NK NEWS update- ಉ.ಕ. ಲಾಕ್ ಡೌನ್ ಗೆ ಒಲವು,ಸ್ವಯಂ ಪ್ರೇರಿತ ಬಂದ್ ಗೆ ತೀರ್ಮಾನ

ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೆ ಅಲ್ಲಿಂದ ಹುಟ್ಟೂರು ಶಿರಸಿಗೆ ಬಂದು ದೂರದ ಕಾರವಾರದ ಜಿಲ್ಲಾ ಕೇಂದ್ರದ ಕೋವಿಡ್ ಆಸ್ಫತ್ರೆ ಕ್ರಿಮ್ಸ್ ಗೆ ದಾಖಲಾಗಿ ಅಲ್ಲಿ ಜೀವತೆತ್ತು ಹೆಣವನ್ನೂ ಪಡೆಯದ ದುಸ್ಥಿತಿಯ ನಿನ್ನೆಯ ಶಿರಸಿಯ ಮೊದಲ ಕರೋನಾ ಸಾವು ಪರಿಸ್ಥಿತಿಯ ಭೀಕರತೆಗೆ ಹಿಡಿದ ಕನ್ನಡಿ.

ಉತ್ತರಕನ್ನಡ ಜಿಲ್ಲೆಗೆ ಮೊದಲು ವಿದೇಶಗಳಿಂದ ನಂತರ ಪರ ರಾಜ್ಯಗಳಿಂದ ಈಗೀಗ ಹೊರ ಜಿಲ್ಲೆಗಳಿಂದ ಕರೋನಾ ಕರೆತರುತ್ತಿರುವವರು ಹೊಟ್ಟೆಪಾಡಿನ ಉದ್ಯೋಗ ಅರಸಿ ಹೊರ ಊ ರುಗಳಿಗೆ ನಡೆದವರು. ಅವರಿಂದ ಭಟ್ಕಳ ಸೇರಿದಂತೆ ಜಿಲ್ಲೆಯ 12 ತಾಲೂಕುಗಳೂ ನಲುಗುತ್ತಿವೆ.
ಈ ತೊಂದರೆಗೆ ಪರಿಹಾರವೆಂದರೆ ಮುನ್ನೆಚ್ಚರಿಕೆ, ಹಾಗಾಗಿ ಜನ ಹಿಂದೆ ತರಾತುರಿಯಲ್ಲಿ ಲಾಕ್ ಡೌನ್ ಘೋಶಿಸಿದ್ದ ಸರ್ಕಾರಕ್ಕೆ ಈಗ ಲಾಕ್ ಡೌನ್ ಮಾಡಿ ಎಂದು ಆಗ್ರಹಿಸುತಿದ್ದಾರೆ.

ಆದರೆ ಸರ್ಕಾರ ಈಗ ಲಾಕ್ಡೌನ್ ಒಂದೇ ನಿಯಂತ್ರಣಕ್ರಮವಲ್ಲ ಎಂದು ಜನಾಭಿಪ್ರಾಯವನ್ನು ಧಿಕ್ಕರಿಸುತ್ತಿದೆ. ಹಾಗಾದರೆ ಜನ ಏನು ಮಾಡಬೇಕು ?ಅದನ್ನೇ ಮಾಡುತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಗಡಿ ತಾಲೂಕುಗಳಾದ ಮುಂಡಗೋಡು,ಸಿದ್ಧಾಪುರ, ಭಟ್ಕಳಗಳು ಸೇರಿದಂತೆ ಶಿರಸಿ,ಹೊನ್ನಾವರ, ಹಳಿಯಾಳಗಳಲ್ಲೂ ಸ್ವಯಂ ಪ್ರೇರಿತ ಬಂದ್ ಗೆ ಜನರು ಮುಂದಾಗಿದ್ದಾರೆ. ಮೊಟ್ಟಮೊದಲು ಬಂಗಾರದ ಅಂಗಡಿಗಳು ಮಧ್ಯಾನ್ಹದ ವರೆಗೆ ಮಾತ್ರ ಎಂದು ಪ್ರಕಟಿಸಿದ ದೈವಜ್ಞ ಸರಾಪ ಸಂಘವನ್ನು ಅನುಸರಿಸಿದ ಸವಿತಾ ಸಮಾಜ ಪ್ರತಿದಿನ ಮದ್ಯಾಹ್ನ ಒಂದು ಗಂಟೆಯವೆರೆ ಮಾತ್ರ ಅಂಗಡಿ, ಕೆಲಸ ಎಂದು ಘೋಶಿಸಿದರು.

ಈಗ ಒಂದರ ಹಿಂದೆ ಒಂದರಂತೆ ಒಂದೊಂದೇ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಅರ್ಧ ದಿನ ಮಾತ್ರ ಕೆಲಸ, ಸೇವೆ, ವ್ಯಾಪಾರ, ವ್ಯವಹಾರ ಎನ್ನುತ್ತಿವೆ. ಹೀಗೆ ಇಡೀ ವ್ಯವಸ್ಥೆಯನ್ನೇ ಬದಲಿಸುತ್ತಿರುವ ಕರೋನಾ ಉತ್ತರ ಕನ್ನಡದಲ್ಲಿ 300 ಜನರನ್ನು ದಾಟಿದೆ. ರಾಜ್ಯದಲ್ಲಿ ಸಾವಿರ ಸಂಖ್ಯೆ, ದೇಶದಲ್ಲಿ 7 ಲಕ್ಷ ಮೀರಿ ಭಾರತವನ್ನು ಜಗತ್ತಿನ ಕರೋನಾ ಪೀಡಿತರು, ಕರೋನಾದಿಂದ ಸಾವು-ನೋವು ಅನುಭವಿಸಿದ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿಸಿದೆ.

ಈ ಭಯ ಜನರಲ್ಲಿ ಸ್ವಯಂ ಪ್ರೇರಣೆಯಿಂದ ಬಂದ್, ಕರ್ಫ್ಯೂ ಕ್ಕೆ ಪುಸಲಾಯಿಸುತ್ತಿದೆ. ಸಾರ್ವಜನಿಕರು ಜಾಗೃತಿಯಿಂದ ಜವಾಬ್ಧಾರಿಯಿಂದ ಈ ಕರೋನಾ ಸಮರ ಗೆಲ್ಲಬೇಕಿದೆ. ಯಾಕೆಂದರೆ…. ನೋಟುಬ್ಯಾನ್ ಅವ್ಯವಸ್ಥೆ 50 ದಿವಸಗಳಲ್ಲಿ ಸುಧಾರಿಸದಿದ್ದರೆ ನನ್ನನ್ನೇ (ಸುಡಿ)ದಹಿಸಿ, ಮಹಾಭಾರತ ಯುದ್ಧ 18 ದಿವಸ ನಡೆಯಿತು ಕರೋನಾ ಸಮರ 21 ದಿವಸಗಳಲ್ಲಿ ಕೊನೆಗಾಣಿಸೋಣ ಎನ್ನುವ ಮೂರ್ಖ,ಸುಳ್ಳುಕೋರ ಪರಿವಾರದ ಬೇಜವಾಬ್ಧಾರಿ ಮತಾಂಧರು ದೇಶವನ್ನಾಳುತಿದ್ದಾರೆ.

ಜೋಗ ಪ್ರವೇಶ ನಿಷೇಧಿಸಲಾಗಿದೆ
ವಿಶ್ವಪ್ರಸಿದ್ಧ ಜೋಗಜಲಪಾತವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಕರೋನಾ ಹಿನ್ನೆಲೆಯಲ್ಲಿ ಈ ನಿಶೇಧದ ಆಜ್ಞೆ ಮಾಡಲಾಗಿದ್ದು ಕರ್ನಾಟಕ ವಿದ್ಯುತ್ಶಕ್ತಿ ನಿಗಮ ಜೋಗ ಪ್ರದೇಶದಲ್ಲಿ ಸಾರ್ವಜನಿಕ ಪ್ರವೇಶವನ್ನು ನಿಶೇಧಿಸಿ,ಕಾವಲುಗಾರರನ್ನು ನೇಮಿಸಿದೆ.
ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಮುಖ್ಯಧ್ವಾರವನ್ನು ಮುಚ್ಚಿರುವ ನಿಗಮ ಉತ್ತರಕನ್ನಡ ಜಿಲ್ಲೆಯ ಬ್ರಟೀಷ್ ಬಂಗ್ಲೆ ಪ್ರದೇಶದಿಂದ ಜೋಗ ಜಲಪಾತ ನೋಡುವ ಪ್ರದೇಶದ ಪ್ರವೇಶವನ್ನು ನಿರ್ಬಂಧಿಸಿದೆ.ಮಾಹಿತಿ ತಿಳಿಯದೆ ಜೋಗ ವೀಕ್ಷಣೆಗೆ ಬರುವ ಪರ ಊರುಗಳ ಜನರು ಪ್ರವೇಶಧ್ವಾರಗಳ ವರೆಗೆ ಬಂದು ಮರಳುತ್ತಿರುವುದು ಸಾಮಾನ್ಯವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *