊಳೆ ಗ್ರಾಮಗಳಿಗೆ ಸಂಪರ್ಕ ದೊರೆಯುತ್ತದೆ. ಇಲ್ಲದಿದ್ದರೆ ಅತ್ತ ಧರೆ ಇತ್ತಹುಲಿ ಯಾಕೆಂದರೆ, ಈಗ್ರಾಮಗಳೆಲ್ಲಾ ಕಾಡಿನ ನಡುವೆ ಇವೆ. ಸರ್ವಋತು ರಸ್ತೆಯಲ್ಲದ ಇಲ್ಲಿಯ ರಸ್ತೆ ಮಳೆಗಾಲದಲ್ಲಿ ಕುಸಿಯತೊಡಗುತ್ತದೆ.
ಹೊಳೆ, ಮಳೆ, ಕೆಸರು ರಸ್ತೆ, ಕುಸಿಯುವ ಮಣ್ಣಿನ ರಸ್ತೆ, ಸ್ಥಿತಿಯಲ್ಲಿ ಇಲ್ಲಿಯ ಶಾಲಾ ಮಕ್ಕಳು, ವೃದ್ಧರು, ಅಂಗವಿಕಲರು ಗರ್ಭಿಣಿಯರು, ಬಾಣಂತಿಯರು ಗೋಳಾಡಬೇಕು.
ಈ ಕಷ್ಟ ಪರಿಹರಿಸಿ ಎಂದು ಈ ಭಾಗದ ಜನರು ಸಂಸದರು, ಶಾಸಕರಿಗೆ ಮಾತಿನಲ್ಲೂ ಹೇಳಿದ್ದಾರೆ, ಅರ್ಜಿಕೊಟ್ಟೂ ವಿನಂತಿಸಿದ್ದಾರೆ. ಇತ್ತೀಚೆಗೆ ನಾಣಿಕಟ್ಟಾದಲ್ಲಿ ಇವರ ಮನವಿ ಸ್ವೀಕರಿಸಿದ ವಿಧಾನಸಭಾ ಅಧ್ಯಕ್ಷರು ಮತ್ತೆ ಹಿಂದಿನಂತೆ ಭರವಸೆ ನೀಡಿ ತೆರಳಿದ್ದಾರೆ!.


ಇಷ್ಟೆಲ್ಲಾ ಆದ ಮೇಲೆ ಈಗ ಈ ಭಾಗದ ಯುವಕರು ವಿನಾಯಕ ನಾಯ್ಕ ನೇತೃತ್ವದಲ್ಲಿ ಈ ತಿಂಗಳಲ್ಲಿ ನಮ್ಮ ರಸ್ತೆ, ಸೇತುವೆಗಳ ಕಾಮಗಾರಿ ಮಂಜೂರಿಯಾಗದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಎರಡು ಗ್ರಾಮ ಪಂಚಾಯತ್ ಗಳು, ಎರಡು ತಾಲೂಕಾ ಪಂಚಾಯತ್ ಕ್ಷೇತ್ರಗಳು ಹಾಗೂ ಒಂದೇ ಜಿಲ್ಲಾ ಪಂಚಾಯತ್ ಕ್ಷೇತ್ರದ ಈ ಗ್ರಾಮಗಳ ಸ್ಥಿತಿ ನೋಡಿದರೆ ಯಾರಿಗೂ ಅಯ್ಯೋ ಎನಿಸದೆ ಇರದು. ಆದರೆ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಇವರ ತೊಂದರೆ ಸಮಸ್ಯೆಯೆಂದು ಅರ್ಥವಾಗುತ್ತಿಲ್ಲ. ಈ ಭಾಗದ ಜನಪ್ರತಿನಿಧಿಗಳಾದ ತಾಲೂಕಾ ಪಂಚಾಯತ್ ಅಧ್ಯಕ್ಷರು, ರಾಜ್ಯ ವಿಧಾನಸಭಾ ಅಧ್ಯಕ್ಷರು, ಮಾಜಿ ಕೇಂದ್ರ ಸಚಿವರ ಗಮನಕ್ಕೆ ಬಾರದಿರುವುದು ಸಹಜ ಎನ್ನುವಂತಿಲ್ಲ.
ಅಂದಹಾಗೆ ಈ ಕೆಲಸಗಳಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ಮತ ಬಹಿಷ್ಕರಿಸುವ ಬಗ್ಗೆ ಒಮ್ಮತದ ನಿರ್ಣಯ ಮಾಡಬೇಕೆಂಬ ಅಭಿಪ್ರಾಯವೂ ಮಾಧ್ಯಮ ಪ್ರತಿನಿಧಿಗಳ ಎದುರು ಬಹಿರಂಗವಾಗಿ ಚರ್ಚೆಯಾಗಿದೆ.
ರಾಜ್ಯ, ರಾಷ್ಟ್ರಮಟ್ಟದಲ್ಲಿ ಶಾಂತಿ-ಸಂಮೃದ್ಧಿಯ ಜಿಲ್ಲೆ ಎಂದು ಬಿಂಬಿಸಿಕೊಳ್ಳುವ ನಮ್ಮ ಶಾಸಕರು, ಸಂಸದರ ಕ್ಷೇತ್ರಗಳಲ್ಲಿ ಇಂಥ ಅನೇಕ ಕುಗ್ರಾಮಗಳಿರುವುದು ಅಂಥ ಪ್ರಮುಖರ ನಜರ್‍ನಲ್ಲಿಲ್ಲ ಎಂದರೆ ಅದೂ ಸತ್ಯವಲ್ಲ.

ಆರೋಗ್ಯವರ್ಧಕ ಅಣಬೆಯತ್ತ ಶಿಕ್ಷಿತರ ಚಿತ್ತ
ಪ್ರಧಾನಿ ಮೋದಿ ಮತ್ತು ಶ್ರೀಮಂತ ಐಶಾರಾಮಿಗಳ ಆರೋಗ್ಯವನ್ನು ಕಾಪಾಡುವ ಅಣಬೆಗಳೆಂದರೆ ಎಲ್ಲರಿಗೂ ಇಷ್ಟ.
ನೈಸರ್ಗಿಕ ಅಣಬೆಗಳನ್ನು ವರ್ಷವಿಡಿ ಸಂಗ್ರಹಿಸಲು ಸಾಧ್ಯವಿಲ್ಲ ಹಾಗಾಗಿ ವರ್ಷವಿಡೀ ಬೆಳೆಯುವ ಕೃತಕ ಅಣಬೆಗಳು ಅಣಬೆಪ್ರೀಯರನ್ನು ಸಮಾಧಾನಪಡಿಸುತ್ತವೆ.
ಹೆಚ್ಚಿನ ಉಷ್ಣಾಂಶ,ನೀರು ಬಯಸುವ ಅಣಬೆ ಕೃಷಿ ಅಷ್ಟು ಸುಲಭಸಾಧ್ಯ ಕೆಲಸವೂ ಅಲ್ಲ. ಹೆಚ್ಚಿನ ಉಷ್ಣಾಂಶದ ಕರಾವಳಿ, ಬಯಲುಸೀಮೆಯಲ್ಲಿ ಬೆಳೆಯಲು ಯೋಗ್ಯವಾದ ಅಣಬೆಯನ್ನು ಸಿದ್ಧಾಪುರದಂಥ ಮಲೆನಾಡಿನ ತಂಪಿನ ವಾತಾವರಣದಲ್ಲಿ ಬೆಳೆದು ತೋರಿಸುವ ಮೂಲಕ ಹದಿನಾರನೇ ಮೈಲಿಕಲ್ಲು ಗಿಳಿಲಗುಂಡಿಯ ದಯಾನಂದ ನಾಯ್ಕ ಸಾಧನೆ ಮಾಡುತಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *